ಬೆಂಗಳೂರಿನಲ್ಲಿ ಖತರ್ನಾಕ್ ಕಳ್ಳ; ವಿಶೇಷ ಚೇತನನಂತೆ ನಟಿಸಿ ಭಿಕ್ಷಾಟನೆ, ಐಫೋನ್ ಕಳವು: ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?
Viral Video: ವ್ಯಕ್ತಿಯೊರ್ವ ಕೈ-ಕಾಲುಗಳು ಸರಿಯಿದ್ದರೂ ಅಂಗವೈಕಲ್ಯ ಹೊಂದಿರುವಂತೆ ನಟಿಸಿ ಹಣ ವಸೂಲಿ ಮಾಡುತ್ತಿದ್ದ ಅಘಾತಕಾರಿ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ. ಕಾಲು ಊನವಾಗಿರುವಂತೆ ನಟಿಸಿ ಸಾರ್ವಜನಿಕರ ಅನುಕಂಪ ಗಿಟ್ಟಿಸಿ ಹಣ ವಸೂಲಿ ಮಾಡುತ್ತಿದ್ದ. ಭಿಕ್ಷೆ ಬೇಡುವಾಗ ವಾಕಿಂಗ್ ಸ್ಟಿಕ್ ಬಳಸುತ್ತಿದ್ದ. ಆದರೆ ಸ್ಥಳೀಯರು ಆತನ ನಡವಳಿಕೆಯ ಬಗ್ಗೆ ಅನುಮಾನಗೊಂಡು ಪ್ರಶ್ನಿಸಿದಾಗ ಬಂಡವಾಳ ಬೆಳಕಿಗೆ ಬಂದಿದೆ.
ಅಂಗವೈಕಲ್ಯದ ನಾಟಕವಾಡಿ ಸಾರ್ವಜನಿಕರಿಂದ ಹಣ ದೋಚುತ್ತಿದ್ದ ವ್ಯಕ್ತಿ -
ಬೆಂಗಳೂರು, ಜು. 29: ವ್ಯಕ್ತಿಯೊರ್ವ ಕೈ- ಕಾಲುಗಳು ಸರಿಯಿದ್ದರೂ ಅಂಗವೈಕಲ್ಯ ಹೊಂದಿರುವಂತೆ ನಟಿಸಿ ಹಣ ವಸೂಲಿ ಮಾಡುತ್ತಿದ್ದ ಅಘಾತಕಾರಿ ಘಟನೆ ನಡೆದಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ. ಈತ ಕಾಲು ಊನವಾಗಿರುವಂತೆ ನಟಿಸಿ ಸಾರ್ವಜನಿಕರ ಅನುಕಂಪ ಗಿಟ್ಟಿಸಿ ಹಣ ವಸೂಲಿ ಮಾಡುತ್ತಿದ್ದ. ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿರುವಾಗ ವಾಕಿಂಗ್ ಸ್ಟಿಕ್ ಬಳಸುತ್ತಿದ್ದ. ಆದರೆ ಸ್ಥಳೀಯ ನಿವಾಸಿಗಳು ಆತನ ನಡವಳಿಕೆಯ ಬಗ್ಗೆ ಅನುಮಾನಗೊಂಡು ಪ್ರಶ್ನಿಸಿದಾಗ ಕೃತ್ಯ ಬೆಳಕಿಗೆ ಬಂತು. ಈ ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದ್ದು, ನಕಲಿ ಭಿಕ್ಷಾಟನೆ ಜಾಲದ ಕುರಿತು ಚರ್ಚೆ ಆರಂಭವಾಗಿದೆ.
ವೈರಲ್ ವಿಡಿಯೊದಲ್ಲಿ ಸ್ಥಳೀಯ ನಿವಾಸಿಗಳು ಆ ವ್ಯಕ್ತಿಯ ನಡವಳಿಕೆಯ ಬಗ್ಗೆ ಅನುಮಾನಗೊಂಡು ಪ್ರಶ್ನಿಸಿದರು. ಸ್ಥಳೀಯರಿಗೆ ಬೆದರಿದ ಆ ವ್ಯಕ್ತಿಯು ವಾಕಿಂಗ್ ಸ್ಟಿಕ್ ಅನ್ನು ಬಿಟ್ಟು ಯಾವುದೇ ತೊಂದರೆಯಿಲ್ಲದೆ ನಡೆದುಕೊಂಡು ಹೋಗುತ್ತಿರುವುದು ಕಂಡುಂದಿದೆ. ಈತನ ಈ ಕೃತ್ಯ ಬಯಲಾಗುತ್ತಿದ್ದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆತ ಐಫೋನ್ ದೋಚಿದ್ದಾನೆ ಎನ್ನುವ ಆರೋಪವೂ ಇದೆ.
ವಿಡಿಯೊ ನೋಡಿ:
Attention, citizens!
— Karnataka Portfolio (@karnatakaportf) July 29, 2026
Beware of potential scammers in RR Nagar, Bengaluru.
A video circulating on social media appears to show a person begging while using a walking stick for support. In the video, members of the public confront the individual, after which the person is seen… pic.twitter.com/npf3j7PNAi
ದಿನ ನಿತ್ಯ ಈತ ವಾಕಿಂಗ್ ಸ್ಟಿಕ್ ಬಳಸಿ ಬಿಕ್ಷುಕನಂತೆ ನಟಿಸಿ ಸಾರ್ವಜನಿಕರಿಂದ ಹಣ ದೋಚುತ್ತಿದ್ದ. ಆದರೆ ವ್ಯಕ್ತಿಯ ವರ್ತನೆ ನೋಡಿ ಅನುಮಾನಗೊಂಡ ಸ್ಥಳೀಯರು ತಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಸಾರ್ವಜನಿಕರು ಒಟ್ಟಾಗಿ ಸೇರಿರುವುದನ್ನು ಗಮನಿಸಿ ತಬ್ಬಿಬ್ಬಾಗಿದ್ದಾನೆ. ಕೂಡಲೆ ತಾನು ಹಿಡಿದಿದ್ದ ವಾಕಿಂಗ್ ಸ್ಟಿಕ್ ಅನ್ನು ಅಲ್ಲೇ ಬಿಟ್ಟು ಏನು ತೊಂದರೆ ಇಲ್ಲದಂತೆ ನಡೆದುಕೊಂಡು ಹೋಗಿದ್ದಾನೆ. ಸ್ಥಳೀಯರು ಆತನನ್ನು ತಡೆದು ಪ್ರಶ್ನಿಸಿದಾಗ, ತಾನು ಸುಳ್ಳು ಹೇಳಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಈ ವಿಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಅದರ ಸಂಪೂರ್ಣ ಸತ್ಯಾಸತ್ಯತೆ ಹಾಗೂ ವ್ಯಕ್ತಿ ಯಾರೆಂದು ಇನ್ನೂ ಅಧಿಕೃತವಾಗಿ ದೃಢವಾಗಿಲ್ಲ.
ರಜೆ ದಿನ ಲಾಗಿನ್ ಆಗಲು ಹೇಳಿದ ಮ್ಯಾನೇಜರ್‌ಗೆ ಖಡಕ್ ಆಗಿ ರೆಸ್ಪಾನ್ಸ್ ಮಾಡಿದ ಜೆನ್ ಝೀ ಉದ್ಯೋಗಿ
ಈ ದೃಶ್ಯವು ನಕಲಿ ಭಿಕ್ಷಾಟನೆ ಜಾಲದ ಕುರಿತು ಸಾರ್ವಜನಿಕರಲ್ಲಿ ಆತಂಕ ಮೂಡಿದ್ದು, ಇಂತಹ ವಂಚನೆಗಳು ನಿಜವಾಗಿಯೂ ಅಸಹಾಯಕರಿಗೆ ಸಹಾಯ ಮಾಡಲು ಅನುಮಾನ ಮೂಡುವಂತೆ ಮಾಡಿದೆ. ನೆಟ್ಟಿಗರೊಬ್ಬರು ಅನುಮಾನಾಸ್ಪದ ಚಟುವಟಿಕೆಯನ್ನು ಗಮನಿಸಿದ ಯಾರಾದರೂ ಸೂಕ್ತ ಅಧಿಕಾರಿಗಳಿಗೆ ವರದಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.