ಐಸಿಸಿ ಸಭೆಯಲ್ಲಿ ಬಿಸಿಸಿಐನಿಂದ ಏಷ್ಯಾಕಪ್ ಟ್ರೋಫಿ ವಿವಾದ ಪ್ರಸ್ತಾಪ
ಏಷ್ಯಾಕಪ್ ಟ್ರೋಫಿ ಹಸ್ತಾಂತರಿಸಬೇಕೆಂದು ಬಿಸಿಸಿಐ 10 ದಿನಗಳ ಹಿಂದೆಯೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್ಗೆ ಪತ್ರ ಬರೆದಿತ್ತು. ಆದರೆ ಅದು ಇನ್ನೂ ಬಾರದಿರುವುದರಿಂದ ನಾವು ಐಸಿಸಿ ಮೊರೆ ಹೋಗುವುದು ಅನಿವಾರ್ಯವಾಗಿದೆ. ಐಸಿಸಿ ನಮಗೆ ನ್ಯಾಯ ಒದಗಿಸಿ, ಟ್ರೋಫಿ ಪಡೆಯಲು ನೆರವಾಗುವ ಭರವಸೆ ಇದೆ ಎಂದು ಸೈಕಿಯಾ ತಿಳಿಸಿದ್ದಾರೆ.