Vastu Tips: ಮನೆಗೆ ಬರುವ ನಕಾರಾತ್ಮಕ ಶಕ್ತಿಯನ್ನು ಮನೆ ಬಾಗಿಲಿನಲ್ಲೇ ತಡೆಯಿರಿ
Vastu Tips: ನಿರಂತರ ಏನಾದರೊಂದು ಸಮಸ್ಯೆ ಬರುತ್ತಿದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದುಕೊಳ್ಳಬಹುದು. ಈ ನಕಾರಾತ್ಮಕ ಶಕ್ತಿಯನ್ನು ತಡೆಯಲು ಯಾವುದೋ ಪಂಡಿತರ ಬಳಿ ಹೋಗಬೇಕಿಲ್ಲ. ಅದಕ್ಕೆ ಪರಿಹಾರ ನಮ್ಮ ಅಡುಗೆ ಮನೆಯಲ್ಲೇ ಇದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಅಡುಗೆ ಮನೆಯಲ್ಲಿರುವ ಈ ಒಂದು ವಸ್ತುವನ್ನು ಬಳಸಿ ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ದೂರವಿಡಬಹುದು. ಆ ವಸ್ತು ಯಾವುದು, ಅದರಿಂದ ಏನು ಮಾಡಬಹುದು.. ಎಂಬುದನ್ನು ತಿಳಿದುಕೊಳ್ಳೋಣ.


ಬೆಂಗಳೂರು: ನಿರಂತರ ಏನಾದರೊಂದು ಸಮಸ್ಯೆ ಬರುತ್ತಿದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ (negative energy) ಇದೆ ಎಂದುಕೊಳ್ಳಬಹುದು. ಈ ನಕಾರಾತ್ಮಕ ಶಕ್ತಿಯನ್ನು ತಡೆಯಲು ಯಾವುದೋ ಪಂಡಿತರ ಬಳಿ ಹೋಗಬೇಕಿಲ್ಲ. ಅದಕ್ಕೆ ಪರಿಹಾರ ನಮ್ಮ ಅಡುಗೆ ಮನೆಯಲ್ಲೇ (Kitchen) ಇದೆ ಎನ್ನುತ್ತದೆ ವಾಸ್ತು ಶಾಸ್ತ್ರ (Vastu Tips). ಅಡುಗೆ ಮನೆಯಲ್ಲಿರುವ ಈ ಒಂದು ವಸ್ತುವನ್ನು ಬಳಸಿ ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ದೂರವಿಡಬಹುದು. ಆ ವಸ್ತು ಯಾವುದು, ಅದರಿಂದ ಏನು ಮಾಡಬಹುದು. ಎಂಬುದನ್ನು ತಿಳಿದುಕೊಳ್ಳೋಣ.
ಮನೆಯಲ್ಲಿ ಸಮೃದ್ಧಿಯನ್ನು ಕಾಪಾಡಿಕೊಳ್ಳಲು ಅನೇಕ ವಾಸ್ತು ಪರಿಹಾರಗಳಿವೆ. ಅವುಗಳಲ್ಲಿ ಪರಿಣಾಮಕಾರಿಯಾಗಬಹುದು ಎನ್ನುವ ಒಂದು ಪರಿಹಾರವೆಂದರೆ ಮನೆಯ ಮುಖ್ಯ ಬಾಗಿಲಿನಲ್ಲಿ ಉಪ್ಪನ್ನು ಇರಿಸುವುದು ಎನ್ನುತ್ತದೆ ವಾಸ್ತು. ಉಪ್ಪು ಆಹಾರದ ರುಚಿಯನ್ನು ಹೆಚ್ಚಿಸಲು ಮಾತ್ರವಲ್ಲ ಇದು ಮನೆಯ ಶಕ್ತಿ ಶುದ್ಧೀಕರಿಸುವ ಶಕ್ತಿಯಾಗಿದೆ.
ಮನೆಯ ಮುಖ್ಯ ದ್ವಾರವು ಧನಾತ್ಮಕ ಅಥವಾ ಋಣಾತ್ಮಕ ಶಕ್ತಿಯ ಪ್ರವೇಶಕ್ಕೆ ಇರುವ ಪ್ರಮುಖ ದಾರಿ. ಮನೆಯ ಮುಖ್ಯ ದ್ವಾರದಿಂದ ನಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾದರೆ ಅದು ಕುಟುಂಬದ ಶಾಂತಿ, ಆರ್ಥಿಕ ಸ್ಥಿತಿ, ಸಂತೋಷ ಮತ್ತು ಸಮೃದ್ಧಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಇದನ್ನು ತಡೆಗಟ್ಟಲು ಉಪ್ಪು ಹೆಚ್ಚು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಮನೆಯ ಮುಖ್ಯ ದ್ವಾರದಲ್ಲಿ ಅದನ್ನು ಸರಿಯಾಗಿ ಇರಿಸುವ ಮೂಲಕ ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯಬಹುದು. ಇದರಿಂದ ಮನೆಯೊಳಗಿರುವ ಸಕಾರಾತ್ಮಕ ಶಕ್ತಿ ಉಳಿಯುತ್ತದೆ. ಉಪ್ಪನ್ನು ಬಳಸಿ ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶಿಸುವುದನ್ನು ತಡೆಯುವುದು ಹೇಗೆ ಎಂಬುದನ್ನು ಜ್ಯೋತಿಷಿ ಪ್ರದುಮನ್ ಸೂರಿ ಅವರು ಹೇಳುವುದು ಹೀಗೆ..
ಮುಖ್ಯ ದ್ವಾರದಿಂದಲೇ ಸಮಸ್ಯೆ ಸೃಷ್ಟಿ
ವಾಸ್ತು ಶಾಸ್ತ್ರದ ಪ್ರಕಾರ ಮನೆಗೆ ಪ್ರವೇಶಿಸುವ ಶಕ್ತಿಯು ಮನೆಯವರ ಮೇಲೆ ಮೊದಲು ಪರಿಣಾಮ ಬೀರುತ್ತದೆ. ಮನೆಯ ಮುಖ್ಯ ದ್ವಾರವು ಮನೆ ಮಂದಿ ಮಾತ್ರವಲ್ಲ ಹೊರಗಿನವರು, ಇದರೊಂದಿಗೆ ಸಕಾರಾತ್ಮಕ, ನಕಾರಾತ್ಮಕ ಶಕ್ತಿಗಳು ಪ್ರವೇಶಿಸುವ ಸ್ಥಳವಾಗಿದೆ. ಈ ಶಕ್ತಿಯು ಸಕಾರಾತ್ಮಕವಾಗಿದ್ದರೆ ಮನೆಯಲ್ಲಿ ಸಂತೋಷ, ಸಮೃದ್ಧಿ, ಶಾಂತಿ ಮತ್ತು ಪ್ರಗತಿ ಉಳಿಯುತ್ತದೆ. ಒಂದು ವೇಳೆ ನಕಾರಾತ್ಮಕ ಶಕ್ತಿ ಪ್ರವೇಶಿಸಿದರೆ ಅದು ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಮುಖ್ಯವಾಗಿ ಕುಟುಂಬ ಸದಸ್ಯರಲ್ಲಿ ಭಿನ್ನಾಭಿಪ್ರಾಯ, ಮಾನಸಿಕ ಅಶಾಂತಿ ಉಂಟಾಗುತ್ತದೆ. ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಅನೇಕ ಬಾರಿ ಒಬ್ಬ ವ್ಯಕ್ತಿಯು ಕಷ್ಟಪಟ್ಟು ಕೆಲಸ ಮಾಡಿದರೂ ಸಂಪತ್ತನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ ಅಥವಾ ಅನಗತ್ಯ ಖರ್ಚುಗಳಲ್ಲಿ ಸಿಲುಕಿಕೊಳ್ಳುತ್ತಾನೆ. ಇದಲ್ಲದೆ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ.

ಏನು ಪರಿಹಾರ?
ವಾಸ್ತು ಶಾಸ್ತ್ರದಲ್ಲಿ ಉಪ್ಪನ್ನು ಪ್ರಬಲವಾದ ಶುದ್ಧೀಕರಣ ಅಂಶವೆಂದು ಪರಿಗಣಿಸಲಾಗಿದೆ. ಇದು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಇದು ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಈ ಕಾರಣಕ್ಕಾಗಿ ಪ್ರಾಚೀನ ಕಾಲದಿಂದಲೂ ಮನೆಯನ್ನು ಸ್ವಚ್ಛಗೊಳಿಸಲು ಉಪ್ಪು ನೀರನ್ನು ಬಳಸಲಾಗುತ್ತಿತ್ತು.
ಉಪ್ಪು ನೀರು
ಉಪ್ಪಿನಲ್ಲಿ ವಿಶೇಷವಾಗಿ ಕಲ್ಲು ಉಪ್ಪು ಮನೆಯ ಶಕ್ತಿಯನ್ನು ಸಮತೋಲನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಸರಿಯಾಗಿ ಬಳಸಿದರೆ ನಕಾರಾತ್ಮಕತೆಯನ್ನು ಮನೆಯಿಂದ ಹೊರಹಾಕಬಹುದು. ಮನೆಯ ಮುಖ್ಯ ಬಾಗಿಲಿನ ಹೊರಗೆ ಉಪ್ಪು ನೀರನ್ನು ಸಿಂಪಡಿಸಿದರೆ ಮನೆಗೆ ಯಾವುದೇ ನಕಾರಾತ್ಮಕ ಶಕ್ತಿಯು ಪ್ರವೇಶಿಸುವುದಿಲ್ಲ.
ಇದನ್ನೂ ಓದಿ: Vastu Tips: ಹಳೆಯ ಪೀಠೋಪಕರಣದಿಂದ ಬರಬಹುದು ಸಂಕಷ್ಟ
ಚಾಪೆ ಕೆಳಗೆ ಉಪ್ಪು
ಮುಖ್ಯ ಬಾಗಿಲಿನಲ್ಲಿ ಹಾಸುವ ಚಾಪೆಯ ಕೆಳಗೆ ಕಲ್ಲು ಉಪ್ಪನ್ನು ಇರಿಸಿ. ಇದರಿಂದಲೂ ಮನೆಗೆ ಪ್ರವೇಶಿಸುವ ನಕಾರಾತ್ಮಕ ಶಕ್ತಿಯನ್ನು ತಡೆಯಬಹುದು. ಇದಕ್ಕಾಗಿ ಒಂದು ಸಣ್ಣ ಚಿಟಿಕೆ ಕಲ್ಲು ಉಪ್ಪನ್ನು ತೆಗೆದುಕೊಂಡು ಅದನ್ನು ಒಂದು ಕಾಗದದಲ್ಲಿ ಹಾಕಿ ಕಟ್ಟಿ ಬಾಗಿಲ ಬಳಿ ಹಾಸಿರುವ ಚಾಪೆ ಅಡಿಯಲ್ಲಿ ಇರಿಸಿ. ನಕಾರಾತ್ಮಕ ಶಕ್ತಿ ಮನೆಗೆ ಪ್ರವೇಶಿಸಿದಾಗಲೆಲ್ಲಾ ಈ ಉಪ್ಪು ಶಕ್ತಿಯ ಸಮತೋಲನವನ್ನು ಸ್ಥಾಪಿಸುತ್ತದೆ ಮತ್ತು ನಕಾರಾತ್ಮಕ ಪ್ರಭಾವಗಳನ್ನು ದೂರವಿಡುತ್ತದೆ. ಈ ಉಪ್ಪುನ್ನು ಪ್ರತಿ 10- 15 ದಿನಗಳಿಗೊಮ್ಮೆ ಬದಲಾಯಿಸಬೇಕು. ಹಳೆಯ ಉಪ್ಪನ್ನು ಹರಿಯುವ ನೀರಿಗೆ ಹಾಕಬೇಕು.
ಉಪ್ಪು ಹೇಗೆ ಕೆಲಸ ಮಾಡುತ್ತದೆ?
ಶಕ್ತಿಯನ್ನು ಹೀರಿಕೊಳ್ಳುವ ಗುಣವನ್ನು ಉಪ್ಪು ಹೊಂದಿದೆ. ಇದು ದುಷ್ಟ ಕಣ್ಣುಗಳು, ನಕಾರಾತ್ಮಕತೆ ಮತ್ತು ದೋಷಗಳನ್ನು ಮನೆಗೆ ಪ್ರವೇಶಿಸುವುದನ್ನು ತಡೆಯುತ್ತದೆ.