ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Women's World Cup Final: ಇಂದು ಭಾರತ-ದಕ್ಷಿಣ ಆಫ್ರಿಕಾ ಫೈನಲ್‌ ನಡೆಯುವುದೇ ಅನುಮಾನ

INDW vs SAW: ಬ್ಯಾಟಿಂಗ್ ಸ್ನೇಹಿ ಪಿಚ್‌ ಆಗಿರುವ ಕಾರಣ ಪಂದ್ಯದಲ್ಲಿ ರನ್‌ಗಳ ಹೊಳೆ ಹರಿಯುವ ಎಲ್ಲ ಸಾಧ್ಯತೆಗಳಿವೆ. ಹೀಗಾಗಿ ಬೌಲರ್‌ಗಳು ಶಕ್ತಿ ಮೀರಿದ ಪ್ರದರ್ಶನ ನೀಡಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಮಬಲಶಾಲಿಗಳ ನಡುವಣ ಈ ಹಣಾಹಣಿಯಲ್ಲಿ ಒತ್ತಡವನ್ನು ಯಾರು ಸಮರ್ಥವಾಗಿ ನಿಭಾಯಿಸಬಲ್ಲರೋ ಅವರು ಚೊಚ್ಚಲ ಟ್ರೋಫಿ ಎತ್ತಿ ಹಿಡಿಯುವುದು ಖಚಿತ.

ನವಿ ಮುಂಬೈ: ಕ್ರಿಕೆಟ್‌ ಅಭಿಮಾನಿಗಳು ಕಾದು ಕುಳಿತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ(INDW vs SAW) ಇಂದು(ಭಾನುವಾರ) ನಡೆಯಬೇಕಿರುವ ಮಹಿಳಾ ಏಕದಿನ ವಿಶ್ವಕಪ್‌ ಪಂದ್ಯ(Women's World Cup Final) ನಡೆಯುವುದೇ ಅನುಮಾನ ಎನ್ನುವಂತಿದೆ. ಹೌದು, ಮಹಾರಾಷ್ಟ್ರಕ್ಕೆ ಭಾರತೀಯ ಹವಾಮಾನ ಇಲಾಖೆ ಎಲ್ಲೋ ಅಲರ್ಟ್‌ ನೀಡಿದೆ. ಹೀಗಾಗಿ ನವಿ ಮುಂಬೈನಲ್ಲಿ ನಡೆಯುವ ಪ್ರಶಸ್ತಿ ಸುತ್ತಿನ ಹೋರಾಟಕ್ಕೆ ಮಳೆ ಭೀತಿ ಕಾಡುತ್ತಿದೆ. ಆದರೆ ಪಂದ್ಯಕ್ಕೆ ಮೀಸಲು ದಿನವಿದೆ. ಸ್ಥಳೀಯ ಹವಾಮಾನ ಇಲಾಖೆಯೂ ಶೇ.68 ರಷ್ಟು ಮಳೆ ಮನ್ಸೂಚನೆ ನೀಡಿದ್ದು, ಮೋಡಕವಿದ ವಾತಾವರಣದೊಂದಿಗೆ ಗುಡುಗು ಸಹಿತ ಮಳೆ ಸುರಿಯಲಿದೆ ಮತ್ತು ಭಾರಿ ಗಾಳಿ ಬೀಸಲಿದೆ ಎನ್ನಲಾಗಿದೆ.

ಮೀಸಲು ದಿನ ಮಳೆ ಬಂದರೆ

ಭಾನುವಾರ ಫೈನಲ್‌ ಪಂದ್ಯಕ್ಕೆ ಮಳೆ ಕಾಡಿದರೆ ಮೀಸಲು ದಿನವಾಗಿ ಸೋಮವಾರ(ನ.3) ನಿಗದಿ ಮಾಡಲಾಗಿದ್ದು, ಎರಡೂ ದಿನ ಹೆಚ್ಚುವರಿ ಸಮಯ ಕೂಡ ನೀಡಲಾಗಿದೆ. ಫಲಿತಾಂಶ ನಿರ್ಧಾರಕ್ಕೆ ಉಭಯ ತಂಡಗಳು ಕನಿಷ್ಠ 20 ಓವರ್‌ ಆಡಬೇಕು. ಮೀಸಲೂ ದಿನವೂ ಮಳೆ ಅಡ್ಡಿಪಡಿಸಿದರೆ, ಉಭಯ ತಂಡಗಳನ್ನು ಜಂಟಿ ಚಾಂಪಿಯನ್‌ ಎಂದು ಘೋಷಿಸಲಾಗುತ್ತದೆ.

ಫೈನಲ್‌ ಟೈಗೊಂಡರೆ?

ಒಂದು ವೇಳೆ ಫೈನಲ್‌ ಪಂದ್ಯ ಟೈಗೊಂಡರೆ ಸೂಪರ್‌ ಓವರ್‌ ಆಡಿಸಲಾಗುತ್ತದೆ. ಸೂಪರ್‌ ಓವರ್‌ ಕೂಡ ಟೈಗೊಂಡರೆ ಫಲಿತಾಂಶ ನಿರ್ಧಾರವಾಗುವ ತನಕ ಸೂಪರ್‌ ಓವರ್‌ ಆಡಿಸಲಾಗುತ್ತದೆ. ಬೌಂಡರಿ, ವಿಕೆಟ್‌ ಆಧಾರದ ಮೇಲೆ ವಿಜೇತರನ್ನು ನಿರ್ಧರಿಸಲಾಗುವುದಿಲ್ಲ.

ಉಭಯ ತಂಡಗಳ ಫೈನಲ್‌ ಹಾದಿ...

ಭಾರತ

ಶ್ರೀಲಂಕಾ ಎದುರು 59 ರನ್‌ ಗೆಲುವು

ಪಾಕಿಸ್ತಾನ ವಿರುದ್ಧ 88 ರನ್‌ ಜಯ

ದಕ್ಷಿಣ ಆಫ್ರಿಕಾ ವಿರುದ್ಧ 3 ವಿಕೆಟ್‌ ಸೋಲು

ಆಸ್ಟ್ರೇಲಿಯಾ ವಿರುದ್ಧ 3 ವಿಕೆಟ್‌ ಸೋಲು

ಇಂಗ್ಲೆಂಡ್‌ ಎದುರು 4 ರನ್‌ ಸೋಲು

ನ್ಯೂಜಿಲೆಂಡ್‌ ವಿರುದ್ಧ 53 ರನ್‌ ಗೆಲುವು

ಬಾಂಗ್ಲಾದೇಶ ಎದುರಿನ ಪಂದ್ಯ ರದ್ದು

ಸೆಮಿಫೈನಲ್‌

ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್‌ ಜಯ

ಇದನ್ನೂ ಓದಿ Women's World Cup final: ಚಾರಿತ್ರಿಕ ವಿಶ್ವಕಪ್‌ ಟ್ರೋಫಿಗೆ ಭಾರತ-ದಕ್ಷಿಣ ಆಫ್ರಿಕಾ ಆಟಗಾರ್ತಿಯರ ಸೆಣಸು

ದಕ್ಷಿಣ ಆಫ್ರಿಕಾ

ಇಂಗ್ಲೆಂಡ್‌ ವಿರುದ್ಧ 10 ವಿಕೆಟ್‌ ಸೋಲು

ನ್ಯೂಜಿಲೆಂಡ್‌ ಎದುರು 6 ವಿಕೆಟ್‌ ಜಯ

ಭಾರತ ವಿರುದ್ಧ 3 ವಿಕೆಟ್‌ ಜಯ

ಬಾಂಗ್ಲಾದೇಶ ಎದುರು 3 ವಿಕೆಟ್‌ ಗೆಲುವು

ಶ್ರೀಲಂಕಾ ವಿರುದ್ಧ 10 ವಿಕೆಟ್‌ ಜಯ

ಪಾಕಿಸ್ತಾನ ಎದುರು 150 ರನ್‌ ಗೆಲುವು

ಆಸ್ಟ್ರೇಲಿಯಾ ವಿರುದ್ಧ 7 ವಿಕೆಟ್‌ ಸೋಲು

ಸೆಮಿಫೈನಲ್‌

ಇಂಗ್ಲೆಂಡ್‌ ಎದುರು 125 ರನ್‌ ಜಯ