Vastu Tips: ನಿಮ್ಮ ಮನೆಯ ವಾಶ್ ರೂಮ್‌ನಲ್ಲಿರುವ ಈ ಬಣ್ಣದ ಬಕೆಟ್ ವಾಸ್ತುದೋಷಕ್ಕೆ ಕಾರಣವಾಗಬಹುದು ಎಚ್ಚರ
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿನ ಸ್ನಾನಗೃಹದ ದಿಕ್ಕು ಹಾಗೂ ಅಲ್ಲಿ ಬಳಸುವ ವಸ್ತುಗಳ ಬಣ್ಣವು ಮನೆಯ ಸಕಾರಾತ್ಮಕ-ನಕಾರಾತ್ಮಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಸ್ನಾನಗೃಹದಲ್ಲಿ ಗಾಢ ಬಣ್ಣದ, ವಿಶೇಷವಾಗಿ ಕೆಂಪು ಮತ್ತು ಕಪ್ಪು ಬಣ್ಣದ ಬಕೆಟ್ ಬಳಸುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
ವಾಶ್ ರೂಮ್ ವಾಸ್ತು -
ಬೆಂಗಳೂರು: ವಾಸ್ತು ಶಾಸ್ತ್ರದ(Vastu Shastra) ಪ್ರಕಾರ ಮನೆಯಲ್ಲಿರುವ(Home) ವಸ್ತುಗಳು ಮತ್ತು ಅವುಗಳ ಬಣ್ಣಗಳು ವ್ಯಕ್ತಿಯ ಜೀವನದ ಮೇಲೆ ಮಹತ್ವದ ಪ್ರಭಾವ ಬೀರುತ್ತವೆ. ಮನೆಯಲ್ಲಿನ ವಸ್ತುಗಳನ್ನು ಯಾವ ದಿಕ್ಕಿನಲ್ಲಿ ಇಡಲಾಗಿದೆ, ಅವುಗಳ ಬಣ್ಣ ಮತ್ತು ವಿನ್ಯಾಸ ಮನೆಯಲ್ಲಿ ಸಕಾರಾತ್ಮಕ(Positive) ಅಥವಾ ನಕಾರಾತ್ಮಕ ಶಕ್ತಿಯನ್ನು(Negative Energy) ಉಂಟುಮಾಡುತ್ತದೆ . ವಿಶೇಷವಾಗಿ ಮಲಗುವ ಕೋಣೆ, ಅಡುಗೆಮನೆ ಹಾಗೂ ಸ್ನಾನಗೃಹಗಳಲ್ಲಿ ವಾಸ್ತು ನಿಯಮಗಳನ್ನು(Vastu tips for bathroom) ಪಾಲಿಸುವುದು ಅಗತ್ಯವಾಗಿದೆ. ಸ್ನಾನಗೃಹದಲ್ಲಿ ತಪ್ಪಾದ ಬಣ್ಣದ ವಸ್ತುಗಳನ್ನು ಇಡುವುದರಿಂದ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗಿ, ಆರ್ಥಿಕ ಸಮಸ್ಯೆಗಳಿಗೂ ಕಾರಣವಾಗಬಹುದು.
ಸ್ನಾನಗೃಹದ ವಾಸ್ತು ಮಹತ್ವ
ವಾಸ್ತು ಪ್ರಕಾರ ಸ್ನಾನಗೃಹದ ದಿಕ್ಕು, ಗೋಡೆಗಳ ಬಣ್ಣ ಮತ್ತು ಅಲ್ಲಿ ಬಳಸುವ ವಸ್ತುಗಳ ಬಣ್ಣವೂ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಸಾಮಾನ್ಯವಾಗಿ ಉತ್ತರ ಅಥವಾ ವಾಯುವ್ಯ ದಿಕ್ಕು ಸ್ನಾನಗೃಹಕ್ಕೆ ಉತ್ತಮವೆಂದು ಪರಿಗಣಿಸಲಾಗಿದೆ. ಸ್ನಾನಗೃಹವು ಅಡುಗೆಮನೆಯ ಪಕ್ಕದಲ್ಲಿ ಅಥವಾ ಎದುರುಗಡೆ ಇರುವುದನ್ನು ತಪ್ಪಿಸಬೇಕು, ಇಲ್ಲವಾದರೆ ವಾಸ್ತು ದೋಷ ಉಂಟಾಗಿ ಮನೆಯ ಶಾಂತಿ ಹಾಗೂ ಸಮೃದ್ಧಿಗೆ ಅಡಚಣೆ ಉಂಟಾಗಬಹುದು. ಸ್ನಾನಗೃಹದ ಗೋಡೆಗಳಿಗೆ ತಿಳಿ ಬಣ್ಣಗಳನ್ನು ಬಳಸುವುದು ಉತ್ತಮ; ಗಾಢ ಬಣ್ಣಗಳನ್ನು ಬಳಸುವುದು ವಾಸ್ತು ಪ್ರಕಾರ ಅನುಕೂಲಕರವಲ್ಲ.
Vastu Tips: ಮನೆ ಗುಡಿಸುವುದಕ್ಕೆ ಮಾತ್ರವಲ್ಲ ಒರೆಸುವುದಕ್ಕೂ ಇದೆ ವಾಸ್ತು ನಿಯಮ! ಈ ಸಮಯದಲ್ಲಿ ನೆಲ ಒರೆಸಿದ್ರೆ ಅಪಾಯ ತಪ್ಪಿದ್ದಲ್ಲ
ವಾಸ್ತು ಪ್ರಕಾರ ವಾಶ್ ರೂಮ್ ಅಲ್ಲಿ ಯಾವ ಬಣ್ಣದ ಬಳಸುವುದು ತಪ್ಪು?
ವಾಸ್ತು ಶಾಸ್ತ್ರದ ಪ್ರಕಾರ ಸ್ನಾನಗೃಹದಲ್ಲಿ ಕೆಂಪು ಅಥವಾ ಕಪ್ಪು ಬಣ್ಣದ ಬಕೆಟ್ ಹಾಗೂ ಮಗ್ ಬಳಸುವುದು ಅಶುಭವೆಂದು ಹೇಳಲಾಗಿದೆ. ಕೆಂಪು ಬಣ್ಣವನ್ನು ಬೆಂಕಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಅದನ್ನು ನೀರಿಗೆ ಸಂಬಂಧಿಸಿದ ಸ್ಥಳವಾದ ಸ್ನಾನಗೃಹದಲ್ಲಿ ಬಳಸುವುದು ಸೂಕ್ತವಲ್ಲ. ಇಂತಹ ಬಣ್ಣಗಳನ್ನು ಬಳಸುವುದರಿಂದ ಹಣಕಾಸಿನ ನಷ್ಟ ಮತ್ತು ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂಬ ನಂಬಿಕೆ ಇದೆ. ಆದ್ದರಿಂದ ಕೆಂಪು ಅಥವಾ ಕಪ್ಪು ಬಣ್ಣದ ಬಕೆಟ್ ಬಳಸುತ್ತಿದ್ದರೆ, ಅದನ್ನು ಬದಲಿಸಿ ತಿಳಿ ಬಣ್ಣದ ಬಕೆಟ್ ಬಳಸುವುದು ಉತ್ತಮ.
ಯಾವ ಬಣ್ಣದ ಬಕೆಟ್ ಶುಭಕರ?
ವಾಸ್ತು ಸಲಹೆಗಾರರ ಪ್ರಕಾರ ಸ್ನಾನಗೃಹದಲ್ಲಿ ನೀಲಿ ಬಣ್ಣದ ಬಕೆಟ್ ಮತ್ತು ಮಗ್ ಇಡುವುದು ಅತ್ಯಂತ ಶುಭಕರ. ನೀಲಿ ಬಣ್ಣವು ನೀರಿನ ತತ್ತ್ವವನ್ನು ಸೂಚಿಸುವುದರಿಂದ ಇದು ವಾಸ್ತು ದೋಷಗಳನ್ನು ಕಡಿಮೆ ಮಾಡಿ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.
ನೀಲಿ ಬಣ್ಣದ ಬಕೆಟ್ ಬಳಸುವುದರಿಂದ ಆರ್ಥಿಕ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆಯೂ ಇದೆ. ಜೊತೆಗೆ, ಬಕೆಟ್ ಅನ್ನು ಸದಾ ನೀರಿನಿಂದ ತುಂಬಿಸಿಕೊಂಡಿರುವುದು ಉತ್ತಮ. ಖಾಲಿ ಬಕೆಟ್ ಇಡುವುದನ್ನು ವಾಸ್ತು ಪ್ರಕಾರ ತಪ್ಪಿಸಬೇಕು.
ಈ ರೀತಿಯಾಗಿ ವಾಸ್ತು ಸೂಚನೆಗಳನ್ನು ಅನುಸರಿಸಿದರೆ ಮನೆಯಲ್ಲಿ ಶಾಂತಿ, ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂಬ ವಿಶ್ವಾಸವಿದೆ.