ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಯುಗಾದಿ ವರ್ಷ ಭವಿಷ್ಯ: ಮಿಥುನ ರಾಶಿಯವರಿಗೆ‌ ಹೊಸ ಸಂವತ್ಸರವು ಹೇಗಿರಲಿದೆ?

ಯುಗಾದಿ ಪರಾಭವ ನಾಮ ಸಂವತ್ಸರ ಆರಂಭವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸಂವತ್ಸರದಲ್ಲಿ ಹಲವು ರೀತಿಯ ಬದಲಾವಣೆ ಕಂಡುಬರಲಿದೆ. ಈ ವರ್ಷದ ಗ್ರಹಗತಿಗಳ ಬದಲಾವಣೆಯು ಹೊಸ ತಿರುವುಗಳನ್ನು ಕೂಡ ನೀಡಲಿದೆ. ಹಾಗಿದ್ರೆ ಮಿಥುನ ರಾಶಿಗೆ ಪರಾಭವ ನಾಮ ಸಂವತ್ಸರ ಹೇಗಿರಲಿದೆ? ಆರ್ಥಿಕವಾಗಿ ಸಬಲ ಆಗುತ್ತೀರಾ? ಯಾವ ರೀತಿಯ ಅಡೆ- ತಡೆಗಳನ್ನು ಎದುರಿಸಬೇಕಾಗಬಹುದು ಎಂದು ಖ್ಯಾತ ಜ್ಯೋತಿಷಿ ಶ್ರೀ ದೇವದತ್ತ‌ ಶರ್ಮ ಗುರೂಜಿ ತಿಳಿಸಿದ್ದಾರೆ.

Profile
Pushpa Kumari Mar 20, 2026 11:52 AM

ಬೆಂಗಳೂರು,ಮಾ.20:ಬುಧನ ಪ್ರಭಾವ ಮಿಥುನ ರಾಶಿಗೆ ಹೆಚ್ಚಾಗಿಯೇ ಇರಲಿದ್ದು ಸಮ್ಮಿಶ್ರ ಫಲ ಇರುತ್ತದೆ. ಕೆಲಸ ಕಾರ್ಯದಲ್ಲಿ ನಿಮ್ಮ ಶ್ರಮ ಅಧಿಕವಾಗಿದ್ದರೆ ಮಾತ್ರ ಅದೃಷ್ಟ ನಿಮ್ಮನ್ನು ಹಿಂಬಾಲಿಸುತ್ತದೆ. ಸ್ವಂತ ಬಿಸೆನೆಸ್ ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭ ನಿಮಗೆ ಬರಲಿದ್ದು ನಿಮ್ಮ ಅಪೂರ್ಣ ಕೆಲಸಗಳೆಲ್ಲವೂ ಪೂರ್ಣವಾಗಿ ಹೊಸ ವ್ಯಾಪಾರ, ವ್ಯವಹಾರ ಸೃಷ್ಟಿ ಯಾಗಬಹುದು. ಅದೇ ರೀತಿ ಕೃಷಿಕರಿಗೆ ಲಾಭದಾಯವಾಗಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಜನರಿಗೆ ಹಾಗೂ ಭೋದನಾ ವರ್ಗದ ಶಿಕ್ಷಕರಿಗೆ ಈ ವರ್ಷವೂ ಗೌರವ ತಂದು ಕೊಡಲಿದೆ. ಆದರೆ ನೀವು ಜನಗಳ ಜೊತೆ ಸಂವಹನ ನಡೆಸುವಾಗ ತಾಳ್ಮೆಯಿಂದ ಇದ್ದರೆ ಒಳ್ಳೆಯದು. ಅವಿವಾಹಿತರಿಗೆ ಮದುವೆ ಆಗುವ ಯೋಗ್ಯ ಕೂಡ ಈ ವರ್ಷ ಇರುತ್ತದೆ. ಒಟ್ಟಿನಲ್ಲಿ ಈ ಹೊಸ ವರ್ಷದಲ್ಲಿ ಮಿಥುನ ರಾಶಿಗೆ ಸೇರಿದ ಜನರಿಗೆ ಸಮ್ಮಿಶ್ರ ಫಲ ಎಂದು ಜ್ಯೋತಿಷಿ ಶ್ರೀ ದೇವದತ್ತ‌ ಶರ್ಮ ಗುರೂಜಿ ತಿಳಿಸಿದ್ದಾರೆ.