ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Namma Metro Yellow Line: ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಮುಂದಿನ ವಾರ ಬರಲಿದೆ ನಾಲ್ಕನೇ ರೈಲು

ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಮುಂದಿನ ವಾರ ಬರಲಿದೆ ನಾಲ್ಕನೇ ರೈಲು

Bengaluru: ಈಗಾಗಲೇ ಕೊಲ್ಕತ್ತಾದಿಂದ ನಾಲ್ಕನೇ ರೈಲಿನ ಸೆಟ್ ಬಿಎಂಆರ್ಸಿಎಲ್ (BMRCL) ಡಿಪೋಗೆ ಬಂದಿದ್ದು, ನಾಲ್ಕನೇ ರೈಲಿನ ಟ್ರಯಲ್ ರನ್ ಕೂಡ ಯಶ್ವಸಿಯಾಗಿದೆ. ಅಕ್ಟೋಬರ್​ನಲ್ಲಿ ಕೊಲ್ಕತ್ತಾದಿಂದ ನಮ್ಮ ಮೆಟ್ರೋಗೆ ಐದನೇ ರೈಲು ಕೂಡ ಆಗಮಿಸಲಿದೆ ಎನ್ನಲಾಗಿದೆ. ನಂತರ ಪ್ರತಿ ತಿಂಗಳು ಒಂದು ಮೆಟ್ರೋ ರೈಲು ಸೆಟ್ ನಮ್ಮ ಮೆಟ್ರೋಗೆ ಸೇರ್ಪಡೆಯಾಗಲಿವೆ.

Self Harming: ಗಂಡನ ಅನೈತಿಕ ಸಂಬಂಧ, ವರದಕ್ಷಿಣಿ ಕಿರುಕುಳದಿಂದ ನೊಂದು ಪತ್ನಿ ನೇಣಿಗೆ

ಗಂಡನ ಅನೈತಿಕ ಸಂಬಂಧ, ವರದಕ್ಷಿಣಿ ಕಿರುಕುಳದಿಂದ ನೊಂದು ಪತ್ನಿ ನೇಣಿಗೆ

Harassment: ಮೃತ ಪೂಜಾಶ್ರೀ ಪೋಷಕರ ದೂರಿನ ಆಧಾರದ ಮೇಲೆ ಈ ಘಟನೆ ಸಂಬಂಧ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಆರೋಪದಡಿ ಕೇಸ್ ದಾಖಲಾಗಿದ್ದು, ಪತಿ ನಂದೀಶ್‌ನನ್ನು ಬಂಧಿಸಲಾಗಿದೆ. ತಾಯಿ ಸಾವಿಗೀಡಾಗಿ ತಂದೆ ಜೈಲು ಪಾಲಾಗಿದ್ದು, ಮಗು ಅನಾಥವಾಗಿದೆ.

Festive Season Shopping 2025: ಎಲ್ಲೆಡೆ ಆರಂಭವಾಯ್ತು ಈದ್ ಶಾಪಿಂಗ್

ಎಲ್ಲೆಡೆ ಆರಂಭವಾಯ್ತು ಈದ್ ಶಾಪಿಂಗ್

Festive Season Shopping 2025: ಈದ್ ಮಿಲಾದ್ ಹಿನ್ನೆಲೆಯಲ್ಲಿ, ಫೆಸ್ಟೀವ್ ಸೀಸನ್ ಶಾಪಿಂಗ್ ಹೆಚ್ಚಾಗಿದೆ. ವೈವಿಧ್ಯಮಯ ಲೇಡಿಸ್-ಮೆನ್ಸ್-ಕಿಡ್ಸ್ ಫ್ಯಾಷನ್‌ವೇರ್ಸ್, ಆಕ್ಸೆಸರೀಸ್, ಗೃಹಾಲಂಕಾರ ಸಾಮಗ್ರಿಗಳು ಸೇರಿದಂತೆ ಎಲ್ಲವನ್ನೂ ಖರೀದಿಸುವುದು ಹೆಚ್ಚಾಗಿದೆ. ಈ ಕುರಿತಂತೆ ಇಲ್ಲಿದೆ ವರದಿ.

Saree Trend 2025: ಓಣಂ ಫೆಸ್ಟೀವ್ ಸೀಸನ್‌ನಲ್ಲಿ ಚಾಲ್ತಿಗೆ ಬಂದ ಕಸವು ಸೀರೆ

ಓಣಂ ಫೆಸ್ಟೀವ್ ಸೀಸನ್‌ನಲ್ಲಿ ಚಾಲ್ತಿಗೆ ಬಂದ ಕಸವು ಸೀರೆ

Saree Trend 2025: ಇದುವರೆಗೂ ಕೇರಳ ಮಹಿಳೆಯರ ಸ್ವತ್ತಾಗಿದ್ದ ಕಸವು ಸೀರೆ ಇದೀಗ ಗಡಿ ದಾಟಿ ನಮ್ಮಲ್ಲೂ ಬಿಡುಗಡೆಗೊಂಡಿದೆ. ಓಣಂ ಫೆಸ್ಟೀವ್ ಸಂಭ್ರಮಕ್ಕೆ ಸಾಥ್ ನೀಡಲು ಎಂಟ್ರಿ ನೀಡಿವೆ. ಇದ್ಯಾವ ಬಗೆಯ ಸೀರೆ? ಇಲ್ಲಿದೆ ಮಾಹಿತಿ.

Greater Bengaluru: ಇತಿಹಾಸದ ಪುಟ ಸೇರಿದ ಬಿಬಿಎಂಪಿ, ಇಂದಿನಿಂದ ‘ಗ್ರೇಟರ್‌ ಬೆಂಗಳೂರುʼ‌

ಇತಿಹಾಸದ ಪುಟ ಸೇರಿದ ಬಿಬಿಎಂಪಿ, ಇಂದಿನಿಂದ ‘ಗ್ರೇಟರ್‌ ಬೆಂಗಳೂರುʼ‌

ಇಷ್ಟು ದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಎಂದು ಗುರುತಿಸಲ್ಪಡುತ್ತಿದ್ದದ್ದು ಇದೀಗ ಇತಿಹಾಸದ ಪುಟ ಸೇರಲಿದೆ. ಅದಕ್ಕೆ ಸಂಬಂಧಿಸಿದಂತೆ ಮಂಗಳವಾರ ಅಂತಿಮ ಅಧಿಸೂಚನೆ ಪ್ರಕಟವಾಗಲಿದೆ ಹಾಗೂ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿನ ನಾಮಫಲಕಗಳು ಮಂಗಳ ವಾರವೇ ಬದಲಾಗಲಿವೆ.

Heart Failure: ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಮತ್ತೊಬ್ಬ ಡ್ಯಾನ್ಸ್‌ ಮಾಡುತ್ತಾ ಸಾವು

ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಯುವಕ ಸಾವು

Raichur: ಮೊನ್ನೆ (ಆಗಸ್ಟ್ 31) ರಾತ್ರಿಯಿಡೀ ಡ್ಯಾನ್ಸ್ ಮಾಡಿದ್ದ ಅಭಿಷೇಕ್ ನಿನ್ನೆ (ಸೆ. 1) ಬೆಳಗಿನ ಜಾವ ಗಣೇಶ ವಿಸರ್ಜನೆ ಮಾರ್ಗ ಮಧ್ಯೆ ರಾಯಚೂರು ನಗರದ ತೀನ್ ಖಂದಿಲ್ ಸರ್ಕಲ್ ಬಳಿ ಕುಸಿದು ಬಿದ್ದಿದ್ದು, ಕೂಡಲೇ ಅಭಿಷೇಕ್‌ನನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ, ಚಿಕಿತ್ಸೆ ‌ಫಲಕಾರಿಯಾಗದೇ ಯುವಕ ಅಭಿಷೇಕ್ ಕೊನೆಯುಸಿರೆಳೆದಿದ್ದಾನೆ.

Spoorthivani Column: ನಿಸ್ವಾರ್ಥ ಸೇವೆಯೇ ದೇವರ ಸನಿಹಕ್ಕೆ ನಮ್ಮನ್ನು ಕೊಂಡೊಯ್ಯುವ ಸಾಧನ

ಸ್ವಾರ್ಥ ಸೇವೆಯೇ ದೇವರ ಸನಿಹಕ್ಕೆ ಕೊಂಡೊಯ್ಯುವ ಸಾಧನ

ಕೇವಲ ಗ್ರಂಥಗಳನ್ನು ಓದುವುದರಿಂದ ಅಥವಾ ಉಪನ್ಯಾಸಗಳನ್ನು ಆಲಿಸುವುದರಿಂದ ದೇವರನ್ನು ಅರಿಯಲು ಸಾಧ್ಯವಾಗದು. ನೀವು ಯಾವಾಗಲೂ ನಿಸ್ವಾರ್ಥ ಮನೋಭಾವದಿಂದ ಕೆಲಸ ಮಾಡಬೇಕು. ಇದರಿಂದಲೇ ನಿಮಗೆ ದೇವರ ಅನುಗ್ರಹ ದೊರೆಯುತ್ತದೆ. ಹೀಗಾಗಿ ದೇವರನ್ನು ಕಾಣುಬೇಕು ಎಂದುಕೊಳ್ಳುವ ನಿಮ್ಮ ಎಲ್ಲ ಪ್ರಯತ್ನಗಳು ನಿಮ್ಮನ್ನು ನಿಸ್ವಾರ್ಥಿಗಳನ್ನಾಗಿ ಮಾಡಬೇಕು.

Chikkaballapur News: ನ್ಯಾನೋ ಡಿಎಪಿ ಯೂರಿಯಾ ದ್ರಾವಣ ಸಿಂಪಡಣೆಯಿಂದ ರೈತರಿಗೆ ವರದಾನ : ತಾಲೂಕು ಕೃಷಿ ಅಧಿಕಾರಿ ಮುನಿರಾಜು ಅಭಿಮತ

ನ್ಯಾನೋ ಡಿಎಪಿ ಯೂರಿಯಾ ದ್ರಾವಣ ಸಿಂಪಡಣೆಯಿಂದ ರೈತರಿಗೆ ವರದಾನ

ಇತ್ತೀಚಿನ ದಿನಗಳಲ್ಲಿ ಬಹುತೇಕ ರೈತರು ಕೊಟ್ಟಿಗೆ ಗೊಬ್ಬರವನ್ನು ಹೊಲ ಗದ್ದೆ ಮತ್ತು ತೋಟ ಗಳಿಗೆ ಹಾಕುವುದನ್ನು ಮರೆತಿದ್ದಾರೆ.ಬದಲಿಗೆ  ಡಿಎಪಿ, ಕಾಂಪ್ಲೆಕ್ಸ್,ಯೂರಿಯಾ ಇತ್ಯಾದಿ ರಸಗೊಬ್ಬರಗಳನ್ನೇ ಬಳಸಿ ಬೆಳೆ ತೆಗೆಯಲು ಮುಂದಾಗುತ್ತಿದ್ದಾರೆ. ಇದರಿಂದಾಗಿ ಭೂಮಿ ಮತ್ತು ಪರಿಸರಕ್ಕೆ ತುಂಬಾ ಹಾನಿ ಯಾಗುತ್ತಿದೆ.

Chikkaballapur News: ನಿಮ್ಮ ಗಡಿಪಾರು ಬೆದರಿಕೆಗೆ ಹೆದರುವ ಪೈಕಿ ನಾನಲ್ಲ : ಕೋಡಗಲ್ ರಮೇಶ್ ಅಕ್ರೋಶ

ನಿಮ್ಮ ಗಡಿಪಾರು ಬೆದರಿಕೆಗೆ ಹೆದರುವ ಪೈಕಿ ನಾನಲ್ಲ

ಇತ್ತೀಚೆಗೆ ಜಿಲ್ಲಾಡಳಿತ ಭವನದ ಎದುರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತದ ದಲಿತ ವಿರೋಧಿ ಧೋರಣೆ ಖಂಡಿಸಿ ಹೋರಾಟ ಮಾಡಿದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿ ಅಹವಾಲು ಸ್ವೀಕರಿಸಿದ್ದ ಜಿಲ್ಲಾಧಿಕಾರಿ ಪಿಎನ್ ರವೀಂದ್ರ ಅವರು ಹತ್ತು ದಿನಗಳ ಒಳಗೆ ಎಲ್ಲಾ ದಲಿತ ಮುಖಂಡರು ಮತ್ತು ಎಲ್ಲಾ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಪರಿಹರಿಸಲಾಗುವುದು ಎಂದು ಹೇಳಿದರು

Chikkaballapur news: ಸೆ.3ಕ್ಕೆ ರಾಜ್ಯ ಮಟ್ಟದ ಗ್ಯಾರೆಂಟಿ ಕಾರ್ಯಾಗಾರ ; ರಾಜ್ಯಾಧ್ಯಕ್ಷ ಹೆಚ್.ಎಂ.ರೇವಣ್ಣ ಉದ್ಘಾಟನೆ : ಜಿಲ್ಲಾಧ್ಯಕ್ಷ ಯಲುವಹಳ್ಳಿ ರಮೇಶ್ ಹೇಳಿಕೆ

ಸೆ.3ಕ್ಕೆ ರಾಜ್ಯ ಮಟ್ಟದ ಗ್ಯಾರೆಂಟಿ ಕಾರ್ಯಾಗಾರ

ಇದು ರಾಜ್ಯದ ಮೊಟ್ಟಮೊದಲ ಕಾರ್ಯಗಾರವಾಗಿದೆ. ಈ ಕಾರ್ಯಗಾರದಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಇನ್ನಿತರರು ಭಾಗಿಯಾಗಲಿದ್ದಾರೆ.ನಮ್ಮ ಸರಕಾರ ಬಂದಾಗಿನಿಂದ ಶಕ್ತಿ ಯೋಜನೆ ಯಡಿ ೫೦೦ ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ.ಈ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ.

Gudibande News: ಪೋಲಂಪಲ್ಲಿ ರಸ್ತೆಯಲ್ಲಿ ಟಿಪ್ಪರ್‌ಗಳಿಂದ ರಸ್ತೆ ಹಾಳು, ಕ್ರಮಕ್ಕೆ ಸ್ಥಳೀಯರ ಆಕ್ರೋಶ

ಟಿಪ್ಪರ್‌ಗಳಿಂದ ರಸ್ತೆ ಹಾಳು, ಕ್ರಮಕ್ಕೆ ಸ್ಥಳೀಯರ ಆಕ್ರೋಶ

ಗುಡಿಬಂಡೆ ಪಟ್ಟಣದಿಂದ ಪೋಲಂಪಲ್ಲಿ-ವರ್ಲಕೊಂಡ ಗ್ರಾಮದ ರಸ್ತೆ ತುಂಬಾನೆ ಹದೆಗಟ್ಟಿದೆ. ಈ ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರರು ಹಾಗೂ ಸ್ಥಳೀಯ ಜನತೆ ಪ್ರತಿನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ಈ ಮಾರ್ಗದಲ್ಲಿ ಬರುವಂತಹ ಜನರಿಗೆ ಈ ರಸ್ತೆ ಪ್ರಮುಖವಾಗಿದೆ. ಆದರೆ ಈ ರಸ್ತೆ ಗುಂಡಿಗಳಿಂದ ಕೂಡಿದ ಹಿನ್ನೆಲೆಯಲ್ಲಿ ಎಲ್ಲರಿಗೂ ತೊಂದರೆಯಾಗಿದೆ.

Gudibande News: ಸರ್ಕಾರಿ ನೌಕರರಿಗೆ ನಿವೃತ್ತಿ ಸಹಜ, ಸೇವಾವಧಿಯಲ್ಲಿ ಉತ್ತಮ ಸೇವೆ ಮಾಡುವುದು ಅವಶ್ಯ: ಕೆ.ವಿ.ನಾರಾಯಣಸ್ವಾಮಿ

ಸೇವಾವಧಿಯಲ್ಲಿ ಉತ್ತಮ ಸೇವೆ ಮಾಡುವುದು ಅವಶ್ಯ

ನಾನು ಸರ್ಕಾರಿ ಸೇವೆಗೆ ಸೇರಿದಾಗಿನಿಂದ ನನ್ನ ಕರ್ತವ್ಯಕ್ಕೆ ನ್ಯಾಯ ಒದಗಿಸಿದ್ದೇನೆ. ಬಳಿಕ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಹಾಗೂ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿ ಸತತವಾಗಿ ಮೂರು ಬಾರಿ ಆಯ್ಕೆಯಾಗಿದ್ದೇನೆ. ಸರ್ಕಾರಿ ನೌಕರರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಶ್ರಮಿಸಿದ್ದೇನೆ. ನನ್ನ ತಂಡ ಹಾಗೂ ಸರ್ಕಾರಿ ನೌಕರರು ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಜತೆಗಿದ್ದಾರೆ.

Dharmasthala Chalo: ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ: ವಿಜಯೇಂದ್ರ ಕಿಡಿ

ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ

BY Vijayendra: ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದೂ ಪರ ಸಂಘಟನೆಗಳಿಗೆ ಕಿರುಕುಳ ನೀಡುವುದು, ಹಿಂದೂ ವಿರೋಧಿ ದುಷ್ಟರಿಗೆ ಕುಮ್ಮಕ್ಕು ನೀಡುವ ಕಾರ್ಯಸೂಚಿಯನ್ನು ತನ್ನ ಪ್ರಮುಖ ಅಜೆಂಡಾವನ್ನಾಗಿರಿಸಿಕೊಂಡಿದೆ, ಇದನ್ನು ಬಗ್ಗುಬಡಿಯುವ ಶಕ್ತಿ ಈ ನಾಡಿನ ಜನತೆಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

MLA K H Puttaswamy Gowda: ಮುದುಗಾನಕುಂಟೆಯ ಭಕ್ತಾಧಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಸಿದ್ಧ : ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ

ಮುದುಗಾನಕುಂಟೆಯ ಭಕ್ತಾಧಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಸಿದ್ಧ

ಸ್ಥಳೀಯ ಗ್ರಾಮಸ್ಥರು ಹಾಗೂ ನಮ್ಮ ಕಾರ್ಯಕರ್ತರ ಕೋರಿಕೆ ಮೇರೆಗೆ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಇದೀಗ ಐವತ್ತು ಲಕ್ಷ ರೂಪಾಯಿಗಳ ಕಾಮಗಾರಿಗೆ ಚಾಲನೆಯನ್ನು ನೀಡಿದ್ದು, ಇದರ ಜೊತೆಗೆ ಕ್ಷೇತ್ರದ ಗಂಗಮ್ಮ ಕಲ್ಯಾಣಿಗೆ ಹೋಗುವ ರಸ್ತೆಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿಯಲ್ಲಿ ಸುಮಾರು ಐವತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು

Actor Yash: ಕೋವಿಡ್ ಸಂಕಷ್ಟದ ವೇಳೆ ಚಿತ್ರರಂಗದ ಕಾರ್ಮಿಕರಿಗೆ  2. 85 ಕೋಟಿ ರೂ. ನೆರವು ನೀಡಿದ್ದ ರಾಕಿ ಬಾಯ್

ಕನ್ನಡ ಸಿನಿಮಾ ಕಲಾವಿದರಿಗೆ, ಕಾರ್ಮಿಕರಿಗೆ ಯಶ್ ಸಹಾಯಹಸ್ತ

ನಟ ಯಶ್ ಈಗಾಗಲೇ ತಮ್ಮ ಯಶೋಮಾರ್ಗ ಸಂಸ್ಥೆಯ ಮೂಲಕ ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ಆದರೆ ಇದೀಗ ಅವರು ಕೋವಿಡ್ ವೇಳೆ ಮಾಡಿದ ಸತ್ಕಾರ್ಯಗಳು ಭಾರಿ ಸದ್ದು ಮಾಡುತ್ತಿದೆ. ಕೊರೊನಾ ಸಂಕಷ್ಟದಿಂದಾಗಿ ಇಡೀ ದೇಶವೇ ಲಾಕ್‌ಡೌನ್‌ ಆದ ವೇಳೆ ದಿನಗೂಲಿ ನೌಕರರಿಗೆ ಊಟದ ವ್ಯವಸ್ಥೆ ಹಾಗೂ ಅಗತ್ಯ ಸಾಮಗ್ರಿಗಳ ಪೂರೈಕೆ ಮಾಡಿದ್ದರು.

Director SS David: ಕನ್ನಡದ ಖ್ಯಾತ ನಿರ್ದೇಶಕ ಎಸ್‌.ಎಸ್‌.ಡೇವಿಡ್‌ ಹೃದಯಾಘಾತದಿಂದ ನಿಧನ

ಕನ್ನಡದ ಖ್ಯಾತ ನಿರ್ದೇಶಕ ಎಸ್‌.ಎಸ್‌.ಡೇವಿಡ್‌ ಹೃದಯಾಘಾತದಿಂದ ನಿಧನ

Director SS David: ನಿರ್ದೇಶಕ ಡೇವಿಡ್‌ ಅವರು ಭಾನುವಾರ ಮೆಡಿಕಲ್‌ ಶಾಪ್‌ಗೆ ತೆರಳಿ ಮನೆಗೆ ವಾಪಸ್ಸಾಗುವ ವೇಳೆ ಕುಸಿದು ಬಿದ್ದಿದ್ದರು. ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

Chikkaballapur Breaking News: ಕಾರ್ ಚಾಲಕ ಬಾಬು ಉದ್ಯೋಗದ ಆಮಿಷವೊಡ್ಡಿ 18 ಲಕ್ಷ ಪಡೆದು ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ: ನಟೇಶ್ ಗಂಭೀರ ಆರೋಪ

ಉದ್ಯೋಗದ ಆಮಿಷ: ಕಾರ್ ಚಾಲಕ 18 ಲಕ್ಷ ಪಡೆದು ಆತ್ಮಹತ್ಯೆ

ಹಣ ಪಡೆಯುವುದನ್ನೇ ರೂಢಿ ಮಾಡಿಕೊಂಡಿದ್ದ ಬಾಬು ನಾನು ಉದ್ಯೋಗದ ಪ್ರಸ್ತಾಪ ಮಾಡಿದಾಗ ಲೆಲ್ಲಾ ಒಂದೊಂದು ಸಬೂಬು ಹೇಳಿ ಸಾಗಹಾಕುತ್ತಿದ್ದ. ಇದಾಗಿ ಕೆಲ ದಿನಗಳು ಸುಮ್ಮನಿದ್ದು ಮತ್ತೆ ಕೆಲಸ ಆಗಿಯೇ ಆಗುತ್ತದೆ,ಅಂತಿಮ ಹಂತದಲ್ಲಿದೆ ಎನ್ನುತ್ತಾ ಹಣಕ್ಕಾಗಿ ಬೇಡಿಕೆಯಿಡುತ್ತಲೇ ಬಂದಿದ್ದ. ಈತನ ಮಾತನ್ನು ನಂಬಿ ಕೇಳಿದಾಗಲೆಲ್ಲಾ ಸಾಲ ಮಾಡಿ ಹಣ ನೀಡಿದ್ದೇನೆ.

Dharmasthala: ಧರ್ಮಸ್ಥಳ ಸತ್ಯಕ್ಷೇತ್ರವಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ : ಮುಕ್ತ ಮುನಿಯಪ್ಪ

ಧರ್ಮಸ್ಥಳ ಸತ್ಯಕ್ಷೇತ್ರವಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ

ನಮ್ಮ ಪಕ್ಷದ ಯುವಘಟಕದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ಕೈಗೊಂಡಿದ್ದ ಸತ್ಯಯಾತ್ರೆಯಲ್ಲಿ ಜಿಲ್ಲೆಯಿಂದ ಸಾವಿರಾರು ಮಂದಿ ಭಾಗಿಯಾಗಿ ದ್ದಾರೆ. ಮಂಜುನಾಥಸ್ವಾಮಿಯ ದರ್ಶನದ ನಂತರ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ನಿಮ್ಮೊಂದಿಗೆ ಜೆಡಿಎಸ್ ಪಕ್ಷ ಮತ್ತು ಕಾರ್ಯಕರ್ತರು ಸದಾ ಇರಲಿದ್ದಾರೆ ಎಂದು ಬೆಂಬಲ ಸೂಚಿಸಿ ಬರಲಾಗಿದೆ.

Heart Attack: ಕೆಂಭಾವಿಯಲ್ಲಿ ಘೋರ ಘಟನೆ; ಒಂದೇ ದಿನ ಹೃದಯಾಘಾತದಿಂದ ಅಣ್ಣ-ತಮ್ಮ ಸಾವು!

ಕೆಂಭಾವಿಯಲ್ಲಿ ಒಂದೇ ದಿನ ಹೃದಯಾಘಾತದಿಂದ ಅಣ್ಣ-ತಮ್ಮ ಸಾವು!

Kembhavi News: ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ ಘಟನೆ ನಡೆದಿದೆ. ಒಂದೇ ಮನೆಯಲ್ಲಿ ಒಂದು ಗಂಟೆ ಅಂತರದಲ್ಲಿ ಇಬ್ಬರು ಸಹೋದರರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದರಿಂದ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದ್ದು, ಆಕ್ರಂದನ ಮುಗಿಲುಮುಟ್ಟಿದೆ. ಇಬ್ಬರಿಗೆ ಒಂದೇ ದಿನ ಹೃದಯಾಘಾತವಾಗಿದ್ದರಿಂದ ಪಟ್ಟಣದ ಜನರೂ ಆತಂಕಗೊಂಡಿದ್ದಾರೆ.

Dharmasthala Chalo: ಬುರುಡೆ ಪ್ರಕರಣವು ಬಹುಸಂಖ್ಯಾತರ ವಿರುದ್ಧ ಕಾಂಗ್ರೆಸ್‌ ಷಡ್ಯಂತ್ರದ ಭಾಗ: ಜೋಶಿ

ಬುರುಡೆ ಪ್ರಕರಣವು ಬಹುಸಂಖ್ಯಾತರ ವಿರುದ್ಧ ಕಾಂಗ್ರೆಸ್‌ ಷಡ್ಯಂತ್ರದ ಭಾಗ

Pralhad Joshi: ಕಾಂಗ್ರೆಸ್‌ ಪಕ್ಷ ದೇಶದಲ್ಲಿ ಹಿಂದೂಗಳ ವಿರುದ್ಧ ಹಾಗೂ ತುಷ್ಟೀಕರಣದ ಪರವಾಗಿದೆ. ಸದಾ ಕಾಲಕ್ಕೂ ಹಿಂದೂ ಸಮಾಜವನ್ನು ತಿರಸ್ಕಾರ ಮಾಡುವುದು, ಅಲ್ಪಸಂಖ್ಯಾರ ತುಷ್ಟೀಕರಣ ಮಾಡುವುದು ಇವರ ರಕ್ತದಲ್ಲೇ ಬಂದಿದೆ. ವೋಟ್‌ ಬ್ಯಾಂಕ್‌ಗಾಗಿ ಎಂದೆಂದಿಗೂ ಹಿಂದೂಸ್ತಾನ, ಹಿಂದೂ ಸಮಾಜವನ್ನು ತಿರಸ್ಕರಿಸಿ ಪಾಕಿಸ್ತಾನವನ್ನು ಓಲೈಸುವ ಕೆಲಸ ಮಾಡಿದವರು ಕಾಂಗ್ರೆಸ್ಸಿಗರು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.

Congratulations Brother Movie: ‘ಕಂಗ್ರಾಜುಲೇಷನ್ ಬ್ರದರ್’ ಚಿತ್ರದ ʼಹಳೇ ಸನ್ಯಾಸಿʼ ಹಾಡು ರಿಲೀಸ್‌

‘Congratulations ಬ್ರದರ್’ ಚಿತ್ರದ ʼಹಳೇ ಸನ್ಯಾಸಿʼ ಹಾಡು ರಿಲೀಸ್‌

Congratulations Brother Movie: ಯುವ ನಟ ರಕ್ಷಿತ್ ನಾಗ್ ಅಭಿನಯದ ʼCongratulations ಬ್ರದರ್ʼ ಚಿತ್ರದ ʼಹಳೇ ಸನ್ಯಾಸಿʼ ಎಂಬ ಹಾಡನ್ನು ನಟಿ ರಾಗಿಣಿ ದ್ವಿವೇದಿ, ನಟರಾದ ರಾಜವರ್ಧನ್, ವಿಕ್ಕಿ ವರುಣ್ ಬಿಡುಗಡೆ ಮಾಡಿದರು. ʼಹಳೇ ಸನ್ಯಾಸಿʼ ಹಾಡಿಗೆ ರಕ್ಷಿತ್ ನಾಗ್ ಅವರೇ ಸಾಹಿತ್ಯ ಬರೆದಿದ್ದಾರೆ. ಸೂರಜ್ ಜೋಯಿಸ್ ಸಂಗೀತ ಸಂಯೋಜಿಸಿದ್ದು, ಖ್ಯಾತ ನಿರ್ದೇಶಕ ʼಜೋಗಿʼ ಪ್ರೇಮ್ ಧ್ವನಿಯಾಗಿದ್ದಾರೆ.

Gauribidanur News: ರಕ್ತದಾನದಿಂದ ಜೀವ ಉಳಿಸಿದ ಶ್ರೇಯಸ್ಸು ನಮ್ಮದಾಗಲಿದೆ: ಪಿಎಸ್‌ಐ ರಮೇಶ್ ಗುಗ್ಗರಿ ಅಭಿಮತ

ರಕ್ತದಾನದಿಂದ ಜೀವ ಉಳಿಸಿದ ಶ್ರೇಯಸ್ಸು ನಮ್ಮದಾಗಲಿದೆ

ತುರ್ತು ಸಂದರ್ಭಗಳಲ್ಲಿ ಮಾಡುವ ರಕ್ತದಾನ, ರೋಗಿಗಳಿಗೆ ಜೀವದಾನ ನೀಡುತ್ತದೆ ಒಬ್ಬ ದಾನಿಯಿಂದ ಸಂಗ್ರಹಿಸುವ ರಕ್ತದಿಂದ ಮೂರು ಜೀವಗಳನ್ನು ಉಳಿಸಬಹುದು, ರಕ್ತದಾನ ಮಾಡುವುದರಿಂದ ದಾನಿ ಗಳಿಗೆ ಅನೇಕ ಆರೋಗ್ಯದ ಪ್ರಯೋಜನಗಳಿವೆ,ರಕ್ತದೊತ್ತಡ, ಮಧುಮೇಹ ರೋಗಗಳು ನಿಯಂತ್ರಣಕ್ಕೆ ಬರಲಿವೆ, ಹೃದಯ ರಕ್ತನಾಳದ ಆರೋಗ್ಯ ಸುಧಾರಣೆಯಾಗಲಿದೆ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ

Samsung: ಆಕರ್ಷಕ ವಿನ್ಯಾಸ, ಎಐ ಫೀಚರ್ ಗಳು, ಉತ್ತಮ ಬಾಳಿಕೆ ಮತ್ತು ಓಐಎಸ್ ಆಧರಿತ ನೋ ಶೇಕ್ ಕ್ಯಾಮೆರಾ ಹೊಂದಿರುವ ಗ್ಯಾಲಕ್ಸಿ ಎ17 5ಜಿ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್

ನೋ ಶೇಕ್ ಕ್ಯಾಮೆರಾ- ಗ್ಯಾಲಕ್ಸಿ ಎ17 5ಜಿ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್

ಗ್ಯಾಲಕ್ಸಿ ಎ17 5ಜಿ ಸ್ಮಾರ್ಟ್ ಫೋನ್ ಗ್ಯಾಲಕ್ಸಿ ಎ ಸರಣಿಯ ಪರಂಪರೆಯ ಮುಂದುವರಿಕೆ ಯಾಗಿದ್ದು, ಭಾರತದ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಹೊಸತನಗಳನ್ನು ಒದಗಿಸುತ್ತದೆ. ಈ ಫೋನ್ ಆಕರ್ಷಕ ವಿನ್ಯಾಸ, ವಿಶ್ವಾಸಾರ್ಹ ಕಾರ್ಯಕ್ಷಮತೆ ಮತ್ತು ಸ್ಮಾರ್ಟ್ ಎಐ ಫೀಚರ್ ಗಳನ್ನು ಕೈಗೆಟುಕುವ ಬೆಲೆಯಲ್ಲಿ ನೀಡುತ್ತದೆ.

Ganeshotsava in Police Station: ಶ್ರೀ ಸತ್ಯನಾರಾಯಣ  ಮಹಾ ಪೂಜೆ ಹಾಗೂ ಅನ್ನ ಸಂತರ್ಪಣಾ ಕಾರ್ಯಕ್ರಮ

ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವ

ಪ್ರತಿ ವರ್ಷದಂತೆ ಈ ವರ್ಷವೂ ಅಲಂಕೃತ ಮಂಟಪದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸ ಲಾಗಿದ್ದು, ಮುಂಜಾನೆ ಪಿಎಸ್ಐ ಮಾಂತೇಶ ಕುಂಬಾರ ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು. ಪ್ರತಿನಿತ್ಯ ಒತ್ತಡದ ಕೆಲಸ ನಿರ್ವಹಿಸುತ್ತಿದ್ದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಕುಟುಂಬದ ಸದಸ್ಯರೊಂದಿಗೆ ಸೇರಿ ಸಂಭ್ರಮದಿಂದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Loading...