ಬೆಂಗಳೂರು: ಮನೆಗಳಲ್ಲಿ ನಕಾರಾತ್ಮಕ ಶಕ್ತಿಯನ್ನು(Negative Energy) ಕಡಿಮೆ ಮಾಡುವುದು ಮತ್ತು ಸಕಾರಾತ್ಮಕ ಶಕ್ತಿಯ(Positive Energy) ಹರಿವನ್ನು ಹೆಚ್ಚಿಸುವುದು ವಾಸ್ತುವಿನ(Vastu) ಮೂಲ ತತ್ವ. ಆದರೆ ಮನೆಯಲ್ಲಿರುವ ಕೆಲವು ಸಾಮಾನ್ಯ ವಸ್ತುಗಳ ಸಹಾಯದಿಂದವೂ ವಾಸ್ತು ದೋಷವನ್ನು ನಿವಾರಿಸಬಹುದು, ಸರಿಪಡಿಸಬಹುದು ಎಂದರೆ ನೀವು ನಂಬುತ್ತೀರಾ?... ಹೌದು ಅಡುಗೆ ಮನೆಯ ಹಾಗೂ ಅಡುಗೆಯ ಜೀವಾಳವಾಗಿರುವ ಉಪ್ಪು(Salt) ನಿಮ್ಮ ಮನೆಯ ವಾಸ್ತು ದೋಷವನ್ನು(Vastu Dosha) ನಿವಾರಿಸಲಿದ್ದು, ಮನೆಯಲ್ಲಿರುವ ದುಷ್ಟ ಶಕ್ತಿಯನ್ನು ನಿವಾರಿಸಿ ಸಕಾರಾತ್ಮಕ ಶಕ್ತಿಯ ವಾತಾವಾರಣವನ್ನು ನಿರ್ಮಾಣ ಮಾಡುತ್ತದೆ. ಅಡುಗೆಯ ವಿಚಾರದಲ್ಲಿ ಅತೀ ಹೆಚ್ಚು ಪ್ರಾಬಲ್ಯ ಹೊಂದಿರುವ ಉಪ್ಪು ವಾಸ್ತು ಶಾಸ್ತ್ರ(Vastu Shasthra)ದಲ್ಲಿಯೂ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು, ಉಪ್ಪನ್ನು ರಾಹುವಿನ ವಸ್ತು ಎಂದು ಪರಿಗಣಿಸಲಾಗುತ್ತದೆ. ಹಾಗಿದ್ದರೆ ಬನ್ನಿ ಉಪ್ಪನ್ನು ಹೇಗೆ ಬಳಿಸಿದ್ದರೆ ವಾಸ್ತು ದೋಷ ನಿವಾರಣೆಯಾಗುತ್ತದೆ..? ಈ ಬಗ್ಗೆ ವಾಸ್ತು ಶಾಸ್ತ್ರ ಏನೇಳುತ್ತದೆ..? ಎಂಬುದನ್ನು ತಿಳಿಯೋಣ
ಮನೆಯಲ್ಲಿ ಹಣ ಹಾಗೂ ಶಾಂತಿ ಹೆಚ್ಚಿಸಲು
ಸ್ವಲ್ಪ ಉಪ್ಪು ಹಾಗೂ 4–5 ಲವಂಗಗಳನ್ನು ಗಾಜಿನ ಬಟ್ಟಲಿನಲ್ಲಿ ಹಾಕಿ, ಮನೆಯ ಮುಖ್ಯ ಮೂಲೆಯಲ್ಲಿ ಇಡುವುದರಿಂದ ಹಣದ ತೊಂದರೆಗಳು ದೂರವಾಗಲಿದ್ದು, ಮನೆಯ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮನೆಯಲ್ಲಿ ಜಗಳ, ಕಲಹ ಕಡಿಮೆ ಮಾಡಲು
ಮನೆಯನ್ನು ಸ್ವಚ್ಚಗೊಳಿಸುವಾಗ ಉಪ್ಪು ಮಿಶ್ರಿತ ನೀರನ್ನು ಸಿಂಪಡಿಸಿ ನೆಲವನ್ನು ಒರೆಸುವುದರಿಂದ ಮನೆಯ ಋಣಾತ್ಮಕ ಶಕ್ತಿ ನಿವಾರಣೆಯಾಗುತ್ತದೆ ಹಾಗೂ ಕೌಟುಂಬಿಕ ಕಲಹಗಳು - ಮನಸ್ತಾಪಗಳು ದೂರವಾಗುತ್ತವೆ.
Vastu Tips: ನಿಮ್ಮ ಮನೆಯಲ್ಲಿ ಬುದ್ಧನ ಪ್ರತಿಮೆ ಇಡುತ್ತಿದ್ದಿರಾ? ಹಾಗಾದ್ರೆ ಯಾವ ಜಾಗದಲ್ಲಿ ಇಡಬೇಕು?
ಆರೋಗ್ಯ ಸುಧಾರಣೆ
ಸ್ನಾನಗೃಹದಲ್ಲಿ ಸ್ವಲ್ಪ ಉಪ್ಪನ್ನು ಗಾಜಿನ ಬಟ್ಟಲಿನಲ್ಲಿ ಇಟ್ಟುಕೊಳ್ಳುವುದರಿಂದ ಮನೆಯೊಳಗೆ ಕೆಟ್ಟ ಶಕ್ತಿಗಳು ಪ್ರವೇಶಿಸುವುದನ್ನು ತಡೆಯಬಹುದಾಗಿದ್ದು, ಈ ಉಪ್ಪು ನೀರನ್ನು ಸಮಯಕ್ಕೆ ಬದಲಾಯಿಸುತ್ತಿರಬೇಕು. ಹಾಗೇ ಸ್ನಾನ ಮಾಡುವ ನೀರಿಗೆ ಒಂದು ಚಿಟಿಕೆ ಉಪ್ಪು ಹಾಕಿ ಸ್ನಾನ ಮಾಡಿದ್ದರೆ ದೈಹಿಕ ಆರೋಗ್ಯ ಸುಧಾರಿಸುತ್ತದೆ, ಜೊತೆಗೆ ಮಾನಸಿಕ ಶಾಂತಿ ಹೆಚ್ಚುತ್ತದೆ .
ಸಾಲ ಬಾಧೆಯಿಂದ ಹೊರಬರಲು
ನೀವು ಸಾಲ ಬಾಧೆಯಿಂದ ಬೇಸತ್ತಿದ್ದರೆ, ವಾಸ್ತು ಪ್ರಕಾರ ಈ ಸರಳ ವಿಧಾನವನ್ನು ಅನುಸರಿಸಬಹುದು. ಒಂದು ಗಾಜಿನ ಲೋಟವನ್ನು ನೀರಿನಿಂದ ತುಂಬಿ, ಅದರಲ್ಲಿ ಒಂದು ಟೀ ಚಮಚ ಉಪ್ಪನ್ನು ಸೇರಿಸಿ. ನಂತರ, ಆ ಲೋಟವನ್ನು ನಿಮ್ಮ ಮನೆಯ ನೈಋತ್ಯ ಮೂಲೆಯಲ್ಲಿ ಇಡಿ. ಈ ವಿಧಾನದಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಿ, ವ್ಯವಹಾರಿಕ ಸಮಸ್ಯೆಗಳು ಪರಿಹಾರಗೊಳ್ಳುತ್ತದೆ ಎಂಬ ನಂಬಿಕೆ ಇದೆ.
ಈ ವಿಷಯದ ಬಗ್ಗೆ ಗಮನವಿರಲಿ
ಇನ್ನು ಅಡುಗೆಮನೆಯಲ್ಲಿ ಉಪ್ಪು ಖಾಲಿಯಾದರೆ, ರಾಹುವಿನ ದುಷ್ಟ ಕಣ್ಣು ನಿಮ್ಮ ಮೇಲೆ ಬೀಳುತ್ತದೆ ಮತ್ತು ನಂತರ ನಿಮ್ಮ ಕೆಲಸವು ಅಪೂರ್ಣಗೊಂಡು ನೀವು ಸೋಲನ್ನು ಅನುಭವಿಸಬೇಕಾಗುತ್ತದೆ ಎಂದು ವಾಸ್ತು ಶಾಸ್ತ್ರ ತಿಳಿಸಿದ್ದು, ಇದರಿಂದ ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಅಡುಗೆಮನೆಯಲ್ಲಿ ಉಪ್ಪಿನ ಡಬ್ಬಿಯನ್ನು ಎಂದಿಗೂ ಖಾಲಿ ಬಿಡಬೇಡಿ ಎನ್ನುವುದನ್ನು ನೆನಪಿನಲ್ಲಿಡಿ. ಅದರ ಜೊತೆಗೆ,ಇನ್ನೊಬ್ಬರ ಮನೆಯಿಂದ ಉಪ್ಪು ಕೇಳಬಾರದು ಎಂಬುದನ್ನು ನೆನಪಿನಲ್ಲಿಡಿ. ಹೀಗೆ ಮಾಡುವುದರಿಂದ ನಿಮ್ಮ ಸ್ವಂತ ಮನೆಯ ಅಡುಗೆ ಮನೆ ಯಾವಾಗಲೂ ಖಾಲಿಯಾಗಿರುತ್ತದೆ. ಅಂದರೆ ಹಣಕಾಸಿನ ಸಮಸ್ಯೆ ನಿಮ್ಮನ್ನು ಸದಾ ಕಾಡುತ್ತದೆ.