ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸರ್ಕಾರಿ ಬಸ್‌ಗಳಲ್ಲಿ ಹಾಕಿದ್ದ ಗುಟ್ಕಾ ಜಾಹೀರಾತು ಕಿತ್ತೆಸೆದ ಯುವಕರು; ಸಾರ್ವಜನಿಕರಿಂದ ಭಾರೀ ಪ್ರಶಂಸೆ!

Viral Video: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್‌ಗಳ ಮೇಲೆ ಹಾಕಿದ್ದ ಗುಟ್ಕಾ ಹಾಗೂ ತಂಬಾಕು ಉತ್ಪನ್ನಗಳ ಜಾಹೀರಾತು ಅಂಟಿಸಲಾಗಿದ್ದು ಯುವಕರ ಗುಂಪೊಂದು ಇದರ ವಿರುದ್ದ ಪ್ರತಿಭಟನೆ ನಡೆಸಿದೆ. ಇಂತಹ ಪರೋಕ್ಷ ಜಾಹೀರಾತುಗಳ ವಿರುದ್ಧ ರಾಜ್ಯದ ಯುವಜನತೆ ರೊಚ್ಚಿಗೆದ್ದಿದ್ದಾರೆ. ಕರ್ನಾಟಕ ರಾಜ್ಯ ಸಾರಿಗೆ ಬಸ್‌ಗಳಿಂದ ಗುಟ್ಕಾ ಮತ್ತು ತಂಬಾಕು ಜಾಹೀರಾತು ಗಳನ್ನು ತೆಗೆದುಹಾಕುತ್ತಿರುವ ಯುವಕರ ವೀಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ‌..

ಗುಟ್ಕಾ ಜಾಹೀರಾತು ಕಿತ್ತೆಸೆದ ಯುವಕರು

ಬೆಂಗಳೂರು,ಜ.25: ಗುಟ್ಕಾ,ಪಾನ್ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದರೂ ಇದರ ಬಳಕೆಯ ಪ್ರಮಾಣ ಹೆಚ್ಚುತ್ತಿದೆ. ರಾಜ್ಯಾದ್ಯಂತ ಇದರ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡಿ ದರೂ ಟಿವಿ, ಸೋಷಿಯಲ್ ಮೀಡಿಯಾ, ವಾಹನಗಳು ಸೇರಿದಂತೆ ಇದರ ಜಾಹೀರಾತುಗಳು ರಾರಾಜಿಸುತ್ತಿವೆ. ಅಂತೆಯೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್‌ಗಳ ಮೇಲೆ ಹಾಕಿದ್ದ ಗುಟ್ಕಾ ಹಾಗೂ ತಂಬಾಕು ಉತ್ಪನ್ನಗಳ ಜಾಹೀರಾತು ಅಂಟಿಸಲಾಗಿದ್ದು ಯುವಕರ ಗುಂಪೊಂದು ಇದರ ವಿರುದ್ದ ಪ್ರತಿಭಟನೆ ನಡೆಸಿದೆ. ಇಂತಹ ಪರೋಕ್ಷ ಜಾಹೀರಾತುಗಳ ವಿರುದ್ಧ ರಾಜ್ಯದ ಯುವಜನತೆ ರೊಚ್ಚಿಗೆದ್ದಿದ್ದಾರೆ. ಕರ್ನಾಟಕ ರಾಜ್ಯ ಸಾರಿಗೆ ಬಸ್‌ಗಳಿಂದ ಗುಟ್ಕಾ ಮತ್ತು ತಂಬಾಕು ಜಾಹೀರಾತುಗಳನ್ನು ತೆಗೆದುಹಾಕುತ್ತಿರುವ ಯುವಕರ ವೀಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗಿದೆ‌.

ಸಾರ್ವಜನಿಕರು ಬಳಸುವ ವಾಹನದಲ್ಲಿ ಇಂತಹ ಅಪಾಯಕಾರಿ ಜಾಹೀರಾತುಗಳನ್ನು ಬಳಸು ವುದು ತಪ್ಪು, ಆರೋಗ್ಯಕ್ಕೆ ತೊಂದರೆ ಉಂಟುಮಾಡುವ ಆಹಾರ ಪದಾರ್ಥಗಳನ್ನು ಪ್ರಚಾರ ಮಾಡುವುದನ್ನು ವಿರೋಧಿಸಿ ಯುವಕರು ಸ್ವತಃ ಈ ನಿರ್ಧಾರ ಕೈಗೊಂಡಿದ್ದಾರೆ. ವಿದ್ಯಾನಗರದಲ್ಲಿ ಆರಂಭವಾದ ಈ ಅಭಿಯಾನವು ಮುಧೋಳ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಯುವಕರು ಈ ಕೆಲಸವನ್ನು ಮಾಡುತ್ತಿದ್ದಾರೆ.

ವಿಡಿಯೋ ನೋಡಿ:



ತಂಬಾಕಿನ ಪ್ರಚಾರ ನಿಷೇಧವಿದ್ದರೂ, ಪಾನ್ ಮಸಾಲಾ ಹೆಸರಿನಲ್ಲಿ ನಡೆಯುತ್ತಿದ್ದ ಜಾಹೀರಾತಿಗೆ ಯುವಕರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ‌. ಸಾರ್ವಜನಿಕ ಬಸ್‌ಗಳಿಂದ ಎಲ್ಲಾ ಗುಟ್ಕಾ ಜಾಹೀರಾತುಗಳನ್ನು ಹರಿದು ಹಾಕಲಾಗುತ್ತಿರುವ ದೃಶ್ಯ ವಿಡಿಯೊಸಲ್ಲಿ ನೋಡಬಹುದು. ಬಾಲಿವುಡ್ ನಟರನ್ನೊಳಗೊಂಡ 'ಪಾನ್ ಮಸಾಲಾ' ಪೋಸ್ಟರ್‌ಗಳನ್ನು ಯುವಕರು ಹರಿದು ಹಾಕುತ್ತಿದ್ದಾರೆ. ವಿಶೇಷವಾಗಿ ಇಂತಹ ಜಾಹೀರಾತುಗಳು ಯುವಕರನ್ನು ದಾರಿ ತಪ್ಪಿಸುತ್ತವೆ‌. ಹಾಗಾಗಿ ಅನೇಕ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

Viral Photo: ಸೂರ್ಯನನ್ನೇ ಹಾದು ಹೋದ ಸ್ಕೈಡೈವರ್‌- ಅಪರೂಪದ ಕ್ಷಣ ಕ್ಯಾಮರಾದಲ್ಲಿ ಸೆರೆ!

ಕರ್ನಾಟಕ ಯುವಕರು ಬೆಂಕಿಯಲ್ಲಿ ಉರಿಯುತ್ತಿದ್ದಾರೆ. KSRTC ಸಾರ್ವಜನಿಕ ಬಸ್‌ಗಳಿಂದ ಎಲ್ಲಾ ಗುಟ್ಕಾ ಜಾಹೀರಾತುಗಳನ್ನು ಹರಿದು ಹಾಕಲಾಗುತ್ತಿದೆ" ಎಂದು ಶೀರ್ಷಿಕೆ ಹಾಕುವ ಮೂಲಕ ಈ ವಿಡಿಯೊ ಶೇರ್ ಮಾಡಲಾಗಿದೆ. ಒಬ್ಬ ಬಳಕೆದಾರರು "ಇದನ್ನು ಭಾರತದಾದ್ಯಂತ ಮಾಡಬೇಕು" ಎಂದು ಬರೆದಿದ್ದಾರೆ. ಮತ್ತೊಬ್ಬರು "ಇದು ಉತ್ತಮ ಚಳುವಳಿ" ಎಂದು ಕಾಮೆಂಟ್ ಮಾಡಿದ್ದಾರೆ. .