ಮುಂಬೈ ಪರ ಸಯ್ಯದ್ ಮುಷ್ತಾಕ್ ಅಲಿ ಸೂಪರ್ ಲೀಗ್ ಪಂದ್ಯ ಆಡಲಿರುವ ಜೈಸ್ವಾಲ್
Yashasvi Jaiswal: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರೂ ರೋಹಿತ್ ಶರ್ಮಾ, ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮುಂಬೈ ಪರ ಆಡುವ ನಿರೀಕ್ಷೆಯಲ್ಲಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವ ಪ್ರಕಾರ, ಭಾರತದ ಮಾಜಿ ನಾಯಕ ಮುಂದಿನ ಸುತ್ತಿನಲ್ಲಿ ಮುಂಬೈ ಮೂಲದ ತಂಡಕ್ಕಾಗಿ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
Yashasvi Jaiswal -
ಮುಂಬಯಿ, ಡಿ.8: ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್(Yashasvi Jaiswal) ಅವರು ಪ್ರಸಕ್ತ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ(Syed Mushtaq Ali Trophy) ಟ್ರೋಫಿಯ ಸೂಪರ್ ಲೀಗ್ ಪಂದ್ಯಗಳಲ್ಲಿ ಮುಂಬೈ ಪರ ಆಡಲಿದ್ದಾರೆ. ಸೂಪರ್ ಲೀಗ್ ಪಂದ್ಯಗಳು ಹಾಗೂ ಫೈನಲ್, ಡಿಸೆಂಬರ್ 12 ರಿಂದ 18 ರವರೆಗೆ ಪುಣೆಯಲ್ಲಿ ನಡೆಯಲಿದೆ.
ಜುಲೈ 2024 ರಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕಾಗಿ ಕೊನೆಯ ಬಾರಿಗೆ T20I ಪಂದ್ಯವನ್ನು ಆಡಿದ್ದ ಜೈಸ್ವಾಲ್ ಮತ್ತೆ ದೇಶೀಯ ಟಿ20 ಆಡಲು ನಿರ್ಧರಿಸಿದ್ದಾರೆ. ಸೂಪರ್ ಲೀಗ್‌ನಲ್ಲಿ ಆಡುವುದನ್ನು ಜೈಸ್ವಾಲ್ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (MCA)ಗೆತಿಳಿಸಿದ್ದಾರೆ. ಶಾರ್ದೂಲ್ ಠಾಕೂರ್ ನಾಯಕತ್ವದಲ್ಲಿ ಆಡುತ್ತಿರುವ ಮುಂಬೈ ತಂಡವು ಈಗಾಗಲೇ ಸೂಪರ್ ಲೀಗ್‌ನಲ್ಲಿ ತನ್ನ ಸ್ಥಾನವನ್ನು ಕಾಯ್ದಿರಿಸಿದೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ 28 ಪಂದ್ಯಗಳಲ್ಲಿ ಆಡಿರುವ ಜೈಸ್ವಾಲ್ 26 ಇನಿಂಗ್ಸ್ಗಳಲ್ಲಿ 648 ರನ್ ಗಳಿಸಿದ್ದಾರೆ. ಪಂದ್ಯಾವಳಿಯಲ್ಲಿ ಮೂರು ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಹಾಲಿ ಚಾಂಪಿಯನ್ ತಂಡವು ಇಲ್ಲಿಯವರೆಗೆ ಆಡಿರುವ ಆರು ಎಲೈಟ್ ಗ್ರೂಪ್ ಎ ಪಂದ್ಯಗಳಲ್ಲಿ ಐದರಲ್ಲಿ ಜಯಗಳಿಸಿದೆ. ಮುಂಬೈ ತಂಡವು ಸೋಮವಾರ (ಡಿಸೆಂಬರ್ 8) ಒಡಿಶಾ ವಿರುದ್ಧ ತನ್ನ ಗುಂಪು ಹಂತದ ಅಭಿಯಾನವನ್ನು ಕೊನೆಗೊಳಿಸಲಿದೆ.
ಸೂಪರ್ ಲೀಗ್ ಪಂದ್ಯಗಳಲ್ಲಿ ಮುಂಬೈ ಪರ ಸೂರ್ಯಕುಮಾರ್ ಯಾದವ್, ಶಿವಂ ದುಬೆ ಮತ್ತು ಆಯುಷ್ ಮ್ಹಾತ್ರೆ ಆಡುವುದಿಲ್ಲ. ಡಿಸೆಂಬರ್ 9 ರಂದು ಕಟಕ್‌ನಲ್ಲಿ ಪ್ರಾರಂಭವಾಗಲಿರುವ ಐದು ಪಂದ್ಯಗಳ T20I ಸರಣಿಯಲ್ಲಿ ಸೂರ್ಯ ಮತ್ತು ದುಬೆ ಭಾರತ ಪರ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದ್ದರೆ. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮತ್ತು ಎರಡು ಶತಕಗಳನ್ನು ಬಾರಿಸಿರುವ 18 ವರ್ಷದ ಮ್ಹಾತ್ರೆ, U19 ಏಷ್ಯಾ ಕಪ್‌ನಲ್ಲಿ ಭಾಗವಹಿಸಲು ಭಾರತ U19 ತಂಡದೊಂದಿಗೆ ದುಬೈಗೆ ಪ್ರಯಾಣಿಸಲಿದ್ದಾರೆ.
ಇದನ್ನೂ ಓದಿ ಕೇಕ್ ತಿನ್ನಿಸಲು ಬಂದ ಜೈಸ್ವಾಲ್‌ಗೆ ಖಡಕ್ ಎಚ್ಚರಿಕೆ ನೀಡಿದ ರೋಹಿತ್; ವೈರಲ್ ವಿಡಿಯೊ ಇಲ್ಲಿದೆ
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರೂ ರೋಹಿತ್ ಶರ್ಮಾ, ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮುಂಬೈ ಪರ ಆಡುವ ನಿರೀಕ್ಷೆಯಲ್ಲಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವ ಪ್ರಕಾರ, ಭಾರತದ ಮಾಜಿ ನಾಯಕ ಮುಂದಿನ ಸುತ್ತಿನಲ್ಲಿ ಮುಂಬೈ ಮೂಲದ ತಂಡಕ್ಕಾಗಿ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.