ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Senuran Muthusamy: ಗುವಾಹಟಿಯಲ್ಲಿ ಚೊಚ್ಚಲ ಟೆಸ್ಟ್‌ ಶತಕ ಬಾರಿಸಿದ ಭಾರತೀಯ ಮೂಲದ ಸೆನುರನ್ ಮುತ್ತುಸ್ವಾಮಿ ಯಾರು?

ದಕ್ಷಿಣ ಆಫ್ರಿಕಾದ 2019 ರ ಭಾರತ ಪ್ರವಾಸದ ವೇಳೆ ಅವರು ವಿಶಾಖಪಟ್ಟಣದಲ್ಲಿ ತಮ್ಮ ಚೊಚ್ಚಲ ಟೆಸ್ಟ್‌ ಪಂದ್ಯವನ್ನಾಡಿದರು. ಆ ಪಂದ್ಯದಲ್ಲಿ ಅವರು ಭಾರತೀಯ ನಾಯಕನಾಗಿದ್ದ ವಿರಾಟ್ ಕೊಹ್ಲಿಯ ವಿಕೆಟ್‌ ಕಿತ್ತಿದ್ದರು. ಅದು ಅವರ ಮೊದಲ ಟೆಸ್ಟ್ ವಿಕೆಟ್.

ಭಾರತಕ್ಕೆ ಕಾಡಿದ ಭಾರತೀಯ ಮೂಲದ ಸೆನುರನ್ ಮುತ್ತುಸ್ವಾಮಿ ಯಾರು?

ಶತಕ ಬಾರಿಸಿದ ಸೆನುರನ್ ಮುತ್ತುಸಾಮಿ -

Abhilash BC
Abhilash BC Nov 23, 2025 2:18 PM

ಗುವಾಹಟಿ: ಇಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಎರಡನೇ ಟೆಸ್ಟ್(India vs South Africa) ಪಂದ್ಯದ 2ನೇ ದಿನದಾಟದ ವೇಳೆ ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರುವ ಮೂಲಕ ಟೆಸ್ಟ್ ವೃತ್ತಿಜೀವನದ ಚೊಚ್ಚಲ ಶತಕ ಬಾರಿಸಿದ ಸೆನುರನ್ ಮುತ್ತುಸಾಮಿ(Senuran Muthusamy) ಭಾರತೀಯ ಮೂಲದವರಾಗಿದ್ದಾರೆ.

7ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ಮುತ್ತುಸಾಮಿ ಭಾರತೀಯ ಬೌಲರ್‌ಗಳ ಸ್ಪಿನ್‌ ಮತ್ತು ವೇಗದ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿ ಶತಕ ಪೂರ್ತಿಗೊಳಿಸಿದರು. ತಮ್ಮ ಎಂಟನೇ ಟೆಸ್ಟ್ ಪಂದ್ಯವನ್ನು ಆಡಿದ ಮುತ್ತುಸಾಮಿ 192 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದರು. ಈ ವರ್ಷದ ಆರಂಭದಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ 89 ರನ್ ಗಳಿಸಿದ್ದು ಅವರ ಹಿಂದಿನ ಅತ್ಯುತ್ತಮ ಸಾಧನೆಯಾಗಿತ್ತು.

ಪಂದ್ಯದಲ್ಲಿ 206 ಎಸೆತ ಎದುರಿಸಿದ ಅವರು 10 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 109 ರನ್‌ ಗಳಿಸಿ ಮೊಹಮ್ಮದ್‌ ಸಿರಾಜ್‌ಗೆ ವಿಕೆಟ್‌ ಒಪ್ಪಿಸಿದರು. ಕೈಲ್ ವೆರ್ರೆನ್ನೆ ಜತೆ 88 ಮತ್ತು ಮಾರ್ಕೊ ಜಾನ್ಸೆನ್‌ ಜತೆ 97 ರನ್‌ಗಳ ಜತೆಯಾಟ ನಡೆಸಿ ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾದರು. ಕೈಲ್ ವೆರ್ರೆನ್ನೆ 45 ರನ್‌ ಬಾರಿಸಿದರೆ, ಮಾರ್ಕೊ ಜಾನ್ಸೆನ್‌ ಅರ್ಧಶತಕ ಬಾರಿಸಿ ಮಿಂಚಿದರು.

ತಮಿಳುನಾಡು ಮೂಲದ ಮುತ್ತುಸ್ವಾಮಿ

ಸೆನುರನ್ ಮುತ್ತುಸ್ವಾಮಿ ಅವರು ಫೆಬ್ರವರಿ 22, 1994 ರಂದು ದಕ್ಷಿಣ ಆಫ್ರಿಕಾದ ನಟಾಲ್ ಪ್ರಾಂತ್ಯದ ಡರ್ಬನ್‌ನಲ್ಲಿ ಭಾರತೀಯ ಮೂಲದ ಪೋಷಕರಿಗೆ ಜನಿಸಿದರು. ಅವರು ತಮ್ಮ ತಮಿಳು ಪರಂಪರೆಯೊಂದಿಗೆ ಬಲವಾದ ಸಂಪರ್ಕವನ್ನು ಹೊಂದಿದ್ದಾರೆ, ಅವರ ವಿಸ್ತೃತ ಕುಟುಂಬದ ಸದಸ್ಯರು ಇನ್ನೂ ತಮಿಳುನಾಡಿನ ನಾಗಪಟ್ಟಣಂನಲ್ಲಿ ವಾಸಿಸುತ್ತಿದ್ದಾರೆ.

ಇದನ್ನೂ ಓದಿ AUS vs ENG: ಟ್ರಾವಿಸ್ ಹೆಡ್ ಶತಕ: ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ ಆಸ್ಟ್ರೇಲಿಯಾ!

ಕ್ಲಿಫ್ಟನ್ ಕಾಲೇಜಿನಲ್ಲಿ ಶಿಕ್ಷಣ ಪಡೆದ ಮುತ್ತುಸಾಮಿ ನಂತರ ಕ್ವಾಜುಲು-ನಟಾಲ್ ವಿಶ್ವವಿದ್ಯಾಲಯದಿಂದ ಸಮಾಜ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರ ಕ್ರಿಕೆಟ್ ಪ್ರಯಾಣವು ಡರ್ಬನ್‌ನಲ್ಲಿ ಪ್ರಾರಂಭವಾಯಿತು.

ದಕ್ಷಿಣ ಆಫ್ರಿಕಾದ 2019 ರ ಭಾರತ ಪ್ರವಾಸದ ವೇಳೆ ಅವರು ವಿಶಾಖಪಟ್ಟಣದಲ್ಲಿ ತಮ್ಮ ಚೊಚ್ಚಲ ಟೆಸ್ಟ್‌ ಪಂದ್ಯವನ್ನಾಡಿದರು. ಆ ಪಂದ್ಯದಲ್ಲಿ ಅವರು ಭಾರತೀಯ ನಾಯಕನಾಗಿದ್ದ ವಿರಾಟ್ ಕೊಹ್ಲಿಯ ವಿಕೆಟ್‌ ಕಿತ್ತಿದ್ದರು. ಅದು ಅವರ ಮೊದಲ ಟೆಸ್ಟ್ ವಿಕೆಟ್. ದಕ್ಷಿಣ ಆಫ್ರಿಕಾದ ಸ್ಪಿನ್ ಬೌಲಿಂಗ್‌ನಲ್ಲಿನ ಆಳ ಮತ್ತು ಕೇಶವ್ ಮಹಾರಾಜ್ ಅವರ ಮುಂದುವರಿದ ಶ್ರೇಷ್ಠತೆಯನ್ನು ಗಮನಿಸಿದರೆ, ರಾಷ್ಟ್ರೀಯ ತಂಡದಲ್ಲಿ ಶಾಶ್ವತ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದು ಸವಾಲಿನ ಸಂಗತಿಯಾಗಿದೆ. ಆದರೂ, ಮುತ್ತುಸ್ವಾಮಿ ಸದ್ದಿಲ್ಲದೆ ಪ್ರಭಾವಶಾಲಿ ಉಪಸ್ಥಿತಿಯಾಗಿ ಉಳಿದಿದ್ದಾರೆ.