Vastu Tips: ವಾಸ್ತು ಪ್ರಕಾರ ನಿಮ್ಮ ಮನೆಯ ಅಡುಗೆ ಮನೆಗೆ ಯಾವ ಬಣ್ಣ ಬೆಸ್ಟ್?; ಇಲ್ಲಿದೆ ಮಾಹಿತಿ
Vastu Tips for Kitchen: ಮನೆಯಲ್ಲಿರುವ ಪ್ರತಿಯೊಂದು ಕೋಣೆಗೂ ವಾಸ್ತು ಪ್ರಕಾರ ಬೇರೆ ಬೇರೆ ಬಣ್ಣಗಳಿವೆ. ಹಾಗಾದರೆ, ವಾಸ್ತು ಪ್ರಕಾರವಾಗಿ ಅಡುಗೆ ಮನೆಗೆ ಯಾವ ರೀತಿಯ ಬಣ್ಣ ಸೂಕ್ತ? ಯಾವ ಬಣ್ಣವನ್ನು ಹಚ್ಚಬಾರದು..? ಎಂಬುದನ್ನು ವಾಸ್ತು ಶಾಸ್ತ್ರದಲ್ಲಿ ವಿವರಿಸಲಾಗಿದ್ದು, ಆ ಕುರಿತಾದ ಮಾಹಿತಿ ಇಲ್ಲಿದೆ...
ಸಾಂದರ್ಭಿಕ ಚಿತ್ರ -
ಬೆಂಗಳೂರು: ವಾಸ್ತು ಶಾಸ್ತ್ರದಲ್ಲಿ(Vastu Shastra) ಮನೆಯ ಪ್ರತಿಯೊಂದು ಕೋಣೆಗಳೂ ವಾಸ್ತು ನಿಯಮದ ಪ್ರಕಾರ ಇರಬೇಕು, ಇದಕ್ಕೆ ಅಡುಗೆ ಕೋಣೆಯೂ ಹೊರತಾಗಿಲ್ಲ. ಆರೋಗ್ಯದಲ್ಲಿ ಆಹಾರ ಪ್ರಮುಖ ಪಾತ್ರವಹಿಸಿದಂತೆ ಅಡುಗೆ ಮನೆಯ ವಾಸ್ತುವೂ(Vastu Tips) ನಮ್ಮ ಆರೋಗ್ಯ ಹಾಗೂ ಮನೆಯ ಸಮೃದ್ಧಿಗೆ ಪೂರಕವಾಗಿರಬೇಕು. ಪಂಚಭೂತಗಳು ನಮ್ಮ ಜೀವನದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ, ಅದರಂತೆ ಅಡುಗೆ ಮನೆಯಲ್ಲಿ ಪಂಚಭೂತಗಳಿಗೆ ಮಹತ್ವವಾದ ಸ್ಥಾನವನ್ನು ನೀಡಬೇಕಾಗುತ್ತದೆ. ಹಾಗೇ ವಾಸ್ತು ಪ್ರಕಾರ, ಬಣ್ಣವು ಮನೆಯ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಧನಾತ್ಮಕ ಶಕ್ತಿ(Positive Energy) ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ ಅನ್ನುವ ನಂಬಿಕೆ ಇದ್ದು, ಮನೆಯಲ್ಲಿ ಸುಖ, ಶಾಂತಿ ಮತ್ತು ಸಾಮರಸ್ಯದ ಬದುಕಿನ ಮೇಲೆ ವಾಸ್ತುವು ಬಹಳಷ್ಟು ಪ್ರಭಾವ ಬೀರುತ್ತದೆ.
ವಾಸ್ತು ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ರೂಮಿಗೂ ಬೇರೆ ಬೇರೆ ಬಣ್ಣಗಳನ್ನು ಮೀಸಲಿರಿಸಲಾಗಿದ್ದು, ಆ ಬಣ್ಣಗಳಲ್ಲಿ ಪೇಂಟಿಂಗ್ ಮಾಡಿಸಿದರೆ ಮನೆಯಲ್ಲಿ ಅಭಿವೃದ್ಧಿ ಕಾಣುತ್ತದೆ ಎಂಬುದು ನಂಬಿಕೆ. ಹಾಗೇ ಮನೆಯ ಗೋಡೆಗಳ(Colour) ಬಣ್ಣ ಎಷ್ಟು ಮುಖ್ಯವೋ ಅಡುಗೆ ಮನೆಯ ಬಣ್ಣವೂ ಅಷ್ಟೇ ಮುಖ್ಯ ಅಗುತ್ತದೆ. ಹಾಗಾಗಿ ನಿಮ್ಮ ಮನೆಯಲ್ಲಿ ಸಮೃದ್ಧಿ ಮತ್ತು ಸಂತೋಷ ಹೆಚ್ಚಿಸಲು, ದುಡ್ಡು ಹರಿದು ಬರಲು, ವಾಸ್ತು ಪ್ರಕಾರ ನಿಮ್ಮ ಮನೆಯ ಕಿಚನ್ ಯಾವ ಬಣ್ಣದಲ್ಲಿರಬೇಕು ಎಂಬುದನ್ನು ಈ ಇಲ್ಲಿ ತಿಳಿದುಕೊಳ್ಳಿ.
ಅಡುಗೆ ಮನಗೆ ಯಾವ ಬಣ್ಣ ಸೂಕ್ತ?
ಮನೆಯಲ್ಲಿ ಹೆಂಗಳೆಯರು ಅತೀ ಹೆಚ್ಚು ಕಾಲ ಕಳೆಯುವ ಜಾಗ ಎಂದರೆ ಅದು ಅಡುಗೆಮನೆ. ಅಲ್ಲದೇ ಕುಟುಂಬದ ಸದಸ್ಯರ ಆರೋಗ್ಯವೂ ಅಡುಗೆಯ ಮನೆ ಮೇಲೆ ಅವಲಂಬಿತವಾಗಿರುತ್ತದೆ ಎಂದರೆ ತಪ್ಪಾಗಲ್ಲ.
ಮಹಿಳೆಯರು ತಮ್ಮ ದಿನದ ಬಹುಕಾಲ ಕಳೆಯುವುದು ಅಡುಗೆ ಮನೆಯಲ್ಲೇ. ಹೀಗಾಗಿ, ಅಡುಗೆಮನೆಯನ್ನು ಅವರ ಅಭಿರುಚಿಗೆ ತಕ್ಕಂತೆ ನಿರ್ಮಿಸಿಕೊಳ್ಳುವುದು ಒಳ್ಳೆಯದು. ಅಡುಗೆಮನೆಯಲ್ಲಿ ಸ್ಟೌವ್ ಹೊತ್ತಿಸುವುದರಿಂದ ಅಗ್ನಿ ದೇವನಿಗೆ ಪ್ರಿಯವಾದ ಕೇಸರಿ, ಹಳದಿ, ತಿಳಿಗೆಂಪು ಬಣ್ಣವನ್ನು ಬಳಿಸುವುದು ಉತ್ತಮ. ಈ ಬಣ್ಣಗಳು ಅಡುಗೆ ಮನೆ ಶುಭ್ರವಾಗಿ ಕಾಣುವಂತೆ ಮಾಡುತ್ತದೆ. ಹಾಟ್ ಚಿಲ್ಲಿ ಅಥವಾ ಆರೇಂಜ್ ಬಣ್ಣವನ್ನೂ ಆಯ್ಕೆ ಮಾಡಿಕೊಳ್ಳಬಹುದು.
ಈ ಸುದ್ದಿಯನ್ನು ಓದಿ: Astro Tips: ಬುಧವಾರ ಈ ಮಂತ್ರ ಪಠಿಸಿದರೆ ನಿಮ್ಮಾಸೆಗಳೆಲ್ಲವೂ ಈಡೇರುತ್ತದೆ
ಈ ಬಣ್ಣಗಳು ಬೇಡ
ವಾಸ್ತು ಶಾಸ್ತ್ರದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಿಸುವ ಬಣ್ಣಗಳು ಕುಟುಂಬದಲ್ಲಿ ಕಲಹಕ್ಕೆ ಕಾರಣವಾಗುವುದರಿಂದ ಅಂತಹ ಬಣ್ಣಗಳಿಂದ ದೂರವಿರಲು ಸಲಹೆ ನೀಡಲಾಗುತ್ತದೆ. ಅದರ ಪ್ರಕಾರ ಕಪ್ಪು, ಗಾಢ ಕಂದು ಅಥವಾ ಕೆಂಪು ಬಣ್ಣಗಳು ಅಶುಭ ಎಂದು ಪರಿಗಣಿಸಲಾಗಿದೆ. ಏಕೆಂದರೆ ಇವು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇವುಗಳ ಬದಲಿಗೆ ಸಕಾರಾತ್ಮಕ ಶಕ್ತಿ ಆಕರ್ಷಿಸುವ ತಿಳಿ ಹಾಗೂ ಪ್ರಕಾಶಮಾನವಾದ ಬಣ್ಣಗಳನ್ನು ಆಯ್ದುಕೊಳ್ಳಬೇಕೆಂದು ವಾಸ್ತು ಹೇಳುತ್ತದೆ. ಅಡುಗೆ ಮನೆಯ ಗೋಡೆಗಳಿಗೆ ಕಪ್ಪು, ಕಡುಗೆಂಪು, ಬೂದು ಬಣ್ಣ ಒಳ್ಳೆಯದಲ್ಲ.
ಇನ್ನು ಅಡುಗೆ ಮನೆಯಲ್ಲಿ ಔಷಧಿ ಬಾಟಲ್ ಗಳನ್ನು ಇಡಲೇಬಾರದು. ಎಲ್ಲಿ ಅಡುಗೆ ಮಾಡುವ ಜಾಗದಲ್ಲಿ ಔಷಧಿ ಇರುತ್ತದೋ ಅಲ್ಲಿ ರೋಗ ಬಾಧೆ ಜಾಸ್ತಿಯಾಗುತ್ತದೆ