ನೀರು ಬಿಟ್ಟು ರಸ್ತೆಗೆ ಬಂದ ಮೊಸಳೆ; ವಡೋದರಾದಲ್ಲಿ ಪ್ರತ್ಯಕ್ಷವಾದ ಅಪರೂಪದ ಅತಿಥಿ ಕಂಡು ಬೆಚ್ಚಿಬಿದ್ದ ಸಾರ್ವಜನಿಕರು
Viral Video: ಗುಜರಾತ್‌ನ ಜನವಸತಿ ಇರುವ ಮುಖ್ಯ ರಸ್ತೆಯಲ್ಲಿಯೇ ದೈತ್ಯ ಮೊಸಳೆಗಳು ಕಂಡು ಬಂದಿದ್ದು ಅಲ್ಲಿದ್ದ ಜನರಲ್ಲಿ ತೀವ್ರ ಆತಂಕ ಉಂಟು ಮಾಡಿದವು. ಊರ್ಮಿ ನದಿಯಿಂದ ಹೊರಬಂದು ಸುಮಾರು 10 ಅಡಿ ಉದ್ದದ ಮೊಸಳೆಗಳು ವಡೀದರಾ ನಗರದ ರಸ್ತೆಯಲ್ಲಿ ಸಂಚರಿಸಿವೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗುಜರಾತ್‌ನ ವಡೋದರಾದ ರಸ್ತೆಗೆ ಬಂದ ದೈತ್ಯ ಮೊಸಳೆ -
ಗಾಂಧಿನಗರ, ಮಾ. 5: ಇತ್ತೀಚೆಗೆ ಮೊಸಳೆಗಳ ಹಾವಳಿ ಹೆಚ್ಚಾಗಿದೆ. ಇದೀಗ ಗುಜರಾತ್‌ನ ವಡೋದರಾದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಜನವಸತಿ ಇರುವ ಮುಖ್ಯ ರಸ್ತೆಯಲ್ಲಿಯೇ ದೈತ್ಯ ಮೊಸಳೆಗಳು ಕಂಡು ಬಂದಿದ್ದು, ಅಲ್ಲಿದ್ದ ಜನರಲ್ಲಿ ಭೀತಿ ಉಂಟು ಮಾಡಿದವು. ಊರ್ಮಿ ನದಿಯಿಂದ ಹೊರಬಂದ ಸುಮಾರು 10 ಅಡಿ ಉದ್ದದ ಮೊಸಳೆಗಳು ನಗರದ ರಸ್ತೆಯಲ್ಲಿ ಸಂಚರಿಸಿವೆ. ಇದರ ವಿಡಿಯೊ ಸೋಶಿಯಲ್ ಮೀಡಿಯದಲ್ಲಿ ವೈರಲ್ (Viral Video) ಆಗಿದೆ.
ಅಚ್ಚರಿ ಎಂದರೆ ವಡೋದರಾ ನಗರದಲ್ಲಿ ಒಂದೇ ದಿನ ಎರಡು ಮೊಸಳೆಗಳು ಕಾಣಿಸಿಕೊಂಡಿವೆ. ಒಂದು ಊರ್ಮಿ ಸೇತುವೆಯ ಹತ್ತಿರ ಕಾಣಿಸಿದರೆ ಇನ್ನೊಂದು ಜಂಬುವಾ ಸೇತುವೆಯ ಗೋಕುಲ್ ಡ್ಯೂಪ್ಲೆಕ್ಸ್ ಸೊಸೈಟಿಯ ಬಳಿ ಕಂಡು ಬಂತು. ಇದನ್ನು ಮೊದಲು ಗಮನಿಸಿದ ಮಗುವೊಂದು ತಕ್ಷಣ ತನ್ನ ತಾಯಿಗೆ ಮಾಹಿತಿ ನೀಡಿದೆ. ಇದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ.
ವಿಡಿಯೊ ನೋಡಿ:
Chill this is Vadodara 🐊🐊
— My Vadodara (@MyVadodara) March 5, 2026
Crocodile went to hang on the Urmi Bridge of Vadodara!#Vadodara pic.twitter.com/M7Cmk5Zc1d
ವರದಿಗಳ ಪ್ರಕಾರ, ಮಾರ್ಚ್ 4ರಂದು ತಡರಾತ್ರಿ, 10 ಅಡಿ ಉದ್ದದ ಮೊಸಳೆ ಊರ್ಮಿ ಸೇತುವೆಯ ಬಳಿ ಮುಕ್ತವಾಗಿ ತಿರುಗಾಡುತ್ತಿತ್ತು. ಜನನಿಬಿಡ ರಸ್ತೆಯಲ್ಲಿ ಇಷ್ಟು ದೊಡ್ಡ ಮೊಸಳೆಯನ್ನು ಅನಿರೀಕ್ಷಿತವಾಗಿ ನೋಡಿ ಪಾದಚಾರಿಗಳು ಹಾಗೂ ಸಾರ್ವಜನಿಕರು ಬೆಚ್ಚಿ ಬಿದ್ದರು. ಸಾರ್ವಜನಿಕರ ಸುರಕ್ಷತೆ ಮತ್ತು ಮೊಸಳೆಯ ಯೋಗಕ್ಷೇಮದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅಧಿಕಾರಿಗಳು ಸ್ಥಳಕ್ಕೆ ಬಂದು ಮೊಸಳೆಯನ್ನು ಸುರಕ್ಷಿತವಾಗಿ ಸಾಗಿಸಿದ್ದಾರೆ.
ವೇದಿಕೆಯಲ್ಲೇ ಆ್ಯಂಕರ್‌ಗೆ ಚಪ್ಪಲಿಯಿಂದ ಹೊಡೆದ ಖ್ಯಾತ ಗಾಯಕಿ
ವೈರಲ್ ವಿಡಿಯೊ ನಗರದ ಜನನಿಬಿಡ ಹೆದ್ದಾಿಯಲ್ಲಿ ತೆವಳಿಕೊಂಡು ಹೋಗುತ್ತಿರುವ ಬೃಹತ್ ಮೊಸಳೆಯನ್ನು ತೋರಿಸುತ್ತದೆ. ಇದು ಪ್ರಯಾಣಿಕರನ್ನು ದಿಗ್ಭ್ರಮೆಗೊಳಿಸಿದೆ. ಒಂದು ಕಾಲದಲ್ಲಿ ಅಪರೂಪವೆಂದು ಪರಿಗಣಿಸುತ್ತಿದ್ದ ಇಂತಹ ದೃಶ್ಯಗಳು ಈಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಈ ಪ್ರದೇಶವು ಕೆರೆ ಮತ್ತು ನದಿಗೆ ಹತ್ತಿರವಿರುವುದರಿಂದ ಮೊಸಳೆಗಳು ಆಗಾಗ ಇಲ್ಲಿಗೆ ಲಗ್ಗೆ ಇಡುತ್ತವೆ.
ಕಳೆದ ಕೆಲವು ದಶಕಗಳಲ್ಲಿ ವಡೋದರಾ ಜಿಲ್ಲೆಯಲ್ಲಿ ಮೊಸಳೆಗಳ ಸಂಖ್ಯೆ ವೇಗವಾಗಿ ಬೆಳೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ, 1,000ಕ್ಕೂ ಹೆಚ್ಚು ಮೊಸಳೆಗಳು ಜಿಲ್ಲೆಯ ನದಿಗಳು, ಕೊಳಗಳು ಮತ್ತು ಸುತ್ತಮುತ್ತಲಿನ ಜೌಗು ಪ್ರದೇಶಗಳಲ್ಲಿ ವಾಸಿಸುತ್ತವೆ ಎನ್ನಲಾಗಿದೆ.