Vastu Tips: ನಕಾರಾತ್ಮಕತೆಯನ್ನು ಆಹ್ವಾನಿಸದಿರಿ; ಉಡುಗೊರೆ ಕೊಡುವ ಮುನ್ನ ಯೋಚಿಸಿ
ಮದುವೆ, ಸೀಮಂತ, ಹುಟ್ಟಿದ ಹಬ್ಬ.. ಹೀಗೆ ಯಾವುದೇ ಶುಭಕಾರ್ಯಗಳಿರಲಿ ಉಡುಗೊರೆಗಳನ್ನು ಪ್ರೀತಿಪಾತ್ರರಿಗೆ ಕೊಡುವುದು ವಾಡಿಕೆ. ಕೆಲವರಿಗೆ ಏನು ಉಡುಗೊರೆ ಕೊಡುವುದು ಎನ್ನುವ ಅತಿಯಾದ ಚಿಂತೆ ಕಾಡಿದರೆ, ಇನ್ನು ಕೆಲವರಿಗೆ ಏನಾದರೂ ಕೊಟ್ಟರೆ ಸರಿ ಎನ್ನುವ ನಿರ್ಲಕ್ಷ್ಯದ ಧೋರಣೆಯೂ ಇರುತ್ತದೆ. ನಾವು ಕೊಡುವ ಉಡುಗೊರೆಯನ್ನು ತೆಗೆದುಕೊಳ್ಳುವವರಿಗೆ ಎಂದೂ ಕೆಟ್ಟದು ಆಗಬಾರದು ಎಂದಾದರೆ ಅದಕ್ಕಾಗಿ ಕೆಲವೊಂದು ಅಂಶಗಳನ್ನು ಗಮನದಲ್ಲಿರಿಸುವುದು ಮುಖ್ಯ ಎನ್ನುತ್ತದೆ ವಾಸ್ತು ನಿಯಮಗಳು.


ಬೆಂಗಳೂರು: ಮದುವೆ, ಸೀಮಂತ, ಹುಟ್ಟಿದ ಹಬ್ಬ.. ಹೀಗೆ ಯಾವುದೇ ಶುಭಕಾರ್ಯಗಳಿರಲಿ ಉಡುಗೊರೆಗಳನ್ನು (Gift) ಪ್ರೀತಿಪಾತ್ರರಿಗೆ ಕೊಡುವುದು ವಾಡಿಕೆ. ಕೆಲವರಿಗೆ ಏನು ಉಡುಗೊರೆ ಕೊಡುವುದು ಎನ್ನುವ ಅತಿಯಾದ ಚಿಂತೆ ಕಾಡಿದರೆ, ಇನ್ನು ಕೆಲವರಿಗೆ ಏನಾದರೂ ಕೊಟ್ಟರೆ ಸರಿ ಎನ್ನುವ ನಿರ್ಲಕ್ಷ್ಯದ ಧೋರಣೆಯೂ ಇರುತ್ತದೆ. ಸಾಮಾನ್ಯವಾಗಿ ಉಡುಗೊರೆಗಳನ್ನು ಕೊಡುವಾಗ ಅದನ್ನು ತೆಗೆದುಕೊಳ್ಳುವವರಿಗೆ ಶುಭವಾಗಬೇಕು ಎನ್ನುವ ಉದ್ದೇಶ ಮಾತ್ರ ಎಲ್ಲರಿಗೂ ಇರುತ್ತದೆ. ನಾವು ಕೊಡುವ ಉಡುಗೊರೆಯನ್ನು ತೆಗೆದುಕೊಳ್ಳುವವರಿಗೆ ಎಂದೂ ಕೆಟ್ಟದು ಆಗಬಾರದು ಎಂದಾದರೆ ಅದಕ್ಕಾಗಿ ಕೆಲವೊಂದು ಅಂಶಗಳನ್ನು ಗಮನದಲ್ಲಿರಿಸುವುದು ಮುಖ್ಯ ಎನ್ನುತ್ತದೆ ವಾಸ್ತು (Vastu tips) ನಿಯಮಗಳು.
ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳನ್ನು ಯಾವತ್ತೂ ಯಾರಿಗೂ ಉಡುಗೊರೆಯಾಗಿ ನೀಡಲೇಬಾರದು. ಸಣ್ಣದೋ, ದೊಡ್ಡದೋ ಉಡುಗೊರೆಗಳನ್ನು ಸ್ವೀಕರಿಸುವುದು ಎಲ್ಲರಿಗೂ ಇಷ್ಟವಾಗಿರುತ್ತದೆ. ಆದರೆ ಕೆಲವು ಉಡುಗೊರೆಗಳು ದುರದೃಷ್ಟ ಮತ್ತು ನಕಾರಾತ್ಮಕತೆಯನ್ನು ತರುತ್ತವೆ ಎಂಬುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಅದಕ್ಕಾಗಿಯೇ ವಾಸ್ತು ಶಾಸ್ತ್ರವು ಕೆಲವೊಂದು ವಸ್ತುಗಳನ್ನು ಯಾರಿಗೂ ಉಡುಗೊರೆಯಾಗಿ ನೀಡಬಾರದು ಎನ್ನುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಉಡುಗೊರೆ ನೀಡುವ ಕಲೆಯು ಪ್ರೀತಿ ಮತ್ತು ಮೆಚ್ಚುಗೆಯನ್ನು ತೋರಿಸುವುದು ಮಾತ್ರವಲ್ಲ ಅದನ್ನು ಸ್ವೀಕರಿಸುವವರ ಜೀವನದಲ್ಲಿ ಸಾಮರಸ್ಯ ಮತ್ತು ಶಕ್ತಿಯ ಸಮತೋಲನವನ್ನು ಸೃಷ್ಟಿಸುವುದು ಆಗಿದೆ ಎಂದು ನಂಬಲಾಗಿದೆ. ಕೆಲವು ಉಡುಗೊರೆಗಳು ಅದನ್ನು ಸ್ವೀಕರಿಸುವವರ ಮನೆಯಲ್ಲಿ ನಕಾರಾತ್ಮಕತೆ, ದುರದೃಷ್ಟ ಮತ್ತು ನಿಶ್ಚಲತೆಗೆ ಕಾರಣವಾಗಬಹುದು ಎನ್ನಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಯಾರಿಗೂ ಉಡುಗೊರೆಯಾಗಿ ನೀಡಬಾರದ ಕೆಲವು ವಸ್ತುಗಳ ಬಗ್ಗೆ ವಾಸ್ತು ಶಾಸ್ತ್ರ ತಜ್ಞರಾದ ಡಾ. ಆರತಿ ದಹಿಯಾ ಹೇಳಿರುವುದು ಹೀಗೆ..
ಕರವಸ್ತ್ರ
ಯಾರಿಗಾದರೂ ಕರವಸ್ತ್ರವನ್ನು ಉಡುಗೊರೆಯಾಗಿ ನೀಡಿದರೆ ಅದರಿಂದ ಆ ವ್ಯಕ್ತಿಯ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಬಹುದು. ಅದು ವ್ಯಕ್ತಿಯ ಮನಸ್ಸಿನಲ್ಲಿ ಬೇಸರಭಾವದ ಶಕ್ತಿಯನ್ನು ಉಂಟು ಮಾಡುತ್ತದೆ.

ಪಾದರಕ್ಷೆ
ಉಡುಗೊರೆಯಾಗಿ ಶೂ ಅಥವಾ ಚಪ್ಪಲಿಗಳನ್ನು ನೀಡುತ್ತಾರೆ. ಇಂತಹ ಉಡುಗೊರೆಯನ್ನು ನೀಡುವುದು ಕೂಡ ಸಂಬಂಧಗಳಿಗೆ ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ. ಈ ಉಡುಗೊರೆ ಸಂಬಂಧವನ್ನೇ ಮುರಿದು ಹಾಕುತ್ತದೆ.
ದೇವರು ವಿಗ್ರಹ
ಮನೆಯಲ್ಲಿ ದೇವರ ವಿಗ್ರಹಗಳಿದ್ದರೆ ಅದನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಒಂದು ವೇಳೆ ಇದು ಸಾಧ್ಯವಾಗದೇ ಇದ್ದರೆ ಇದರಿಂದ ನಕಾರಾತ್ಮಕತೇ ಉಂಟಾಗಬಹುದು. ಆದ್ದರಿಂದ ಅದನ್ನು ಉಡುಗೊರೆಯಾಗಿ ನೀಡುವ ಮೊದಲು ಅದನ್ನು ಚೆನ್ನಾಗಿ ಇಟ್ಟುಕೊಳ್ಳುವವರಿಗೆ ಮಾತ್ರ ನೀಡಬೇಕು. ಇಲ್ಲವಾದರೆ ಅದನ್ನು ಕೊಡದೇ ಇರುವುದು ಒಳ್ಳೆಯದು.

ಮಹಾಭಾರತ ಪುಸ್ತಕ
ಮಹಾಭಾರತವು ಒಂದು ಪೌರಾಣಿಕ ಪುಸ್ತಕವಾಗಿದೆ. ಅದನ್ನು ಯಾರಿಗೂ ಉಡುಗೊರೆಯಾಗಿ ನೀಡಬಾರದು. ಈ ಪಠ್ಯವನ್ನು ಯಾರಿಗಾದರೂ ಉಡುಗೊರೆಯಾಗಿ ನೀಡಿದರೆ ಅದು ನಿಮ್ಮ ಮತ್ತು ಆ ವ್ಯಕ್ತಿಯ ನಡುವಿನ ಸಂಬಂಧದಲ್ಲಿ ಬಿರುಕು ಉಂಟುಮಾಡಬಹುದು.
ಹರಿತವಾದ ವಸ್ತುಗಳು
ಚಾಕು, ಕತ್ತರಿ ಮೊದಲಾದ ಯಾವುದೇ ಹರಿತವಾದ ವಸ್ತುಗಳನ್ನು ಯಾರಿಗೂ ಉಡುಗೊರೆಯಾಗಿ ನೀಡಬಾರದು. ಇದರಿಂದ ಉಡುಗೊರೆಯನ್ನು ಸ್ವೀಕರಿಸುವವರು ಮತ್ತು ನಿಮ್ಮ ನಡುವೆ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಬಹುದು.
ಇದನ್ನೂ ಓದಿ: Vastu Tips: ಮನೆಗೆ ಬರುವ ನಕಾರಾತ್ಮಕ ಶಕ್ತಿಯನ್ನು ಮನೆ ಬಾಗಿಲಿನಲ್ಲೇ ತಡೆಯಿರಿ

ಕಪ್ಪು ಬಟ್ಟೆ
ಕಪ್ಪು ಬಟ್ಟೆಗಳ ಮೇಲಿನ ಪ್ರೀತಿ ಬಹುತೇಕ ಮಂದಿಗೆ ಇದೆ. ಇದನ್ನು ಯಾರೂ ನಿರಾಕರಿಸಲಾರರು. ಆದರೂ ಅವುಗಳನ್ನು ಉಡುಗೊರೆಯಾಗಿ ನೀಡಬಾರದು. ಕಪ್ಪು ಬಟ್ಟೆಗಳು ಹೆಚ್ಚಾಗಿ ನಕಾರಾತ್ಮಕತೆಗೆ ಸಂಬಂಧಿಸಿರುತ್ತದೆ. ಶುಭ ಸಂದರ್ಭದಲ್ಲಿ ಯಾರಿಗಾದರೂ ಬಟ್ಟೆಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರೆ ಅದು ಕಪ್ಪು ಬಣ್ಣದಲ್ಲಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಯಾಕೆಂದರೆ ಕಪ್ಪು ಶುಭ ಸಂಕೇತವೆಂದು ಪರಿಗಣಿಸಲಾಗುವುದಿಲ್ಲ.
ಗಾಜಿನ ವಸ್ತುಗಳು
ಗಾಜಿನ ವಸ್ತುಗಳು ಸಾಮಾನ್ಯವಾಗಿ ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ಹೀಗಾಗಿ ಗಾಜಿನ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಗುವುದಿಲ್ಲ.