ಧೂಮಪಾನ ಮಾಡಿ ರಸ್ತೆಯಲ್ಲಿ ಸಿಗರೇಟ್ ಎಸೆದರೇ ಯುಜ್ವೇಂದ್ರ ಚಾಹಲ್?; ವಿಡಿಯೊ ವೈರಲ್
Yuzvendra Chahal: ಶನಿವಾರ ನಡೆದ ಪಂದ್ಯದಲ್ಲಿ ಪಂಜಾಬ್ ತಂಡ ಸನ್‌ರೈಸರ್ಸ್ ವಿರುದ್ಧ 6 ವಿಕೆಟ್ ಅಂತರದ ಗೆಲುವು ಸಾಧಿಸಿತ್ತು. ಸನ್‌ರೈಸರ್ಸ್ ಹೈದರಾಬಾದ್ ಎದುರು 220 ರನ್ ಬಾರಿಸಿದರೆ, ಗುರಿ ಬೆನ್ನಟ್ಟಿದ ಪಂಜಾಬ್, 18.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 223 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು.
Yuzvendra Chahal -
ಮುಂಬಯಿ, ಎ.12: ಭಾರತೀಯ ಕ್ರಿಕೆಟ್ ತಂಡ ಮತ್ತು ಪಂಜಾಬ್ ಕಿಂಗ್ಸ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಎನ್ನುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಚಾಹಲ್ ಅವರನ್ನು ಹೋಲುವ ವ್ಯಕ್ತಿಯೊಬ್ಬರು ಕಾರು ಚಾಲನೆ ಮಾಡುವಾಗ ಧೂಮಪಾನ ಮಾಡುತ್ತಿರುವುದು ಕಂಡುಬಂದಿದೆ. ಮಾತ್ರವಲ್ಲದೆ ಸಿಗರೇಟ್ ಅನ್ನು ರಸ್ತೆಯಲ್ಲಿ ಎಸೆಯುವುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ. ವಿಡಿಯೊದಲ್ಲಿರುವ ವ್ಯಕ್ತಿ ಚಹಲ್ ಎಂದು ಖಚಿವಾಗಿಲ್ಲವಾದರೂ ಅವರ ವಿರುದ್ಧ ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ. ಆದರೆ ಚಾಹಲ್ ಅಥವಾ ಅವರ ಪ್ರತಿನಿಧಿಗಳು ಘಟನೆ ಬಗ್ಗೆ ಯಾವುದೇ ರೀತಿಯ ಹೇಳಿಕೆಯನ್ನು ನೀಡಿಲ್ಲ.
ಐಪಿಎಲ್ ಆರಂಭಕ್ಕೂ ಮುನ್ನ ಚಾಹಲ್ ಮದ್ಯಪಾನ ಮಾಡುವುದನ್ನು ನಿಲ್ಲಿಸಿದ್ದೇನೆ ಎಂದು ಬಹಿರಂಗಪಡಿಸಿದ್ದರು. ದಕ್ಷಿಣ ಆಫ್ರಿಕಾದ ದಂತಕಥೆ ಎಬಿ ಡಿವಿಲಿಯರ್ಸ್ ಅವರೊಂದಿಗಿನ ಇತ್ತೀಚಿನ ಪಾಡ್‌ಕ್ಯಾಸ್ಟ್‌ನಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವ ವೇಳೆ ಚಹಲ್ ಈ ವಿಚಾರವನ್ನು ತಿಳಿಸಿದ್ದರು. ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ಪರ ಚಾಹಲ್ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಈ ಬಾರಿ ಇದುವರೆಗೂ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡು ಬಂದಿಲ್ಲ.
🚨 YUZI CHAHAL SMOKING VIDEO GOES VIRAL 🚨
— Jeet (@JeetN25) April 10, 2026
Yuzvendra Chahal is facing heavy
backlash online after a late-night video of him went viral. Netizens are calling him out for allegedly smoking and throwing a cigarette onto the road while driving. pic.twitter.com/tjUlZH0Gf7
"ನಾನು ಮದ್ಯಪಾನ ನಿಲ್ಲಿಸಿ ಆರು ತಿಂಗಳಿಗಿಂತಲೂ ಹೆಚ್ಚು ಸಮಯವಾಗಿದೆ. ನನಗೆ ಈಗ 35 ವರ್ಷ, ಆದ್ದರಿಂದ ನಾನು ಹೆಚ್ಚು ಸಕ್ರಿಯನಾಗಿ ನನ್ನ ತಂಡಕ್ಕಾಗಿ ನನ್ನ ಶೇ. 150ರಷ್ಟು ಪರಿಶ್ರಮ ನೀಡಲು ಬಯಸುತ್ತೇನೆ. ಹಿರಿಯ ಆಟಗಾರನಾಗಿ, ಐಪಿಎಲ್‌ನಲ್ಲಿರುವ ಜನರು ನನ್ನಿಂದ ಏನನ್ನಾದರೂ ಕಲಿಯಬೇಕೆಂದು ನಾನು ಬಯಸುತ್ತೇನೆ" ಎಂದು ಚಾಹಲ್ ಡಿವಿಲಿಯರ್ಸ್‌ಗೆ ತಿಳಿಸಿದ್ದರು.
ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಆಡಿದ 4 ಪಂದ್ಯಗಳಲ್ಲಿ ಮೂರು ಗೆಲುವು ಸಾಧಿಸಿದೆ. ಒಂದು ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಶನಿವಾರ ನಡೆದ ಪಂದ್ಯದಲ್ಲಿ ಪಂಜಾಬ್ ತಂಡ ಸನ್‌ರೈಸರ್ಸ್ ವಿರುದ್ಧ 6 ವಿಕೆಟ್ ಅಂತರದ ಗೆಲುವು ಸಾಧಿಸಿತ್ತು. ಸನ್‌ರೈಸರ್ಸ್ ಹೈದರಾಬಾದ್ ಎದುರು 220 ರನ್ ಬಾರಿಸಿದರೆ, ಗುರಿ ಬೆನ್ನಟ್ಟಿದ ಪಂಜಾಬ್, 18.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 223 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು. ಜತೆಗೆ ಗರಿಷ್ಠ 10 ಬಾರಿ 200 ಪ್ಲಸ್ ಮೊತ್ತವನ್ನು ಯಶಸ್ವಿಯಾಗಿ ಚೇಸಿಂಗ್ ನಡೆಸಿದ ಮೊದಲ ತಂಡ ಎಂಬ ಹಿರಿಮೆಗೆ ಪಾತ್ರವಾಗಿದೆ.
ಸಂಕ್ಷಿಪ್ತ ಸ್ಕೋರು
ಸನ್‌ರೈಸರ್ಸ್ ಹೈದರಾಬಾದ್: 20 ಓವರ್‌ಗಳಲ್ಲಿ 6ಕ್ಕೆ 219 (ಅಭಿಷೇಕ್ ಶರ್ಮಾ 74, ಟ್ರಾವಿಸ್ ಹೆಡ್ 38, ಇಶಾನ್ ಕಿಶನ್ 27, ಹೆನ್ರಿಚ್ ಕ್ಲಾಸೆನ್ 39; ಅರ್ಷದೀಪ್ ಸಿಂಗ್ 50ಕ್ಕೆ2, ಶಶಾಂಕ್ ಸಿಂಗ್ 20ಕ್ಕೆ2).
ಪಂಜಾಬ್ ಕಿಂಗ್ಸ್: 18.5 ಓವರ್‌ಗಳಲ್ಲಿ 4ಕ್ಕೆ 223 (ಪ್ರಿಯಾಂಶ್ ಆರ್ಯ 57, ಪ್ರಭಸಿಮ್ರನ್ ಸಿಂಗ್ 51, ಶ್ರೇಯಸ್ ಅಯ್ಯರ್ ಔಟಾಗದೇ 69; ಹರ್ಷ್ ದುಬೆ 38ಕ್ಕೆ1, ಶಿವಾಂಗ್ ಕುಮಾರ್ 33ಕ್ಕೆ3.