Viral Video: ಪ್ರವಾಸಿ ಮಹಿಳೆಗೆ ಖಾಸಗಿ ಅಂಗ ತೋರಿಸಿದ ನೀಚ! ವಿಡಿಯೊ ಇಲ್ಲಿದೆ
ಶ್ರೀಲಂಕಾ ಪ್ರವಾಸದ ವೇಳೆ ನ್ಯೂಜಿಲೆಂಡ್ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. 23 ವರ್ಷದ ಯುವಕನಿಂದ ಪ್ರವಾಸಿ ಮಹಿಳೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದು ಈ ಸಂಬಂಧ ಕಿಡಿಗೇಡಿಯನ್ನು ಬಂಧಿಸಲಾಗಿದೆ. ಸದ್ಯ ಮಹಿಳೆ ಈ ಕುರಿತ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಪ್ರವಾಸಿಗರ ಸುರಕ್ಷತೆ ಬಗ್ಗೆ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಪ್ರವಾಸಿ ಮಹಿಳೆ ಜೊತೆ ಮಹಿಳೆ ಅಸಭ್ಯ ವರ್ತನೆ -
ಕೊಲಂಬೊ: ಇಂದು ಪ್ರವಾಸಿಗರಿಗೆ ಕಿರುಕುಳ ನೀಡುವ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಇತ್ತೀಚೆಗೆ, ಜರ್ಮನ್ ಟ್ರಾವೆಲ್ ಇನ್ ಫ್ಲುಯೆನ್ಸರ್‌ಯೊಬ್ಬರು ಗೋವಾದಲ್ಲಿ ಆಟೋ ಚಾಲಕರಿಂದ ಕಿರುಕುಳಕ್ಕೆ ಒಳಗಾಗಿದ್ದರು. ಇದೀಗ ಅಂತಹುದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು ಶ್ರೀಲಂಕಾ ಪ್ರವಾಸದ ವೇಳೆ ನ್ಯೂಜಿಲೆಂಡ್ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. 23 ವರ್ಷದ ಯುವಕನಿಂದ ಪ್ರವಾಸಿ ಮಹಿಳೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದು ಈ ಸಂಬಂಧ 23 ವರ್ಷದ ಯುವಕನನ್ನು ಬಂಧಿಸಲಾಗಿದೆ. ಸದ್ಯ ಮಹಿಳೆ ಈ ಕುರಿತ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಪ್ರವಾಸಿಗರ ಸುರಕ್ಷತೆ ಬಗ್ಗೆ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೊ ವೈರಲ್ (Viral Video) ಆಗುತ್ತಿದ್ದಂತೆ ಶ್ರೀಲಂಕಾದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ನ್ಯೂಜಿಲೆಂಡ್‌ನ ಮಹಿಳಾ ಪ್ರವಾಸಿಯೊಬ್ಬರು ಒಬ್ಬರೇ ಪ್ರಯಾಣ ಬೆಳೆಸಿದ್ದರು. ಅವರು ಶ್ರೀಲಂಕಾದ ಅರುಗಮ್ ಬೇ (Arugam Bay) ನಿಂದ ಪಸ್ಸಿಕುದಾ ಕಡೆಗೆ ಆಟೋ-ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಮಹಿಳೆಯ ಹೇಳಿಕೆಯ ಪ್ರಕಾರ, ಸ್ಕೂಟರ್‌ನಲ್ಲಿದ್ದ ಒಬ್ಬ ವ್ಯಕ್ತಿ ಆಕೆಯ ವಾಹನದ ಹಿಂದೆಯೆ ಬಂದು ಹಿಂಬಾಲಿಸಿದ್ದಾನೆ. ಮಹಿಳೆ ವಿರಾಮಕ್ಕಾಗಿ ವಾಹನ ನಿಲ್ಲಿಸಿದಾಗ, ಆ ವ್ಯಕ್ತಿ ಆಕೆಯ ಬಳಿ ಬಂದು ಮಾತುಕತೆ ನಡೆಸಲು ಪ್ರಯತ್ನಿಸಿದ್ದಾನೆ. ಆರಂಭದಲ್ಲಿ ಆತ ಸ್ನೇಹಪರವಾಗಿ ಮಾತನಾಡಿಸಿದ್ದು, ನಂತರ ಆತ ಲೈಂಗಿಕವಾಗಿ ಅಸಭ್ಯ ಪ್ರಶ್ನೆಯನ್ನು ಕೇಳಿದ್ದಾನೆ ಮತ್ತು ದಿಢೀರ್ ಎಂದು ತನ್ನ ಜನನಾಂಗವನ್ನು ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ತಕ್ಷಣ ಆಘಾತಕ್ಕೊಳಗಾದ ಮಹಿಳೆ ತನ್ನ ಪ್ರಯಾಣವನ್ನು ಮುಂದುವರೆಸಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ:
This is the video you are looking for pic.twitter.com/aNwnfL5mI2
— David Benjamin (@DBenja_me) November 17, 2025
ಮಹಿಳೆ ಈ ಬಗ್ಗೆ ಲೈಂಗಿಕ ಕಿರುಕುಳದ ಆಘಾತಕಾರಿ ಅನುಭವವನ್ನು ವಿವರಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಶ್ರೀಲಂಕಾದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯ ಕುರಿತು ಮಹಿಳೆ ಔಪಚಾರಿಕ ಪೊಲೀಸ್ ದೂರು ದಾಖಲಿಸಿದ ನಂತರ ಮತ್ತು ಅವರು ಹಂಚಿಕೊಂಡಿದ್ದ ವೀಡಿಯೋ ವೈರಲ್ ಆದ ಕೂಡಲೇ, ಶ್ರೀಲಂಕಾ ಪೊಲೀಸರು ತೀವ್ರ ತನಿಖೆ ಕೈಗೊಂಡರು.
ಈ ಬಗ್ಗೆ 23 ವರ್ಷದ ಯುವಕನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಪ್ರವಾಸಿಗರ ಮೇಲೆ ನಡೆಯುವ ಇಂತಹ ಅಪರಾಧಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ನೆಟ್ಟಿಗರು ಮನವಿ ಮಾಡಿದ್ದಾರೆ. ಈ ಬಗ್ಗೆ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದು ಇಂತಹ ಅಸಹ್ಯ ವ್ಯಕ್ತಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಬರೆದುಕೊಂಡಿದ್ದಾರೆ. ಈ ಘಟನೆಯು ಪ್ರವಾಸಿಗರ ಸುರಕ್ಷತೆ ಬಗ್ಗೆ ಗಂಭೀರ ಕಳವಳವನ್ನು ಉಂಟು ಮಾಡಿದೆ