Smriti Mandhana: ಸ್ಮೃತಿ ಮಂಧಾನಗೆ ಕೂಡಿ ಬಂದ ಕಂಕಣ ಭಾಗ್ಯ; ಬಹುಕಾಲದ ಪ್ರಿಯಕರನ ಜತೆ ಮದುವೆ
ಪಲಾಶ್ ಮುಚ್ಚಲ್ ಸಂಗೀತ ನಿರ್ದೇಶಕನಾಗಿ ಬಾಲಿವುಡ್‌ನಲ್ಲಿ ಗುರ್ತಿಸಿಕೊಂಡಿದ್ದಾರೆ. ಟಿ ಸೀರಿಸ್, ಜೀ ಮ್ಯೂಸಿಕ್‌ಗಾಗಿ ಸುಮಾರು 40ಕ್ಕೂ ಅಧಿಕ ಮ್ಯೂಸಿಕ್ ವಿಡಿಯೋಗಳನ್ನು ಪಾಲಾಶ್ ಕಂಪೋಸ್ ಮಾಡಿದ್ದಾರೆ. 'ಡಿಶ್ಕಿಯಾವೂನ್', 'ಬೂತ್‌ನಾಥ್ ರಿಟರ್ಟ್ಸ್' ಸೇರಿದಂತೆ ಒಂದಷ್ಟು ಬಾಲಿವುಡ್ ಸಿನಿಮಾಗಳಿಗೆ ಟ್ಯೂನ್ ಹಾಕಿದ್ದಾರೆ. ಅಭಿಷೇಕ್ ಬಚ್ಚನ್ - ದೀಪಿಕಾ ಪಡುಕೋಣೆ ನಟನೆಯ 'ಖೇಲೀಂ ಹಮ್ ಜೀ ಜಾನ್ ಸೇ' ಚಿತ್ರದ ಸಣ್ಣ ಪಾತ್ರದಲ್ಲಿ ಪಾಲಾಶ್ ಮಿಂಚಿದ್ದರು.

-

ಮುಂಬಯಿ: ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂಧನಾ(Smriti Mandhana) ಅವರ ಮದುವೆ ವಿಚಾರದಲ್ಲಿ ಎದ್ದಿದ್ದ ವದಂತಿಗಳಿಗೆ ಕೊನೆಗೂ ತೆರೆ ಬಿದ್ದಿದೆ. ಸ್ಮೃತಿ ತಮ್ಮ ಬಹು ಕಾಲದ ಪ್ರಿಯಕರ, ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್(Palash Muchhal) ಜತೆ ಶೀಘ್ರದಲ್ಲಿ ವಿವಾಹ ಆಗಲಿದ್ದಾರೆ. ಈ ಬಗ್ಗೆ ಅವರ ಭಾವಿ ಪತಿ ಅಧಿಕೃತ ಮಾಹಿತಿ ನೀಡಿದ್ದಾರೆ.
ಸ್ಮೃತಿ- ಪಲಾಶ್ ಬಹುಕಾಲದಿಂದ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಮತ್ತು ತಮ್ಮ ಪ್ರೀತಿಯನ್ನು ಹೇಳಿದ್ದರು. ಆದರೆ ಈ ಜೋಡಿ ತಮ್ಮ ಮದುವೆ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ. ಇದೀಗ ಮದುವೆ ವಿಚಾರ ಅಧಿಕೃತಗೊಂಡಿದೆ.
ಇತ್ತೀಚೆಗೆ ಇಂದೋರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪಲಾಶ್, ‘ಸ್ಮೃತಿ ಸದ್ಯದಲ್ಲೇ ಇಂದೋರ್‌ನ ಸೊಸೆ ಆಗಲಿದ್ದಾರೆ’ ಎಂದು ತಮ್ಮ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದಾರೆ. 29 ವರ್ಷದ ಸ್ಮೃತಿ ಸದ್ಯ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಪಂದ್ಯಾವಳಿ ಮುಕ್ತಾಯದ ಬಳಿಕ ಹಸೆಮಣೆ ಏರುವ ಸಾಧ್ಯತೆ ಇದೆ.
ಇದನ್ನೂ ಓದಿ ಇಂಗ್ಲೆಂಡ್ ವಿರುದ್ಧ ಸೋತ ಭಾರತಕ್ಕೆ ಸೆಮಿಫೈನಲ್‌ಗೆ ಚಾನ್ಸ್ ಇದೆಯಾ? ಇಲ್ಲಿದೆ ಲೆಕ್ಕಾಚಾರ!
ಪಲಾಶ್ ಹಿನ್ನೆಲೆ
ಪಲಾಶ್ ಮುಚ್ಚಲ್ ಸಂಗೀತ ನಿರ್ದೇಶಕನಾಗಿ ಬಾಲಿವುಡ್‌ನಲ್ಲಿ ಗುರ್ತಿಸಿಕೊಂಡಿದ್ದಾರೆ. ಟಿ ಸೀರಿಸ್, ಜೀ ಮ್ಯೂಸಿಕ್‌ಗಾಗಿ ಸುಮಾರು 40ಕ್ಕೂ ಅಧಿಕ ಮ್ಯೂಸಿಕ್ ವಿಡಿಯೋಗಳನ್ನು ಪಾಲಾಶ್ ಕಂಪೋಸ್ ಮಾಡಿದ್ದಾರೆ. 'ಡಿಶ್ಕಿಯಾವೂನ್', 'ಬೂತ್‌ನಾಥ್ ರಿಟರ್ಟ್ಸ್' ಸೇರಿದಂತೆ ಒಂದಷ್ಟು ಬಾಲಿವುಡ್ ಸಿನಿಮಾಗಳಿಗೆ ಟ್ಯೂನ್ ಹಾಕಿದ್ದಾರೆ. ಅಭಿಷೇಕ್ ಬಚ್ಚನ್ - ದೀಪಿಕಾ ಪಡುಕೋಣೆ ನಟನೆಯ 'ಖೇಲೀಂ ಹಮ್ ಜೀ ಜಾನ್ ಸೇ' ಚಿತ್ರದ ಸಣ್ಣ ಪಾತ್ರದಲ್ಲಿ ಪಾಲಾಶ್ ಮಿಂಚಿದ್ದರು.
18 ವರ್ಷ ವಯಸ್ಸಿನಲ್ಲಿ ಮುಚ್ಚಲ್ ಬಾಲಿವುಡ್‌ನ ಅತ್ಯಂತ ಕಿರಿಯ ಸಂಗೀತ ಸಂಯೋಜಕ ಎನಿಕೊಂಡಿದ್ದರು. ಬಾಲಿವುಡ್‌ನ ಅತ್ಯಂತ ಕಿರಿಯ ಸಂಗೀತ ಸಂಯೋಜಕರಾಗಿ ವಿಶ್ವ ದಾಖಲೆಗಳ ಗೋಲ್ಡನ್ ಬುಕ್‌ನಲ್ಲಿ ತಮ್ಮ ಹೆಸರನ್ನು ನಮೂದಿಸಿದ್ದಾರೆ.