ಬೆಂಗಳೂರು: ಮನೆಯಲ್ಲಿ ಸಸಿಗಳನ್ನು ಬೆಳೆಸುವುದು ಕೇವಲ ಅಲಂಕಾರಕ್ಕೆ ಮಾತ್ರ ಸೀಮಿತವಲ್ಲ. ಹಸಿರು ಗಿಡಗಳು ಮನೆಯ ವಾತಾವರಣವನ್ನು ಶುದ್ಧಗೊಳಿಸುವುದರೆ ಜೊತೆಗೆ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂಬ ನಂಬಿಕೆ ವಾಸ್ತು ಶಾಸ್ತ್ರದಲ್ಲಿದೆ. ವಿಶೇಷವಾಗಿ ಹೂಬಿಡುವ ಮತ್ತು ಪರಿಮಳಯುಕ್ತ ಸಸ್ಯಗಳು ಮನಸ್ಸಿಗೆ ಹಿತ ನೀಡುವುದರೊಂದಿಗೆ ಮನೆಯಲ್ಲಿನ ನಕಾರಾತ್ಮಕತೆಯನ್ನು ಕಡಿಮೆ ಮಾಡುತ್ತವೆ ಎಂದು ಹೇಳಲಾಗುತ್ತದೆ. ಇಂತಹ ಸಸ್ಯಗಳನ್ನು ಸರಿಯಾದ ದಿಕ್ಕಿನಲ್ಲಿ ನೆಟ್ಟರೆ ವಾಸ್ತು ದೋಷಗಳು (Vastu Dosha) ಪರಿಹಾರವಾಗುತ್ತವೆ ಎಂಬುದು ವಾಸ್ತುಪಂಡಿತರ ಅಭಿಪ್ರಾಯ.
ಅಂತಹ ಪರಿಮಳಯುಕ್ತ ಸಸ್ಯಗಳ ಪಟ್ಟಿಯಲ್ಲಿ ಸುಗಂಧರಾಜ ಗಿಡಕ್ಕೂ ವಿಶೇಷ ಸ್ಥಾನವಿದೆ. ಸುಗಂಧರಾಜ ಹೂವಿನ ಮನಮೋಹಕ ಪರಿಮಳ ಯಾರನ್ನಾದರೂ ಸೆಳೆಯುವಂತಹುದು. ಈ ಸಸ್ಯವನ್ನು ಮನೆಯಲ್ಲಿ ಬೆಳೆಸುವುದರಿಂದ ಸುತ್ತಮುತ್ತಲಿನ ವಾತಾವರಣ ಸದಾ ಸುಗಂಧಭರಿತವಾಗಿರುತ್ತದೆ. ಅಷ್ಟೇ ಅಲ್ಲ, ವಾಸ್ತು ದೃಷ್ಟಿಯಿಂದಲೂ ಈ ಗಿಡವನ್ನು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.
ಹಾಗಾದ್ರೆ ಬನ್ನಿ ಸುಗಂಧ ರಾಜ ಗಿಡ ನೆಡುವಾಗ ಯಾವೆಲ್ಲ ವಾಸ್ತು ಸಲಹೆಗಳನ್ನು(Vastu Tips) ಪಾಲಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ...
ಜೀವನದಲ್ಲಿ ಎದುರಾಗುವ ಅನೇಕ ಅಡಚಣೆಗಳನ್ನು ನಿವಾರಿಸಲು ಇದು ಸಹಾಯಕವಾಗುತ್ತದೆ ಎಂಬ ನಂಬಿಕೆ ಇದೆ. ಸುಗಂಧರಾಜ ಹೂವುಗಳನ್ನು ಧಾರ್ಮಿಕ ಪೂಜಾಕಾರ್ಯಗಳಲ್ಲಿ ಬಳಸಲಾಗುತ್ತದೆ. ಜೊತೆಗೆ ಇದರ ಹೂವಿನಿಂದ ಸುಗಂಧ ದ್ರವ್ಯಗಳು ಹಾಗೂ ಎಣ್ಣೆಗಳನ್ನು ಸಹ ತಯಾರಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಈ ಸಸ್ಯವು ಸಂಪತ್ತು, ಸಂತೋಷ ಮತ್ತು ಸಮೃದ್ಧಿಯನ್ನು ಆಕರ್ಷಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಮನೆ ಅಥವಾ ತೋಟದಲ್ಲಿ ಇದಕ್ಕೆ ಸೂಕ್ತ ಸ್ಥಾನ ನೀಡುವುದು ಅತ್ಯಂತ ಮುಖ್ಯ.
Astro Tips: ಸೂರ್ಯ ತೇಜಸ್ಸು ಸಿಗಬೇಕಾದರೆ ಭಾನುವಾರ ಹೀಗೆ ಪೂಜಿಸಿ
ಈ ದಿಕ್ಕಿನಲ್ಲಿ ನೆಡಿ
ವಾಸ್ತು ನಿಯಮಗಳಂತೆ, ಸುಗಂಧರಾಜ ಗಿಡವನ್ನು ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ನೆಡುವುದು ಉತ್ತಮ. ಈ ದಿಕ್ಕಿನಲ್ಲಿ ನೆಟ್ಟರೆ ಮನೆಯೊಳಗೆ ಆರ್ಥಿಕ ಸ್ಥಿರತೆ ಮೂಡುತ್ತದೆ, ಅಭಿವೃದ್ಧಿಯ ಅವಕಾಶಗಳು ಹೆಚ್ಚಾಗುತ್ತವೆ ಹಾಗೂ ಜೀವನದಲ್ಲಿ ಮುಂದುವರಿಯಲು ಅನುಕೂಲಕರ ವಾತಾವರಣ ಸೃಷ್ಟಿಯಾಗುತ್ತದೆ ಎನ್ನಲಾಗಿದೆ.
ಸುಖಿ ಸಂಸಾರಕ್ಕೆ ದಾರಿ ಮಾಡಿಕೊಡುತ್ತದೆ
ಇನ್ನೊಂದು ಪ್ರಮುಖ ನಂಬಿಕೆಯಂತೆ, ದಾಂಪತ್ಯ ಜೀವನದಲ್ಲಿ ಕಲಹ ಅಥವಾ ಅಸಮಾಧಾನ ಉಂಟಾದಲ್ಲಿ ಮನೆಯ ಅಂಗಳದಲ್ಲಿ ಅಥವಾ ಕುಂಡದಲ್ಲಿ ಸುಗಂಧರಾಜ ಗಿಡವನ್ನು ನೆಟ್ಟರೆ ಪತಿ-ಪತ್ನಿಯರ ನಡುವೆ ಸೌಹಾರ್ದತೆ ಹೆಚ್ಚುತ್ತದೆ. ಪರಸ್ಪರ ಪ್ರೀತಿ, ನಂಬಿಕೆ ಮತ್ತು ಸಮಜಾಯಿಷಿ ಗಟ್ಟಿಯಾಗಲು ಇದು ಸಹಕಾರಿಯಾಗುತ್ತದೆ ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ.
ಒಟ್ಟಾರೆ, ಮನೆಯಲ್ಲಿ ಸುಗಂಧರಾಜ ಗಿಡವನ್ನು ಬೆಳೆಸುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಮತ್ತು ಸಕಾರಾತ್ಮಕ ಶಕ್ತಿ ಹರಿದುಬರುತ್ತದೆ ಎಂಬ ನಂಬಿಕೆ ಇದೆ. ಹಣಕಾಸಿನ ತೊಂದರೆಗಳಿಂದ ಮುಕ್ತಿ ದೊರೆಯಲು, ಆದಾಯ ಹಾಗೂ ಅದೃಷ್ಟದ ಬಾಗಿಲು ತೆರೆಯಲು ಸಹ ಈ ಸಸ್ಯ ಸಹಾಯಕವಾಗುತ್ತದೆ ಎಂದು ವಾಸ್ತುಪಂಡಿತರು ಹೇಳುತ್ತಾರೆ. ಹೀಗಾಗಿ, ಮನೆಯ ಸೌಂದರ್ಯ ಮತ್ತು ಸಮೃದ್ಧಿ ಎರಡನ್ನೂ ಬಯಸುವವರು ಸುಗಂಧರಾಜ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದು ಉತ್ತಮ.