ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮದುವೆ ವಿಚಾರದಲ್ಲಿ ವೃಷಭ ರಾಶಿಯವರಿಗೆ ಚಂದ್ರ ಗ್ರಹದಿಂದ ಸಮಸ್ಯೆ

ದ್ವಾದಶಿ ರಾಶಿಗಳಲ್ಲಿ ಚಂದ್ರನ ಸಂಚಾರವು ಕೆಲವು ರಾಶಿಗಳಿಗೆ ಅದೃಷ್ಟವನ್ನು ತಂದರೆ, ಇನ್ನು ಕೆಲವರಿಗೆ ಅನಿರೀಕ್ಷಿತ ಬದಲಾವಣೆ ತರಬಹುದು. ದ್ವಾದಶ ರಾಶಿಗಳ ಮೇಲೆ ಚಂದ್ರ ಗ್ರಹ ಯಾವ ರೀತಿ ಪರಿಣಾಮ ಬೀರಬಹುದು? ಅದರಲ್ಲೂ ವೃಷಭ ರಾಶಿಗೆ ಏನು ಬದಲಾವಣೆ ಆಗಬಹುದು? ಎಂದು ಜ್ಯೋತಿಷ್ಯ ವಿಜ್ಞಾನಿ ಸಂಶೋಧಕ ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.

Profile
Pushpa Kumari Apr 8, 2026 3:13 PM

ಬೆಂಗಳೂರು, ಏ. 8: ಚಂದ್ರನ ಪ್ರಭಾವದಿಂದ ಈ ವರ್ಷ ವೃಷಭ ರಾಶಿಯವರ ಮೇಲೆ ಅನೇಕ ಬದಲಾವಣೆ ಆಗಬಹುದು. ಒಳಿತು-ಕೆಡುಕು ಎರಡು ಫಲವನ್ನು ಚಂದ್ರ ಈ ವರ್ಷ ನಿಮಗೆ ನೀಡಲಿದ್ದಾನೆ. ಚಂದ್ರನು ರಾಹು ಅಥವಾ ಶನಿಯ ಜತೆಗಿದ್ದರೆ, ಮಾನಸಿಕವಾಗಿ ಅಥವಾ ಶುಭ ಕಾರ್ಯಗಳಲ್ಲಿ ನಿಮಗೆ ವಿಳಂಬ ಉಂಟಾಗಬಹುದು. ಹಣಕಾಸಿನ ವಿಚಾರ, ಆಸ್ತಿ, ಆದಾಯದಲ್ಲಿ ಸಕಾರಾತ್ಮಕ ಬದಲಾವಣೆ ತಂದರೂ ದಾಂಪತ್ಯ ವಿಚಾರದಲ್ಲಿ ಸಮಸ್ಯೆ ಉಂಟಾಗಬಹುದು. ಅದರಲ್ಲೂ ಮದುವೆ ವಿಚಾರದಲ್ಲಿ ಸಂಗಾತಿ ಆಯ್ಕೆ ಬಗ್ಗೆ ಗೊಂದಲ ಹಾಗೂ ವಿವಿಧ ಸಮಸ್ಯೆ ಸೃಷ್ಟಿಯಾಗಬಹುದು ಎಂದು ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.