ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕುಲ್ದೀಪ್ ಯಾದವ್, ಮಾನವ್ ಸುತಾರ್ ಎಲ್ಲಿದ್ದಾರೆ?; ಆಯ್ಕೆ ಸಮಿತಿ ಪ್ರಶ್ನಿಸಿದ ಸೌರವ್ ಗಂಗೂಲಿ

New Zealand vs India 1st Test: ಡ್ಯಾರಿಲ್ ಮಿಚೆಲ್ 186 ಎಸೆತಗಳಲ್ಲಿ 49 ರನ್ ಗಳಿಸಿ ಔಟಾಗದೆ ಉಳಿದರೆ, ಗ್ಲೆನ್ ಫಿಲಿಪ್ಸ್ 126 ಎಸೆತಗಳಲ್ಲಿ 26 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಜೋಡಿಯು ತಾಳ್ಮೆಯಿಂದ ಬ್ಯಾಟಿಂಗ್ ಮಾಡುವ ಮೂಲಕ ಭಾರತದ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಿತು.

ಭಾರತ ತಂಡದ ಆಯ್ಕೆ ಸಮಿತಿಯನ್ನು ಪ್ರಶ್ನಿಸಿದ ಸೌರವ್ ಗಂಗೂಲಿ

Kuldeep and Manav -

Abhilash BC
Abhilash BC Nov 23, 2026 4:58 PM

ವೆಲ್ಲಿಂಗ್ಟನ್‌, ನ.23: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಭಾರತದ ಆಡುವ ಬಳಗದಿಂದ ಕುಲದೀಪ್ ಯಾದವ್ ಮತ್ತು ಮಾನವ್ ಸುಥಾರ್ ಅವರಂತಹ ಪರಿಣಿತ ಸ್ಪಿನ್ನರ್‌ಗಳನ್ನು ಕೈಬಿಟ್ಟಿರುವ ನಿರ್ಧಾರವನ್ನು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಪ್ರಶ್ನಿಸಿದ್ದಾರೆ.

ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನಲ್ಲಿ ಭಾರತದ ಬ್ಯಾಟಿಂಗ್ ಪ್ರದರ್ಶನವನ್ನು ಶ್ಲಾಘಿಸಿರುವ ಗಂಗೂಲಿ, ವಿದೇಶಿ ನೆಲದಲ್ಲಿ ಟೆಸ್ಟ್ ಪಂದ್ಯಗಳನ್ನು ಗೆಲ್ಲಲು, ವಿಶೇಷವಾಗಿ ಪಂದ್ಯ ಮುಂದುವರೆದಂತೆ ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲಕರವಾಗುವ (ಫ್ಲಾಟ್ ಆಗುವ) ಪಿಚ್‌ಗಳಲ್ಲಿ, ಒಬ್ಬ ನೈಜ ಸ್ಪಿನ್ನರ್ ತಂಡದಲ್ಲಿರುವುದು ಅತ್ಯಗತ್ಯ ಎಂದು ಹೇಳಿದರು.

IND vs NZ: ʻ ಚೆಂಡಿಗೆ ಎಂಜಲು ಬಳಸಲು ಅನುಮತಿ ನೀಡಿʼ-ಐಸಿಸಿಗೆ ಮನವಿ ಮಾಡಿದ ಶುಭಮನ್‌ ಗಿಲ್‌!

ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಡ್ರಾ ಸಾಧಿಸಿದ ನಂತರ ಅವರ ಈ ಪ್ರತಿಕ್ರಿಯೆಗಳು ಬಂದಿವೆ. ಭಾರತವು ತನ್ನ ಮೊದಲ ಇನ್ನಿಂಗ್ಸ್ ಅನ್ನು 720/9 ರ ಬೃಹತ್ ಮೊತ್ತಕ್ಕೆ ಡಿಕ್ಲೇರ್ ಮಾಡಿಕೊಂಡಿತ್ತು ಮತ್ತು ಗೆಲುವಿನತ್ತ ದಾಪುಗಾಲು ಹಾಕಲು ಬಲವಾದ ಸ್ಥಿತಿಯಲ್ಲಿತ್ತು. ಆದರೆ, ಅಂತಿಮ ದಿನದಂದು ಉಳಿದ ಐದು ವಿಕೆಟ್‌ಗಳನ್ನು ಕಬಳಿಸಲು ಭಾರತಕ್ಕೆ ಸಾಧ್ಯವಾಗಲಿಲ್ಲ.

ನ್ಯೂಜಿಲೆಂಡ್ ತಂಡವು 119/2 ರ ಸ್ಕೋರ್‌ನೊಂದಿಗೆ ದಿನದಾಟವನ್ನು ಪುನರಾರಂಭಿಸಿತು, ಆಗಲೂ ಅದು 233 ರನ್‌ಗಳ ಹಿನ್ನಡೆಯಲ್ಲಿತ್ತು. ಆದಾಗ್ಯೂ, ಆತಿಥೇಯ ತಂಡವು ಅಪಾರ ತಾಳ್ಮೆ ಪ್ರದರ್ಶಿಸಿ, 120 ಓವರ್‌ಗಳ ಅಂತ್ಯಕ್ಕೆ 239/5 ರ ಸ್ಕೋರ್ ತಲುಪಿತು. ಪಂದ್ಯ ಮುಗಿಯಲು ಒಂದು ಗಂಟೆಗೂ ಕಡಿಮೆ ಸಮಯ ಬಾಕಿ ಇದ್ದಾಗ, ನಾಯಕ ಶುಭಮನ್ ಗಿಲ್ ಎದುರಾಳಿ ಬ್ಯಾಟರ್‌ಗಳೊಂದಿಗೆ ಕೈಕುಲುಕಿ ಡ್ರಾ ಮಾಡಿಕೊಂಡರು.



ಡ್ಯಾರಿಲ್ ಮಿಚೆಲ್ 186 ಎಸೆತಗಳಲ್ಲಿ 49 ರನ್ ಗಳಿಸಿ ಔಟಾಗದೆ ಉಳಿದರೆ, ಗ್ಲೆನ್ ಫಿಲಿಪ್ಸ್ 126 ಎಸೆತಗಳಲ್ಲಿ 26 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಜೋಡಿಯು ತಾಳ್ಮೆಯಿಂದ ಬ್ಯಾಟಿಂಗ್ ಮಾಡುವ ಮೂಲಕ ಭಾರತದ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಿತು.

ಟ್ವಿಟರ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಗಂಗೂಲಿ, ಈ ಪ್ರವಾಸದ ವೇಳೆ ವೈಟ್-ಬಾಲ್ ಮತ್ತು ರೆಡ್-ಬಾಲ್ ಕ್ರಿಕೆಟ್ ಎರಡರಲ್ಲೂ ಭಾರತ ತೋರಿದ ಪ್ರದರ್ಶನವನ್ನು ಶ್ಲಾಘಿಸಿದರು. ಆದಾಗ್ಯೂ, ಕುಲದೀಪ್ ಯಾದವ್ ಮತ್ತು ಮಾನವ್ ಸುಥಾರ್ ಅವರಂತಹ ಪರಿಣಿತ ಸ್ಪಿನ್ನರ್‌ಗಳಿಲ್ಲದೆ ಕಣಕ್ಕಿಳಿಯುವ ತಂಡದ ನಿರ್ಧಾರವನ್ನು ಅವರು ಪ್ರಶ್ನಿಸಿದರು.

"ಈ ಸರಣಿಯಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿದೆ. ಸೀಮಿತ ಓವರ್‌ಗಳ ಕ್ರಿಕೆಟ್ ಆಗಿರಲಿ ಅಥವಾ ಈಗಿನ ಟೆಸ್ಟ್ ಕ್ರಿಕೆಟ್ ಆಗಿರಲಿ, ಬ್ಯಾಟಿಂಗ್‌ನಲ್ಲಿನ ಅವರ ಬದ್ಧತೆ ಅತ್ಯುತ್ತಮವಾಗಿತ್ತು. ಆದರೆ, ಸಮಯ ಕಳೆದಂತೆ ಸಪಾಟಾಗುವ ಪಿಚ್‌ಗಳಲ್ಲಿ ಟೆಸ್ಟ್ ಪಂದ್ಯಗಳನ್ನು ಗೆಲ್ಲಬೇಕೆಂದರೆ, ಒಬ್ಬ ಪರಿಣಿತ ಸ್ಪಿನ್ನರ್ ಇರುವುದು ಅತ್ಯಗತ್ಯ ಎಂಬುದನ್ನು ಅವರು ಅರಿಯಬೇಕು. ಟೆಸ್ಟ್ ಕ್ರಿಕೆಟ್‌ನಲ್ಲಿ ಒಬ್ಬ ಸ್ಪಿನ್ನರ್ ಆಡುವುದು ಕಡ್ಡಾಯ. ವಾಷಿಂಗ್ಟನ್ ಸುಂದರ್ ಅವರನ್ನು ಆಲ್‌ರೌಂಡರ್ ಆಗಿ ಕಣಕ್ಕಿಳಿಸಬಹುದು. ಕುಲದೀಪ್ ಅಥವಾ ಮಾನವ್ ಸುತಾರ್ ಎಲ್ಲಿದ್ದಾರೆ?" ಎಂದು ಬಿಸಿಸಿಐಗೆ ಪ್ರಶ್ನಿಸಿ ಗಂಗೂಲಿ ಟ್ವೀಟ್‌ ಮಾಡಿದ್ದಾರೆ.