ಬೆಂಗಳೂರು: ಜೀವನದಲ್ಲಿ ಅಭಿವೃದ್ಧಿ ಹೊಂದಿ, ಸಾಧನೆಯ ಉತ್ತುಂಗಕ್ಕೆ ಏರಬೇಕು ಎಂಬುದು ಪ್ರತಿಯೋರ್ವರ ಆಸೆಯಾಗಿರುತ್ತದೆ. ಇದರೊಂದಿಗೆ ಬದುಕಿನ ಪ್ರತಿಯೊಂದು ಹಂತದಲ್ಲಿಯೂ ಏಳಿಗೆ ಹೊಂದಿ ಉತ್ತಮ ಆರೋಗ್ಯವನ್ನು ಪಡೆಯಲು ಬಯಸುತ್ತಾರೆ. ಆದರೆ ಕೆಲವೊಮ್ಮೆ, ನಮ್ಮ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ನಾವು ದುಃಖ ಮತ್ತು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಇದಕ್ಕೆ ಮನೆಯ ವಾಸ್ತು ಕಾರಣವೂ ಆಗಬಹುದು. ವಾಸ್ತು ಶಾಸ್ತ್ರದ(Vastu Shastra) ಪ್ರಕಾರ, ಮನೆಯಲ್ಲಿನ ಕೆಲ ಕೋಣೆಗಳು ನಿರ್ಮಿಸುವುದರಿಂದ ನೀವು ಲಾಭ ಪಡೆಯಬಹುದು. ಮನೆಯಲ್ಲಿ ಮತ್ತು ನಿಮ್ಮ ಜೀವನದಲ್ಲಿ ಧನಾತ್ಮಕತೆಯನ್ನು ತರಲು ವಾಸ್ತು ಶಾಸ್ತ್ರವು ಅತ್ಯಂತ ಮುಖ್ಯವಾಗಿದೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಗಾಗಿ ವಾಸ್ತು ಸಲಹೆಗಳನ್ನು ಅಳವಡಿಸಿಕೊಳ್ಳಬೇಕು. ಅಲ್ಲದೇ ವಾಸ್ತು ಸರಿ ಇದ್ದರೆ ಮನೆಯ ಎಲ್ಲ ಸದಸ್ಯರೂ ಆರೋಗ್ಯವಂತರಾಗಿ, ಸಂತೋಷವಾಗಿ ಹಾಗೂ ಆರ್ಥಿಕವಾಗಿ ಸದೃಢವಾಗಿರುತ್ತಾರೆ.
ಇದಕ್ಕೆ ಮಲಗುವ ಕೋಣೆಯೂ ಹೊರತಾಗಿಲ್ಲ, ಇಡೀ ದಿನವೆಲ್ಲ ದೇಹವನ್ನು ದಂಡಿಸಿ, ದುಡಿದು ಸಾಕಾಗಿರುವ ನಮ್ಮನ್ನು, ಹಾಗೇ ನಮ್ಮ ಮನಸ್ಸನ್ನು ತಿಳಿಗೊಳಿಸುವುದು ರಾತ್ರಿಯ ಸುಖ ನಿದ್ದೆ. ಅಂತಹ ನೆಮ್ಮದಿಯನ್ನು ತಂದುಕೊಡುವ ಬೆಡ್ ರೂಂಗೂ ಕೆಲ ವಾಸ್ತು ನಿಯಮಗಳಿದ್ದು, ನಿಮ್ಮ ಜೀವನದಲ್ಲಿ ಧನಾತ್ಮಕತೆಯನ್ನು ತರಲು ಬೆಡ್ ರೂಂ ನ ವಾಸ್ತು ಶಾಸ್ತ್ರವು ಅತ್ಯಂತ ಮುಖ್ಯವಾಗಿದೆ.
ಹಾಗಾಗಿ ವಾಸ್ತು ಪ್ರಕಾರ, ಮನೆಯ ಬೆಡ್ ರೂಮ್ ಹೇಗಿರಬೇಕು? ಯಾವ ದಿಕ್ಕಿನಲ್ಲಿ ಬೆಡ್ ರೂಂ ಇದ್ದರೆ ಒಳ್ಳೆಯದು..? ಈ ಬಗ್ಗೆ ವಾಸ್ತುಶಾಸ್ತ್ರದಲ್ಲಿ ಒಂದಿಷ್ಟು ನಿಯಮಗಳಿವೆ. ಈ ನಿಯಮಗಳ ಪ್ರಕಾರವೇ ಬೆಡ್ ರೂಮ್ ಇದ್ದರೆ ಸಂಸಾರದಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸಂಪತ್ತು ವೃದ್ಧಿಯಾಗುತ್ತದೆ ಎನ್ನುತ್ತದೆ ವಾಸ್ತುಶಾಸ್ತ್ರ. ಹಾಗಾದ್ರೆ ಬೆಡ್ ರೂಮ್ ಬಗ್ಗೆ ವಾಸ್ತುಶಾಸ್ತ್ರ ಏನ್ ಹೇಳುತ್ತೆ? ಎಂಬುದರ ಮಾಹಿತಿ ಇಲ್ಲಿದೆ.
Vastu Tips: ವಾಸ್ತು ಪ್ರಕಾರ ತಿಜೋರಿ ಅಥವಾ ಬೀರುವನ್ನು ನಿಮ್ಮ ಮನೆಯ ಯಾವ ದಿಕ್ಕಿನಲ್ಲಿರಿಸಬೇಕು?
ಈ ದಿಕ್ಕಿನಲ್ಲಿರಲಿ
ಬೆಡ್‌ರೂಂ ಮನೆಯ ನೈಋತ್ಯ ದಿಕ್ಕಿನಲ್ಲಿದ್ದರೆ ಆರೋಗ್ಯ ಹಾಗೂ ಸಂಪತ್ತು ವೃದ್ಧಿಯಾಗುತ್ತದೆ ಎನ್ನಲಾಗುತ್ತದೆ. ಹಾಗೂ ಮನೆಯ ಯಜಮಾನನೂ ದೀರ್ಘಾಯುಷಿಯಾಗುತ್ತಾನೆ. ಆದರೆ ಬೆಡ್‌ರೂಂ ಈಶಾನ್ಯ ಹಾಗೂ ಆಗ್ನೇಯ ದಿಕ್ಕಿನಲ್ಲಿರಬಾರದು. ಆಗ್ನೇಯ ದಿಕ್ಕಿನಲ್ಲಿ ಬೆಡ್‌ರೂಂ ಇದ್ದರೆ ದಂಪತಿಗಳ ಮಧ್ಯೆ ಜಗಳಗಳು ಹೆಚ್ಚಾಗುತ್ತವೆ ಎನ್ನಲಾಗುತ್ತದೆ.
ಟಿವಿ, ಕಂಪ್ಯೂಟರ್
ಟಿವಿ, ಕಂಪ್ಯೂಟರ್ ಮತ್ತು ಫೋನ್‌ನಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ಬೆಡ್ ರೂಂ ಅಲ್ಲಿ ಹಿಡುವುದು ನಿಷಿದ್ಧವಾಗಿದ್ದು, ಇಂತಹ ವಿದ್ಯುತ್ ವಸ್ತುಗಳನ್ನು ರೂಂ ಅಲ್ಲಿ ಹಿಡಿವುದರಿಂದ ನಿದ್ರೆಯನ್ನು ಅಡ್ಡಿಪಡಿಸುತ್ತದೆ ಮತ್ತು ನೋವು ಮತ್ತು ಅಸ್ವಸ್ಥತೆಯನ್ನು ಉಂಟುಮಾಡುತ್ತದೆ.
ಕನ್ನಡಿಗಳು
ಮಲಗುವ ಕೋಣೆಯಲ್ಲಿ ಕನ್ನಡಿಗಳನ್ನು ಇಡುವುದನ್ನು ಬಾಹಿರವಾಗಿದ್ದು, ಬೆಡ್ ರೂಂ ಅಲ್ಲಿ ಕನ್ನಡಿ ಹಿಡುವುದರಿಂದ ಋಣಾತ್ಮಕ ಶಕ್ತಿ ಹೆಚ್ಚಾಗುತ್ತದೆ.
ಯಾವ ಬಣ್ಣ ಒಳ್ಳೆಯದು
ಬೆಡ್ ರೂಂ ನ ಗೋಡೆಗೆ ಹಸಿರು, ನೀಲಿ ಅಥವಾ ಸ್ವಲ್ಪ ಬಿಳಿ ಬಣ್ಣ ಹಚ್ಚುವುದರಿಂದ ನಕಾರಾತ್ಮಕ ಶಕ್ತಿಯನ್ನು ನಿವಾರಿಸಿ ಪಾಸಿಟಿವ್ ಎನರ್ಜಿಯನ್ನು ತುಂಬುತ್ತದೆ. ಇನ್ನು ಇದರೊಂದಿಗೆ ಪಿಂಕ್, ರೋಸ್, ಹಸಿರು, ಹಳದಿ ಈ ರೀತಿಯ ಬಣ್ಣ ನೋಡಲು ಆಕರ್ಷಕವಾಗಿ ಕಾಣುವುದರ ಜೊತೆಗೆ ಶಾಂತಿಯನ್ನು ತರುತ್ತದೆ.