ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೇವಾಲಯದಲ್ಲಿ ಡ್ಯಾನ್ಸ್ ರೀಲ್ ಚಿತ್ರೀಕರಿಸುತ್ತಿದ್ದ ಯುವತಿ; ಖಡಕ್ ಕ್ಲಾಸ್ ತೆಗೆದುಕೊಂಡ ಪೊಲೀಸ್ ಸಿಬ್ಬಂದಿ! ವಿಡಿಯೋ ನೋಡಿ

Viral Video: ಯುವತಿಯೊಬ್ಬಳು ಪವಿತ್ರ ಧಾರ್ಮಿಕ ಕ್ಷೇತ್ರದ ಸರತಿ ಸಾಲಿನಲ್ಲೇ ನಿಂತು ಡ್ಯಾನ್ಸ್ ಮಾಡಿದ್ದಾಳೆ. ಇದನ್ನು ಗಮನಿಸಿದ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯೊಬ್ಬರು, ಆಕೆಯನ್ನು ತಡೆದು ತಕ್ಷಣವೇ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.ಈ ವಿಡಿಯೊ ನೋಡಿದ ಅನೇಕರು ಯುವತಿಯ ನಡೆ ವಿರುದ್ಧ ಕಿಡಿಕಾರಿದ್ದಾರೆ.

ದೇವಾಲಯದಲ್ಲಿ ಡ್ಯಾನ್ಸ್ ರೀಲ್ ಚಿತ್ರೀಕರಿಸುತ್ತಿದ್ದ ಯುವತಿ

ನವದೆಹಲಿ,ಜು.15: ಇತ್ತೀಚೆಗೆ ರೀಲ್ಸ್ ಹುಚ್ಚಿಗೆ ಜನ ಮನಬಂದಂತೆ ವರ್ತನೆ ತೋರುತ್ತಿದ್ದಾರೆ. ಕೇವಲ ಲೈಕ್ಸ್ ಹಾಗೂ ವೀವ್ಸ್ ಗಿಟ್ಟಿಸಿಕೊಳ್ಳಬೇಕೆಂದು ಸಾರ್ವಜನಿಕ ಸ್ಥಳದಲ್ಲೇ ಅಶಿಸ್ತು ಮೆರೆ ಯುತ್ತಿದ್ದಾರೆ. ಅಪಾಯಕಾರಿ ಸ್ಥಳದಲ್ಲಿ ರೀಲ್ಸ್ ಮಾಡುವುದು, ಧಾರ್ಮಿಕ ಸ್ಥಳದಲ್ಲಿ ವಿಡಿಯೊ ಚಿತ್ರೀಕರಣ (Viral Video) ಮಾಡುವುದು ಈ ರೀತಿಯ ನಡವಳಿಕೆಯಲ್ಲಿಯೇ ಇಂದಿನ ಯುವಕ ಯುವತಿಯರು ಮುಳುಗಿ ಹೋಗಿದ್ದಾರೆ. ಇದೀಗ ಯುವತಿಯೊಬ್ಬಳು ಪವಿತ್ರ ಧಾರ್ಮಿಕ ಕ್ಷೇತ್ರದ ಸರತಿ ಸಾಲಿನಲ್ಲೇ ನಿಂತು ಡ್ಯಾನ್ಸ್ ಮಾಡಿದ್ದಾಳೆ. ಇದನ್ನು ಗಮನಿಸಿದ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯೊಬ್ಬರು, ಆಕೆಯನ್ನು ತಡೆದು ತಕ್ಷಣವೇ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ ಧಾರ್ಮಿಕ ಕ್ಷೇತ್ರದಲ್ಲಿ ರೀಲ್ಸ್ ಮಾಡುವ ಕ್ರೇಜ್ ಹೆಚ್ಚಾಗಿದೆ. ವಿಡಿಯೊ ಚಿತ್ರೀಕರಣ ಮಾಡುವಂತಿಲ್ಲ ಎಂದು ಬೋರ್ಡ್ ಹಾಕಿದ್ದರೂ ನಿಯಮ ಉಲ್ಲಂಘನೆ ಮಾಡುತ್ತಾರೆ. ಇದೀಗ ​ದೇವಸ್ಥಾನದ ಒಳಗೆ ಸರತಿ ಸಾಲಿನಲ್ಲಿ ನಿಂತು ಯುವತಿಯೊಬ್ಬಳು ಇನ್‌ಸ್ಟಾಗ್ರಾಮ್ ರೀಲ್ಸ್‌ಗಾಗಿ ಡ್ಯಾನ್ಸ್ ಮಾಡಿದ್ದಾಳೆ‌. ಈ ವಿಡಿಯೊ ನೋಡಿದ ಅನೇಕರು ಯುವತಿಯ ನಡೆ ವಿರುದ್ಧ ಕಿಡಿಕಾರಿದ್ದಾರೆ.

ವಿಡಿಯೋ ನೋಡಿ:



ವಿಡಿಯೋ ಕ್ಲಿಪ್‌ನಲ್ಲಿ, ಹುಡುಗಿಯೊಬ್ಬಳು ಸರತಿಸಾಲಿನಲ್ಲಿ ನಿಂತಿದ್ದು ಹಾಡಿಗೆ ನೃತ್ಯ ಮಾಡುವುದನ್ನು ಕಾಣಬಹುದು, ಇನ್ನೊಬ್ಬ ವ್ಯಕ್ತಿ ಫೋನ್‌ ನಲ್ಲಿ ರೆಕಾರ್ಡ್ ಮಾಡುತ್ತಾನೆ. ಸ್ವಲ್ಪ ಕ್ಷಣಗಳ ನಂತರ, ಒಬ್ಬ ಪೊಲೀಸ್ ಅಧಿಕಾರಿ ಆಗಮಿಸಿದ್ದು ತಕ್ಷಣವೇ ಇಲ್ಲಿಂದ ಹೊರ ಹೋಗುವಂತೆ ಆದೇಶ ನೀಡಿದ್ದಾರೆ. ಆದರೆ ಇದು ಯಾವ ದೇವಾಲಯ ಸ್ಥಳ ಎಲ್ಲಿ ಎಂದು ತಿಳಿದು ಬಂದಿಲ್ಲ. ಆದರೆ ಕೆಲವು ವೀಕ್ಷಕರು ವೀಡಿಯೊ ಮಾಡಿದ ಹುಡುಗಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Viral Video: ''ಇದು ಕೇವಲ ಕಾರಲ್ಲ, ಹಲವು ವರ್ಷಗಳ ಕಠಿಣ ಪರಿಶ್ರಮ''; ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರ್‌ ನೋಡಿ ಮಾಲಕ ಭಾವುಕ

ಧಾರ್ಮಿಕ ಸ್ಥಳಗಳ ಪಾವಿತ್ರ್ಯತೆಯನ್ನು ಕೆಡವಲು ಹೆಚ್ಚಿನವರು ಈ ರೀತಿಯ ವರ್ತನೆ ತೋರು ತ್ತಿದ್ದಾರೆ. "ಪೊಲೀಸ್ ಅಧಿಕಾರಿ ತಮ್ಮ ಕರ್ತವ್ಯವನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿಭಾಯಿ ಸಿದ್ದಾರೆ" ಎಂದು ಹಲವರು ಶ್ಲಾಘನೆ ವ್ಯಕ್ತ ಪಡಿಸಿದರು. ಬಳಕೆದಾರರೊಬ್ಬರು ದೇವಾಲಯಗಳಲ್ಲಿ ಫೋನ್‌ ಮತ್ತು ಕ್ಯಾಮೆರಾಗಳನ್ನು ನಿಷೇಧಿಸಿ ಮತ್ತು ಜನಸಂದಣಿ ತನ್ನಷ್ಟಕ್ಕೆ ಕಡಿಮೆಯಾಗುತ್ತದೆ ಎಂದರು. ಮತ್ತೊಬ್ಬರು "ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಿ" ಇಂತಹ ಘಟನೆಗಳೇ ನಡೆಯುವುದಿಲ್ಲ ಅಂದರು.