BSY Abhimanotsava: ಬಗರ್ ಹುಕುಂ ಹೋರಾಟದ ಮೂಲಕ ಬಡವರಿಗೆ ನ್ಯಾಯ ಕೊಡಿಸಿದ ರಾಜಾಹುಲಿ ಬಿಎಸ್‌ವೈ: ಜೋಶಿ
ಬಂಗಾಳದಲ್ಲಿ ನಮ್ಮ ವಿಚಾರಧಾರೆಗೆ ಪ್ರಚಂಡ ಗೆಲುವು ಸಿಕ್ಕಿದೆ. ದಕ್ಷಿಣ ಭಾರತದಲ್ಲಿ ಈ ಮೊದಲೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು, ಮತ್ತೊಮ್ಮೆ ಬಿಎಸ್‌ವೈ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಬರಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗದಲ್ಲಿ ನಡೆದ ಬಿಎಸ್‌ವೈ ಅಭಿಮಾನೋತ್ಸವದಲ್ಲಿ ಅವರು ಮಾತನಾಡಿದ್ದಾರೆ.
Prabhakara R
May 9, 2026 7:46 PM
ಚಿತ್ರದುರ್ಗ, ಮೇ 9: ಇವತ್ತು ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದರೊಂದಿಗೆ ದೇಶದ 21 ರಾಜ್ಯಗಳಲ್ಲಿ ಎನ್‌ಡಿಎ ಅಧಿಕಾರಕ್ಕೇರಿದೆ. ಆದರೆ, ದಕ್ಷಿಣ ಭಾರತದಲ್ಲಿ ಬಿಜೆಪಿ ಮೊದಲು ಅಧಿಕಾರಕ್ಕೆ ಬಂದಿದ್ದು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಎಂಬುವುದನ್ನು ನಾವು ಮರೆಯಬಾರದು. ದೇಶದಲ್ಲಿ ಬಿಜೆಪಿ ಎರಡು ಲೋಕಸಭಾ ಕ್ಷೇತ್ರ ಹಾಗೂ ರಾಜ್ಯದಲ್ಲಿ ಎರಡು ಕ್ಷೇತ್ರದಲ್ಲಿ ಬಿಜೆಪಿ ಇದ್ದಾಗ ಯಡಿಯೂರಪ್ಪ ಅವರು ಅಹೋರಾತ್ರಿ ಧರಣಿಯನ್ನು ಮಾಡಿ ಅವತ್ತಿನ ರೈತರು, ಕೂಲಿ ಕಾರ್ಮಿಕರಿಗೆ ಬಗರ್ ಹುಕುಂ ಸಾಗುವಳಿದಾರರಿಗೆ ನ್ಯಾಯ ಕೊಡಿಸಿದ ರಾಜಾಹುಲಿ ಎಂದು ಕೇಂದ್ರ ಸಚಿವ ಪ್ರಲ್ದಾದ್ ಜೋಶಿ ತಿಳಿಸಿದರು. ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ಬಿಎಸ್‌ವೈ ಅಭಿಮಾನೋತ್ಸವದಲ್ಲಿ ಅವರು ಮಾತನಾಡಿದರು.