ವಿದೇಶದಲ್ಲಿ ನಿಯಮ ಉಲ್ಲಂಘಿಸಿದ ಭಾರತೀಯ ಪ್ರವಾಸಿಗರು; ನಮ್ಮ ಮಾನ ತೆಗೆಯಬೇಡಿ ಎಂದು ಕೈಮುಗಿದ ನೆಟ್ಟಿಗರು
Viral Video: ಬ್ರೆಜಿಲ್ ಮತ್ತು ಅರ್ಜೆಂಟೀನಾ ಗಡಿಯಲ್ಲಿರುವ ಇಗುವಾಜು ಜಲಪಾತದಲ್ಲಿ ಭಾರತೀಯ ಪ್ರವಾಸಿಗರ ವರ್ತನೆ ಬಗ್ಗೆ ದೂರುಗಳು ಕೇಳಿಬಂದಿವೆ. ಭಾರತೀಯ ಪ್ರವಾಸಿಗರು ಇಲ್ಲಿನ ಸ್ಥಳದ ನಿಯಮಗಳನ್ನು ಉಲ್ಲಂಘಿಸಿ ಇತರ ಪ್ರವಾಸಿಗರಿಗೆ ತೊಂದರೆ ನೀಡಿದ್ದಾರೆ. ಅವರ ವರ್ತನೆಗೆ ನೆಟ್ಟಿಗರು ಕಿಡಿ ಕಾರಿದ್ದಾರೆ.
ಇಗುವಾಜು ಜಲಪಾತದಲ್ಲಿ ಪ್ರವಾಸಿಗರು -
ಬ್ರೆಸಿಲಿಯಾ, ಮಾ. 22: ಇತ್ತೀಚೆಗೆ ಪ್ರವಾಸಿ ಸ್ಥಳದಲ್ಲಿ ಬೇಜವಾಬ್ದಾರಿಯುತವಾಗಿ ವರ್ತಿಸುವ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿವೆ. ಎಲ್ಲೆಂದರಲ್ಲಿ ಕಸ ಎಸೆಯುವುದು, ಅಲ್ಲಿನ ನಿಯಮಗಳನ್ನು ನಿರ್ಲಕ್ಷ್ಯ ಮಾಡುವುದು, ಅನುಚಿತವಾಗಿ ವರ್ತಿಸುವುದು ಹೀಗೆ ನಾನಾ ಘಟನೆಗಳು ನಡೆಯುತ್ತವೆ. ಇದೀಗ ಬ್ರೆಜಿಲ್ ಮತ್ತು ಅರ್ಜೆಂಟೀನಾ ಗಡಿಯಲ್ಲಿರುವ ಇಗುವಾಜು ಜಲಪಾತದಲ್ಲಿ(Iguacu Falls) ಭಾರತೀಯ ಪ್ರವಾಸಿಗರ ವರ್ತನೆ ಬಗ್ಗೆ ದೂರುಗಳು ಕೇಳಿಬಂದಿವೆ. ಭಾರತೀಯ ಪ್ರವಾಸಿಗರು ಇಲ್ಲಿನ ಸ್ಥಳದ ನಿಯಮಗಳನ್ನು ಉಲ್ಲಂಘಿಸಿ ಇತರ ಪ್ರವಾಸಿಗರಿಗೆ ತೊಂದರೆ ಉಂಟು ಮಾಡಿದ್ದಾರೆ.
ಇತ್ತೀಚೆಗೆ ಈ ಜಲಪಾತಕ್ಕೆ ಭೇಟಿ ನೀಡಿದ ಪ್ರವಾಸಿಗರೊಬ್ಬರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಭಾರತೀಯ ಪ್ರವಾಸ ಗುಂಪಿನ ಕೆಲವು ಸದಸ್ಯರು ನಿಯಮ ನಿರ್ಲಕ್ಷಿಸಿ ಮುಂದೆ ಸಾಗಿದ್ದಾರೆ ಎಂದಿದ್ದಾರೆ. ಸದ್ಯ ಕೆಲವು ಭಾರತೀಯ ಪ್ರವಾಸಿಗರ ನಡವಳಿಕೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
ವಿಡಿಯೊ ನೋಡಿ:
Gives me no pleasure to write this 🧵 but @k_rupal @prichills can verify every detail.
— Gaurav Sabnis (@gauravsabnis) March 21, 2026
Went for a Boat Safari where they take you under Iguaçu falls. To get to the boat, you have to change 3 vehicles & stand in line multiple times.
There was an Indian tour group with INAIR. /1
ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡ ಪ್ರವಾಸಿಗರೊಬ್ಬರು ʼʼಬೋಟ್ ಸಫಾರಿಗಾಗಿ ಕಾಯುತ್ತಿದ್ದಾಗ ಭಾರತೀಯರು ಸಾಲಿನಲ್ಲಿ ಬರದೇ ನಿಯಮ ನಿರ್ಲಕ್ಷಿಸಿ ಮುಂದೆ ಹೋಗಿದ್ದಾರೆ. ವ್ಯವಸ್ಥಿತವಾಗಿ ಇದ್ದ ಕ್ಯೂ ಅನ್ನು ತಪ್ಪಿಸಿ ತಮ್ಮ ಗುಂಪಿನ ಜನರನ್ನು ಕರೆದುಕೊಂಡಿದ್ದಾರೆʼʼ ಎಂದು ಕಿಡಿಕಾರಿದ್ದಾರೆ.
ಅಕ್ಷಯ್ ಖನ್ನಾ ವೈರಲ್ ಡ್ಯಾನ್ಸ್‌ಗೆ ದೆಹಲಿ ಪೊಲೀಸರು ಫಿದಾ; ಜಾಗೃತಿ ಮೂಡಿಸಲು ಏನ್ ಮಾಡಿದ್ರು ಗೊತ್ತಾ?
ಅದೇ ರೀತಿ ಜಲಪಾತಗಳ ನೈಸರ್ಗಿಕ ಪ್ರಶಾಂತತೆಯ ನಡುವೆ, ಈ ಗುಂಪು ಜೋರಾಗಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದೆ. ಇದರಿಂದ ಇತರರಿಗೆ ಕಿರಿಕಿರಿಯಾಗಿದೆ ಎಂದು ಉಲ್ಲೇಖಿಸಿದ್ದಾರೆ. ಇನ್ನೊಂದು ಗಮನಿಸತಕ್ಕ ಅಂಶ ಎಂದರೆ ಅದೇ ಸ್ಥಳದಲ್ಲಿದ್ದ ಕೇರಳಂನ ಒಂದು ಕುಟುಂಬಕ್ಕೆ ಮುಂದೆ ಸಾಗಲು ಅವಕಾಶ ನೀಡಲಾಗಿದ್ದರೂ ಸರದಿ ಸಾಲನ್ನು ಬಿಟ್ಟು ಹೋಗಲು ನಿರಾಕರಿಸಿದೆ. ಪೋಷಕರು ತಮ್ಮ ಮಗುವಿಗೆ ತಾಳ್ಮೆಯಿಂದ ಇರುವಂತೆ ಹೇಳುವುದು ಕೂಡ ಭಾರತೀಯ ಶಿಸ್ತನ್ನು ಪ್ರತಿಬಿಂಬಿಸಿದೆ.
ಈ ಬಗ್ಗೆ ನೆಟ್ಟಿಗರು ನಾನಾ ರೀತಿಯ ಕಮೆಂಟ್ ಮಾಡಿದ್ದು ವಿದೇಶವನ್ನು ಕೂಡ ದೆಹಲಿ ಮಾಡಲು ಹೋಗಿದ್ದೀರಾ ಎಂದು ಕಿಡಿಕಾರಿದ್ದಾರೆ. ಮತ್ತೊಬ್ಬರು ಇಂತಹ ಜನಗಳಿಂದಲೇ ಭಾರತೀಯರಿಗೆ ಕೆಟ್ಟ ಹೆಸರು ಎಂದಿದ್ದಾರೆ.