ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿಂಡೀಸ್‌ ವಿರುದ್ಧ ಕಿವೀಸ್‌ಗೆ ಭರ್ಜರಿ ಜಯ; ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ

WTC Points Table update: ಆಸ್ಟ್ರೇಲಿಯಾ ತಂಡವು ಈ ವರೆಗೂ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದೆ. ಇಲ್ಲಿಯವರೆಗೆ ಐದು ಪಂದ್ಯಗಳನ್ನು ಆಡಿದೆ, ಎಲ್ಲವನ್ನೂ ಗೆದ್ದಿದೆ. ಅದರ PCT 100 ಪ್ರತಿಶತ, ಮತ್ತು ಅದು ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನಿ ನ್ಯಜಿಲ್ಯಾಂಡ್‌ 77.78 ಗೆಲುವಿನ ಪ್ರತಿಶತ ಹೊಂದಿದೆ.

ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಬದಲಾವಣೆ; 2ನೇ ಸ್ಥಾನಕ್ಕೇರಿದ ಕಿವೀಸ್‌

New Zealand -

Abhilash BC
Abhilash BC Dec 22, 2025 1:26 PM

ವೆಲ್ಲಿಂಗ್ಟನ್‌, ಡಿ.22: ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್(NZ vs WI 3rd Test) ನಡುವಿನ ಸರಣಿಯ ಮೂರನೇ ಟೆಸ್ಟ್ ಪಂದ್ಯ ಮುಕ್ತಾಯ ಕಂಡ ಬೆನ್ನಲ್ಲೇ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ(WTC Points Table update) ಮಹತ್ವದ ಬದಲಾವಣೆ ಸಂಭವಿಸಿದೆ. ವಿಂಡೀಸ್‌ ವಿರುದ್ಧ 323 ರನ್‌ ಅಂತರದ ಬೃಹತ್‌ ಗೆಲುವು ಸಾಧಿಸಿದ ನ್ಯೂಜಿಲ್ಯಾಂಡ್‌ ಎರಡನೇ ಸ್ಥಾನಕೇರಿದೆ.

ಅದ್ಭುತ ಪ್ರದರ್ಶನ ನೀಡಿದ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಟಾಮ್ ಲ್ಯಾಥಮ್ 137 ರನ್ ಗಳಿಸಿದರು ಮತ್ತು ಡೆವೊನ್ ಕಾನ್ವೇ 227 ರನ್‌ಗಳನ್ನು ಸೇರಿಸಿದರು. ವಿಂಡೀಸ್ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಹೋರಾಟವನ್ನು ನೀಡಿತ್ತಾದರೂ, ದ್ವಿತೀಯ ಇನಿಂಗ್ಸ್‌ನಲ್ಲಿ 138ರನ್‌ಗೆ ಸರ್ವಪತನ ಕಂಡಿತು. ಸೋಲು ಕಂಡ ವಿಂಡೀಸ್‌ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಆಸ್ಟ್ರೇಲಿಯಾ ತಂಡವು ಈ ವರೆಗೂ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದೆ. ಇಲ್ಲಿಯವರೆಗೆ ಐದು ಪಂದ್ಯಗಳನ್ನು ಆಡಿದೆ, ಎಲ್ಲವನ್ನೂ ಗೆದ್ದಿದೆ. ಅದರ PCT 100 ಪ್ರತಿಶತ, ಮತ್ತು ಅದು ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನಿ ನ್ಯಜಿಲ್ಯಾಂಡ್‌ 77.78 ಗೆಲುವಿನ ಪ್ರತಿಶತ ಹೊಂದಿದೆ. ಹಾಲಿ ಚಾಂಪಿಯನ್‌ ದಕ್ಷಿಣ ಆಫ್ರಿಕಾ ಮೂರನೇ ಸ್ಥಾನದಲ್ಲಿದೆ. ಪಾಕಿಸ್ಥಾನ 5ನೇ, ಭಾರತ 6ನೇ ಸ್ಥಾನದಲ್ಲಿದೆ. ಫೈನಲ್‌ ಪ್ರವೇಶಿಸಬೇಕಾದರೆ ಭಾರತ ಮುಂದಿನ ಎಲ್ಲ ಟೆಸ್ಟ್‌ ಪಂದ್ಯಗಳನ್ನು ಗೆದ್ದರಷ್ಟೇ ಅವಕಾಶವಿದೆ.

ಭಾರತಕ್ಕೆ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್‌ನಲ್ಲಿ ತಲಾ 2, ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ 5 ಪಂದ್ಯಗಳು ಬಾಕಿ ಇವೆ. ಸದ್ಯದ ಲೆಕ್ಕಾಚಾರದ ಪ್ರಕಾರ, ಭಾರತ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ ಪ್ರವೇಶಿಸಬೇಕಿದ್ದರೆ ಬಾಕಿ ಇರುವ 10 ಪಂದ್ಯಗಳಲ್ಲಿ ಕನಿಷ್ಠ 7ರಲ್ಲಿ ಗೆಲ್ಲಬೇಕಿದೆ. ಆರಂಭಿಕ ಎರಡು ಆವೃತ್ತಿಗಳಲ್ಲಿ ಫೈನಲ್‌ ಪ್ರವೇಶಿಸಿದ್ದ ಭಾರತ ಕಳೆದ ಬಾರಿಯ ಮೂರನೇ ಆವೃತ್ತಿಯಲ್ಲ ಫೈನಲ್‌ ಪ್ರವೇಶಿಸಲು ವಿಫಲವಾಗಿತ್ತು.

ಇದನ್ನೂ ಓದಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿ; ಪಾಕ್‌ಗಿಂತಲೂ ಕೆಳ ಸ್ಥಾನಕ್ಕೆ ಕುಸಿದ ಭಾರತ

WTC ಪಾಯಿಂಟ್ ಟೇಬಲ್

ಆಸ್ಟ್ರೇಲಿಯಾ-100 ಅಂಕ

ನ್ಯೂಜಿಲೆಂಡ್-77.78 ಅಂಕ

ದಕ್ಷಿಣ ಆಫ್ರಿಕಾ-75 ಅಂಕ

ಶ್ರೀಲಂಕಾ-66.67 ಅಂಕ

ಪಾಕಿಸ್ತಾನ-50 ಅಂಕ

ಭಾರತ-48.15 ಅಂಕ

ಇಂಗ್ಲೆಂಡ್-27.08 ಅಂಕ