ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನೇಪಾಳ ಪ್ರವಾಹ; ತುಂಬಿ ಹರಿಯುತ್ತಿದ್ದ ನದಿಯಲ್ಲಿ ಈಜಿ ಭಾರತದ ತಲುಪಿದ 2 ಗೋಲ್ಡನ್ ರಿಟ್ರೈವರ್‌ ನಾಯಿಗಳು!

ನೇಪಾಳದಲ್ಲಿ ಸಂಭವಿಸಿದ ಹಠಾತ್​ ಜಲಪ್ರಳಯಕ್ಕೆ ಇದೀಗ 600ಕ್ಕೂ ಹೆಚ್ಚು ಮಂದಿ ದುರಂತ ಸಾವಿಗೀಡಾಗಿದ್ದು, 3 ಸಾವಿರಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ. ಪ್ರವಾಹದ ಭೀಕರತೆಗೆ ಅದೆಷ್ಟೋ ಬೃಹತ್​ ಕಟ್ಟಡಗಳು, ಮನೆಗಳು ಧರೆಗೆ ಉರುಳಿ, ಸಾವಿರಾರು ಜನರು ಮನೆ ಕಳೆದುಕೊಂಡು ಬೀದಿಪಾಲಾಗಿದ್ದಾರೆ.

ನೇಪಾಳ ಪ್ರವಾಹ; ವೈರಲ್ ಆಗ್ತಿವೆ ಹೃದಯಸ್ಪರ್ಶಿ ವಿಡಿಯೋಗಳು

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Aug 30, 2026 11:14 AM

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಹಠಾತ್​ ಜಲಪ್ರಳಯಕ್ಕೆ ಇದೀಗ 600ಕ್ಕೂ ಹೆಚ್ಚು ಮಂದಿ ದುರಂತ ಸಾವಿಗೀಡಾಗಿದ್ದು, 3 ಸಾವಿರಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ. ಪ್ರವಾಹದ ಭೀಕರತೆಗೆ ಅದೆಷ್ಟೋ ಬೃಹತ್​ (Nepal Flash Floods) ಕಟ್ಟಡಗಳು, ಮನೆಗಳು ಧರೆಗೆ ಉರುಳಿ, ಸಾವಿರಾರು ಜನರು ಮನೆ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಜೀವ ಮತ್ತು ಆಸ್ತಿಪಾಸ್ತಿ ನಷ್ಟದ ಕರಾಳ ವರದಿಗಳ ಮಧ್ಯೆ, ಭರವಸೆಯ ಒಂದು ಹೃದಯಸ್ಪರ್ಶಿ ಕಥೆ ಇದೀಗ ವೈರಲ್‌ ಆಗಿದೆ.

ಎರಡು ಗೋಲ್ಡನ್ ರಿಟ್ರೈವರ್ ನಾಯಿಗಳು ನೇಪಾಳದ ಪ್ರವಾಹದ ನೀರಿನಲ್ಲಿ ಈಜಿಕೊಂಡು ಅಂತಿಮವಾಗಿ ಉತ್ತರ ಪ್ರದೇಶದ ಗಡಿ ಜಿಲ್ಲೆಯ ಮಹಾರಾಜ್‌ಗಂಜ್‌ನಲ್ಲಿರುವ ಹಳ್ಳಿಯನ್ನು ತಲುಪಿದ ವಿಡಿಯೋ ಇದೀಗ ವೈರಲ್‌ ಆಗಿದೆ. ನಾಯಿಯ ಮಾಲೀಕರನ್ನು ತಲುಪಲು ಸಹಾಯ ಮಾಡಿ ಎಂದು ಗ್ರಾಮಸ್ಥರು ಹೇಳಿದ್ದಾಳೆ. ಒಂದು ನಾಯಿಯ ಕಣ್ಣಿಗೆ ಗಾಯವಾಗಿದೆ. ಗ್ರಾಮವನ್ನು ತಲುಪುವ ಮೊದಲು ನಾಯಿಗಳು ನದಿಯ ಮೂಲಕ ಈಜಿದ್ದವು, ಅಲ್ಲಿ ಕೆಲವು ಗ್ರಾಮಸ್ಥರು ಅವುಗಳನ್ನು ತಮ್ಮ ಮನೆಗಳಿಗೆ ಕರೆದೊಯ್ದರು. ನಾಯಿಗಳಿಗೆ ಗ್ರಾಮಸ್ಥರು ಆಹಾರವನ್ನು ನೀಡಿದ್ದಾರೆ.

ವಿಡಿಯೋ ನೋಡಿ



ನೇಪಾಳಕ್ಕೆ ಸಂಬಂಧಿಸಿದಂತೆ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನೇಪಾಳದಲ್ಲಿ ಜರುಗಿದ ಪ್ರವಾಹದ ನಡುವೆ ಹಸಿರು ಮನೆ, ಆ ಮನೆಯ ಬಾಲ್ಕನಿಯಲ್ಲಿ ಕುಟುಂಬವೊಂದು ಸಿಲುಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಈಗ ಮತ್ತೆ ವೈರಲ್​ ಆಗಿರುವ ಹೊಸ ವಿಡಿಯೋಗಳು ಬಾಲ್ಕನಿಯಲ್ಲಿ ಸಿಲುಕಿದ್ದ ಕುಟುಂಬ ಸುರಕ್ಷಿತವಾಗಿರುವುದನ್ನು ದೃಢಪಡಿಸಿವೆ.

ನೇಪಾಳದಲ್ಲಿ ಸಂಭವಿಸಿದ ಹಠಾತ್​ ಪ್ರವಾಹ ತಂದ ವಿನಾಶವನ್ನು ತೋರಿಸುವ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಜಗತ್ತಿನ ಗಮನ ಸೆಳೆದಿವೆ. ಅವುಗಳಲ್ಲಿ ಪ್ರಮುಖವಾಗಿ ಕುಸಿದು ಬೀಳುತ್ತಿರುವ ಮನೆಗಳು, ತೇಲುತ್ತಿರುವ ಮೃತದೇಹಗಳು, ಬದುಕುಳಿದವರ ಅಸಹಾಯಕತೆ, ಪ್ರವಾಹದಲ್ಲಿ ಕಣ್ಮರೆಯಾದ ಸ್ಥಳಗಳ ಬಗ್ಗೆ ಸಾಕಷ್ಟು ವಿಡಿಯೋಗಳು ಗಮನ ಸೆಳೆಯುತ್ತಿವೆ.

ನೇಪಾಳ ಪ್ರವಾಹ: ಸುರಕ್ಷಿತವಾಗಿ ದೆಹಲಿಗೆ ಬಂದಿಳಿದ 21 ಮಂದಿ ತಮಿಳುನಾಡಿನ ಯಾತ್ರಿಕರು

ಸುತ್ತಮುತ್ತಲಿನ ಕಟ್ಟಡಗಳು ಕೊಚ್ಚಿಹೋದಾಗ, ಪ್ರವಾಹದ ನೀರು ಆ ಪ್ರದೇಶದಲ್ಲಿ ಉಕ್ಕಿ ಹರಿಯುತ್ತಿದ್ದರೂ ಹಸಿರು ಮನೆ ದೃಢವಾಗಿ ನಿಂತಿತ್ತು. ಈ ವಿಡಿಯೋ ನೋಡಿ ಆ ಮನೆಯೊಳಗಿದ್ದ ಕುಟುಂಬದ ಬಗ್ಗೆ ಸಾಕಷ್ಟು ಕಾಳಜಿ ಮತ್ತು ಪ್ರಾರ್ಥನೆ ವ್ಯಕ್ತವಾಗಿತ್ತು. ​ಈ ದೃಶ್ಯಗಳು ವೈರಲ್ ಆದ ಕೆಲವು ದಿನಗಳ ನಂತರ, ಹೊಸ ವಿಡಿಯೋ ದೃಶ್ಯಾವಳಿಗಳು ವೈರಲ್​ ಆಗಿದ್ದು, ಹಸಿರು ಮನೆಯಲ್ಲಿದ್ದವರು ಉಕ್ಕಿ ಹರಿಯುವ ಪ್ರವಾಹದಿಂದ ಬದುಕುಳಿದಿರುವುದನ್ನು ದೃಢಪಡಿಸಿವೆ.