ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Health: ಕುಡಿಯುವ ನೀರಿನಿಂದಲೇ ಶುಗರ್ ಬರುತ್ತಾ? ಏನಂತಾರೆ ತಜ್ಞರು ?

ಮಧುಮೇಹ ಮತ್ತು ಕುಡಿಯುವ ನೀರಿಗೆ ಸಂಬಂಧವಿದೆಯೇ? ಕುಡಿಯುವ ನೀರಿನಿಂದ ಮಧುಮೇಹ ಹೆಚ್ಚಾಗುವುದು, ಕುಡಿಯುವ ನೀರಿನಿಂದ ಕೂದಲು ಉದುರುವುದೇ ? ಆರೋ, ಮಿನರಲ್, ಬಾಟಲ್ ವಾಟರ್ ಯಾವುದು ಒಳ್ಳೆಯದು? ಎನ್ನುವ ಕುರಿತು ಮಧುಮೇಹ ತಜ್ಞರಾದ ಡಾ. ಸುಮನ್ ಅವರು ವಿಶ್ವವಾಣಿ ಹೆಲ್ತ್ ಯುಟ್ಯೂಬ್‌ ಚಾನಲ್‌ನಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಬೆಂಗಳೂರು: ಮಧುಮೇಹ (diabetes) ಮತ್ತು ಕುಡಿಯುವ ನೀರಿಗೆ (drinking water) ನೇರವಾದ ಸಂಬಂಧವಿದೆ. ಹೀಗಾಗಿ ಕುಡಿಯುವ ನೀರಿನ ವಿಚಾರದಲ್ಲಿ ನಾವು ಹೆಚ್ಚು ಕಾಳಜಿ ವಹಿಸಬೇಕು ಎನ್ನುತ್ತಾರೆ ಮಧುಮೇಹ ತಜ್ಞರಾದ (Diabetologist) ಡಾ. ಸುಮನ್. ವಿಶ್ವವಾಣಿ ಹೆಲ್ತ್ (Vishwavani Health) ಯುಟ್ಯೂಬ್‌ ಚಾನಲ್‌ನಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಮಧುಮೇಹಿಗಳು ತಮ್ಮ ಶುಗರ್ ಲೆವೆಲ್ ಅನ್ನು ನಿಯಂತ್ರಣದಲ್ಲಿರಿಸುವುದು ಬಹಳ ಮುಖ್ಯ. ಯಾಕೆಂದರೆ ಇದು ದೇಹದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಹೀಗಾಗಿ ಸೇವಿಸುವ ಆಹಾರ, ಕುಡಿಯುವ ನೀರು ಜೊತೆಗೆ ದಿನಚರಿಯಲ್ಲಿ ಸರಿಯಾದ ಪಾಲನೆಯನ್ನು ಮಾಡಬೇಕು. ಕುಡಿಯುವ ನೀರಿನಲ್ಲಿ ಸರಿಯಾದ ಖನಿಜಾಂಶಗಳು ಸಿಗದೇ ಇದ್ದಾಗ ಹಾರ್ಮೋನ್ ವ್ಯತ್ಯಾಸ, ಮಧುಮೇಹ ಸರಿಯಾಗಿ ಕಂಟ್ರೋಲ್ ಗೆ ಬಾರದೇ ಇರುವುದು, ಕೂದಲು ಉದುರಲು ಕೂಡ ಮುಖ್ಯ ಕಾರಣವಾಗುತ್ತದೆ. ಆರೋ ವಾಟರ್ ಸ್ವಚ್ಛವಾಗಿರುತ್ತದೆ. ಆದರೆ ಇದನ್ನು ಕುಡಿಯುವುದರಿಂದ ನೀರಿನಿಂದ ದೇಹಕ್ಕೆ ಸಿಗಬೇಕಾದ ಕೆಲವೊಂದು ಖನಿಜಾಂಶಗಳು ಸಿಗದೇ ಹೋಗಬಹುದು. ಮಿನರಲ್ ನೀರು ಅತ್ಯುತ್ತಮವಾಗಿದೆ. ಹಿಂದಿನ ಕಾಲದಲ್ಲಿ ಜನರು ಬಾವಿ, ಹರಿಯುವ ನೀರನ್ನು ಸೇವಿಸುತ್ತಿದ್ದರು. ಆದರೆ ಈಗ ಸ್ವಚ್ಛತೆಯ ಭಯವಿದೆ. ಆಗಾಗ್ಗೆ ಸಾಮಾನ್ಯ ನೀರು ಕುಡಿಯುವುದು ಮಧುಮೇಹವನ್ನು ನಿಯಂತ್ರಿಸಬಹುದು. ಆದರೆ ಬಾಟಲ್ ವಾಟರ್ ಸಾಮಾನ್ಯ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಅವರು ಹೇಳಿದರು.