ಉದ್ಯಾವನದಲ್ಲಿ ಆಮೆಯ ಮೇಲೆ ನಿಂತು ವಿಕೃತಿ ಮೆರೆದ ಮಹಿಳೆ: ಹುಚ್ಚಾಟದ ವಿಡಿಯೊ ವೈರಲ್
Viral News: ಇತರ ಜೀವಿಗಳ ಬಗ್ಗೆ ಗಮನ ಕೊಡದೆ ತಮಗೆ ಬೇಕಾದಂತೆ ವರ್ತಿಸುವ ಘಟನೆಗಳು ಆಗಾಗ ನಡೆಯುತ್ತವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಪ್ರವಾಸಿ ತಾಣವೊಂದರಲ್ಲಿ ಮಹಿಳೆಯೊಬ್ಬಳು ಜೀವಂತ ಆಮೆಯ ಬೆನ್ನಿನ ಮೇಲೆ ನಿಂತು ವಿಕೃತಿ ಮೆರೆದಿದ್ದಾಳೆ. ಅದಕ್ಕೂ ನೋವಾಗುತ್ತದೆ ಎಂದು ಒಂಚೂರು ಮರುಕಪಟ್ಟಿಲ್ಲ. ಈ ಘಟನೆ ದೃಶ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕೆಯ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.
ಸಾಂದರ್ಭಿಕ ಚಿತ್ರ -
ಬೀಜಿಂಗ್, ಆ. 26: ಆಧುನಿಕತೆ ಬೆಳದಂತೆ ಜನರು ಮಾನವೀಯತೆಯನ್ನು ಮರೆಯುತ್ತಿದ್ದಾರೆ. ಪ್ರಾಣಿ ಹಿಂದೆ ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಪ್ರವಾಸಿ ತಾಣವೊಂದರಲ್ಲಿ ಮಹಿಳೆಯೊಬ್ಬಳು ಜೀವಂತ ಆಮೆಯ ಬೆನ್ನಿನ ಮೇಲೆ ನಿಂತು ವಿಕೃತಿ ಮೆರೆದಿದ್ದಾಳೆ. ಅದಕ್ಕೂ ನೋವಾಗುತ್ತದೆ ಎಂಬ ಯೋಚನೆಯನ್ನೂ ಮಾಡದೆ ಹುಚ್ಚಾಟ ಮೆರೆದಿದ್ದಾಳೆ. ಈ ಘಟನೆ ದೃಶ್ಯ ವೈರಲ್ ಆಗುತ್ತಿದ್ದಂತೆ (Viral News) ನೆಟ್ಟಿಗರು ಆಕೆಯ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.
ಚೀನಾದ ರ ಗುವಾಂಗ್‌ಡಾಂಗ್ ಪ್ರಾಂತ್ಯದ ಫೋಶಾನ್‌ನಲ್ಲಿರುವ ಚಾಂಗ್ಲು ಉದ್ಯಾನವನದೊಳಗೆ ಈ ಘಟನೆ ನಡೆದಿದೆ. ಮಹಿಳೆ ಆಮೆಯ ಬೆನ್ನಿನಲ್ಲಿ ನಿಂತು ಪೋಸ್ ನೀಡಿದ್ದಾಳೆ. ಆದರೆ ಹೆಚ್ಚುವರಿ ತೂಕದಿಂದ ಆಮೆ ಚಲಿಸಲು ಆಗದೆ ಕಷ್ಟಪಡುತ್ತಿರುವಂತೆ ಕಂಡುಬಂದಿದೆ. ಅದರಲ್ಲೂ ಸಣ್ಣ ಮಗುವನ್ನು ಕೂಡ ಎತ್ತಿಕೊಂಡು ಜೀವಂತ ಆಮೆಯ ಬೆನ್ನಿನ ಮೇಲೆ ಏರಿ ನಿಂತು ವಿಕೃತಿ ಮೆರೆದಿದ್ದಾಳೆ.
ವಿಡಿಯೊ ನೋಡಿ:
Visitors caught riding & kicking tortoise at China Park... 😡😡 pic.twitter.com/1r0oDeslNk
— The Daily Decode (@Sciencedecod) August 25, 2026
ಈ ಘಟನೆಯನ್ನು ಚಿತ್ರೀಕರಿಸಿದ ಪ್ರತ್ಯಕ್ಷದರ್ಶಿಯೊಬ್ಬರು ಮಹಿಳೆಯ ನಡವಳಿಕೆಯನ್ನು ಟೀಕಿಸಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಮಹಿಳೆಯು ತನ್ನ ಸಣ್ಣ ಮಗುವನ್ನು ಹಿಡಿದುಕೊಂಡು ಆಮೆಯ ಮೇಲೆ ನಿಂತಿರುವುದು ಕಾಣಬಹುದು. ಆಕೆಯ ಭಾರವನ್ನು ಆಮೆ ತಡೆದುಕೊಳ್ಳಲಾಗದೆ ಚಡ ಪಡಿಸುತ್ತಿದೆ. ಅಷ್ಟೇ ಅಲ್ಲದೆ ತನ್ನ ಇನ್ನೊಬ್ಬ ಮಗನಿಗೂ ಅದರ ಮೇಲೆ ನಿಲ್ಲುವಂತೆ ಸಲಹೆ ನೀಡಿದ್ದಾಳೆ.
ಹಿಂದೂ ವಿದ್ಯಾರ್ಥಿಗೆ ಇಸ್ಲಾಂ ಧರ್ಮದ ಕಲ್ಮಾ ಕಲಿಯಲು ಹೋಮ್‌ವರ್ಕ್ ಕೊಟ್ಟ ಶಿಕ್ಷಕಿ
ಸ್ಥಳದಲ್ಲಿ ಆಮೆಗಳ ಮೇಲೆ ಕಾಲಿಡಬಾರದು ಅಥವಾ ಕುಳಿತು ಕೊಳ್ಳಬಾರದು ಎಂದು ಸ್ಪಷ್ಟವಾಗಿ ಸೂಚಿಸಿದೂ ಈ ಮಹಿಳೆ ವರ್ತನೆ ಟೀಕೆಗೆ ಗುರಿಯಾಗಿದೆ. ವ್ಯಕ್ತಿಯ ತೂಕದಿಂದ ಚಿಪ್ಪನ್ನು ಬಿರುಕು ಬಿಡಬಹುದು ಅಥವಾ ಹಾನಿಗೊಳಗಾಗಬಹುದು, ಬೆನ್ನುಮೂಳೆಯನ್ನು ಗಾಯಗೊಳಿಸಬಹುದು ಎಂದು ತಜ್ಞರು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸ್ಪಂದಿಸಿದ ಪಾರ್ಕ್ ಆಡಳಿತ ಮಂಡಳಿಯು, ವೈದ್ಯಕೀಯ ತಂಡದಿಂದ ಆಮೆಯ ತಪಾಸಣೆ ನಡೆಸಿದ್ದು, ಆರೋಗ್ಯವಾಗಿದೆ ಎಂದು ಮಾಹಿತಿ ನೀಡಿದೆ.