ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani health: ಕಿವಿಗೆ ಎಣ್ಣೆ ಹಾಕುವುದು ಒಳ್ಳೆಯದೇ? ಬಿಪಿ, ಶುಗರ್ ಇದ್ದವರಿಗೆ ಕಿವಿ ತೊಂದರೆ ಕಾಡುವುದೇಕೆ?

ಹಿಂದಿನ ಕಾಲದಲ್ಲಿ ಕಿವಿಗೆ ಎಣ್ಣೆ ಹಾಕಿ ಸ್ವಚ್ಛಗೊಳಿಸುತ್ತಿದ್ದರು. ಆದರೆ ಈಗ ಕಿವಿಗೆ ಎಣ್ಣೆ ಹಾಕಲೇಬಾರದು ಎನ್ನುತ್ತಾರೆ ತಜ್ಞರು. ಕಿವಿಗೆ ಎಣ್ಣೆ ಹಾಕುವುದರಿಂದ ಏನಾಗುತ್ತದೆ?, ಬಿಪಿ, ಶುಗರ್ ಇದ್ದವರಿಗೆ ಕಿವಿ ತೊಂದರೆ ಕಾಡುವುದೇಕೆ? ಎನ್ನುವ ಕುರಿತು ಹೆಬ್ಬಾಳದ ಮಣಿಪಾಲ ಆಸ್ಪತ್ರೆಯ ಡಾ. ಸಂತೋಷ್ ಶಿವ ಸ್ವಾಮಿ ಅವರು ನೀಡಿರುವ ಮಾಹಿತಿ ಇಲ್ಲಿದೆ.

ಬೆಂಗಳೂರು: ಮಧುಮೇಹ, ರಕ್ತದೊತ್ತಡಕ್ಕೂ ಕಿವಿಯ ಸಮಸ್ಯೆಗಳಿಗೂ ನೇರ ಸಂಬಂಧವಿರುವುದು ಕಡಿಮೆ. ಆದರೆ ನಿಯಂತ್ರಿಸಲಾಗದ ಮಧುಮೇಹ, ರಕ್ತದೊತ್ತಡ ಇದ್ದರೆ ಕಿವಿಯ ತೊಂದರೆಗಳು ಬಹಳ ಬೇಗನೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಹಲವಾರು ಎನ್ನುತ್ತಾರೆ ಹೆಬ್ಬಾಳದ ಮಣಿಪಾಲ ಆಸ್ಪತ್ರೆಯ (Hebbal Manipal Hospital) ಡಾ. ಸಂತೋಷ್ ಶಿವ ಸ್ವಾಮಿ. ವಿಶ್ವವಾಣಿ ಹೆಲ್ತ್ (Vishwavani Health) ಯುಟ್ಯೂಬ್‌ ಚಾನಲ್‌ನಲ್ಲಿ ನಿಸರ್ಗ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಕಿವಿಯಲ್ಲಿ ಫಂಗಸ್ ಸೋಂಕಿನಿಂದ ಕಿವಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಬಿಪಿ, ಶುಗರ್ ಕೂಡ ಕಾರಣವಾಗಿರುತ್ತದೆ ಎಂದರು. ಬಿಪಿ ಇರುವವರಲ್ಲಿ ಒತ್ತಡ ಜಾಸ್ತಿ ಆದಾಗ ಕಿವಿಗೆ ರಕ್ತ ಪೂರೈಕೆ ಮಾಡಲು ಇರುವ ಏಕೈಕ ನರದಲ್ಲಿ ಬ್ಲಾಕ್ ಉಂಟಾಗಿ ಕಿವಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ತಕ್ಷಣ ಚಿಕಿತ್ಸೆ ನೀಡಬೇಕು. ಇದರಿಂದ ಇದು ಸರಿ ಹೋಗುವುದು ಎಂದು ಅವರು ತಿಳಿಸಿದರು. ಇನ್ನು ಕಿವಿಗೆ ಎಣ್ಣೆ ಹಾಕಿಕೊಳ್ಳುವುದು ಹಿಂದಿನವರ ಒಂದು ಚಿಕಿತ್ಸೆ ಆಗಿತ್ತು. ಆಗ ಸಮಸ್ಯೆಗಳು ಹಲವಾರು ಇದ್ದವು. ಆದರೆ ಇವತ್ತು ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಅಂತೆಯೇ ಈಗ ಶುದ್ಧವಾದ ಎಣ್ಣೆ ಸಿಗುವುದು ಕಷ್ಟ. ಇದರಿಂದ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಒಮ್ಮೆ ಕಿವಿಯೊಳಗೆ ಫಂಗಸ್ ಉಂಟಾಗಿ ಪರದೆ ಡ್ಯಾಮೇಜ್ ಆದರೆ ಅದಕ್ಕೆ ಶಸ್ತ್ರ ಚಿಕಿತ್ಸೆಯೊಂದೇ ಪರಿಹಾರವಾಗಿರುತ್ತದೆ. ಕಿವಿಯಲ್ಲಿ ಸಮಸ್ಯೆಗಳಿದ್ದಾಗ ತಕ್ಷಣ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯುವುದರಿಂದ ಮುಂದೆ ಗಂಭೀರ ಸಮಸ್ಯೆಗಳಾಗುವುದನ್ನು ತಡೆಯಬಹುದು ಎಂದರು.