ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WPL 2025: ಗುಜರಾತ್‌ ಜಯಂಟ್ಸ್‌ ವಿರುದ್ಧ ಗೆದ್ದು ಫೈನಲ್‌ಗೆ ಪ್ರವೇಶಿಸಿದ ಮುಂಬೈ ಇಂಡಿಯನ್ಸ್‌!

GGW vs MIW Match Highlights:‌ ಮುಂಬೈನ ಬ್ರೆಬೋರ್ನ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದ್ದ 2025ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ದ 47 ರನ್‌ಗಳ ಗೆಲುವು ಪಡೆದ ಮುಂಬೈ ಇಂಡಿಯನ್ಸ್‌ ತಂಡ ಫೈನಲ್‌ಗೆ ಪ್ರವೇಶ ಮಾಡಿದೆ.

WPL 2025: ಗುಜರಾತ್‌ ವಿರುದ್ದ ಗೆದ್ದು ಫೈನಲ್‌ಗೇರಿದ ಮುಂಬೈ ವನಿತೆಯರು!

ಗುಜರಾತ್‌ ಜಯಂಟ್ಸ್‌ ವಿರುದ್ಧ ಗೆದ್ದು ಫೈನಲ್‌ಗೆ ಪ್ರವೇಶ ಮಾಡಿದ ಮುಂಬೈ ಇಂಡಿಯನ್ಸ್.

Profile Ramesh Kote Mar 13, 2025 11:27 PM

ಮುಂಬೈ: ಹೇಯ್ಲಿ ಮ್ಯಾಥ್ಯೂಸ್‌ ( 77 ರನ್‌, 3 ವಿಕೆಟ್‌) ಅವರ ಆಲ್‌ರೌಂಡರ್‌ ಪ್ರದರ್ಶನದ ಸಹಾಯದಿಂದ ಮುಂಬೈ ಇಂಡಿಯನ್ಸ್‌ (Mumbai Inians) ತಂಡ, 2025ರ ಮಹಿಳಾ ಪ್ರೀಮಿಯರ್‌ ಲೀಗ್‌ (WPL 2025) ಎಲಿಮಿನೇಟರ್‌ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ (Gujarat Titans) ವಿರುದ್ಧ 47 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯ ಫೈನಲ್‌ಗೆ ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಮುಂಬೈ ತಂಡ ಪ್ರವೇಶ ಮಾಡಿದೆ. ಮಾರ್ಚ್‌ 15 ರಂದು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ನಡೆಯುವ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಕಾದಾಟ ನಡೆಸಲಿದೆ.

ಗುರುವಾರ ಇಲ್ಲಿನ ಬ್ರೆಬೋರ್ನ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಎಲಿಮಿನೇಟರ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ನೀಡಿದ್ದ 214 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಗುಜರಾತ್‌ ಜಯಂಟ್ಸ್‌, ಹೇಯ್ಲಿ ಮ್ಯಾಥ್ಯೂಸ್‌ ಸ್ಪಿನ್‌ ಮೋಡಿಗೆ ನಲುಗಿ 19.2 ಓವರ್‌ಗಳಿಗೆ 166 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ 47 ರನ್‌ಗಳಿಂದ ಸೋಲು ಅನುಭವಿಸಿತು.ಆ ಮೂಲಕ ಆಶ್ಲೀ ಗಾರ್ಡ್ನರ್‌ ನಾಯಕತ್ವದ ಗುಜರಾತ್‌ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು.

ಮುಂಬೈ ಇಂಡಿಯನ್ಸ್‌ ಪರ ಸ್ಪಿನ್‌ ಮೋಡಿ ಮಾಡಿದ ಹೇಯ್ಲಿ ಮ್ಯಾಥ್ಯೂಸ್‌ 31 ರನ್‌ ನೀಡಿದರೂ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಗುಜರಾತ್‌ ಜಯಂಟ್ಸ್‌ ಪರ ಡೇನಿಯಲ್‌ ಗಿಬ್ಸನ್‌ (34 ರನ್‌), ಫೋಬ್‌ ಲೀಚ್‌ಫೀಲ್ಡ್‌ (31) ಹಾಗೂ ಭಾರ್ತಿ ಫುಲ್ಮಾಲಿ (30) ಅವರು ಉತ್ತಮ ಆರಂಭ ಕಂಡರೂ ದೊಡ್ಡ ಇನಿಂಗ್ಸ್‌ ಆಡುವಲ್ಲಿ ವಿಫಲರಾದರು. ಮುಂಬೈ ಪರ ಅಮೇಲಿಯಾ ಕೆರ್‌ ಎರಡು ವಿಕೆಟ್‌ ಕಿತ್ತರು.

WPL 2025: ಡಬ್ಲ್ಯುಪಿಎಲ್‌ನಲ್ಲಿ ದಾಖಲೆ ಬರೆದ ನ್ಯಾಟ್-ಸ್ಕಿವರ್ ಬ್ರಂಟ್

213 ರನ್‌ ಕಲೆ ಹಾಕಿದ ಮುಂಬೈ ಇಂಡಿಯನ್ಸ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಮುಂಬೈ ಇಂಡಿಯನ್ಸ್‌ ತಂಡ, ನ್ಯಾಟ್‌ ಸೀವರ್‌ ಬ್ರಂಟ್‌ ಹಾಗೂ ಹೇಯ್ಲಿ ಮ್ಯಾಥ್ಯೂಸ್‌ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 213 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಗುಜರಾತ್‌ ಜಯಂಟ್ಸ್‌ ತಂಡಕ್ಕೆ 214 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು.



ಮ್ಯಾಥ್ಯೂಸ್‌-ಸೀವರ್‌ ಬ್ರಂಟ್‌ ಜುಗಲ್‌ಬಂದಿ

ಮೊದಲು ಬ್ಯಾಟ್‌ ಮಾಡಿದ ಮುಂಬೈ ಇಂಡಿಯನ್ಸ್‌ ಪರ ಇನಿಂಗ್ಸ್‌ ಆರಂಭಿಸಿದ ಯಾಸ್ತಿಕ ಭಾಟಿಯಾ (15) ಬಹುಬೇಗ ವಿಕೆಟ್‌ ಒಪ್ಪಿಸಿದರು. ಆದರೆ, ಎರಡನೇ ವಿಕೆಟ್‌ಗೆ ಜೊತೆಯಾದ ಹೇಯ್ಲಿ ಮ್ಯಾಥ್ಯೂಸ್‌ ಹಾಗೂ ನ್ಯಾಟ್‌ ಸೀವರ್‌ ಬ್ರಂಟ್‌, ಗುಜರಾತ್‌ ಟೈಟನ್ಸ್‌ ತಂಡದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿತು. ಈ ಜೋಡಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿ 133 ರನ್‌ಗಳ ಜೊತೆಯಾಟವನ್ನು ಆಡಿತು. ಆ ಮೂಲಕ ಈ ಜೋಡಿ ತಂಡದ ಮೊತ್ತವನ್ನು 150 ರನ್‌ಗಳನ್ನು ದಾಟಿಸಲು ನೆರವು ನೀಡಿತು.



ಸ್ಪೋಟಕ ಅರ್ಧಶತಕಗಳನ್ನು ಸಿಡಿಸಿದ ಬ್ರಂಟ್‌-ಮ್ಯಾಥ್ಯೂಸ್‌

130ಕ್ಕೂ ಅಧಿಕ ರನ್‌ಗಳ ಜೊತೆಯಾಟವನ್ನು ಆಡುವುದರ ಜೊತೆಗೆ ಹೇಯ್ಲ್‌ ಮ್ಯಾಥ್ಯೂಸ್‌ ಹಾಗೂ ಸೀವರ್‌ ಬ್ರಂಟ್‌ ಸ್ಪೋಟಕ ಅರ್ಧಶತಕಗಳನ್ನು ಸಿಡಿಸಿದರು.

50 ಎಸೆತಗಳಲ್ಲಿ ಹೇಯ್ಲಿ ಮ್ಯಾಥ್ಯೂಸ್‌ 3 ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ 77 ರನ್‌ ಸಿಡಿಸಿದ್ದರೆ, 41 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ 77 ರನ್‌ಗಳನ್ನು ಸಿಡಿಸಿದರು. ಇನ್ನು ಡೆತ್‌ ಓವರ್‌ಗಳಲ್ಲಿ 12 ಎಸೆತಗಳಲ್ಲಿ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ 300ರ ಸ್ಟ್ರೈಕ್‌ ರೇಟ್‌ನಲ್ಲಿ 4 ಸಿಕ್ಸರ್‌ ಹಾಗೂ ಎರಡು ಬೌಂಡರಿಗಳೊಂದಿಗೆ 36 ರನ್‌ಗಳನ್ನು ಸಿಡಿಸಿದ್ದಾರೆ.

WPL 2025: ಮುಂಬೈ ವಿರುದ್ಧ ಗೆದ್ದು ಟೂರ್ನಿಯ ಅಭಿಯಾನ ಮುಗಿಸಿದ ಆರ್‌ಸಿಬಿ!

ಸ್ಕೋರ್‌ ವಿವರ

ಮುಂಬೈ ಇಂಡಿಯನ್ಸ್‌: 20 ಓವರ್‌ಗಳಲ್ಲಿ 213-4 (ನ್ಯಾಟ್‌ ಸೀವರ್‌ ಬ್ರಂಟ್‌ 77, ಹೇಯ್ಲಿ ಮ್ಯಾಥ್ಯೂಸ್‌ 77, ಹರ್ಮನ್‌ಪ್ರೀತ್‌ ಕೌರ್‌ 36; ಡೇನಿಯಲ್‌ ಗಿಬ್ಸ್‌ 40 ಕ್ಕೆ 2)

ಗುಜರಾತ್‌ ಟೈಟನ್ಸ್‌: 19.2 ಓವರ್‌ಗಳಿಗೆ 166-10 (ಡೇನಿಯಲ್‌ ಗಿಬ್ಸನ್‌ 34 ರನ್‌, ಫೋಬ್‌ ಲೀಚ್‌ಫೀಲ್ಡ್‌ 31, ಭಾರ್ತಿ ಫುಲ್ಮಾಲಿ 30; ಹೇಯ್ಲಿ ಮ್ಯಾಥ್ಯೂಸ್‌ 31 ಕ್ಕೆ 3)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಹೇಯ್ಲಿ ಮ್ಯಾಥ್ಯೂಸ್‌