Viral News: ಅಕ್ಷಯ್ ಖನ್ನಾ ವೈರಲ್ ಡ್ಯಾನ್ಸ್‌ಗೆ ದೆಹಲಿ ಪೊಲೀಸರು ಫಿದಾ; ಜಾಗೃತಿ ಮೂಡಿಸಲು ಏನ್ ಮಾಡಿದ್ರು ಗೊತ್ತಾ?
Delhi Police take a cinematic route: ಮಾದಕ ವಸ್ತುಗಳ ಬಳಕೆಯನ್ನು ತಡೆಯಲು ದೆಹಲಿ ಪೊಲೀಸರು ವಿಭಿನ್ನ ಕ್ರಮಕ್ಕೆ ಮುಂದಾಗಿದ್ದಾರೆ. ಸಿನಿಮಾವೊಂದರ ದೃಶ್ಯದ ಮೂಲಕ ಸಂದೇಶ ರವಾನಿಸಿದ್ದಾರೆ. ಜನಪ್ರಿಯ ಧುರಂಧರ್ ಚಿತ್ರದಲ್ಲಿ ಅಕ್ಷಯ್ ಖನ್ನಾ ನೃತ್ಯ ಮಾಡುವ ದೃಶ್ಯವನ್ನು ಮೀಮ್ಸ್ ರೂಪದಲ್ಲಿ ಹಂಚಿ, ಯುವಕರಿಗೆ ಮಾದಕ ವ್ಯಸನದ ಹಾನಿಗಳನ್ನು ಮನದಟ್ಟು ಮಾಡಿದ್ದಾರೆ.
ಅಕ್ಷಯ್ ಖನ್ನಾರ ವೈರಲ್ ನೃತ್ಯದ ಮೂಲಕ ಪೊಲೀಸರ ಸಂದೇಶ -
ನವದೆಹಲಿ: ಸಿನಿಮಾಗಳು ಬಹಳ ಜನಪ್ರಿಯವಾದಾಗ, ಅವು ದೊಡ್ಡ ಪರದೆಗಳಲ್ಲೇ ಸೀಮಿತವಾಗಿರುವುದು ತುಂಬಾ ಅಪರೂಪ. ಕೆಲವು ದೃಶ್ಯಗಳು ಅಥವಾ ಸಂಭಾಷಣೆಗಳು ಮೀಮ್ಸ್‌ಗಳಾಗಿ ಮಾರ್ಪಟ್ಟು, ಸಾಮಾಜಿಕ ಮಾಧ್ಯಮಗಳಿಗಲ್ಲಿ ವೈರಲ್ (Viral News) ಆಗುತ್ತವೆ. ಕೆಲವೊಂದು ಸಿನಿಮಾಗಳು ಜೀವನ ಮೌಲ್ಯವನ್ನೂ ಕಲಿಸುತ್ತವೆ. ಇದೀಗ ದೆಹಲಿ ಪೊಲೀಸ್ ಇಲಾಖೆಯೂ (Delhi Police) ಈ ಟ್ರೆಂಡ್‌ಗೆ ಕೈಜೋಡಿಸಿದೆ. ತಮ್ಮ ಅದ್ಭುತ ಸೃಜನಶೀಲತೆಯಿಂದ ಮೀಮ್ಸ್ ಬಳಸಿಕೊಂಡು ಅಗತ್ಯ ಮಾಹಿತಿಯನ್ನು ಸಾಮಾಜಿಕ ಮಾಧ್ಯಮಕ್ಕೆ (social media) ತಲುಪಿಸುವಲ್ಲಿಯೂ ಈ ಇಲಾಖೆ ಪ್ರಸಿದ್ಧ.
ದೆಹಲಿ ಪೊಲೀಸರು ಧುರಂಧರ್ ಚಿತ್ರದಿಂದ ಎರಡು ದೃಶ್ಯಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಅವು ಮಾದಕ ವಸ್ತು ವ್ಯಸನದ ಬಗ್ಗೆ ಸಂದೇಶವನ್ನು ಹೊಂದಿದ್ದಾಗಿವೆ. ಅಕ್ಷಯ್ ಖನ್ನಾ, ರಾಜಕಾರಣಿ–ಡಾನ್ ರೆಹ್ಮಾನ್ ದಕೈತ್ ಪಾತ್ರದಲ್ಲಿ, ಗಲ್ಫ್ ಕಲಾವಿದ ಫ್ಲಿಪ್ಪೆರಾಚಿ ಅವರ ಬಹ್ರೇನ್ ರ್ಯಾಪ್ ಹಾಡಿಗೆ ಪ್ರವೇಶಿಸುವ ಸನ್ನಿವೇಶ ಇಲ್ಲಿದೆ.
ಧುರಂಧರ್ ದೃಶ್ಯದ ಮೂಲಕ ಮಾದಕ ದ್ರವ್ಯಗಳ ಕುರಿತು ಸಂದೇಶ
ಅಕ್ಷಯ್ ಖನ್ನಾ ಅಭಿನಯಿಸಿದ ರೆಹ್ಮಾನ್ ದಕೈತ್ ಸ್ಟೈಲಿನಲ್ಲಿ ಕಾರಿನಿಂದ ಇಳಿದು ಬರುತ್ತಾನೆ. ಅಲ್ಲಿದ್ದವರಿಗೆ ಅಭಿನಂದನೆ ಸಲ್ಲಿಸುತ್ತಾನೆ ಮತ್ತು ಅರಬ್ ಸಂಗೀತಕ್ಕೆ ಸಂಭ್ರಮದಿಂದ ನೃತ್ಯ ಮಾಡುತ್ತಾನೆ. ಈ ಎಂಟ್ರಿ ಸೀನಿಗೆ ದೆಹಲಿ ಪೊಲೀಸರು ಸೇರಿಸಿದ ಪಠ್ಯ ಹೀಗಿತ್ತು: ದೆಹಲಿ ಪೊಲೀಸರು ನೀವು ನಶೆಯಲ್ಲಿದ್ದಾಗ ಹೀಗಿ ಇರುತ್ತೀರಿ ಅದೇ ನಶೆ ಇಳಿದಾಗ ಇದೇ ರೀತಿ ನೆಲದಲ್ಲಿ ಬಿದ್ದು ಹೊರಳಾಡುತ್ತೀರಿ ಎಂದು ತೋರಿಸಲಾಗಿದೆ.
ವಿಡಿಯೊ ವೀಕ್ಷಿಸಿ:
Drug’s high might feel real, but it’s an illusion.
— Delhi Police (@DelhiPolice) December 10, 2025
Don’t trade your truth for a moment’s delusion!#akshayekhanna#Dhurandhar#trendingreels#trend#DPUpdates pic.twitter.com/WhtfwB4WCq
ಮಾದಕ ದ್ರವ್ಯಗಳಿಗೆ ಬೇಡ ಎಂಬ ಬಲವಾದ ಸಂದೇಶದೊಂದಿಗೆ ವಿಡಿಯೊ ಕೊನೆಗೊಂಡಿತು. ನಿಮ್ಮ ಜೀವನದ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಬೇಡಿ. ಏಕೆಂದರೆ ಮಾದಕ ದ್ರವ್ಯಗಳು ಕೇವಲ ಭ್ರಮೆಯನ್ನು ನೀಡುತ್ತವೆ ಎಂದು. ಅದೇ ಸಮಯದಲ್ಲಿ, ಮಾದಕ ವಸ್ತುಗಳ ಅತಿಯಾದ ಸೇವನೆಯು ನಿಜವೆಂದು ಭಾವಿಸಬಹುದು. ಆದರೆ ಅದು ಭ್ರಮೆ. ಕ್ಷಣಿಕ ಭ್ರಮೆಗೆ ನಿಮ್ಮ ಜೀವನವನ್ನು ಬಲಿ ಕೊಡಬೇಡಿ ಎಂದು ಜಾಗೃತಿಯನ್ನು ಮೂಡಿಸಲಾಗಿದೆ.
ನಾನು ಸಂಗೀತದಲ್ಲಿ ಎತ್ತರಕ್ಕೆ ಹೋಗುವುದು ಇಷ್ಟಪಡುತ್ತೇನೆ. ಜೀವನದಲ್ಲಿ ಎಂದಿಗೂ ಮಾದಕ ದ್ರವ್ಯ ಸೇವಿಸಿಲ್ಲ, ಅದರ ಬಗ್ಗೆ ಹೆಮ್ಮೆಯಿದೆ. ಮಾದಕ ದ್ರವ್ಯ ಸೇವಿಸುವವರನ್ನು ನಾನು ಸಂಪೂರ್ಣವಾಗಿ ದ್ವೇಷಿಸುತ್ತೇನೆ ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋವನ್ನು ರಚಿಸಿದವರಿಗೆ ಉತ್ತೇಜನ ನೀಡಬೇಕು. ನೀವು ಅಂಶಗಳನ್ನು ಸಂಪರ್ಕಿಸುವ ವಿಧಾನ ಅದ್ಭುತವಾಗಿದೆ ಎಂದು ಇನ್ನೊಬ್ಬ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾದಕ ದ್ರವ್ಯ ಇಡೀ ನರಮಂಡಲದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ದೆಹಲಿ ಪೊಲೀಸರಿಗೆ ಹ್ಯಾಟ್ಯ್ ಆಫ್ ಎಂದು ಮತ್ತೊಬ್ಬ ಬಳಕೆದಾರರು ಹೇಳಿದರು. ದೆಹಲಿ ಪೊಲೀಸರು ಚೆನ್ನಾಗಿ ಕೆಲಸ ಮಾಡಿದ್ದಾರೆ. ಜಾಗೃತಿ ಮೂಡಿಸಲು ಪೊಲೀಸರು ಎಲ್ಲ ರೀತಿಯಲ್ಲೂ ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ.