Vastu Tips: ಮನೆಗೆ ಸುಖ, ಶಾಂತಿ, ಸಮೃದ್ಧಿ ತರುವ ತುಳಸಿ
ಸಾಮಾನ್ಯವಾಗಿ ದೀಪಾವಳಿಯ ಬಳಿಕ ಪ್ರಾರಂಭವಾಗುವ ತುಳಸಿ ಪೂಜೆಯನ್ನು ದಕ್ಷಿಣಾಯನದ ಕೊನೆಯವರೆಗೆ ಮಾಡಲಾಗುತ್ತದೆ. ಆದರೆ ಹೆಚ್ಚಾಗಿ ಕಾರ್ತಿಕ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ತುಳಸಿ ಪೂಜೆ ಮಾಡುವುದು ವಾಡಿಕೆ. ತುಳಸಿ ಪೂಜೆಗೆ ವಾಸ್ತು ಶಾಸ್ತ್ರದಲ್ಲಿ ಅತ್ಯಂತ ಮಹತ್ವದ ಸ್ಥಾನವಿದೆ. ಅದು ಏನು ಎಂಬ ಕುರಿತು ಇಲ್ಲಿದೆ ಮಾಹಿತಿ.
-
ವಿದ್ಯಾ ಇರ್ವತ್ತೂರು
Oct 29, 2025 7:00 AM
ಬೆಂಗಳೂರು: ತುಳಸಿ ಸಸ್ಯವು (Tulasi plant) ಸಂಪತ್ತಿನ ದೇವತೆಯಾದ ಲಕ್ಷ್ಮೀ ದೇವಿಯ ವಾಸಸ್ಥಾನ ಎಂದು ನಂಬಲಾಗುತ್ತದೆ. ಹೀಗಾಗಿ ಪ್ರತಿ ವರ್ಷ ದೀಪಾವಳಿಯ (deepavali) ಬಳಿಕ ತುಳಸಿ ಪೂಜೆ (Vastu about tulasi puja) ನಡೆಸುವ ಸಂಪ್ರದಾಯವನ್ನು ಕರ್ನಾಟಕದಲ್ಲಿ ಅದರಲ್ಲೂ ಹೆಚ್ಚಾಗಿ ಕರಾವಳಿ ಭಾಗಗಳಲ್ಲಿ ಪಾಲಿಸಲಾಗುತ್ತದೆ. ಸಾಮಾನ್ಯವಾಗಿ ತುಳಸಿ ಪೂಜೆಯನ್ನು ದೀಪಾವಳಿಯ ಬಳಿಕ ದಕ್ಷಿಣಾಯನದ ಕೊನೆಯವರೆಗೆ ಮಾಡಲಾಗುತ್ತದೆ. ಆದರೂ ಹೆಚ್ಚಾಗಿ ಕಾರ್ತಿಕ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ಅಂದರೆ ಈ ಬಾರಿ ನವೆಂಬರ್ 2ರಂದು ತುಳಸಿ ಪೂಜೆಯನ್ನು ನಡೆಸುವುದು ವಾಡಿಕೆ. ಶಾಸ್ತ್ರೋಕ್ತವಾದಿ ತುಳಸಿ ಪೂಜೆ ನಡೆಸುವುದರಿಂದ ಮನೆಯ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎನ್ನುತ್ತದೆ ವಾಸ್ತು (Vastu tips) ಶಾಸ್ತ್ರ.
ಪ್ರತಿ ನಿತ್ಯವೂ ತುಳಸಿ ಸಸ್ಯದ ಮೇಲೆ ನೀರನ್ನು ಸುರಿಯುವುದರಿಂದ ಜೀವನದಲ್ಲಿ ಎದುರಾಗುವ ದುಃಖ ಮತ್ತು ತೊಂದರೆಗಳನ್ನು ದೂರವಾಗುತ್ತದೆ. ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ. ಮನೆಯಲ್ಲಿ ತುಳಸಿ ನೆಡಲು ಕೆಲವು ನಿಯಮಗಳಿವೆಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.
ಯಾವಾಗ ನೆಡಬಹುದು?
ಹಿಂದೂ ಧರ್ಮದ ಪ್ರಕಾರ ತುಳಸಿ ಪೂಜೆ ಹೆಚ್ಚಿನ ಮಹತ್ವವನ್ನು ಹೊಂದಿದೆ. ವಾಸ್ತು ಶಾಸ್ತ್ರದ ಪ್ರಕಾರ ಗುರುವಾರ ಮತ್ತು ಶುಕ್ರವಾರ ತುಳಸಿ ನೆಡಲು ಅತ್ಯಂತ ಶುಭ ದಿನಗಳು ಎಂದು ಪರಿಗಣಿಸಲಾಗುತ್ತದೆ. ಈ ದಿನದಂದು ತುಳಸಿ ನೆಡುವುದರಿಂದ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ. ವ್ಯಕ್ತಿಯ ಜೀವನದಲ್ಲಿ ಯಶಸ್ಸು ದೊರೆಯುತ್ತದೆ ಎನ್ನಲಾಗುತ್ತದೆ.
ಇದನ್ನೂ ಓದಿ: Vastu Tips: ಸಸ್ಯಗಳನ್ನು ಸರಿಯಾದ ದಿಕ್ಕಿನಲ್ಲಿ ನೆಡಬೇಕು ಯಾಕೆ ಗೊತ್ತೇ?
ಎಲ್ಲಿ ನೆಡಬಹುದು?
ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡವನ್ನು ಉತ್ತರ ದಿಕ್ಕಿನಲ್ಲಿ ನೆಡುವುದರಿಂದ ಲಕ್ಷ್ಮೀ ದೇವಿಯ ಆಶೀರ್ವಾದ ದೊರೆಯುತ್ತದೆ. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ. ತುಳಸಿ ಗಿಡವನ್ನು ಪೂರ್ವ ದಿಕ್ಕಿನಲ್ಲೂ ನೆಡಬಹುದು. ಇದರಿಂದ ಸಂಪತ್ತು ವೃದ್ಧಿಯಾಗುತ್ತದೆ ಮತ್ತು ಆರ್ಥಿಕ ಸಂಕಷ್ಟ ನಿವಾರಣೆಯಾಗುತ್ತದೆ.
ಏನು ಮಾಡಬಾರದು?
ಏಕಾದಶಿ ಅಥವಾ ಭಾನುವಾರದಂದು ತುಳಸಿ ಗಿಡಕ್ಕೆ ನೀರು ಹಾಕಬಾರದು. ಅದರ ಎಲೆಗಳನ್ನು ಕೀಳಬಾರದು ಎನ್ನುತ್ತದೆ ವಾಸ್ತು. ಇದು ಲಕ್ಷ್ಮೀ ದೇವಿಯ ಕೋಪಕ್ಕೆ ಕಾರಣಾವಾಗುತ್ತದೆ. ಇದರಿಂದ ಜೀವನದಲ್ಲಿ ಅನೇಕ ಸಮಸ್ಯೆಗಳಿಗೆ ಎದುರಾಗುತ್ತದೆ ಎನ್ನುವ ನಂಬಿಕೆ ಇದೆ.
ಇದನ್ನೂ ಓದಿ: Vastu Tips: ಅಪ್ಪಿತಪ್ಪಿಯೂ ಈ ಜಾಗಗಳಲ್ಲಿ ರಂಗೋಲಿ ಹಾಕಬೇಡಿ ಎನ್ನುತ್ತದೆ ವಾಸ್ತು; ಯಾಕೆ ಗೊತ್ತೇ?
ಪೂಜಾ ವಿಧಾನ ಹೇಗಿರಬೇಕು?
ತುಳಸಿ ಪೂಜೆಯ ಸಂದರ್ಭದಲ್ಲಿ ಗಿಡಕ್ಕೆ ನೀರು ಅರ್ಪಿಸುವುದನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಸೂರ್ಯೋದಯ ಇದಕ್ಕೆ ಸೂಕ್ತ ಸಮಯವಾಗಿದೆ. ತುಳಸಿ ಪೂಜೆಯ ಸಮಯದಲ್ಲಿ ಕಪ್ಪು ಬಟ್ಟೆಗಳನ್ನು ಧರಿಸಬಾರದು. ಸರಿಯಾದ ವಿಧಾನದಲ್ಲಿ ತುಳಸಿ ದೇವಿಯನ್ನು ಪೂಜಿಸಬೇಕು. ಸಸ್ಯದ ಸುತ್ತಲೂ ಸ್ವಚ್ಛತೆ ಪಾಲಿಸಬೇಕು. ಯಾವುದೇ ಕಳೆ ಗಿಡ ಬೆಳೆಯದಂತೆ ನೋಡಿಕೊಳ್ಳಬೇಕು ಎನ್ನುತ್ತದೆ ವಾಸ್ತು ಶಾಸ್ತ್ರ.