ಶಿಕ್ಷಕರಿಗೆ ಸಿಗಬೇಕು ಸೂಕ್ತ ಗೌರವ

ಶಿಕ್ಷಕರಿಗೆ ಸಿಗಬೇಕು ಸೂಕ್ತ ಗೌರವ

Profile Vishwavani News October 9, 2019
ಶಾಲಾ-ಕಾಲೇಜು ಪರೀಕ್ಷೆೆ ಸಮಯ ಹತ್ತಿಿರ ಬರುತ್ತಿಿದ್ದಂತೆ, ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರ ಗಮನ ಹರಿಸುತ್ತಿಿಲ್ಲ. ಹಾಗಾಗಿ ಉತ್ತರ ಪತ್ರಿಿಕೆಗಳ ಮೌಲ್ಯಮಾಪನ ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಈ ಕ್ಷೇತ್ರದ ಸಂಘಟನೆಗಳ ಮುಖಂಡರು ಪ್ರಕಟಿಸುತ್ತಾಾರೆ. ಇದರಿಂದ ಗಾಬರಿಗೊಳ್ಳುವವರು ವಿದ್ಯಾಾರ್ಥಿಗಳು ಮತ್ತು ಅವರ ಪೋಷಕರು. ಪರೀಕ್ಷೆೆ ಬರುತ್ತಿಿರುವ ವೇಳೆಯಲ್ಲಿ ಪ್ರತಿಭಟಿಸುವವರ ಮನೋಭಾವ ಒಂದು ರೀತಿಯ ಬ್ಲ್ಯಾಾಕ್‌ಮೇಲ್ ತಂತ್ರ ಎಂಬ ಮಾತುಗಳು ಕೇಳಿಬರುತ್ತವೆ. ಮೌಲ್ಯಮಾಪನ ಕೆಲಸಕ್ಕೆೆ ಹಾಜರಾಗದಿದ್ದರೆ ‘ಎಸ್ಮಾಾ’ ಜಾರಿಗೊಳಿಸಲೂ ಹಿಂದೆ ಮುಂದೆ ನೋಡುವುದಿಲ್ಲ ಎಂಬ ಎಚ್ಚರಿಕೆಯನ್ನು ಶಿಕ್ಷಣ ಸಚಿವರು ನೀಡಿದರೂ ಇದೊಂದು ‘ಔಪಚಾರಿಕ ವ್ರತ’ ಎಂಬಂತೆ ಭಾವಿಸುತ್ತಾಾರೆ ಶಿಕ್ಷಕರು. ನಂತರ ಹೇಗೋ ಒಂದು ರೀತಿಯ ಸಮಾಧಾನಕ್ಕೆೆ ತೃಪ್ತಿಿಗೊಂಡವರಂತೆ ಮೌಲ್ಯಮಾಪನ ಕಾರ್ಯ ಆರಂಭವಾಗುತ್ತದೆ. ಅಲ್ಲಿಗೆ ನಿಟ್ಟುಸಿರು ಬಿಡುವವರು ವಿದ್ಯಾಾರ್ಥಿಗಳಿಗಿಂತ ಅವರ ಪೋಷಕರು. ಇನ್ನು ಮುಂದಿನ ಶೈಕ್ಷಣಿಕ ವರ್ಷದ ತನಕ ಬಹುತೇಕ ಪರಿಸ್ಥಿಿತಿ ನದಿಯ ತಿಳಿನೀರಿನಂತೆ ಇರುತ್ತದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ, ಪ್ರಾಾಥಮಿಕ ಮತ್ತು ಪ್ರೌೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಒಂದು ಪ್ರಮುಖ ವಿಚಾರವನ್ನು ಪ್ರಸ್ತಾಾಪಿಸಿದ್ದಾಾರೆ. ತಮ್ಮ ಸಮಸ್ಯೆೆಯ ಪರಿಹಾರಕ್ಕೆೆ ಶಿಕ್ಷಕರು ಬೀದಿಗಿಳಿದು ಧರಣಿ ಇಲ್ಲವೇ ಪ್ರತಿಭಟನೆ ಮಾಡಬಾರದು. ಒಂದು ವೇಳೆ ಇಂತಹ ಸ್ಥಿಿತಿ ನಿರ್ಮಾಣವಾದರೆ ಸಂಬಂಧಿತ ರಾಜ್ಯ ಇಲ್ಲವೇ ದೇಶ ಎಂದಿಗೂ ಅಭಿವೃದ್ಧಿಿಯಾಗದು ಎಂದಿದ್ದಾಾರೆ. ಕೆಲವು ತಿಂಗಳುಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊೊಂಡಿದ್ದ ಹಿರಿಯ ಪತ್ರಕರ್ತರೊಬ್ಬರು ಇದೇ ಅಭಿಪ್ರಾಾಯ ಬರುವಂತೆ ಮಾತನಾಡಿದ್ದರು. ದೇಶವೊಂದರ ಪ್ರಗತಿ ಕೇವಲ ಆರ್ಥಿಕತೆಯ ಬೆಳವಣಿಗೆಯಲ್ಲ. ಜತೆಗೆ ಅಲ್ಲಿನ ಕಲೆ, ಸಂಸ್ಕೃತಿ ಹಾಗೂ ಶೈಕ್ಷಣಿಕ ಗುಣಮಟ್ಟದ ಮೇಲೆಯೂ ಅವಲಂಬಿತವಾಗಿರುತ್ತದೆ ಎಂಬುದು ವಿಚಾರವಂತರ ಅಭಿಪ್ರಾಾಯವಾಗಿರುತ್ತದೆ. ನಮ್ಮ ನಡೆ, ನುಡಿ ಕೌಟುಂಬಿಕ ಹಿನ್ನೆೆಲೆಯೊಂದಿಗೆ ಗುಣಮಟ್ಟದ ಶಿಕ್ಷಣದ ಮೇಲೆಯೇ ಅವಲಂಬಿತವಾಗಿರುತ್ತದೆ. ಅದಕ್ಕಾಾಗಿ ನಮ್ಮ ದೇಶ ಗುರುವಿಗೂ ಉತ್ತಮ ಸ್ಥಾಾನ ನೀಡಿದೆ. ಮಾತೃ ದೇವೋಭವ, ಪಿತೃ ದೇವೋಭವ ಜತೆಗೆ ಆಚಾರ್ಯ ದೇವೋಭವ ಸೇರಿಸಲಾಗಿದೆ. ಶಿಕ್ಷಕರ ಮೇಲಿನ ಗೌರವ, ಪ್ರೀತಿಯಿಂದಾಗಿ ಡಾ.ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸುವುದು. ನಮ್ಮ ಸರಕಾರ ಶೈಕ್ಷಣಿಕ ಕ್ಷೇತ್ರದಲ್ಲಿರುವ ಮೂಲ ಸೌಕರ್ಯಗಳ ಕೊರತೆಯನ್ನು ಎಷ್ಟರಮಟ್ಟಿಿಗೆ ನಿವಾರಿಸಿದೆ ಎಂದು ಕೇಳಬೇಕಾಗಿದೆ. ಶಿಕ್ಷಕರಿಗೆ ಬೋಧನೆಯ ಜತೆಗೆ ಇತರ ಕೆಲಸಗಳನ್ನು ಹೆಗಲಿಗೆ ಹಾಕಿದೆ. ನಾರ್ವೆ ಮತ್ತು ಸ್ವೀಡನ್‌ನಲ್ಲಿ ಅತ್ಯಧಿಕ ಸಂಬಳ ಪಡೆಯುವವರು ಶಿಕ್ಷಕರು. ಅತಿ ಹೆಚ್ಚು ಗೌರವ ಸಂಪಾದಿಸುವರೂ ಅವರೇ ಆಗಿರುತ್ತಾಾರೆ. ಗೋವಿಂದೇಗೌಡರು ಶಿಕ್ಷಣ ಸಚಿವರಾಗಿದ್ದಾಾಗ ಕೈಗೊಂಡ ಕೆಲವು ಕ್ರಮಗಳು ಇಂದಿಗೂ ಸ್ಮರಣೀಯ. ಶಿಕ್ಷಣ ಸಚಿವರು ಮತ್ತು ಶಿಕ್ಷಕರು ಒಂದೇ ನಾಣ್ಯದ ಎರಡು ಮುಖವಾಗಿ ಕೆಲಸ ಮಾಡಿದಾಗ ಮಾತ್ರ ನಮ್ಮ ದೇಶದ ಪ್ರಗತಿ ಬೆಳವಣಿಗೆಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಆಶಿಸಬಹುದು.
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ