ಕಠ್ಮಂಡು,ಆ. 29: ನೇಪಾಳ-ಟಿಬೆಟ್ ಗಡಿ (Nepal Flood) ಭಾಗದಲ್ಲಿ ಪ್ರವಾಹ ಉಂಟಾದ ಬಳಿಕ ಪರಿಸ್ಥಿತಿ ಗಂಭೀರಗೊಂಡಿದೆ. ಈ ದುರಂತದಲ್ಲಿ ಸಾವಿನ ಸಂಖ್ಯೆ 620 ದಾಟಿದ್ದು, ಸಾವಿರಾರು ಜನರು ನಾಪತ್ತೆಯಾಗಿದ್ದಾರೆ. ರಕ್ಷಣಾ ತಂಡಗಳು ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ಸ್ಥಳಾಂತರಿಸುತ್ತಿದ್ದು, ಶೋಧ ಕಾರ್ಯಾಚರಣೆ ಮುಂದುವರಿಸಿವೆ. ಇದರ ಬೆನ್ನಲ್ಲೇ ಅತ್ಯಂತ ಅಘಾತಕಾರಿ ಘಟನೆಯೊಂದು ನಡೆದಿದೆ. ನದಿಯಲ್ಲಿ ಕೊಚ್ಚಿಕೊಂಡು ಬಂದಿದ್ದ ಕ್ಯಾಶ್ ಲಾಕರ್ ಒಡೆದು ಕಿಡಿಗೇಡಿಗಳು 93 ಲಕ್ಷ ರುಪಾಯಿ ನಗದು ದೋಚಿರುವ ಘಟನೆ ನಡೆದಿದೆ. ಜೀವ ಹೋಗುವ ಭಯದಲ್ಲೂ ಹಣ ದೋಚಿದ ಕಿಡೀಗೆಡಿಗಳ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.
ಪ್ರಕೃತಿ ವಿಕೋಪದಿಂದ ತಲೆಯೆತ್ತಲಾಗದ ಸಂದರ್ಭದಲ್ಲೂ ಈ ಅಮಾನವೀಯ ಘಟನೆ ನಡೆದಿದೆ. ತೀವ್ರ ಪ್ರವಾಹದ ನಡುವೆ ಕೊಚ್ಚಿಕೊಂಡು ಬಂದಿದ್ದ ಸೇಫ್ ಲಾಕರ್ ಒಡೆದು 93 ಲಕ್ಷ ರುಪಾಯಿ ದೋಚಿದ್ದಾರೆ. ಧಾಡಿಂಗ್‌ನಲ್ಲಿ ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ 29 ಜನರನ್ನು ಬಂಧಿಸಿದ್ದು 92.68 ಲಕ್ಷ ರುಪಾಯಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ:
ಪ್ರವಾಹದ ರಭಸಕ್ಕೆ ರಸುವಾದ ಭೋಟೆಕೋಶಿಯಿಂದ ಸೇಫರ್ ಲಾಕ್ ಕೊಚ್ಚಿ ಹೋಗಿದೆ ಎಂದು ವರದಿಯಾಗಿದೆ. ಈ ಸೇಫ್ ಲಾಕರ್ ತ್ರಿಶೂಲಿ ನದಿಯಲ್ಲಿ ತೇಲಿಬಂದು, ಧಾಡಿಂಗ್ ಜಿಲ್ಲೆಯ ಬೆಲ್ಖುಖೋಲಾ ಬಳಿ ದಂಡೆಯಲ್ಲಿ ಸಿಲುಕಿಕೊಂಡಿತ್ತು. ನದಿ ದಂಡೆಯಲ್ಲಿದ್ದ ಸೇಫ್ ಲಾಕರ್ ಅನ್ನು ಬಲವಂತವಾಗಿ ಒಡೆದು ಅದರಲ್ಲಿದ್ದ ಹಣವನ್ನು ಸ್ಥಳೀಯರು ಹಂಚಿಕೊಳ್ಳುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತು.
ನಿದ್ದೆಯ ಮಂಪರಿನಲ್ಲಿ ಬೈಕ್ ಸವಾರನನ್ನು ಅರ್ಧ ಕಿಲೋ ಮೀಟರ್ ಎಳೆದೊಯ್ದ ಉಬರ್ ಚಾಲಕ
ಆರಂಭಿಕ ತನಿಖೆ ಮೂಲಕ ಅಧಿಕಾರಿಗಳು 29 ವ್ಯಕ್ತಿಗಳನ್ನು ಬಂಧಿಸಿದ್ದು 92,68,505 ರುಪಾಯಿ ವಶಪಡಿಸಿಕೊಂಡಿದ್ದಾರೆ. ಬಂಧಿತರಲ್ಲಿ ಹೆಚ್ಚಿನವರು ಗಾಲ್ಚಿ-4ರ ಮಾಸ್ತರ್ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರವಾಹದ ನೀರಿನಲ್ಲಿ ಮೃತ ಮಹಿಳೆಯ ದೇಹದಿಂದ ಚಿನ್ನದ ಕಿವಿಯೋಲೆಗಳನ್ನು ಕದ್ದ ಆರೋಪದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ನಾರಾಯಣಿ ನದಿಯಲ್ಲಿ ಪ್ರವಾಹಕ್ಕೆ ಸಿಲುಕಿದ ಮಹಿಳೆಯ ದೇಹದಿಂದ ಚಿನ್ನದ ಕಿವಿಯೋಲೆಯನ್ನು ಇಬ್ಬರು ತೆಗೆಯುತ್ತಿರುವ ವಿಡಿಯೊ ವೈರಲ್ ಆಗಿತ್ತು. ಈ ವಿಡಿಯೊ ಆಧರಿಸಿ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.