ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಂದರ್ಶನಕ್ಕೆ 40 ನಿಮಿಷ ಕಾಯಿಸಿ ಕ್ಷಮೆ ಕೇಳದ ಸಂಸ್ಥಾಪಕ; ಕೆಲಸವನ್ನೇ ತಿರಸ್ಕರಿಸಿದ ಬೆಂಗಳೂರು ಉದ್ಯಮಿ!

Viral News: ಇಲ್ಲೊಬ್ಬ ಸಂದರ್ಶನಕ್ಕೆ ಬಂದ ಅಭ್ಯರ್ಥಿಯನ್ನು ಕಂಪನಿಯ ಸಿಇಒ 40 ನಿಮಿಷದ ವರೆಗೆ ಕಾಯಿಸಿದ ಘಟನೆ ನಡೆದಿದೆ. ಇಷ್ಟು ಸಮಯದವರೆಗೂ ಕಾಯಿಸಿದರೂ ಕನಿಷ್ಠ ಸೌಜನ್ಯಕ್ಕೂ ಕ್ಷಮೆ ಕೇಳದೆ ಇರುವ ಕಾರಣ ಕೆಲಸದ ಆಫರ್ ಅನ್ನೇ ಇವರು ನಿರಾಕರಿಸಿದ್ದಾನೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ...

ಸಂಸ್ಥಾಪಕನ ನಡೆ ಕಂಡು ಕೆಲಸದ ಆಫರ್ ತಿರಸ್ಕಾರ ಮಾಡಿದ ಖ್ಯಾತ ಉದ್ಯಮಿ!

ಸಂಸ್ಥಾಪಕನ ನಡೆ ಕಂಡು ಕೆಲಸದ ಆಫರ್ ತಿರಸ್ಕಾರ ಮಾಡಿದ ಖ್ಯಾತ ಉದ್ಯಮಿ -

Profile
Pushpa Kumari Jul 3, 2026 7:44 PM

ಬೆಂಗಳೂರು,ಜು.3: ಯಾವುದೇ ಕೆಲಸ ಗಿಟ್ಟಿಸಿಕೊಳ್ಳಲು ಕಂಪನಿಯಲ್ಲಿ ಆಯೋಜಿಸಿದ ಸಂದರ್ಶ ಪಾಲ್ಗೊಳ್ಳುವುದು ಸಾಮಾನ್ಯ ನಿಯವಾಗಿರುತ್ತದೆ. ಆದರೆ ಇಲ್ಲೊಬ್ಬ ಸಂದರ್ಶನಕ್ಕೆ ಬಂದ ಅಭ್ಯರ್ಥಿಯನ್ನು ಕಂಪನಿಯ ಸಿಇಒ 40 ನಿಮಿಷದ ವರೆಗೆ ಕಾಯಿಸಿದ ಘಟನೆ ನಡೆದಿದೆ. ಇಷ್ಟು ಸಮಯದ ವರೆಗೂ ಕಾಯಿಸಿದರೂ ಕನಿಷ್ಠ ಸೌಜನ್ಯಕ್ಕೂ ಕ್ಷಮೆ ಕೇಳದೆ ಇರುವ ಕಾರಣ ಕೆಲಸದ ಆಫರ್ ಅನ್ನೇ ಇವರು ನಿರಾಕರಿಸಿದ್ದಾನೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.

ಈ ಹಳೆಯ ತನ್ನದೆ ಘಟನೆಯನ್ನು ಬೈನರಿ ಸ್ಟಾರ್ಟ್ಅಪ್‌ನ ಸಂಸ್ಥಾಪಕ ಶಿಖರ್ ಸಕ್ಸೇನಾ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಬೇರೊಬ್ಬರ ಸಮಯವನ್ನು ಗೌರವಿಸುವಂತಹ ಸಣ್ಣ ಪ್ರತಿಕ್ರಿಯೆಗಳು ಕೂಡ ನಮಗೆ ಮುಖ್ಯವಾಗುತ್ತವೆ‌. ಶಿಖರ್ ಸಕ್ಸೇನಾ ಅವರು ಈ ಹಿಂದೆ ಉದ್ಯಮ ರಂಗದಲ್ಲಿ ಅತ್ಯಂತ ಖ್ಯಾತಿ ಪಡೆದಿದ್ದ ಸಂಸ್ಥಾಪಕ ರೊಬ್ಬರ ಕಂಪನಿಗೆ ಸಂದರ್ಶನಕ್ಕೆ ಹೋಗಿದ್ದರು. ಆದರೆ ಈ ಸಂದರ್ಶನಕ್ಕೆ ಕುಳಿತು ಕೊಳ್ಳುವ ಮೊದಲೇ ಕಹಿ ಅನುಭವ ಆಯಿತು ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.



"ನಾನು ಒಮ್ಮೆ ಅತ್ಯಂತ ಜನಪ್ರಿಯ ಸಂಸ್ಥಾಪಕರೊಂದಿಗೆ ಸಂದರ್ಶನ ಮಾಡಿದ್ದೇನೆ, ಅವರು ನನ್ನನ್ನು 40 ನಿಮಿಷ ಕಾಯುವಂತೆ ಮಾಡಿದರು ಮತ್ತು ಕ್ಷಮಿಸಿ ಎಂದು ಸಹ ಹೇಳಲಿಲ್ಲ" ಎಂದು ಅವರು ಪೋಸ್ಟ್ ನಲ್ಲಿ ಬರೆದಿದ್ದಾರೆ. ನಂತರ,ತಾನು ಸಂಸ್ಥೆಗೆ ಸೇರಿದ ಜನರಿಂದ ನಕಾರಾತ್ಮಕ ವಿಚಾರ ಕೂಡ ಕೇಳಿದೆ, ಇಂದು ತನಗೆ ಸರಿಯಾದ ಆಯ್ಕೆ ಮಾಡಿದ್ದೇನೆ ಎಂದು ಅನಿಸಿತು ಅಂದರು.

Viral Video: ಶಾಲೆಗೆ ಹೋಗಲು ಕಾಯುತ್ತಿದ್ದ ಅಪರಿಚಿತ ಬಾಲಕಿಗೆ ನೆರವಾದ ಬಾಲಕ; ಬಾಡಿಗೆ ಹಣ ಪಡೆಯದೆ ಹೃದಯವಂತಿಕೆ ತೋರಿಸಿದ ಆಟೋ ಚಾಲಕ

ಕೇವಲ ಸಮಯ ವಿಳಂಬವಾಯಿತು ಎಂದಲ್ಲ, ಬದಲಿಗೆ ಅಷ್ಟು ಕಾಯಿಸಿದರೂ ಕ್ಷಮೆ ಕೇಳದ ಸಂಸ್ಥಾಪಕನ ವರ್ತನೆ ತನಗೆ ಬೇಸರ ಉಂಟು ಮಾಡಿತ್ತು. ಈ ಕಾರಣಕ್ಕಾಗಿಯೇ ಈ ಕಂಪನಿಯಲ್ಲಿ ಕೆಲಸ ಮಾಡದಿರಲು ನಿರ್ಧರಿಸಿದರು. ಈ ಪೋಸ್ಟ್ ಬಳಕೆದಾರರಲ್ಲಿ ಚರ್ಚೆಯನ್ನು ಹುಟ್ಟುಹಾಕಿತು, ಸಂದರ್ಶನದ ಅನುಭವಗಳು ಹೆಚ್ಚಾಗಿ ಕಂಪನಿಯ ಕೆಲಸದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಅನೇಕರು ಒಪ್ಪಿಕೊಂಡರು. ಬಳಕೆದಾರರೊಬ್ಬರು ಕೆಲವು ಸಂಸ್ಥಾಪಕರು ಅಭ್ಯರ್ಥಿಗಳನ್ನು ಬೇಕಂತಲೇ ಕಾಯಿಸುವ ಮೂಲಕ ದರ್ಪ ತೋರಿಸುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.