WPL 2025: ಮೂರನೇ ಪ್ರಯತ್ನದಲ್ಲಿ ಕಪ್ ಗೆದ್ದೀತೇ ಡೆಲ್ಲಿ?; ನಾಳೆ ಫೈನಲ್
WPL 2025 Final: ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತೆ ಬ್ಯಾಟಿಂಗ್ ಫಾರ್ಮ್‌ಗೆ ಮರಳಿದ್ದು ತಂಡಕ್ಕೆ ಹೆಚ್ಚಿನ ಬಲ ಬಂದಂತಾಗಿದೆ. ಗುಜರಾತ್ ವಿರುದ್ಧ ಕೇವಲ 12 ಎಸೆತಗಳಲ್ಲಿ 36 ರನ್ ಬಾರಿಸಿದ್ದರು. ಒಟ್ಟಾರೆ ಮುಂಬೈ ಎಲ್ಲ ವಿಭಾಗದಲ್ಲಿಯೂ ಸಮರ್ಥವಾಗಿದೆ.


ಮುಂಬಯಿ: ಕಳೆದ ಎರಡು ಮಹಿಳಾ ಪ್ರೀಮಿಯರ್ ಲೀಗ್(WPL 2025) ಆವೃತ್ತಿಗಳಲ್ಲೂ ಫೈನಲ್ ತಲುಪಿ ಕಪ್ ಗೆಲ್ಲುವಲ್ಲಿ ವಿಫಲವಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್(Delhi Capitals Women) ಮೂರನೇ ಪ್ರಯತ್ನದಲ್ಲಿ ಚೊಚ್ಚಲ ಕಪ್ ಗೆಲ್ಲುವ ಇರಾದೆಯೊಂದಿಗೆ ನಾಳೆ(ಮಾ.15) ನಡೆಯುವ ಫೈನಲ್(WPL 2025 Final) ಪಂದ್ಯದಲ್ಲಿ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್(Mumbai Indians Women) ವಿರುದ್ಧ ಕಾದಾಟ ನಡೆಸಲಿದೆ. ಇದು ಇತ್ತಂಡಗಳ ಎರಡನೇ ಫೈನಲ್ ಮುಖಾಮುಖಿ. ಚೊಚ್ಚಲ ಆವೃತ್ತಿಯ ಫೈನಲ್‌ನಲ್ಲಿಯೂ ಉಭಯ ತಂಡಗಳು ಎದುರಾಗಿದ್ದವು. ಅಲ್ಲಿ ಮುಂಬೈ ಚಾಂಪಿಯನ್ ಆಗಿತ್ತು. ಅಂದಿನ ಸೋಲಿಗೆ ಸೇಡು ತೀರಿಸಲು ಈ ಬಾರಿ ಡೆಲ್ಲಿಗೊಂದು ಅವಕಾಶವಿದೆ. ಕಳೆದ ಬಾರಿ ಡೆಲ್ಲಿ ತಂಡ ಆರ್‌ಸಿಬಿ ವಿರುದ್ಧ ಸೋತು ಪ್ರಶಸ್ತಿ ತಪ್ಪಿಸಿಕೊಂಡಿತ್ತು. 3ನೇ ಬಾರಿ ಫೈನಲ್‌ಗೇರಿರುವ ತಂಡದ ಅದೃಷ್ಟ ಈ ಬಾರಿ ಕೈ ಹಿಡಿಯಲಿದೆಯೇ ಕಾದುನೋಡಬೇಕಿದೆ.
ಮುಂಬೈ ತಂಡ ತವರಿನಲ್ಲಿ ಬಲಿಷ್ಠವಾಗಿದೆ. ಹೀಗಾಗಿ ತಂಡಕ್ಕೆ ಹೆಚ್ಚಿನ ಲಾಭವಿದೆ. ವಿಂಡೀಸ್‌ನ ಹೀಲಿ ಮ್ಯಾಥ್ಯೂಸ್, ಇಂಗ್ಲೆಂಡ್‌ನ ನ್ಯಾಟ್-ಸ್ಕಿವರ್ ಬ್ರಂಟ್ ಅವರ ಆಲ್‌ರೌಂಡರ್ ಆಟ ಮುಂಬೈ ತಂಡದ ಪ್ರಮುಖ ಬಲ. ಉಭಯ ಆಟಗಾರ್ತಿಯರು ಕೂಡ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಲಯದಲ್ಲಿದ್ದಾರೆ. ಗುರುವಾರ ನಡೆದಿದ್ದ ಎಮಿಲಿನೇಟರ್ ಪಂದ್ಯದಲ್ಲಿ ಹೀಲಿ ಮ್ಯಾಥ್ಯೂಸ್ 77 ರನ್ ಮತ್ತು 3 ವಿಕೆಟ್ ಕಿತ್ತಿದ್ದರು. ಸ್ಕಿವರ್ ಬ್ರಂಟ್ 77 ರನ್ ಮತ್ತು ಒಂದು ವಿಕೆಟ್ ಉರುಳಿಸಿದ್ದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತೆ ಬ್ಯಾಟಿಂಗ್ ಫಾರ್ಮ್‌ಗೆ ಮರಳಿದ್ದು ತಂಡಕ್ಕೆ ಹೆಚ್ಚಿನ ಬಲ ಬಂದಂತಾಗಿದೆ. ಗುಜರಾತ್ ವಿರುದ್ಧ ಕೇವಲ 12 ಎಸೆತಗಳಲ್ಲಿ 36 ರನ್ ಬಾರಿಸಿದ್ದರು. ಒಟ್ಟಾರೆ ಮುಂಬೈ ಎಲ್ಲ ವಿಭಾಗದಲ್ಲಿಯೂ ಸಮರ್ಥವಾಗಿದೆ.
ಡೆಲ್ಲಿ ತಂಡ ಬಲಿಷ್ಠವಾಗಿದ್ದರೂ ಕೂಡ ಫೈನಲ್‌ನಲ್ಲಿ ಒತ್ತಡ ರಹಿತವಾಗಿ ಆಡುವ ಕಲೆ ತಿಳಿದಿಲ್ಲ. ಹೌದು ಲೀಗ್ ಪಂದ್ಯದಲ್ಲಿ ಭಯಭೀತರಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಪಂದ್ಯವನ್ನು ಗೆಲ್ಲುವ ಗೆಮ್ ಲ್ಯಾನಿಂಗ್ ಪಡೆ ಫೈನಲ್‌ನಲ್ಲಿ ಮಾತ್ರ ಒತ್ತಡದಲ್ಲಿ ಆಡುವ ಮೂಲಕ ಸೋಲು ಕಾಣುತ್ತಿದೆ. ಇದಕ್ಕೆ ಕಳೆದ ಎರಡು ಆವೃತ್ತಿಗಳೇ ಉತ್ತಮ ನಿದರ್ಶನ. ಒತ್ತಡವಿಲ್ಲದೆ ಆಡಿದರೆ ತಂಡಕ್ಕೆ ಗೆಲ್ಲುವು ನಿಶ್ಚಿತ ಎನ್ನಲಡ್ಡಿಯಿಲ್ಲ.
𝙏𝙝𝙚𝙮 𝙈𝙚𝙚𝙩 𝘼𝙜𝙖𝙞𝙣....𝙄𝙣 𝙏𝙝𝙚 𝙁𝙞𝙣𝙖𝙡 😍
— Women's Premier League (WPL) (@wplt20) March 13, 2025
Delhi Capitals 🆚 Mumbai Indians
🗓 Saturday, March 15, 2025
⏰ 8.00 PM IST
🏟 Brabourne Stadium, Mumbai#TATAWPL | #DCvMI | #Final | @DelhiCapitals | @mipaltan pic.twitter.com/e2fyj21ViB
ಇದನ್ನೂ ಓದಿ WPL 2025: ಗುಜರಾತ್ ಜಯಂಟ್ಸ್ ವಿರುದ್ಧ ಗೆದ್ದು ಫೈನಲ್‌ಗೆ ಪ್ರವೇಶಿಸಿದ ಮುಂಬೈ ಇಂಡಿಯನ್ಸ್!
ಸಂಭಾವ್ಯ ತಂಡಗಳು
ಮುಂಬೈ ಇಂಡಿಯನ್ಸ್: ಯಾಸ್ತಿಕಾ ಭಾಟಿಯಾ, ಹೇಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಸಜೀವನ್ ಸಜನಾ, ಜಿ ಕಮಲಿನಿ, ಅಮನ್‌ಜೋತ್ ಕೌರ್, ಸಂಸ್ಕೃತಿ ಗುಪ್ತಾ, ಶಬ್ನಿಮ್ ಇಸ್ಮಾಯಿಲ್, ಪರುಣಿಕಾ ಸಿಸೋಡಿಯಾ.
ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಅನ್ನಾಬೆಲ್ ಸದರ್ಲ್ಯಾಂಡ್, ಮರಿಜಾನ್ನೆ ಕಪ್, ಜೆಸ್ ಜೊನಾಸೆನ್, ಸಾರಾ ಬ್ರೈಸ್, ನಿಕಿ ಪ್ರಸಾದ್, ಮಿನ್ನು ಮಣಿ, ಶಿಖಾ ಪಾಂಡೆ, ಟೈಟಾಸ್ ಸಾಧು.