ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

2028ಕ್ಕೆ ನಮ್ಮ ಬುಲ್ಡೋಜರ್‌ ಸರ್ಕಾರ ಅಧಿಕಾರಕ್ಕೆ ಬರುತ್ತದೆ: ಬಸನಗೌಡ ಪಾಟೀಲ ಯತ್ನಾಳ

Bagalkot Bypoll 2026: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರ ಕ್ಷೇತ್ರದ ಕಮತಗಿ ಪಟ್ಟಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮುಸ್ಲಿಂ ಸಮುದಾಯ ಹಾಗೂ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಿಡಿಕಾರಿದರು. ಆಜಾನ್ ಕೂಗೋರಿಗೆ 6 ಸಾವಿರ ರುಪಾಯಿ, ವಿದೇಶಗಳಲ್ಲಿ ಹೆಚ್ಚಿನ ವ್ಯಾಸಂಗ ಮಾಡಲು ಇಚ್ಚಿಸುವ ಮುಸ್ಲಿಂ ಸಮುದಾಯದ ಮಕ್ಕಳಿಗೆ ಮಕ್ಕಳಿಗೆ 30 ಲಕ್ಷ ರೂಪಾಯಿ ಶಿಷ್ಯವೇತನ, ಮುಸ್ಲಿಂ ಓಣಿಗಳಲ್ಲಿ ಒಂದೊಂದು ಸರ್ಕಾರಿ ಐಟಿಐ ಕಾಲೇಜು, ಮುಸ್ಲಿಂ ಯುವಕರಿಗೆ ಸ್ಟಾರ್ಟ್‌ ಅಪ್‌ಗೆ 3 ಲಕ್ಷ ರೂಪಾಯಿಯನ್ನು ರಾಜ್ಯ ಸರ್ಕಾರ ನೀಡಲಿದೆ ಆದರೆ ಹಿಂದುಳಿದ, ದಲಿತ ಸಮುದಾಯದವರಿಗೆ ಈ ಯೋಜನೆ ಇದೆಯಾ ಎಂದು ಅವರು ಪ್ರಶ್ನಿಸಿದ್ದಾರೆ.

Profile
Siddalinga Swamy Apr 8, 2026 8:38 PM

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರ ಕ್ಷೇತ್ರದ ಕಮತಗಿ ಪಟ್ಟಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮುಸ್ಲಿಂ ಸಮುದಾಯ ಹಾಗೂ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಿಡಿಕಾರಿದರು. ಆಜಾನ್ ಕೂಗೋರಿಗೆ 6 ಸಾವಿರ ರುಪಾಯಿ, ವಿದೇಶಗಳಲ್ಲಿ ಹೆಚ್ಚಿನ ವ್ಯಾಸಂಗ ಮಾಡಲು ಇಚ್ಚಿಸುವ ಮುಸ್ಲಿಂ ಸಮುದಾಯದ ಮಕ್ಕಳಿಗೆ ಮಕ್ಕಳಿಗೆ 30 ಲಕ್ಷ ರೂಪಾಯಿ ಶಿಷ್ಯವೇತನ, ಮುಸ್ಲಿಂ ಓಣಿಗಳಲ್ಲಿ ಒಂದೊಂದು ಸರ್ಕಾರಿ ಐಟಿಐ ಕಾಲೇಜು, ಮುಸ್ಲಿಂ ಯುವಕರಿಗೆ ಸ್ಟಾರ್ಟ್‌ ಅಪ್‌ಗೆ 3 ಲಕ್ಷ ರೂಪಾಯಿಯನ್ನು ರಾಜ್ಯ ಸರ್ಕಾರ ನೀಡಲಿದೆ ಆದರೆ ಹಿಂದುಳಿದ, ದಲಿತ ಸಮುದಾಯದವರಿಗೆ ಈ ಯೋಜನೆ ಇದೆಯಾ ಎಂದು ಪ್ರಶ್ನಿಸಿದರು. ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ಅಲ್ಪಸಂಖ್ಯಾತ ಇಲಾಖೆಯಿಂದ 1000 ಸಾವಿರ ಮುಸ್ಲಿಂ ಹುಡುಗರಿಗೆ ಮಾತ್ರ ಪಿಎಸ್‌ಐ ತರಬೇತಿ ನೀಡುತ್ತಿದ್ದಾರೆ. ಅಲ್ಪಸಂಖ್ಯಾತರಲ್ಲಿ ಜೈನ್‌, ಕ್ರಿಶ್ಚಿಯನ್‌, ಬೌದ್ದ, ಪಾರ್ಸಿ ಅವರಿದ್ದಾರೆ ಅವರಿಗ್ಯಾರಿಗೂ ಇಲ್ಲ ಆದರೆ ಮುಸ್ಲಿಂ ಸಮುದಾಯದವರಿಗಷ್ಟೇ ಏಕೆ ಈ ತರಬೇತಿ ಎಂದು ನೀವು ಪ್ರಶ್ನಿಸಿ ಎಂದು ಮತದಾರರಿಗೆ ಕರೆ ನೀಡಿದರು.

2028ಕ್ಕೆ ನಮ್ಮ ಬುಲ್ಡೋಜರ್‌ ಸರ್ಕಾರ ಬಂದ ಮೇಲೆ ವಿಧಾನಸಭೆ ಮುಂದೆ 11 ಜೆಸಿಬಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವುದು ಖಚಿತ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದರು.