Vastu Tips: ಮನೆಯೊಳಗೆ ಮಹಡಿ ಮೆಟ್ಟಿಲು ನಿರ್ಮಾಣ ಪಾಲಿಸಲೇಬೇಕು ವಾಸ್ತು ನಿಯಮ
ಮನೆಯೊಳಗಿರುವ ಮೆಟ್ಟಿಲಿಗೆ ಏನಿರುತ್ತೆ ವಾಸ್ತು ಎಂದು ನಿರ್ಲಕ್ಷಿಸಬೇಡಿ. ಈ ಮೆಟ್ಟಿಲುಗಳು ಮನೆ ಮಂದಿಯ ಭವಿಷ್ಯವನ್ನೇ ಬದಲಾಯಿಸಬಲ್ಲದು. ವಾಸ್ತು ಶಾಸ್ತ್ರದ ಪ್ರಕಾರ ಮನೆ ನಿರ್ಮಾಣದಲ್ಲಿ ಹೇಗೆ ಪ್ರತಿಯೊಂದು ಸಣ್ಣ ಸಣ್ಣ ವಿಷಯದ ಬಗ್ಗೆಯೂ ನಾವು ಕಾಳಜಿ ವಹಿಸುತ್ತೇವೆಯೋ ಹಾಗೆಯೇ ಮನೆಯೊಳಗೆ ಮೇಲಿನ ಮಹಡಿಗೆ ಹೋಗುವ ಮೆಟ್ಟಿಲು ನಿರ್ಮಾಣದಲ್ಲೂ ಕಾಳಜಿ ವಹಿಸಬೇಕಾಗುತ್ತದೆ.


ಬೆಂಗಳೂರು: ಮನೆಯಲ್ಲಿ ಸದಸ್ಯರ ಸಂಖ್ಯೆ ಕಡಿಮೆ ಇದ್ದರೂ ಮಕ್ಕಳು, ಮನೆ ಹಿರಿಯರು ಬೇರೆಬೇರೆ ಕೋಣೆಯಲ್ಲಿ ಇರುವುದು ವಾಡಿಕೆಯಾಗಿ ಬೆಳೆದಿದೆ. ಹೀಗಾಗಿ ಮನೆಯಲ್ಲಿರುವ ಐದಾರು ಮಂದಿಗೆ ತಲಾ ಒಂದೊಂದು ಕೋಣೆಯಾದರೂ ಇದ್ದೇ ಇರುತ್ತದೆ. ಮನೆ ಹಿರಿಯರೆಲ್ಲ ಕೆಳಗೆ ವಾಸವಾದರೆ ಮಕ್ಕಳಿಗಾಗಿ ಇರಲಿ ಎಂದು ಮೇಲೊಂದು ಮಹಡಿ ಮನೆ (Vastu for home) ಕಟ್ಟಿಸುತ್ತೇವೆ. ಹೀಗೆ ಮಹಡಿ ಮೇಲೆ ಮನೆ ಕಟ್ಟುವಾಗ ಮನೆಯೊಳಗಿಂದ ಮೆಟ್ಟಿಲುಗಳನ್ನು (Vastu for stairs) ಇಡಲಾಗುತ್ತದೆ. ಆದರೆ ಇದು ಸರಿಯೇ? ಈ ಬಗ್ಗೆ ವಾಸ್ತು (Vastu Tips) ಏನು ಹೇಳುತ್ತದೆ ಗೊತ್ತೆ?
ಮನೆಯೊಳಗಿರುವ ಮೆಟ್ಟಿಲಿಗೆ ಏನಿರುತ್ತೆ ವಾಸ್ತು ಎಂದು ನಿರ್ಲಕ್ಷಿಸಬೇಡಿ. ಈ ಮೆಟ್ಟಿಲುಗಳು ಮನೆ ಮಂದಿಯ ಭವಿಷ್ಯವನ್ನೇ ಬದಲಾಯಿಸಬಲ್ಲದು. ವಾಸ್ತು ಶಾಸ್ತ್ರದ ಪ್ರಕಾರ ಮನೆ ನಿರ್ಮಾಣದಲ್ಲಿ ಹೇಗೆ ಪ್ರತಿಯೊಂದು ಸಣ್ಣ ಸಣ್ಣ ವಿಷಯದ ಬಗ್ಗೆಯೂ ನಾವು ಕಾಳಜಿ ವಹಿಸುತ್ತೇವೆಯೋ ಹಾಗೆಯೇ ಮನೆಯೊಳಗೆ ಮೇಲಿನ ಮಹಡಿಗೆ ಹೋಗುವ ಮೆಟ್ಟಿಲು ನಿರ್ಮಾಣದಲ್ಲೂ ಕಾಳಜಿ ವಹಿಸಬೇಕಾಗುತ್ತದೆ.
ಮೆಟ್ಟಿಲುಗಳು ಮನೆಯ ಪ್ರಮುಖ ಭಾಗವಾಗಿದ್ದು ಅವುಗಳ ನಿರ್ಮಾಣದಲ್ಲಿ ವಾಸ್ತು ನಿಯಮಗಳನ್ನು ಪಾಲಿಸುವುದು ಬಹಳ ಅಗತ್ಯವಾಗಿದೆ. ಮೇಲಿನ ಮಹಡಿಗೆ ಹೋಗುವ ಮೆಟ್ಟಿಲುಗಳ ನಿರ್ಮಾಣದಲ್ಲಿ ವಾಸ್ತು ತತ್ತ್ವಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಉಳಿಯುತ್ತದೆ ಮತ್ತು ನಕಾರಾತ್ಮಕ ಶಕ್ತಿ ದೂರವಾಗುವುದು.

ವಾಸ್ತು ನಿಯಮಗಳ ಪ್ರಕಾರ ಮೆಟ್ಟಿಲುಗಳನ್ನು ನಿರ್ಮಿಸದಿದ್ದರೆ ಅದು ಮನೆಯಲ್ಲಿ ಅನೇಕ ರೀತಿಯ ವಾಸ್ತು ದೋಷಗಳಿಗೆ ಕಾರಣವಾಗಬಹುದು. ಇದರಿಂದ ಮನೆ ಮಂದಿಯ ಆರೋಗ್ಯ, ಸಂಪತ್ತು ಮತ್ತು ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞ ಪಂಡಿತ್ ಅರವಿಂದ್ ತ್ರಿಪಾಠಿ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯೊಳಗೆ ಮೆಟ್ಟಿಲುಗಳನ್ನು ನಿರ್ಮಿಸುವುದನ್ನು ಶುಭವಲ್ಲ. ಮನೆಯೊಳಗೆ ಮೆಟ್ಟಿಲುಗಳನ್ನು ನಿರ್ಮಿಸುವುದರಿಂದ ಅಶುಭ ಪರಿಣಾಮಗಳು ಉಂಟಾಗುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಕಡಿಮೆಯಾಗಲು ಪ್ರಾರಂಭಿಸುತ್ತದೆ ಎನ್ನಲಾಗುತ್ತದೆ. ಅಲ್ಲದೇ ಇದು ಮನೆಯ ವಾಸ್ತುವಿನ ಮೇಲೂ ಪರಿಣಾಮ ಬೀರುತ್ತದೆ. ಆದರೂ ವಾಸ್ತು ಶಾಸ್ತ್ರವು ಮನೆಯೊಳಗೇ ಮೆಟ್ಟಿಲುಗಳನ್ನು ನಿರ್ಮಿಸಲು ಕೆಲವು ನಿಯಮಗಳನ್ನು ಹೇಳಿದೆ. ಅವುಗಳನ್ನು ಅನುಸರಿಸುವುದರಿಂದ ಮನೆಯ ವಾಸ್ತು ಮತ್ತು ಶಕ್ತಿಯ ಸಮತೋಲನ ಮಾಡಿಕೊಳ್ಳಬಹುದು.

ಮನೆಯ ಒಳಗೆ ಮಹಡಿಗೆ ಹೋಗುವ ಮೆಟ್ಟಿಲುಗಳನ್ನು ನಿರ್ಮಿಸುವುದಿದ್ದರೆ ಅದರ ದಿಕ್ಕು ಮತ್ತು ವಿನ್ಯಾಸದ ಬಗ್ಗೆ ಕಾಳಜಿ ವಹಿಸಲೇಬೇಕು ಎನ್ನುತ್ತಾರೆ ವಾಸ್ತು ತಜ್ಞರು.
ಮನೆಯೊಳಗೆ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ಮೆಟ್ಟಿಲುಗಳನ್ನು ನಿರ್ಮಿಸುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕುಗಳು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ.
ಇದನ್ನೂ ಓದಿ: Vastu Tips: ಮನೆಗೆ ನಕಾರಾತ್ಮಕತೆಯನ್ನು ಆಹ್ವಾನಿಸುತ್ತವೆ ಈ ಸಸ್ಯಗಳು
ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಮೆಟ್ಟಿಲುಗಳನ್ನು ನಿರ್ಮಿಸದಿರುವುದು ಉತ್ತಮ. ಇದು ನಕಾರಾತ್ಮಕ ಶಕ್ತಿಯ ಪ್ರವೇಶಕ್ಕೆ ಕಾರಣವಾಗಬಹುದು ಮತ್ತು ಕುಟುಂಬದಲ್ಲಿ ಆರ್ಥಿಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ.
ಮನೆಯ ಮುಖ್ಯ ದ್ವಾರದ ಮುಂದೆ ಮೆಟ್ಟಿಲುಗಳನ್ನು ಯಾವತ್ತೂ ನಿರ್ಮಿಸಬಾರದು. ಯಾಕೆಂದರೆ ಇದು ಸಕಾರಾತ್ಮಕ ಶಕ್ತಿಯ ಹರಿವನ್ನು ನಿರ್ಬಂಧಿಸುತ್ತದೆ ಮತ್ತು ಮನೆಯಲ್ಲಿ ಸಮೃದ್ಧಿ ಕಡಿಮೆಯಾಗುತ್ತದೆ.
ಮನೆಯೊಳಗೆ ನಿರ್ಮಿಸುವ ಮೆಟ್ಟಿಲುಗಳ ಗಾತ್ರ ಸರಿಯಾಗಿರಬೇಕು. ತುಂಬಾ ಅಗಲ ಅಥವಾ ಕಿರಿದಾದ ಮೆಟ್ಟಿಲುಗಳನ್ನು ಮಾಡಬಾರದು.
ಮೆಟ್ಟಿಲುಗಳ ನಡುವೆ ಯಾವುದೇ ಖಾಲಿ ಜಾಗ ಉಳಿದಿದ್ದರೆ ಅದು ನಕಾರಾತ್ಮಕ ಶಕ್ತಿ ಮನೆಗೆ ಪ್ರವೇಶಿಸಲು ಕಾರಣವಾಗಬಹುದು.
ಮೆಟ್ಟಿಲುಗಳ ಕೆಳಗೆ ಯಾವುದೇ ವಸ್ತುಗಳನ್ನು ಇಡಬಾರದು. ಇದು ನಕಾರಾತ್ಮಕ ಶಕ್ತಿಯನ್ನು ಉಂಟುಮಾಡಬಹುದು ಮತ್ತು ಮನೆಯಲ್ಲಿ ಸಮಸ್ಯೆಗಳು ಉದ್ಭವಿಸಬಹುದು.