ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಡಿಸಿಎಂ ಡಿ.ಕೆ. ಶಿವಕುಮಾರ್ ಸವಾಲಿಗೆ ಗುಡುಗಿದ ಆರ್. ಅಶೋಕ್; ಲಂಚದ ದಾಖಲೆ ಪ್ರದರ್ಶಿಸಿದ ವಿಪಕ್ಷ ನಾಯಕ

R. Ashoka Hits Back at DCM: ಸದನದಲ್ಲಿ ನಡೆದ ಬಜೆಟ್‌ ಅಧಿವೇಶನದಲ್ಲಿ ವಿಪಕ್ಷ ನಾಯಕ ಆರ್‌. ಅಶೋಕ್‌ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಗುಡುಗಿದರು. ರಾಜ್ಯದಲ್ಲಿ ಲಂಚ ಇಲ್ಲ ಎಂಬ ಹೇಳಿಕೆಗಳಿಗೆ ಅಶೋಕ್ ತಿರುಗೇಟು ನೀಡಿದರು. ಲಂಚ ತಗೊಂಡಿರುವವರನ್ನು ತೋರಿಸಿ ಅವರನ್ನು ಅಮಾನತು ಮಾಡಲಾಗುವುದು ಎಂದು ಡಿಕೆಶಿ ಸವಾಲು ಹಾಕಿದ್ದರು. ಇದಕ್ಕೆ ಆರ್. ಅಶೋಕ್ ಇಖಾತೆಯಲ್ಲಿನ ಲಂಚಾವತಾರದ ಬಗ್ಗೆ ಸಾಕ್ಷಿಸಹಿತ ದಾಖಲೆ ತೋರಿಸಿದರು.

Priyanka P
Priyanka P Mar 24, 2026 4:03 PM

ಬೆಂಗಳೂರು, ಮಾ. 24: ವಿಪಕ್ಷ ನಾಯಕ ಆರ್‌. ಅಶೋಕ್‌ (R Ashoka) ವಿಧಾನಸಭೆ ಬಜೆಟ್‌ ಅಧಿವೇಶನದಲ್ಲಿ ಮಾತನಾಡಿ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಹಾಕಿರುವ ಸವಾಲಿಗೆ ಚಿಟಿಕೆ ಹೊಡೆಯುತ್ತ ಗುಡುಗಿದರು. ಬಿಡಿಎ ಸೈಟ್‌ನ ಇ ಖಾತೆಯಲ್ಲಿ ಲಂಚಾವತಾರ ನಡೆಯುತ್ತಿದೆ ಎಂದು ಆರೋಪಿಸಿದರು. ಇ ಖಾತಾ ಬಗ್ಗೆ ಇಡೀ ದೇಶವೇ ಕೊಂಡಾಡಿದೆ. ನಮ್ಮ ಸರ್ಕಾರದಲ್ಲಿ ಯಾರು ಲಂಚ ತೆಗೆದುಕೊಂಡಿದ್ದಾರೆ ತೋರಿಸಿ ಎಂದು ಡಿಕೆಶಿ ಸವಾಲು ಹಾಕಿದ್ದರು. ಇದಕ್ಕೆ ಸಾಕ್ಷಿ ಸಮೇತ ಸದನದಲ್ಲಿ ಆರ್. ಅಶೋಕ್ ದಾಖಲೆಯನ್ನು ಪ್ರದರ್ಶಿಸಿದರು. ಫೋನ್ ಪೇನಲ್ಲಿ ಹಣ ತಗೊಂಡಿರುವ ದಾಖಲೆ ಇಲ್ಲಿದೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.