ಮನೆಯಲ್ಲಿ ಆಮೆ ಪ್ರತಿಮೆ ಇಡುವುದು ಶುಭವೋ..? ಅಶುಭವೋ...?
ಸಾವಿರಾರು ವರ್ಷಗಳ ಕಾಲ ಬದುಕಬಲ್ಲ ಆಮೆಗೆ ಪುರಾಣ ಮತ್ತು ವಾಸ್ತುವಿನಲ್ಲೂ ಮಹತ್ವ ಇದೆ. ಮನೆಯಲ್ಲಿ ಆಮೆಯನ್ನು ಇಡುವುದರಿಂದ ಕುಟುಂಬ ಸದಸ್ಯರಲ್ಲಿ ಪ್ರೀತಿಯ ಭಾವನೆ ಹೆಚ್ಚಾಗಿ, ಪ್ರಗತಿ ಸಾಧಿಸುತ್ತಾರೆ ಎಂಬ ನಂಬಿಕೆ ಇದೆ. ಈ ಆಮೆ ಪ್ರತಿಮೆಯನ್ನು ಮನೆಯಲ್ಲಿ ಇಡುವುದರಿಂದ ಹಣದ ಕೊರತೆ ಇರುವುದಿಲ್ಲ. ವಾಸ್ತುವಿನಲ್ಲಿ (vastu) ವಿಶೇಷ ಸ್ಥಾನಮಾನ ಹೊಂದಿರುವ ಈ ಆಮೆಯನ್ನು ಮನೆಯಲ್ಲಿ ತಂದಾಗ ಅದನ್ನು ಸರಿಯಾದ ದಿಕ್ಕಿನಲ್ಲಿ, ಸರಿಯಾದ ಕ್ರಮದಲ್ಲಿ ಇಟ್ಟರೆ ಮಾತ್ರ ಲಾಭ.