ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA K H Puttaswamy Gowda: ಮುದುಗಾನಕುಂಟೆಯ ಭಕ್ತಾಧಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಸಿದ್ಧ : ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ

ಸ್ಥಳೀಯ ಗ್ರಾಮಸ್ಥರು ಹಾಗೂ ನಮ್ಮ ಕಾರ್ಯಕರ್ತರ ಕೋರಿಕೆ ಮೇರೆಗೆ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಇದೀಗ ಐವತ್ತು ಲಕ್ಷ ರೂಪಾಯಿಗಳ ಕಾಮಗಾರಿಗೆ ಚಾಲನೆಯನ್ನು ನೀಡಿದ್ದು, ಇದರ ಜೊತೆಗೆ ಕ್ಷೇತ್ರದ ಗಂಗಮ್ಮ ಕಲ್ಯಾಣಿಗೆ ಹೋಗುವ ರಸ್ತೆಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿಯಲ್ಲಿ ಸುಮಾರು ಐವತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು

ಮುದುಗಾನಕುಂಟೆಯ ಭಕ್ತಾಧಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಸಿದ್ಧ

ಶ್ರೀ ಕ್ಷೇತ್ರ ಮುದುಗಾನಕುಂಟೆಯ ಭಕ್ತಾಧಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಹಾಗೂ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಎಲ್ಲಾ ರೀತಿಯಲ್ಲೂ ಪ್ರಯತ್ನಿಸುತ್ತಿರುವುದಾಗಿ ಶಾಸಕ ಕೆ. ಎಚ್.ಪುಟ್ಟಸ್ವಾಮಿಗೌಡರು ತಿಳಿಸಿದರು. -

Ashok Nayak Ashok Nayak Sep 1, 2025 10:47 PM

ಗೌರಿಬಿದನೂರು : ಶ್ರೀ ಕ್ಷೇತ್ರ ಮುದುಗಾನಕುಂಟೆಯ ಭಕ್ತಾಧಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಹಾಗೂ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಎಲ್ಲಾ ರೀತಿಯಲ್ಲೂ ಪ್ರಯತ್ನಿಸುತ್ತಿರುವುದಾಗಿ ಶಾಸಕ ಕೆ. ಎಚ್.ಪುಟ್ಟಸ್ವಾಮಿಗೌಡರು (MLA K H Puttaswamy Gowda) ತಿಳಿಸಿದರು.

ಅವರು ತಾಲ್ಲೂಕಿನ ಪುರಾಣ ಪ್ರಸಿದ್ದಿ ಹೊಂದಿರುವ ಶ್ರೀ ಕ್ಷೇತ್ರ ಮುದುಗಾನಕುಂಟೆಯಲ್ಲಿ ಭಕ್ತಾಧಿಗಳ ಅನುಕೂಲಕ್ಕಾಗಿ ಐವತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗುವ ಸ್ನಾನಗೃಹಗಳ ಕಾಮಗಾರಿಗೆ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿದರು.

ಪ್ರತಿ ಸೋಮವಾರ ಶ್ರೀ ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ರಾಜ್ಯದ ವಿವಿಧ ಮೂಲೆಗಳಿಂದ ಬಂದು ಗಂಗಮ್ಮ ತಾಯಿಯ ದರ್ಶನ ಪಡೆಯುತ್ತಾರೆ. ಸ್ಥಳೀಯ ಗ್ರಾಮಸ್ಥರು ಹಾಗೂ ನಮ್ಮ ಕಾರ್ಯಕರ್ತರ ಕೋರಿಕೆ ಮೇರೆಗೆ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಇದೀಗ ಐವತ್ತು ಲಕ್ಷ ರೂಪಾಯಿಗಳ ಕಾಮಗಾರಿಗೆ ಚಾಲನೆಯನ್ನು ನೀಡಿದ್ದು, ಇದರ ಜೊತೆಗೆ ಕ್ಷೇತ್ರದ ಗಂಗಮ್ಮ ಕಲ್ಯಾಣಿಗೆ ಹೋಗುವ ರಸ್ತೆಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿಯಲ್ಲಿ ಸುಮಾರು ಐವತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.

ಇದನ್ನೂ ಓದಿ: MLA Puttaswamy Gowda: ವಿದ್ಯಾರ್ಥಿಗಳಿಗೆ ಅರಣ್ಯೀಕರಣ ಬಗ್ಗೆ ಜಾಗೃತಿ ಅಗತ್ಯ : ಎಂ.ಎಲ್.ಎ.ಪುಟ್ಟಸ್ವಾಮಿಗೌಡ
ಇದೇ ಸಂಧರ್ಭದಲ್ಲಿ ಮುದುಗಾನಕುಂಟೆ ಅಭಿವೃದ್ಧಿ ಮಂಡಲಿಯ ಅಧ್ಯಕ್ಷ ನರಸಿಂಹರೆಡ್ಡಿ ಶಾಸಕರಿಗೆ ಮನವಿ ಪತ್ರವನ್ನು ಸಲ್ಲಿಸಿ ಶ್ರೀ ಕ್ಷೇತ್ರದ ಪರದಿಗೆ ಕಾಂಪೌಂಡ್ ನಿರ್ಮಿಸಿಕೊಡಬೇಕೆಂದು ಮನವಿ ಸಲ್ಲಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಲಕ್ಷ್ಮೀನಾರಾಯಣ್ ಪಟೇಲ್, ಸದಾಶಿವಪ್ಪ, ಸಿದ್ದಪ್ಪ, ಸಾಗಾನಹಳ್ಳಿ ಶಿವಕುಮಾರ್, ವೆಂಕಟೇಶ್, ಜಿಸಿ ಅಶೋಕ್, ಮಹೇಶ್, ಹನುಮಂತರಾಯಪ್ಪ, ನಾಗಭೂಷಣ್ ರೆಡ್ಡಿ, ರಘು, ನಾಗೇಶ್, ಮೈಲಾರಪ್ಪ, ಲಂಕಪ್ಪ, ರಾಮಲಿಂಗಯ್ಯ, ಹನುಮಂತ, ಮೂರ್ತಿ, ಜಭಿ, ಎಇಇ ನಾರಾಯಣಸ್ವಾಮಿ, ಕಂದಾಯ ನಿರೀಕ್ಷಕ ಖಾದರ್, ಜೆಇ ವೆಂಕಟ ರಮಣಪ್ಪ, ಪಿಡಿಓ ರೂಪಾ ಶ್ರೀ ಕ್ಷೇತ್ರದ ಪಾರಪತ್ತೇದಾರ ಕಿರಣ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.