ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅಬ್ಬಾ! ಒಂಚೂರು ಭಯ ಇಲ್ಲದೆ ಮೇಲಿಂದ ಸ್ವಿಮ್ಮಿಂಗ್‌ ಪೂಲ್‌ಗೆ ಜಿಗಿದ 6ರ ಪೋರ; ವಿಡಿಯೋ ನೋಡಿದ್ರೆ ಎದೆ ಝಲ್‌ ಅನ್ನುತ್ತೆ

boy executing a dive: ಚೀನಾದ 6 ವರ್ಷದ ಬಾಲಕನೊಬ್ಬನ 10 ಮೀಟರ್ ಪ್ಲಾಟ್‌ಫಾರ್ಮ್ ಡೈವ್‌ ಮಾಡುತ್ತಿರುವ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರನ್ನು ಅಚ್ಚರಿಗೊಳಿಸಿದೆ. ಬಾಲಕನ ಅಸಾಮಾನ್ಯ ಸಾಮರ್ಥ್ಯಕ್ಕೆ ಇನ್ಸ್ಟಾಗ್ರಾಂ ಬಳಕೆದಾರರು ನೆಬ್ಬೆರಗಾಗಿದ್ದಾರೆ. ಈ ಬಾಲಕ 2040 ರಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತನಾಗುತ್ತಾನೆ ಎಂದು ಬಳಕೆದಾರರೊಬ್ಬರು ಭವಿಷ್ಯ ನುಡಿದಿದ್ದಾರೆ.

ಬೀಜಿಂಗ್: ಚೀನಾದಲ್ಲಿ ಮಕ್ಕಳು ಕ್ರೀಡೆಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದಾರೆ. ವಿಶೇಷವಾಗಿ ಇತ್ತೀಚಿನ ವರ್ಷಗಳಲ್ಲಿ, ಶಾಲೆಗಳಲ್ಲಿ ದೈಹಿಕ ಚಟುವಟಿಕೆ ಮತ್ತು ಕ್ರೀಡಾ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಇದರಲ್ಲಿ ಮೂಲಸೌಕರ್ಯದಲ್ಲಿ ಹೆಚ್ಚಿದ ಹೂಡಿಕೆ, ರಚನಾತ್ಮಕ ಕಾರ್ಯಕ್ರಮಗಳು ಮತ್ತು ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕಾಗಿ ಕ್ರೀಡೆಗಳ ಪ್ರಯೋಜನಗಳ ಬಗ್ಗೆ ಅರಿವು ಹೆಚ್ಚುತ್ತಿದೆ. ಚೀನಾದಲ್ಲಿ (China), ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಅಂದರೆ ಐದು ವರ್ಷ ವಯಸ್ಸಿನಲ್ಲೇ (Viral Video) ವಿಶೇಷ ಕ್ರೀಡಾ ತರಬೇತಿಯನ್ನು ಪ್ರಾರಂಭಿಸಬಹುದು.

ಈ ದೇಶವು ಒಲಿಂಪಿಕ್‍ನತ್ತ ತನ್ನ ದೃಷ್ಟಿ ಹರಿಸಿದೆ ಅಂದರೆ ತಪ್ಪಾಗಲಾರದು. ಇದೀಗ ಬಾಲಕನೊಬ್ಬನ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಶಾಂಘೈನ 6 ವರ್ಷದ ಅಥ್ಲೀಟ್ 10 ಮೀಟರ್ ಪ್ಲಾಟ್‌ಫಾರ್ಮ್ ಡೈವ್‌ ಮಾಡುತ್ತಿರುವ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರನ್ನು ಅಚ್ಚರಿಗೊಳಿಸಿದೆ.

ವಿಡಿಯೊ ವೀಕ್ಷಿಸಿ:

ಇನ್‌ಸ್ಟಾಗ್ರಾಮ್ ವಿಡಿಯೊದಲ್ಲಿ, ಬಾಲಕ (ಡೈವರ್) ಆತ್ಮವಿಶ್ವಾಸದಿಂದ ಪ್ಲಾಟ್‌ಫಾರ್ಮ್‌ಗೆ ಹೆಜ್ಜೆ ಹಾಕಿದ್ದಾನೆ. ಎಚ್ಚರಿಕೆಯಿಂದ ಪರಿಶೀಲಿಸಿ, ತನ್ನ ಕೈಗಳನ್ನು ಮೇಲೆ, ಕೆಳಗೆ ಮಾಡುತ್ತಾ ಪರಿಪೂರ್ಣ ನಿಲುವನ್ನು ತೆಗೆದುಕೊಂಡು ನಂತರ ಪೂಲ್‌ಗೆ ಹಾರಿದ್ದಾನೆ.

ಇದನ್ನೂ ಓದಿ: Viral Video: ಮೇಕೆ ನುಂಗಿದ ದೈತ್ಯ ಹೆಬ್ಬಾವನ್ನು ಕೊಡಲಿಯಿಂದ ಹೊಡೆದು ಕೊಂದ ಕಿಡಿಗೇಡಿಗಳು; ಶಾಕಿಂಗ್‌ ವಿಡಿಯೊ ಇಲ್ಲಿದೆ

ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನಸೆಳೆದಿದೆ. ಬಾಲಕನ ಅಸಾಮಾನ್ಯ ಸಾಮರ್ಥ್ಯಕ್ಕೆ ಇನ್ಸ್ಟಾಗ್ರಾಂ ಬಳಕೆದಾರರು ನಿಬ್ಬೆರಗಾಗಿದ್ದಾರೆ. ಈ ಬಾಲಕ 2040 ರಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತನಾಗುತ್ತಾನೆ ಎಂದು ಬಳಕೆದಾರರೊಬ್ಬರು ಭವಿಷ್ಯ ನುಡಿದಿದ್ದಾರೆ. ಮಗುವಿನ ಭವಿಷ್ಯ ಉಜ್ವಲವಾಗಿದೆ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.