ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಕ್ರಿಕೆಟ್‌ ಅನ್ನು ರಾಜಕೀಯದಿಂದ ದೂರವಿಡಿʼ: ಎಬಿಡಿ ಹೇಳಿದ ಮಾತು ಅಕ್ಷರಶಃ ಸತ್ಯ!

ವಿವಾದಗಳಿಂದಲೇ ಆರಂಭವಾದ ಈ ಬಾರಿ ಏಷ್ಯಾ ಕಪ್ ಟೂರ್ನಿ ವಿವಾದಗಳೊಂದಿಗೆ ಅಂತ್ಯವಾಯಿತು. ಭಾರತ ಫೈನಲ್ ಪಂದ್ಯದಲ್ಲಿ ಗೆದ್ದರೂ, ಎಸಿಸಿ ಅಧ್ಯಕ್ಷ ಹಾಗೂ ಪಾಕ್ ಸಚಿವ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಪಡೆಯಲು ನಿರಾಕರಿಸಿತ್ತು. ಈ ಬಗ್ಗೆ ಹಲವು ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಪತ್ರಿಕೋದ್ಯಮ ವಿದ್ಯಾರ್ಥಿ ಕೆಎನ್‌ ರಂಗು ಅಂಕಣವನ್ನು ಬರೆದಿದ್ದಾರೆ.

ಕ್ರಿಕೆಟ್‌ನಲ್ಲಿ ರಾಜಕೀಯ ಸೇರಿದರೆ ಕ್ರೀಡಾ ಸ್ಪೂರ್ತಿಗೆ ಧಕ್ಕೆ!

ಕ್ರಿಕೆಟ್‌ನಲ್ಲಿ ರಾಜಕೀಯ ಸೇರಿದರೆ ಕ್ರೀಡಾ ಸ್ಪೂರ್ತಿಗೆ ಧಕ್ಕೆ! -

Profile Ramesh Kote Oct 8, 2025 6:25 PM

ಅಂಕಣ: ಕೆ. ಎನ್. ರಂಗು, ಚಿತ್ರದುರ್ಗ

"ಟ್ರೋಫಿಯನ್ನು ಯಾರು ವಿತರಿಸುತ್ತಿದ್ದಾರೆ ಎಂಬುದರ ಬಗ್ಗೆ ಭಾರತ ತಂಡ ಸ್ವಲ್ಪ ಮಟ್ಟಿಗೆ ಸಂತೋಷವಾಗಿರಲಿಲ್ಲ. ಅದು ಕ್ರೀಡೆಗೆ ಸೇರಿದೆ ಎಂದು ನಾನು ಭಾವಿಸುವುದಿಲ್ಲ. ರಾಜಕೀಯವನ್ನು ಬದಿಗಿಡಬೇಕು. ಕ್ರೀಡೆ ಒಂದು ವಿಷಯ ಮತ್ತು ಅದು ಹೇಗಿದೆಯೋ ಹಾಗೆಯೇ ಆಚರಿಸಬೇಕು, ಅದನ್ನು ನೋಡಲು ತುಂಬಾ ಬೇಸರವಾಗಿದೆ, ಆದರೆ ಭವಿಷ್ಯದಲ್ಲಿ ಅವರು ವಿಷಯಗಳನ್ನು ಸರಿಪಡಿಸುತ್ತಾರೆ ಎಂದು ಆಶಿಸುತ್ತೇವೆ. ಇದು ಕ್ರೀಡೆಯನ್ನು, ಆಟಗಾರರನ್ನು, ಕ್ರೀಡಾಪಟುಗಳನ್ನು, ಕ್ರಿಕೆಟಿಗರನ್ನು ತುಂಬಾ ಕಠಿಣ ಸ್ಥಿತಿಯಲ್ಲಿ ಇರಿಸುತ್ತದೆ ಮತ್ತು ಇದನ್ನು ನಾನು ನೋಡಲು ಇಷ್ಟಪಡುವುದಿಲ್ಲ. ಕೊನೆಯಲ್ಲಿ ಅದು ತುಂಬಾ ವಿಚಿತ್ರವಾಗಿತ್ತು. ಅತ್ಯಂತ ಮುಖ್ಯವಾದ ವಿಷಯದ (ಕ್ರಿಕೆಟ್ ಸ್ವತಃ) ಮೇಲೆ ಕೇಂದ್ರೀಕರಿಸೋಣ. ಭಾರತ ನಿಜವಾಗಿಯೂ ಬಲಿಷ್ಠವಾಗಿ ಕಾಣುತ್ತಿದೆ. ಆ ಟಿ20 ವಿಶ್ವಕಪ್‌ ಟೂರ್ನಿಗಾಗಿ ತಯಾರಿ ನಡೆಸುತ್ತಿದೆ. ನೆನಪಿಡಿ, ಅದು ತುಂಬಾ ದೂರದಲ್ಲಿಲ್ಲ ಮತ್ತು ಅವರು ಬಹಳಷ್ಟು ಪ್ರತಿಭೆಯನ್ನು ಹೊಂದಿರುವಂತೆ ಕಾಣುತ್ತಾರೆ. ಅವರು ದೊಡ್ಡ ಪಂದ್ಯಗಳಲ್ಲಿ ಚೆನ್ನಾಗಿ ಆಡುತ್ತಾರೆ. ಇದು ತುಂಬಾ ಅದ್ಭುತವಾಗಿದೆ," ಎಂದು ಡಿವಿಲಿಯರ್ಸ್ ಹೇಳಿರುವುದು ನನ್ನ ವಾದಕ್ಕೆ ಪಷ್ಟಿ ನೀಡಿದಂತಿದೆ. ಮೇಲೆ ಅವರು ಹೇಳಿರುವ ಮಾತುಗಳಲ್ಲಿ ಏನೂ ಅತಿಶಯೋಕ್ತಿ ಇಲ್ಲ.

"ಭಾರತ ತಂಡ, ಪಾಕಿಸ್ತಾನದ ವಿರುದ್ಧ ಪಂದ್ಯವನ್ನು ಆಡಲೇಬಾರದಿತ್ತು. ಒಂದು ವೇಳೆ ಕ್ರೀಡಾ ಸೌಹಾರ್ದತೆಗಾಗಿ ಆಡಿದ್ದೇ ನಿಜವಾದರೆ, ಶೇಕ್ ಹ್ಯಾಂಡ್ ಕೊಡಬೇಕಿತ್ತು. ಶೇಕ್ ಹ್ಯಾಂಡ್ ಕೊಡೋದೇ ಬೇಡ. ಟ್ರೋಫಿ ಆದ್ರೂ ತೆಗೆದುಕೊಳ್ಳಬೇಕಿತ್ತು. ನಾವು ಗೆದ್ದ ಮೇಲೆ ಟ್ರೋಫಿ ನಮ್ಮದೇ ತಾನೇ, ಅದನ್ನು ಯಾಕೆ ಬಿಡಬೇಕು. ಟೀಮ್ ಇಂಡಿಯಾದ ಈ ನಡೆಯಿಂದ ಕ್ರೀಡಾ ಸ್ಫೂರ್ತಿ ಮಣ್ಣು ಪಾಲಾಯಿತು" ಎಂಬ ಈ ಮಾತುಗಳು ಒಂದು ಕಡೆ. ಇನ್ನೊಂದು ಬದಿಯಲ್ಲಿ "ಸಾಂಪ್ರದಾಯಿಕ ಎದುರಾಳಿ ಪಾಕ್‌ಗೆ ಭಾರತ ತಕ್ಕ ಶಾಸ್ತಿ ಮಾಡಿತು. ಇಡೀ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಬಿಡದೆ ಜಯಭೇರಿ ಬಾರಿಸಿತು. ಇನ್ನು ಫೈನಲ್‌ ಪಂದ್ಯ ಗೆದ್ದರೂ ಕೂಡ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಭಾರತ ತಂಡ, ಪಾಕ್‌ಗೆ ಮುಖಭಂಗ ಮಾಡಿತು. ಇದು ತಂಡಕ್ಕೆ ಇರುವ ದೇಶದ ಬಗೆಗಿನ ಹೆಮ್ಮೆ. ಸೂರ್ಯಕುಮಾರ್ ತಮ್ಮ ಇಡೀ ಟೂರ್ನಿಯ ವೇತನವನ್ನು ಪಹಲ್ಗಾಮ್ ಸಂತ್ರಸ್ತರಿಗೆ ನೀಡುವ ಮುಖೇನ ಸಾರ್ಥಕತೆ ಮೆರೆದರು" ಎನ್ನುವಂತಹ ಹೇಳಿಕೆಗಳು ಓಡಾಡುತ್ತಿವೆ.

ನಾನು ಇಲ್ಲಿ ಯಾರದು ಸರಿ, ಯಾರದು ತಪ್ಪು ಎಂದು ಹೇಳಲು ಹೋಗುವುದಿಲ್ಲ. ಎಲ್ಲಾ ಅವರವರ ಭಾವಕ್ಕೆ, ಅವರವರ ಭಕುತಿಗೆ. ಸೂರ್ಯಕುಮಾರ್ ಅವರಿಗೆ ಹ್ಯಾಂಡ್ ಶೇಕ್ ಮಾಡದಿರುವುದೇ ಸರಿ ಎನಿಸಿರಬಹುದು. ಟ್ರೋಫಿ ಸ್ವೀಕರಿಸದಿರುವುದೇ ಸರಿ ಎನಿಸಿರಬಹುದು. ಜಾತ್ಯತೀತರೆಂದು ಹೇಳುವವವರು ಅಥವಾ ಮತಗಳಿಗಾಗಿ ಓಲೈಸಿ ಮಾತನಾಡುವವರಿಗೆ ಕ್ರೀಡಾ ಸೌಹಾರ್ದತೆಯೇ ಮುಖ್ಯವಾಗಿರಬಹುದು. ಹಾಗಾಗಿ ಟೀಮ್ ಇಂಡಿಯಾ ಟ್ರೋಫಿ ಸ್ವೀಕರಿಸಬೇಕಿತ್ತು ಎನ್ನುವುದು ಅವರ ದೃಷ್ಟಿಯಲ್ಲಿ ಸರಿಯಿರಬಹುದು.

Asia Cup: ಭಾರತ ತಂಡದಲ್ಲಿ ಓಪನಿಂಗ್‌ ಸ್ಥಾನ ಕಿತ್ತುಕೊಂಡ ಬಗ್ಗೆ ಸಂಜು ಸ್ಯಾಮ್ಸನ್‌ ಪ್ರತಿಕ್ರಿಯೆ!

ಇದರಲ್ಲೂ ರಾಜಕೀಯ ಲಾಭ ಗಿಟ್ಟಿಸಿಕೊಂಡು ಪಬ್ಲಿಸಿಟಿ ತೆಗೆದುಕೊಳ್ಳಲು ಯತ್ನಿಸುವ ಇನ್ನೊಂದು ಗುಂಪು ಇದೆ. ಅದು ಏನಿದ್ದರೂ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿ, ಅತ್ತ ಹಾವು ಸಾಯಬಾರದು, ಇತ್ತ ಕೋಲು ಮುರಿಯಬಾರದು ಎನ್ನುವ ಸಂತತಿಯದು. ಆದರೆ ನನ್ನ ವಾದ ಏನೂ ಅಂದ್ರೆ ಆಗಿದ್ದು ಆಗೋಗಿದೆ ಸ್ವಾಮಿ! ಅದಕ್ಕೆ ರಾಜಕೀಯ ಲೇಪನ ಬಳಿಯುತ್ತಿರುವುದ್ಯಾಕೆ? ಏಷ್ಯಾ ಕಪ್ ಹೆಸರಿನಲ್ಲಿ ಕ್ರೆಡಿಟ್ ತೆಗೆದುಕೊಳ್ಳಲು ಮುಂದಾಗುತ್ತಿರುವುದು ಯಾಕೆ? ಈ ವಿಚಾರದ ಕುರಿತು ಹೇಳಿಕೆ ನೀಡಿಯೋ? ಅಥವಾ ಟ್ವಿಟರ್‌ನಲ್ಲಿ ಪೋಸ್ಟ್ ಹಾಕಿ ಸುದ್ದಿಯಲ್ಲಿರೋಣ ಅಂತ ಬಯಸುತ್ತಿರುವುದ್ಯಾಕೆ? ಏಷ್ಯಾ ಕಪ್ ಹೆಸರಲ್ಲಿ ಆಪರೇಷನ್ ಸಿಂದೂರ್ ಸುದ್ದಿ ತೆಗೆದು ಪರಸ್ಪರ ರಾಜಕೀಯ ಕೆಸರೆರಚಾಟ ಯಾಕೆ? ಕ್ರಿಕೆಟ್ ಮೈದಾನದಲ್ಲಿ ನಡೆದಿರುವ ಎಲ್ಲಾ ಬೆಳವಣಿಗೆಗಳಿಗೆ ಕಾರಣವೇನೆಂದು ಇಡೀ ವಿಶ್ವಕ್ಕೆ ಗೊತ್ತಿದೆ. ನಿಮ್ಮ ಸ್ಪಷ್ಟನೆಯ ಅಗತ್ಯವಿಲ್ಲ. ಭಾರತೀಯ ಕ್ರಿಕೆಟ್ ತಂಡಕ್ಕೆ ರಾಜಕೀಯ ಬಣ್ಣ ಬಳಿಯುವ ಅನಿವಾರ್ಯತೆ ಯಾಕೆ ಸೃಷ್ಟಿಸುತ್ತಿದ್ದೀರಿ? ತಮ್ಮ ರಾಜಕೀಯ ಬೇಳೆ ಬೇಯಿಸಲಿಕ್ಕೆ ಕ್ರಿಕೆಟ್ ತಂಡದ ಹೊಲೆಯನ್ನು ಬಳಸಿಕೊಳ್ಳುತ್ತಿರುವುದು ಹಾಸ್ಯಾಸ್ಪದವಾದ ಸಂಗತಿ.

ಎಲ್ಲರಿಗೂ ಗೊತ್ತಿರುವಂತೆ ವಿವಾದಗಳೊಂದಿಗೆ ಪ್ರಾರಂಭವಾದ ಏಷ್ಯಾ ಕಪ್ ವಿವಾದಗಳೊಂದಿಗೆ ಅಂತ್ಯವಾಗಿದೆ. ಅದಕ್ಕೆ ನಿದ್ರೆಯಿಂದ ಎಚ್ಚರಗೊಂಡವರಂತೆ ತೋರುವ ಹಲವರ ವರ್ತನೆ ನೋಡಿ ನಗುವುದೋ, ಅಳುವುದೋ ತೋಚದ ವಿಚಾರ.   ಆಯ್ತು ಈ  ವಿಷಯ  ಟೂರ್ನಿ ಆರಂಭಕ್ಕೂ ಮುನ್ನವೇ ಚರ್ಚೆಯೆಲ್ಲಿತ್ತು. ನಿಜವಾಗಿಯೂ ಈ ವಿಷಯದಲ್ಲಿ ತಮಗೆ ಅಭಿಪ್ರಾಯವಿದ್ದಿದ್ದರೆ ಆಗಲೇ ವ್ಯಕ್ತಪಡಿಸಬೇಕಿತ್ತು. ಈ ವಿಷಯದ ಕುರಿತು ಯಾರೋ ಒಬ್ಬ ಪತ್ರಕರ್ತ ಮಾತನಾಡಿದ್ರೆ, ಅದು ಒನ್ ಸೈಡ್ ಚಾನೆಲ್ ಅಥವಾ ಪತ್ರಿಕೆ, ಇವತ್ತಿನ ದಿನಗಳಲ್ಲಿನ ಜರ್ನಲಿಸಂ ಮೇಲಿನ ನಂಬಿಕೆ ಜನಗಳಿಗೆ ಕುಸಿಯುತ್ತಿದೆ ಎನ್ನುವ ಮಾತುಗಳನ್ನು ಹೇಳುವ ರಾಜಕಾರಣಿಗಳೇ, ಹಾಗಿದ್ರೆ ರಾಜಕೀಯ ಪಕ್ಷಗಳ ಮೇಲೆ ಜನರಿಗೆ ಭರವಸೆ ಇದೆಯೇ? ಹಾಗಿದ್ರೆ ನಾಮಿನೇಷನ್ ಹಾಕಿ ಕೂತ್ಕೋಳಿ ಮನೆಯಲ್ಲಿ ಯಾಕೆ ಪ್ರಚಾರ ಮಾಡ್ತೀರಾ? ಯಾಕೆ ಸುಳ್ಳು ಭಾರವಸೆ ಕೊಟ್ಟು ಜನರಿಗೆ ಮೋಸ ಮಾಡ್ತೀರಾ? ಇರೋ ವಿಚಾರವನ್ನು ಸತ್ಯ ಮಾತನಾಡಿದ್ರೆ ನಮ್ಮ ಮೇಲಿನ ನಂಬಿಕೆ ಕುಸಿಯುತ್ತೆ ಯಾವ್ ಸೀಮೆ ವಾದ ರೀ ಇದು.

Asia Cup 2025 final: ಪಾಕ್‌ ಮಣಿಸಿದ ಟೀಮ್ ಇಂಡಿಯಾಗೆ ಬಿಗ್ ಗಿಫ್ಟ್ ನೀಡಿದ ಬಿಸಿಸಿಐ

ಇನ್ನು ಸ್ಪಷ್ಟವಾಗಿ ಹೇಳಬೇಕೆಂದರೆ ಎಮರ್ಜೆನ್ಸಿ ನೋಡಿರೋ ದೇಶ  ಸ್ವಾಮಿ ಇದು. ಅಕ್ಷರ ಬರೆದು ಜೈಲಿಗೆ ಹೋದ ಉದಾಹರಣೆಗಳಿವೆ. ಇಂತಹ ಸಾಮಾನ್ಯ ವಿಷಯಗಳನ್ನು ಅರಿಯದೆ ಮಾತನಾಡಿದರೆ ಆ ಮಾತಿಗೆ ತೂಕ ಇರಲ್ಲ. ಏಷ್ಯಾ ಕಪ್ ಮುಗಿದೋಗಿದೆ ಅದರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಪ್ರಚಾರ ಬಯಸುವ ಹಂತಕ್ಕೆ ಸಮಾಜ ಬಂದಿರುವುದು ವಿಷಾದದ ಸಂಗತಿ. 2010ರ ಏಷ್ಯಾ ಕಪ್ ಟೂರ್ನಿಯಲ್ಲಿಯೂ ಕೂಡ ಪಂದ್ಯ ನಡೆಯುವ ವೇಳೆ ಭಾರತ ಮತ್ತು ಪಾಕ್ ನಡುವೆ ನಡೆದಿದ್ದ ಹಲವು ವಿವಾದತ್ಮಕ ಘಟನೆಗಳು ರಾಜಕೀಯ ಸ್ವರೂಪ ಪಡೆದಿದ್ದವು. ಖಂಡಿತವಾಗಿಯೂ ತಪ್ಪಲ್ಲ. ಅಲ್ಲಿ ಅಂದಿನ ನಾಯಕರು ಮಾತಾಡುವ ಅನಿವಾರ್ಯತೆ ಇತ್ತು. ದೇಶದ ಸ್ವಾಭಿಮಾನದ ಪ್ರಶ್ನೆಯಾಗಿತ್ತು. ಇವತ್ತು ಕೂಡ ಇಂಡಿಯಾ ಮತ್ತು ಪಾಕ್ ನಡುವಿನ ಪಂದ್ಯದ ಬೆಳವಣಿಗೆಗಳ ಕುರಿತು ತಮ್ಮ ಅನಿಸಿಕೆ ಅಭಿಪ್ರಾಯ ವ್ಯಕ್ತಪಡಿಸುವುದು ತಪ್ಪಲ್ಲ. ಆದ್ರೆ  ಅದಕ್ಕೆ ಒಂದು ರೀತಿ ನೀತಿ ಇರುತ್ತೆ. ಅದರ ಗಡಿ ದಾಟಿ ರಾಜಕೀಯ ದುರುದ್ದೇಶದಿಂದ ತಂಡದ ಬಗ್ಗೆ ಅಥವಾ ಆಟಗಾರರ ಬಗ್ಗೆ ಮಾತನಾಡುವುದು ಸರಿಯಲ್ಲ. ಇಂತಹ ವಿಷಯಗಳಲ್ಲಿ ಸಾಮಾನ್ಯವಾಗಿ ದೇಶ ಒಮ್ಮತದ ನಿರ್ಧಾರಕ್ಕೆ ಬರಬೇಕು. ಆದರೆ ಈ ಸಂಪ್ರದಾಯ ನಮ್ಮಲಿಲ್ಲ.

ಪಹಲ್ಗಮ್ ದಾಳಿಯಾದ್ರೆ ಅದು ಇಂಟೆಲಿಜೆನ್ಸ್ ವೈಫಲ್ಯ. ಆದ್ರೆ ಬೆಂಗಳೂರಲ್ಲಿ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ದುರಂತ ಸಂಭವಿಸಿದರೆ ಅದು ಆಕಸ್ಮಿಕ. ಇದು ಸತ್ಯಾಸತ್ಯತೆ ಅರ್ಥವಾಗದಿರುವ ವಿಷಯವೇ? ಆರ್‌ಸಿಬಿ ವಿಷಯದಲ್ಲೂ ತಮ್ಮ ರಾಜಕೀಯ ಲಾಭಕ್ಕೋಸ್ಕರ ಒಂದು ಪ್ರಿಪ್ಲ್ಯಾನ್ ಇಲ್ಲದೆ ಅವಸರದಲ್ಲಿ ಕಾರ್ಯಕ್ರಮ ಆಯೋಜಿಸಿದ ಪರಿಣಾಮ 11 ಜೀವಗಳು ಬಲಿಯಾದವು. ಈ ವಿಷಯವನ್ನು ವಿರೋಧ ಪಕ್ಷ ಕೇವಲ ರಾಜಕೀಯ ಅಸ್ತ್ರವಾಗಿ ಬಳಕೆ ಮಾಡಿತೇ ಹೊರೆತು ಸಂತ್ರಸ್ತರಿಗೆ ನೆರವು ನೀಡುವುದು ಅವರ ಪ್ರಧಾನ ಆದ್ಯತೆ ಆಗಿರಲೇ ಇಲ್ಲ. ಇದೆಲ್ಲ ನಮ್ಮ ಕಥೆಯಾದರೆ, ಇನ್ನು ಎಸಿಸಿ ಅಧ್ಯಕ್ಷನಿಗ ಮೊಹ್ಸಿನ್ ನಖ್ವಿಗೆ ಯಾಕಿಷ್ಟು ಬಂಡತನವೋ ಗೊತ್ತಿಲ್ಲ. ತಮ್ಮಿಂದ ಟ್ರೋಫಿ ಸ್ವೀಕರಿಸಲ್ಲ ಅಂತ ಹೇಳಿದ ಮೇಲೇಯೂ ನಾನೇ ಟ್ರೋಫಿ ನೀಡಬೇಕೆಂಬ ಕೆಟ್ಟ ಚಪಲ ಯಾಕೆ? ಆತ ಟ್ರೋಫಿ ನೀಡಲು ಮೈದಾನಕ್ಕೆ ಬಂದಿರುವುದು ತಪ್ಪಲ್ಲ. ಆದರೆ ವಿಷಯ ತಿಳಿದ ಮೇಲೆ ಟ್ರೋಫಿ ಅಲ್ಲೇ ಬಿಟ್ಟು ಸಮಿತಿಗೆ ನೀವೇ ನೀಡಿ ಅಂತ ತಿಳಿಸಿ ಹೋಗಬಹುದಿತ್ತು. ಆದರೆ ಕಳ್ಳನಂತೆ ಟ್ರೋಫಿ ಹೊತ್ತು ತನ್ನ ಕಛೇರಿಗೆ ಹೋದದ್ದು ನಗೆ ಪಾಟಲು.

Asia Cup 2025 final: ಏಷ್ಯಾಕಪ್‌ ಗೆದ್ರೂ ಟ್ರೋಫಿ ಎತ್ತಿಹಿಡಿಯದ ಭಾರತ; ಚೆಕ್‌ ಬಿಸಾಡಿದ ಪಾಕ್‌ ನಾಯಕ!

ಅದಾದ ನಂತರ ಖಾಸಗಿ ಕಾರ್ಯಕ್ರಮ ಏರ್ಪಡಿಸಿ ಕಪ್ ಕೊಡುತ್ತೇನೆ. ಭಾರತ ತಂಡದ ನಾಯಕ ಬಂದು ಸ್ವೀಕರಿಸಬೇಕೆಂಬ ಮಾತು. ಈ ವ್ಯಕ್ತಿಗೆ ಕನಿಷ್ಠ ಪ್ರಾಣಿ ಪ್ರಪಂಚದ ಬಗೆಗೆ ಅರಿವಿದ್ದಿದ್ದರೆ ಈ ಮಾತು ಹೇಳುತ್ತಿರಲಿಲ್ಲ. ಮೈದಾನದಲ್ಲೇ ಟ್ರೋಫಿ ಸ್ವೀಕರಿಸಲು ಒಪ್ಪದ ಸೂರ್ಯಕುಮಾರ್, ಖಾಸಗಿ ಕಾರ್ಯಕ್ರಮಕೆ ಹೋಗುವುದುಂಟೇ? ಇದು ಪಾಕಿಸ್ತಾನ ಮತ್ತು ಅಲ್ಲಿರುವರೆಲ್ಲರೂ ಲಜ್ಜಗೆಟ್ಟವರೆಂದು ತೋರಿಸುತ್ತಿದೆ. ಇನ್ನು ಕೊನೆಯದಾಗಿ ಚೀನಾ ಮತ್ತು ಅಮೇರಿಕಾ ನಡುವೆ ಪುನರ್ ಬಾಂಧವ್ಯ ಬೆಸೆದಿದ್ದು 1971ರಲ್ಲಿ ನಡೆದ ಟೇಬಲ್ ಟೆನಿಸ್. ಇದು ಉಭಯ ರಾಷ್ಟ್ರಗಳ ಸಂಪರ್ಕಕಕ್ಕೆ ಅಡಿಪಾಯ ಹಾಕಿತು. ಹಾಗಾಗಿ ಕ್ರೀಡೆಗೆ ಇಂತಹ ಶಕ್ತಿ ಇದೆ. ಹಾಗಾಗಿ ಪಾಕ್ ವಿರುದ್ಧ ಪಂದ್ಯ ಆಡುವುದರಲ್ಲಿ ತಪ್ಪೇನಿದೆ ಅಂತ ಯಾರೋ ತತ್ವಜ್ಞಾನಿಗಳು ಹೇಳಿರುವುದನ್ನು ಕೇಳ್ಪಟ್ಟೆ. ಖಂಡಿತವಾಗಿಯೂ ನಿಜ ಆದರೆ ಅವತ್ತಿನ ಆ ಎರಡೂ ರಾಷ್ಟ್ರಗಳ ಸ್ಥಿತಿಗತಿ ಹಾಗಿತ್ತು.

ಉಭಯ ದೇಶಗಳಿಗೂ ಸೌಹಾರ್ದತೆ ಮನೋಭಾವ ಇತ್ತು. ಆದರೆ ಭಾರತಕ್ಕೆ ಪಾಕ್ ಮೇಲೆ ಇಂದು ಎಳ್ಳಿನ ಕಾಳಿನಷ್ಟು ನಂಬಿಕೆಯೂ ಇಲ್ಲ. ಅವರಲ್ಲಿ ಶಾಂತಿ ಸೌಹಾರ್ದತೆಯ ಮೋನೋಭಾವ ಇಲ್ಲ. ಮನುಷ್ಯತ್ವವಿಲ್ಲದೆ ಮನುಷ್ಯರಂತೆ ಬದುಕುವ ಸಂತತಿ ಅದು. ಹಾಗಾಗಿ ನಾಯಿ ಬಾಲ ಎಂದಿಗೂ ಡೊಂಕು ಎನ್ನುವುದನ್ನು ಮತ್ತೆ ಮತ್ತೆ ಪಾಕ್ ಸಾಬೀತು ಮಾಡುತ್ತಿದೆ. ಹಾಗಾಗಿ ಆ ವಿಚಿತ್ರ ಮನಸ್ಥಿಗಳಲ್ಲಿ ಕ್ರೀಡಾ ಸೌಹಾರ್ದತೆ ಬಯಸಿ ಪಂದ್ಯ ಆಡುವುದು ನೀರಿನಲ್ಲಿ ಹೋಮ ಮಾಡಿದಂತೆ. ಕ್ರೀಡಾ ಸೌಹಾರ್ದತೆ ಹೆಸರಿನಲ್ಲಿ ರಾಜಕೀಯ ಮಾಡುವ ರಾಜಕಾರಣಿಗಳೇ ಇದು ಉತ್ತಮ ಬೆಳವಣಿಗೆಯಲ್ಲ. ಹಾಗಾಗಿ ಕ್ರೀಡೆಯ ವಿಷಯದಲ್ಲೂ ರಾಜಕೀಯ ಬೇಡ. ಅದು ಅಂದು, ಇಂದು, ಮುಂದೆಂದಿಗೂ ರಾಜಕೀಯದಿಂದ ದೂರವಿದೆ ಅದನ್ನು ಹಾಗೆ ಇರೋಕೆ ಬಿಡಿ. ಮೇಲೆ ಹೇಳಿದ ಇಷ್ಟೆಲ್ಲ ಹೈಡ್ರಾಮ ಸೃಷ್ಟಿಯಾಗಿದ್ದು ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಕೂಡ ರಾಜಕಾರಣಿ ಕ್ರೀಡಾಪಟುವಲ್ಲ ಎನ್ನುವುದು ಗಮನಾರ್ಹ.