ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WTC Points Table: ಡಬ್ಲ್ಯುಟಿಸಿ ಅಂಕಟ್ಟಿಯಲ್ಲಿ ಭಾರತ ಪ್ರಗತಿ

ಭಾರತ ತಂಡ ಒಂದಂಕಿ ರನ್‌ ಅಂತರದಿಂದ ಸಾಧಿಸಿದ ಮೊದಲ ಗೆಲುವು ಇದಾಗಿದೆ. ಅಲ್ಲದೆ ತನ್ನ 93 ವರ್ಷಗಳ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ರನ್‌ ಅಂತರದಿಂದ ಗೆದ್ದ ಅತಿ ಸಣ್ಣ ಗೆಲುವು ಇದಾಗಿದೆ. 2004ರ ಮುಂಬೈ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 13 ರನ್‌ಗಳಿಂದ ಗೆದ್ದಿದು ಈ ಹಿಂದಿನ ಅತಿ ಸಣ್ಣ ಅಂತರದ ಗೆಲುವಾಗಿತ್ತು.

ಡಬ್ಲ್ಯುಟಿಸಿ ಅಂಕಟ್ಟಿಯಲ್ಲಿ ಭಾರತ ಪ್ರಗತಿ

Abhilash BC Abhilash BC Aug 5, 2025 1:25 PM

ಲಂಡನ್‌: ಓವಲ್‌ ಟೆಸ್ಟ್‌ ಪಂದ್ಯದಲ್ಲಿ 6 ರನ್‌ ಅಂತರದ ರೋಚಕ ಗೆಲುವು ಸಾಧಿಸಿದ ಭಾರತ(Team India), ಈ ಗೆಲುವಿನೊಂದಿಗೆ 12 ಅಂಕ ಗಳಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌(ಡಬ್ಲ್ಯುಟಿಸಿ)4ನೇ ಆವೃತ್ತಿಯ ಅಂಕಪಟ್ಟಿಯಲ್ಲಿ(WTC Points Table) 4 ರಿಂದ 3ನೇ ಸ್ಥಾನಕ್ಕೇರಿದೆ.

ಈಗ ಭಾರತ ತಂಡ 2025-27ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಒಟ್ಟು 28 ಮತ್ತು ಶೇ.46.67 ಅಂಕಗಳಿಸಿದೆ. ಆಡಿದ 5 ಪಂದ್ಯಗಳಲ್ಲಿ 2 ಗೆಲುವು, 2 ಸೋಲು, 1 ಡ್ರಾ ಸಾಧಿಸಿದೆ. ಭಾರತ ವಿರುದ್ಧ 5ನೇ ಟೆಸ್ಟ್‌ನಲ್ಲಿ ಸೋಲು ಕಂಡ ಇಂಗ್ಲೆಂಡ್‌ ತಲಾ 2 ಗೆಲುವು, 2 ಸೋಲು, 1 ಡ್ರಾ ಕಂಡಿದ್ದರೂ, 2 ಅಂಕ ಕಡಿತಗೊಂಡಿದ್ದರಿಂದ ಶೇ.43.33 ಗೆಲುವಿನ ಪ್ರತಿಶತದೊಂದಿಗೆ 4ನೇ ಸ್ಥಾನದಲ್ಲಿದೆ. ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ಮೂರಕ್ಕೆ 3 ಪಂದ್ಯ ಗೆದ್ದಿದ್ದು, ಶೇ.100 ಗೆಲುವಿನ ಪ್ರತಿಶತದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಶ್ರೀಲಂಕಾ(ಶೇ.66.67) 2ನೇ ಸ್ಥಾನದಲ್ಲಿದೆ.

ಭಾರತ ತಂಡ ವಿದೇಶಿ ನೆಲದಲ್ಲಿ ಆಡಿದ ಐದು ಪಂದ್ಯಗಳ ಟೆಸ್ಟ್‌ ಸರಣಿಯೊಂದರಲ್ಲಿ ಮೊದಲ ಬಾರಿಗೆ ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ಇದೇ ಮೊದಲ ಬಾರಿ. ಈ ಹಿಂದೆ ಭಾರತ ಆಡಿದ 16 ಟೆಸ್ಟ್‌ ಸರಣಿಗಳಲ್ಲಿ 10ರಲ್ಲಿ 5ನೇ ಟೆಸ್ಟ್‌ ಪಂದ್ಯವನ್ನು ಸೋತಿದ್ದರೆ, 6ರಲ್ಲಿ ಡ್ರಾ ಸಾಧಿಸಿತ್ತು.

ಇದನ್ನೂ ಓದಿ IND vs ENG 5th Test: ಗೆಲುವು ಕಂಡು ಡ್ರೆಸ್ಸಿಂಗ್‌ ರೂಮ್‌ನಲ್ಲಿ ಕುಣಿದು ಕುಪ್ಪಳಿಸಿದ ಕೋಚ್‌ ಗಂಭೀರ್‌; ವಿಡಿಯೊ ವೈರಲ್‌

ಭಾರತ ತಂಡ ಒಂದಂಕಿ ರನ್‌ ಅಂತರದಿಂದ ಸಾಧಿಸಿದ ಮೊದಲ ಗೆಲುವು ಇದಾಗಿದೆ. ಅಲ್ಲದೆ ತನ್ನ 93 ವರ್ಷಗಳ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ರನ್‌ ಅಂತರದಿಂದ ಗೆದ್ದ ಅತಿ ಸಣ್ಣ ಗೆಲುವು ಇದಾಗಿದೆ. 2004ರ ಮುಂಬೈ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 13 ರನ್‌ಗಳಿಂದ ಗೆದ್ದಿದು ಈ ಹಿಂದಿನ ಅತಿ ಸಣ್ಣ ಅಂತರದ ಗೆಲುವಾಗಿತ್ತು.