Viral News: ಕುಡಿದ ಮತ್ತಿನಲ್ಲಿ ಬ್ರಿಟಿಷ್ ಪ್ರವಾಸಿಗನ ಪುಂಡಾಟ; ನಶೆ ಇಳಿದಾಗ ನಡೆದಿದ್ದೇ ಬೇರೆ! ವಿಡಿಯೊ ನೋಡಿ
ಬ್ರಿಟಿಷ್ ವ್ಯಕ್ತಿಯೊಬ್ಬ ಸ್ಥಳೀಯ ಅಂಗಡಿ ಮಾಲೀಕ ಮತ್ತು ಸ್ಥಳೀಯರ ಮೇಲೆ ಹಲ್ಲೆ ನಡೆಸಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಹೀಗಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಬ್ರಿಟಿಷ್ ವ್ಯಕ್ತಿಯನ್ನು ಥೈಲ್ಯಾಂಡ್‍ನ ಫುಕೆಟ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ.


ಥೈಲ್ಯಾಂಡ್: ಸ್ಥಳೀಯ ಅಂಗಡಿ ಮಾಲೀಕ ಮತ್ತು ಸ್ಥಳೀಯರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬ್ರಿಟಿಷ್ ವ್ಯಕ್ತಿಯೊಬ್ಬನನ್ನು ಥೈಲ್ಯಾಂಡ್‍ನ ಫುಕೆಟ್‍ನಲ್ಲಿ ಬಂಧಿಸಲಾಗಿದೆ.ಆರೋಪಿ ಸ್ಥಳೀಯ ಅಂಗಡಿ ಮಾಲೀಕನ ಜೊತೆಗೆ ಜಗಳಕ್ಕೀಳಿದು ಅವನ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ್ದಾನೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ. ನೆಟ್ಟಿಗರು ಇದನ್ನು ನೋಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ವರದಿಯ ಪ್ರಕಾರ, ಸ್ಕಾಟ್ಲೆಂಡ್‍ನ ಗ್ಲ್ಯಾಸ್ಗೋದ 40 ವರ್ಷದ ಜಾರ್ಜ್ ಪ್ಯಾಟರ್ಸನ್ ಎಂಬಾತ ಈ ಕೃತ್ಯ ಎಸಗಿದ್ದು, ಈತ ದಾಳಿ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆರೋಪಿ, ಅಂಗಡಿ ಮಾಲೀಕ ವಾರಿನ್ ಡೊಕ್ಬುವಾ ಅಂಗಡಿಯ ಹೊರಗೆ ನಿಲ್ಲಿಸಿದ್ದ ಬೈಕ್‍ಗೆ ಹಾನಿ ಮಾಡಿದ್ದಾನೆ. ಮತ್ತು ಅದರ ಸೀಟನ್ನು ಹರಿದುಹಾಕಲು ಪ್ರಯತ್ನಿಸುವುದು ವಿಡಿಯೊದಲ್ಲಿ ಸೆರೆಯಾಗಿದೆ. ಹೀಗಾಗಿ ಆತನೊಂದಿಗೆ ವಾರಿನ್ ಜಗಳಕ್ಕೀಳಿದಿದ್ದಾನೆ.ಪ್ಯಾಟರ್ಸನ್ ಅಂಗಡಿಯವನಿಗೆ ಅನೇಕ ಬಾರಿ ಹೊಡೆದಿದ್ದು ಅಲ್ಲದೇ, ಎರಡು ಗಾಜಿನ ಬಾಟಲಿಗಳನ್ನು ಕಸಿದುಕೊಂಡು ವಾರಿನ್ ಮೇಲೆ ಎಸೆದಿದ್ದಾನಂತೆ.
ಅಷ್ಟೇ ಅಲ್ಲದೇ ಈತ ಮಹಿಳೆಯೊಬ್ಬಳು ತನ್ನ ಚಿಕ್ಕ ಮಗು ಸೇರಿದಂತೆ ತನ್ನ ಮೂವರು ಮಕ್ಕಳೊಂದಿಗೆ ಸ್ಕೂಟರ್‌ನಲ್ಲಿ ಬಂದಾಗ ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ಸ್ಕೂಟರ್‌ನಿಂದ ಕೆಳಕ್ಕೆ ತಳ್ಳಿದ್ದಾನೆ. ಹಾಗೇ ಚಿಕ್ಕ ಮಗುವನ್ನು ಹೊಡೆದು ನೆಲಕ್ಕೆ ಎಸೆಯುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಪೊಲೀಸರು ಅಂತಿಮವಾಗಿ ಪ್ಯಾಟರ್ಸನ್ ಹತ್ತಿರದ ಬೀದಿಯಲ್ಲಿ ನಡೆದುಕೊಂಡು ಹೊಗುವಾಗ ಬಂಧಿಸಿದ್ದಾರೆ.
ಈ ಹಿಂದೆ ಬ್ರಿಟಿಷ್ ವ್ಯಕ್ತಿಯೊಬ್ಬ ವಾಹನ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಈ ಹಿಂದೆ ನಡೆದಿತ್ತು. ಶುಲ್ಕ ವಿವಾದಕ್ಕೆ ಸಂಬಂಧಿಸಿದಂತೆ ಚಾಲಕನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಫುಕೆಟ್ ಪೊಲೀಸರು ಬ್ರಿಟಿಷ್ ಪ್ರಜೆಯನ್ನು ವಶಕ್ಕೆ ಪಡೆದಿದ್ದರು. ಇವರ ನಡುವಿನ ಜಗಳದವನ್ನು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಹಿಡಿಯಲಾಗಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಪೊಲೀಸರ ಗಮನವನ್ನು ಸೆಳೆಯಿತು. ಹಾಗಾಗಿ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಇದು ಅಂತಿಂಥಾ ಐಸ್‌ಕ್ರೀಂ ಅಲ್ಲ... ಚಿನ್ನ ಲೇಪಿತ 'ಅಂಬಾನಿ ಐಸ್ ಕ್ರೀಂ! ವಿಡಿಯೊ ಇದೆ
ಚಾಲಕ ಬ್ರಿಟಿಷ್ ವ್ಯಕ್ತಿಗೆ ತನಗೆ $ 10 ಶುಲ್ಕ ನೀಡಿದ್ದಾನೆ. ಆದರೆ ಪ್ರವಾಸಿಯು $ 27 ನೀಡಿರುವುದಾಗಿ ತಿಳಿಸಿದ್ದಾನೆ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮಾತುಕತೆಯಲ್ಲಿ ಸಮಸ್ಯೆ ಬಗೆಹರಿಸಲು ಮುಂದಾದಾಗ ಅಲ್ಲೂ ಆತ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.