ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬ್ರೇಕ್ ಫೇಲ್ ಆಗಿ ಹಿಂದೆ ಚಲಿಸುತ್ತಿದ್ದ ಬಸ್‌ನ ಚಕ್ರಕ್ಕೆ ಕಲ್ಲುಗಳನ್ನಿಟ್ಟು ನಿಲ್ಲಿಸಿದ ಕಂಡೆಕ್ಟರ್‌; ಸಮಯ ಪ್ರಜ್ಞೆಗೆ ನೆಟ್ಟಿಗರ ಮೆಚ್ಚುಗೆ

Viral News: ಬಸ್ ಕಡಿದಾದ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿದ ಘಟನೆಯೊಂದು ನಡೆದಿದೆ. ಭಯಭೀತರಾದ ಪ್ರಯಾಣಿಕರು ಚಲಿಸುವ ವಾಹನದಿಂದ ಜಿಗಿದಿದ್ದು, ಕಂಡಕ್ಟರ್ ಬಸ್ ನಿಲ್ಲಿಸಲು ಅದರ ಟೈರ್‌ಗಳ ಕೆಳಗೆ ದೊಡ್ಡ ಕಲ್ಲುಗಳನ್ನು ಜೋಡಿಸಿ ದುರಂತವನ್ನು ತಪ್ಪಿಸಿದ್ದಾರೆ.

ನಿಯಂತ್ರಣ ತಪ್ಪಿದ ಬಸ್: ಕಂಡಕ್ಟರ್ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ಕಂಡಕ್ಟರ್ ಸಮಯ ಪ್ರಜ್ಞೆಯಿಂದ ತಪ್ಪಿದ ದೊಡ್ಡ ಅನಾಹುತ -

Profile
Pushpa Kumari Oct 31, 2026 4:12 PM

ರಾಂಚಿ, ಅ. 31: ಪ್ರಯಾಣಿಕರಿಂದ ತುಂಬಿ ಬಸ್ ಕಡಿದಾದ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿದ ಘಟನೆ ನಡೆದಿದೆ. ಭಯಭೀತರಾದ ಪ್ರಯಾಣಿಕರು ಚಲಿಸುವ ವಾಹನದಿಂದ ಜಿಗಿದಿದ್ದು ಕಂಡಕ್ಟರ್ ಬಸ್ ನಿಲ್ಲಿಸಲು ಅದರ ಟೈರ್‌ಗಳ ಕೆಳಗೆ ದೊಡ್ಡ ಕಲ್ಲುಗಳನ್ನು ಜೋಡಿಸಿ ಇಡುವ ಮೂಲಕ ದುರಂತವನ್ನು ತಪ್ಪಿಸಿದ್ದಾರೆ. ಈಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.

ಜಾರ್ಖಂಡ್‌ನ ದುಮ್ಕಾದಲ್ಲಿ ಈ ಘಟನೆ ನಡೆದಿದೆ‌. ಪ್ರಯಾಣಿಕರ ಬಸ್ ಕಡಿದಾದ ಇಳಿಜಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಬ್ರೇಕ್ ಫೇಲ್ ಆಗಿದೆ. ವಾಹನ ಹಿಂದಕ್ಕೆ ಉರುಳಲು ಪ್ರಾರಂಭಿಸಿದಾಗ, ಕಂಡಕ್ಟರ್ ದೊಡ್ಡ ಕಲ್ಲುಗಳನ್ನು ಬಳಸಿ ಅದನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು.

ವಿಡಿಯೊ ನೋಡಿ:



ಬಸ್‌ ಏಕಾಏಕಿ ಬ್ರೇಕ್ ಫೇಲ್ ಆಗಿ, ವೇಗವಾಗಿ ಹಿಂದಕ್ಕೆ ಚಲಿಸಲು ಪ್ರಾರಂಭಿಸಿತು. ಕಂಡಕ್ಟರ್‌ ಕೂಡಲೇ ಸಮಯಪ್ರಜ್ಞೆ ಮೆರೆದಿದ್ದಾರೆ. ಈ ಭಯಾನಕ ಘಟನೆಯನ್ನು ವಿಡಿಯೊದಲ್ಲಿ ಸೆರೆ ಹಿಡಿಯಲಾಗಿದೆ. ಬಸ್ ಅನಿಯಂತ್ರಿತವಾಗಿ ಇಳಿಜಾರಿನಲ್ಲಿ ಚಲಿಸುತ್ತಿದ್ದಂತೆ ಪ್ರಯಾಣಿಕರು ತಪ್ಪಿಸಿಕೊಳ್ಳಲು ಹತಾಶವಾಗಿ ಪ್ರಯತ್ನಿಸುತ್ತಿರುವುದನ್ನು ಈ ದೃಶ್ಯ ತೋರಿಸುತ್ತದೆ.

ನೇಪಾಳ ಪ್ರವಾಹದಲ್ಲಿ ಮೃತಪಟ್ಟ ಮಹಿಳೆಯ ಚಿನ್ನದ ಓಲೆ ಕದ್ದ ಕಿಡೀಗೆಡಿಗಳು!

​ಕಂಗಾಲಾದ ಪ್ರಯಾಣಿಕರು ಪ್ರಾಣಭಯದಿಂದ ಚಲಿಸುತ್ತಿದ್ದ ಬಸ್‌ನಿಂದಲೇ ಹೊರಗೆ ಜಿಗಿಯಲು ಶುರು ಮಾಡಿದ್ದಾರೆ.​ಈ ಸಂದರ್ಭದಲ್ಲಿ ಧೈರ್ಯ ಕಳೆದುಕೊಳ್ಳದ ಬಸ್ ಕಂಡಕ್ಟರ್, ತಕ್ಷಣ ರಸ್ತೆ ಬದಿಯಲ್ಲಿದ್ದ ದೊಡ್ಡ ದೊಡ್ಡ ಕಲ್ಲುಗಳನ್ನು ತಂದು ಹಿಂದಕ್ಕೆ ಚಲಿಸುತ್ತಿದ್ದ ಬಸ್‌ನ ಟೈರ್‌ಗಳ ಅಡಿಯಲ್ಲಿ ಇಟ್ಟಿದ್ದಾರೆ.

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಗಾಯಗಳು ಉಂಟಾಗಿಲ್ಲ. ಸೋಷಿಯಲ್ ಮೀಡಿಯಾ ಬಳಕೆದಾರರು ತುರ್ತು ಪರಿಸ್ಥಿತಿಯ ಸಮಯದಲ್ಲಿ ಕಂಡಕ್ಟರ್‌ನ ಧೈರ್ಯವನ್ನು ಶ್ಲಾಘಿಸಿದ್ದಾರೆ. ಬಳಕೆದಾರರೊಬ್ಬರು ಅವರನ್ನು ನಿಜ ಜೀವನದ ನಾಯಕ ಎಂದು ಬಣ್ಣಿಸಿದ್ದಾರೆ