ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಎಲ್ಲ 10 ಐಪಿಎಲ್‌ ತಂಡಗಳ ನಾಯಕರ ಪಟ್ಟಿ ಇಲ್ಲಿದೆ

ಮಾರ್ಚ್ 22 ರಿಂದ 13 ಸ್ಥಳಗಳಲ್ಲಿ ಈ ಬಾರಿ ಐಪಿಎಲ್‌ ಪಂದ್ಯಾವಳಿಗಳು ನಡೆಯಲಿದೆ. ಮೂರು ಫ್ರಾಂಚೈಸಿಗಳು ತಮ್ಮ ಗೊತ್ತುಪಡಿಸಿದ ಎರಡನೇ ತಾಣಗಳಲ್ಲಿ ಕನಿಷ್ಠ ಎರಡು ತವರು ಪಂದ್ಯಗಳನ್ನು ಆಡಲಿವೆ. ಉದ್ಘಾಟನ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಹಾಲಿ ಚಾಂಪಿಯನ್‌ ಕೆಕೆಆರ್‌ ಮುಖಾಮುಖಿಯಾಗಲಿವೆ.

IPL 2025: ಎಲ್ಲ 10 ಐಪಿಎಲ್‌ ತಂಡಗಳ ನಾಯಕರ ಪಟ್ಟಿ ಇಲ್ಲಿದೆ

Profile Abhilash BC Mar 14, 2025 12:40 PM

ಬೆಂಗಳೂರು: ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL 2025) ಶುರುವಾಗುವ ದಿನಗಳು ಸನಿಹದಲ್ಲಿದೆ. ಕ್ರಿಕೆಟ್‌ ಹಬ್ಬವನ್ನು ಸ್ವಾಗತಿಸಲು, ಆನಂದದಿಂದ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಸಿಕ್ಸರ್‌, ಬೌಂಡರಿಗಳ ಮನರಂಜನೆ, 65 ದಿನಗಳ ರಸದೌತಣ, ಕ್ರೀಡಾಪ್ರೇಮಿಗಳ ಹೃದಯ ತಣಿಸಲಿದೆ. ಟೂರ್ನಿಯು ಮಾರ್ಚ್ 22 ರಿಂದ 13 ಸ್ಥಳಗಳಲ್ಲಿ ನಡೆಯಲಿದ್ದು, ಮೂರು ಫ್ರಾಂಚೈಸಿಗಳು ತಮ್ಮ ಗೊತ್ತುಪಡಿಸಿದ ಎರಡನೇ ತಾಣಗಳಲ್ಲಿ ಕನಿಷ್ಠ ಎರಡು ತವರು ಪಂದ್ಯಗಳನ್ನು ಆಡಲಿವೆ. ಎಲ್ಲ 10 ತಂಡಗಳ ನಾಯಕರ(captains of IPL 2025) ವಿವರ ಇಲ್ಲಿದೆ.

ರಜತ್‌ ಪಾಟಿದಾರ್‌

ಆರ್‌ಸಿಬಿ ತಂಡದ ನಾಯಕನಾಗಿರುವ ರಜತ್‌ ಪಾಟಿದಾರ್‌ ಐಪಿಎಲ್‌ನಲ್ಲಿ ಮೊದಲ ಬಾರಿಗೆ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಇದುವರೆಗಿನ 17 ಆವೃತ್ತಿಯಲ್ಲೂ ಕಪ್‌ ಗೆಲ್ಲದ ಆರ್‌ಸಿಬಿ ಈ ಬಾರಿ ಪಾಟಿದಾರ್‌ ನಾಯಕತ್ವದಲ್ಲಾದರೂ ತಂಡದ ಲಕ್‌ ಬದಲಾಗಿ ಕಪ್‌ ಗೆದೀತೇ ಎಂದು ಕಾದು ನೋಡಬೇಕಿದೆ.

ಋತುರಾಜ್‌ ಗಾಯಕ್ವಾಡ್‌

ಕಳೆದ ವರ್ಷದ ಆವೃತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕನಾಗಿ ಆಯ್ಕೆಯಾಗಿದ್ದ ಋತುರಾಜ್‌ ಗಾಯಕ್ವಾಡ್‌ಗೆ ಇದು ನಾಯಕನಾಗಿ ಎರಡನೇ ಆವೃತಿ. ಕಳೆದ ಬಾರಿ ತಂಡ 14 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 5ನೇ ಸ್ಥಾನಿಯಾಗಿತ್ತು.

ಡೆಲ್ಲಿ ಕ್ಯಾಪಿಟಲ್ಸ್‌

ಕೆಲವು ಪಂದ್ಯಗಳಲ್ಲಿ ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದ ಅಕ್ಷರ್‌ ಪಟೇಲ್‌ ಈ ಬಾರಿ ಖಾಯಂ ನಾಯಕನಾಗಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. ಡೆಲ್ಲಿ ಕೂಡ ಇದುವರೆಗೆ ಕಪ್‌ ಗೆದಿಲ್ಲ.

ಶುಭಮನ್‌ ಗಿಲ್‌

ಭಾರತ ತಂಡದ ಉಪನಾಯಕ ಶುಭಮನ್‌ ಗಿಲ್‌ಗೆ ಐಪಿಎಲ್‌ನಲ್ಲಿ ನಾಯಕನಾಗಿ ಅಷ್ಟಾಗಿ ಯಶಸ್ಸು ಸಿಕ್ಕಿಲ್ಲ. ಕಳೆದ ಆವೃತ್ತಿಯಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವನ್ನು ಚೊಚ್ಚಲ ಬಾರಿಗೆ ಮುನ್ನಡೆಸಿದ್ದ ಅವರು ಕೇವಲ 5 ಗೆಲುವಿನೊಂದಿಗೆ 8ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಈ ಬಾರಿ ಅವರ ಲಕ್‌ ಹೇಗಿದೆ ಎಂದು ಕಾದು ನೋಡಬೇಕಿದೆ.

ಅಜಿಂಕ್ಯಾ ರಹಾನೆ

ಅನುಭವಿ ಆಟಗಾರ ಅಜಿಂಕ್ಯಾ ರಹಾನೆ ಈ ಬಾರಿ ಹಾಲಿ ಚಾಂಪಿಯನ್‌ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. ಅವರು ಈ ಹಿಂದೆ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಎರಡು ಆವೃತ್ತಿಗಳಲ್ಲಿ ಮುನ್ನಡೆಸಿದ್ದರು. ದೇಶಿಯ ಕ್ರಿಕೆಟ್‌ನಲ್ಲಿ ಮುಂಬೈ ತಂಡವನ್ನು ಹಲವು ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟಕ್ಕೇರಿಸಿದ ರಹಾನೆಗೆ ಈ ಬಾರಿ ಐಪಿಎಲ್‌ ಕಪ್‌ ಕೆಕೆಆರ್‌ ತಂಡದಲ್ಲೇ ಉಳಿಸಿಕೊಳ್ಳುವ ಸವಾಲಿದೆ.

ಇದನ್ನೂ ಓದಿ IPL 2025: ಐಪಿಎಲ್‌ ಟೂರ್ನಿಯಿಂದ ಹ್ಯಾರಿ ಬ್ರೂಕ್‌ ಎರಡು ವರ್ಷ ನಿಷೇಧ! ಕಾರಣವೇನು?

ರಿಷಭ್‌ ಪಂತ್‌

ಈ ಹಿಂದಿನ ಆವೃತ್ತಿಯಲ್ಲಿ ಡೆಲ್ಲಿ ತಂಡದ ನಾಯಕನಾಗಿದ್ದ ವಿಕೆಟ್‌ ಕೀಪರ್‌-ಬ್ಯಾಟರ್‌ ರಿಷಭ್‌ ಪಂತ್‌ ಈ ಬಾರಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ನಾಯಕನಾಗಿದ್ದಾರೆ. ಕಳೆದ ಮೆಗಾ ಹರಾಜಿನಲ್ಲಿ ಅವರನ್ನು ಫ್ರಾಂಚೈಸಿ ದಾಖಲೆಯ 27 ಕೋಟಿ ರೂ. ನೀಡಿ ಖರೀದಿ ಮಾಡಿತ್ತು.

ಹಾರ್ದಿಕ್‌ ಪಾಂಡ್ಯ

ಗುಜರಾತ್‌ ತಂಡವನ್ನು ಎರಡು ಬಾರಿ ಫೈನಲ್‌ ತಲುಪಿಸಿ ಒಂದು ಬಾರಿ ಕಪ್‌ ಗೆದ್ದಿದ್ದ ಹಾರ್ದಿಕ್‌ ಪಾಂಡ್ಯ ಕಳೆದ ಆವೃತ್ತಿಯಲ್ಲಿ ಮುಂಬೈ ತಂಡದ ನಾಯಕನಾಗಿದ್ದರು. ಈ ಬಾರಿಯೂ ಅವರು ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ. ಗುಜರಾತ್‌ ತಂಡದಲ್ಲಿ ಸಿಕ್ಕ ಯಶಸ್ಸು ಅವರಿಗೆ ಮುಂಬೈ ತಂಡದಲ್ಲಿ ಸಿಕ್ಕಿರಲಿಲ್ಲ. ಅವರ ನಾಯಕತ್ವದಲ್ಲಿ ತಂಡ ಕಳೆದ ಬಾರಿ ಕೊನೆಯ ಸ್ಥಾನ ಪಡೆದಿತ್ತು.

ಶ್ರೇಯಸ್‌ ಅಯ್ಯರ್‌

ಕಳೆದ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡವನ್ನು ಚಾಂಪಿಯನ್‌ ಮಾಡಿದ್ದ ಶ್ರೇಯಸ್‌ ಅಯ್ಯರ್‌ ಈ ಬಾರಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. ಇದುವರೆಗೂ ಕಪ್‌ ಗೆಲ್ಲದ ಪಂಜಾಬ್‌ಗೆ ಅಯ್ಯರ್‌ ಚೊಚ್ಚಲ ಕಪ್‌ ತಂದು ಕೊಟ್ಟಾರೇ ಎಂದು ಕಾದು ನೋಡಬೇಕಿದೆ.

ಸಂಜು ಸ್ಯಾಮ್ಸನ್‌

ಕಳೆದ ಕೆಲ ಆವೃತ್ತಿಯಿಂದ ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕನಾಗಿರುವ ಸಂಜು ಸ್ಯಾಮ್ಸನ್‌ ಒಂದು ಬಾರಿ ತಂಡವನ್ನು ಫೈನಲ್‌ ತಲುಪಿಸಿದ್ದರು. ಕಳೆದ ಎರಡು ವರ್ಷ ಕೂಡ ತಂಡ ಪ್ಲೇ ಆಫ್‌ ಪ್ರವೇಶಿಸಿತ್ತು.

ಪ್ಯಾಟ್‌ ಕಮಿನ್ಸ್‌

ಕಳೆದ ಆವೃತ್ತಿಯಲ್ಲಿ ಸನ್‌ರೈಸರ್ಸ್‌ ತಂಡದ ನಾಯಕನಾಗಿ ತಂಡವನ್ನು ಫೈನಲ್‌ ತಲುಪಿಸಿದ್ದ ಪ್ಯಾಟ್‌ ಕಮಿನ್ಸ್‌ ಈ ಬಾರಿಯೂ ಹೈದರಾಬಾದ್‌ ತಂಡವನ್ನು ಮುನ್ನಡೆಸಲಿದ್ದಾರೆ.