ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸುಡೋ ಮರುಭೂಮಿಯಲ್ಲಿ ನೀರು, ಆಹಾರವಿಲ್ಲದೆ ಬದುಕುಳಿದಿದ್ದು ಹೇಗೆ? ಶಾಕಿಂಗ್‌ ವಿಡಿಯೊ ಇಲ್ಲಿದೆ

ಸೌದಿ ಕುಟುಂಬವೊಂದು ಮಧ್ಯ ಸೌದಿ ಅರೇಬಿಯಾದ ಪ್ರದೇಶವಾದ ಅಲ್-ದವಾದ್ಮಿಯ ದಕ್ಷಿಣದ ದೂರದ ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದಾಗ ಕಾರು ಮರಳಿನಲ್ಲಿ ಸಿಲುಕಿಕೊಂಡು ಅವರು ಮರುಭೂಮಿಯ ಮಧ್ಯದಲ್ಲಿ ಉಳಿಯುವಂತಾಯಿತು. ಸಹಾಯಕ್ಕಾಗಿ ಯಾರನ್ನು ಕರೆಯಲಾಗದೆ ಸುಡು ಬಿಸಿಲಿನಲ್ಲಿ ಜೀವಕ್ಕಾಗಿ ಹೋರಾಡಿದ ಅವರ ಪರಿಸ್ಥಿತಿಯನ್ನು ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ವಿವರಿಸಲಾಗಿದೆ. ಇದೀಗ ವೈರಲ್(Viral Video)ಆಗಿದೆ.

ರಿಯಾದ್‌: ಕಳೆದ ವಾರ ಸೌದಿ ಕುಟುಂಬವೊಂದು ಮಧ್ಯ ಸೌದಿ ಅರೇಬಿಯಾದ ಪ್ರದೇಶವಾದ ಅಲ್-ದವಾದ್ಮಿಯ ದಕ್ಷಿಣದ ದೂರದ ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಕಾರು ಮರಳಿನಲ್ಲಿ ಸಿಲುಕಿಕೊಂಡಿತು. ಸಹಾಯಕ್ಕಾಗಿ ಕರೆ ಮಾಡಲು ಅವರಿಗೆ ಅಲ್ಲಿ ಮೊಬೈಲ್ ಫೋನ್ ಸಿಗ್ನಲ್ ಸಿಗದೇ ಈ ಕುಟುಂಬ ಮರುಭೂಮಿಯಲ್ಲಿ 24 ಗಂಟೆಗಳ ಕಾಲ ಸಿಲುಕಿಕೊಂಡಿತ್ತಂತೆ. ಕೊನೆಗೆ ಎಂಜಾದ್ ರಕ್ಷಣಾ ತಂಡವು ಅವರನ್ನು ರಕ್ಷಿಸಿತಂತೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಸರಿಯಾದ ಸಿದ್ಧತೆಗಳಿಲ್ಲದೆ ಸಾಹಸ ಪ್ರವಾಸಕ್ಕೆ ಹೋಗುವುದನ್ನು ತಪ್ಪಿಸುವಂತೆ ನೆಟ್ಟಿಗರು ಆ ಕುಟುಂಬ ಸದಸ್ಯರಿಗೆ ಸಲಹೆ ನೀಡಿದ್ದಾರೆ.

ಈ ಘಟನೆ ಇತ್ತೀಚೆಗೆ ನಡೆದಿದ್ದು ಘಟನೆಯ ವಿವರಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಕಾರು ಮರುಭೂಮಿಯಲ್ಲಿ ಸಿಲುಕಿಕೊಂಡಾಗ ಸಹಾಯಕ್ಕಾಗಿ ಯಾರನ್ನೂ ಸಂಪರ್ಕಿಸಲು ಆಗದೇ ಅನ್ನ-ನೀರು ಇಲ್ಲದೇ ಕುಟುಂಬವು ಬದುಕುಳಿಯಲು ಹರಸಾಹಸ ಮಾಡಿದೆಯಂತೆ. ಮರುಭೂಮಿಯ ಸುಡು ಬಿಸಿಲಿನಲ್ಲಿ ಅವರು ಹೈಡ್ರೇಟ್ ಆಗಿ ಉಳಿಯಲು ಕಾರಿನ ರೇಡಿಯೇಟರ್‌ನಿಂದ ನೀರನ್ನು ತೆಗೆದು ಕುಡಿದಿದ್ದಾರಂತೆ ಮತ್ತು ಹಸಿವನ್ನು ತಣಿಸಿಕೊಳ್ಳಲು ಮರುಭೂಮಿ ಸಸ್ಯಗಳ ಎಲೆಗಳನ್ನು ಕಿತ್ತು ತಿಂದಿದ್ದಾರಂತೆ.



ಇತ್ತ ಕುಟುಂಬವು ಕಾಣೆಯಾಗಿದೆ ಎಂದು ವರದಿಯಾದಾಗ, ಸೌದಿ ಸ್ವಯಂಸೇವಕ ರೆಸ್ಕ್ಯು ತಂಡ "ಎಂಜಾದ್" ದೊಡ್ಡ ಮಟ್ಟದಲ್ಲಿ ಶೋಧ ಕಾರ್ಯಾಚರಣೆಯನ್ನು ಶುರುಮಾಡಿತು. ಕಾಣೆಯಾದ ಜನರನ್ನು, ವಿಶೇಷವಾಗಿ ಮರುಭೂಮಿಗಳು ಮತ್ತು ಪರ್ವತಗಳಂತಹ ದೂರದ ಪ್ರದೇಶಗಳಲ್ಲಿ ಪತ್ತೆಹಚ್ಚಲು ಸಹಾಯ ಮಾಡಲು ಎಂಜಾದ್ ಹೆಸರುವಾಸಿಯಾಗಿದೆ. ಈ ರಕ್ಷಣಾ ತಂಡವು ಮೇಲಿನಿಂದ ವಿಶಾಲ ಮರುಭೂಮಿಯನ್ನು ಸ್ಕ್ಯಾನ್ ಮಾಡಲು ಡ್ರೋನ್‍ಗಳನ್ನು ಬಳಸಿತು ಮತ್ತು ಕಾಲ್ನಡಿಗೆಯಲ್ಲಿ ಮತ್ತು ವಾಹನಗಳಲ್ಲಿ ಪ್ರದೇಶಗಳನ್ನು ಕವರ್ ಮಾಡಲು ಶೋಧ ತಂಡಗಳನ್ನು ಕಳುಹಿಸಿತು. ಆದರೆ ಮರುಭೂಮಿಯಲ್ಲಿ ಹೆಚ್ಚು ಸಮಯ ಓಡಾಡುವುದರಿಂದ ತೀವ್ರ ನಿರ್ಜಲೀಕರಣ, ಹೀಟ್ ಸ್ಟ್ರೋಕ್ ಅಥವಾ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿದಿದ್ದರೂ ಕೂಡ ಈ ತಂಡ ತಮ್ಮ ಜೀವ ಪಣಕಿಟ್ಟು ಕುಟುಂಬದ ಹುಡುಕಾಟ ನಡೆಸಿತ್ತಂತೆ.

24 ಗಂಟೆಗಳಿಗಿಂತ ಹೆಚ್ಚು ಕಾಲ ಹುಡುಕಿದ ನಂತರ, ಕುಟುಂಬವು ಅಂತಿಮವಾಗಿ ರೆಸ್ಕ್ಯು ತಂಡವಿರುವ ಸ್ಥಳದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿ, ಹಲ್ಬನ್ ಮರುಭೂಮಿಯ ಬಳಿ ಪತ್ತೆಯಾಗಿದೆ. ಅವರು ಸಹಾಯವನ್ನು ಹುಡುಕುತ್ತಾ ಬಹಳ ದೂರ ನಡೆಯುತ್ತಾ ಬಂದಿದ್ದರಂತೆ.ಇದು ರಕ್ಷಣಾ ತಂಡದವರಿಗೆ ಅವರನ್ನು ಸುಲಭವಾಗಿ ಪತ್ತೆಹಚ್ಚಲು ಸಹಾಯ ಮಾಡಿತ್ತು.

ಪತ್ತೆಯಾದ ಕುಟುಂಬದ ಸದಸ್ಯರಿಗೆ ಎಂಜಾದ್ ತಂಡವು ತಕ್ಷಣ ಕುಡಿಯಲು ನೀರು, ತಿನ್ನಲು ಆಹಾರ ನೀಡಿ ವೈದ್ಯಕೀಯ ಚಿಕಿತ್ಸೆ ನೀಡಿತಂತೆ. ರಕ್ಷಣಾ ತಂಡದ ತ್ವರಿತ ಪ್ರತಿಕ್ರಿಯೆ ಮತ್ತು ಪ್ರಯತ್ನಗಳಿಂದಾಗಿ ಕುಟುಂಬದ ಎಲ್ಲಾ ಸದಸ್ಯರನ್ನು ಸುರಕ್ಷಿತವಾಗಿ ಮರಳಿ ಕರೆತರಲಾಯಿತು ಮತ್ತು ಈಗ ಅವರು ಚೇತರಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ:Viral News: ಕುಡಿದ ಮತ್ತಿನಲ್ಲಿ ಬ್ರಿಟಿಷ್‌ ಪ್ರವಾಸಿಗನ ಪುಂಡಾಟ; ನಶೆ ಇಳಿದಾಗ ನಡೆದಿದ್ದೇ ಬೇರೆ! ವಿಡಿಯೊ ನೋಡಿ

ಸೋಶಿಯಲ್ ಮಿಡಿಯಾ ನೆಟ್ಟಿಗರು ಹಾಗೂ ಸೌದಿ ಅರೇಬಿಯಾದ ಅನೇಕ ಜನರು ಎಂಜಾದ್ ಸ್ವಯಂಸೇವಕ ತಂಡದ ಧೈರ್ಯವನ್ನು ಹೊಗಳಿದ್ದಾರೆ. ನೆಟ್ಟಿಗರು ವೈರಲ್ ಪೋಸ್ಟ್‌ಗೆ ಕಾಮೆಂಟ್ ಮಾಡಿ ಸರಿಯಾದ ಸಿದ್ಧತೆಗಳಿಲ್ಲದೆ ಅಂತಹ ಸಾಹಸ ಪ್ರವಾಸಕ್ಕೆ ಹೋಗದಂತೆ ಕುಟುಂಬಕ್ಕೆ ಸಲಹೆ ನೀಡಿದ್ದಾರೆ. ಮರುಭೂಮಿಗೆ ಹೋಗುವಾಗ ಸ್ಯಾಂಡ್ ಬೋರ್ಡ್‍ಗಳು, ಹೆಚ್ಚುವರಿ ನೀರು, ಹೆಚ್ಚುವರಿ ಆಹಾರ ಇತ್ಯಾದಿಗಳನ್ನು ತೆಗೆದುಕೊಂಡು ಹೋಗಬೇಕು ಎಂದಿದ್ದಾರೆ.