ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗೆಳತಿಯ ಬರ್ತ್‌ಡೇಗಾಗಿ 26 ಕಿ.ಮೀ ಓಡಿದ ಬೆಂಗಳೂರಿನ ಯುವಕ! ಕಾರಣ ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ

Viral Video: ಬೆಂಗಳೂರಿನ ವ್ಯಕ್ತಿಯೊಬ್ಬರು ತಮ್ಮ ಸಂಗಾತಿಯ ಈ ವಿಶೇಷ ದಿನವನ್ನು ವಿಭಿನ್ನವಾಗಿ ಆಚರಿಸಿದ್ದಾರೆ. ತನ್ನ ಗೆಳತಿಯ 26 ನೇ ಹುಟ್ಟುಹಬ್ಬದ ನೆನಪಿಗಾಗಿ 26 ಕಿಲೋ ಮೀಟರ್ ಓಡುವ ಮೂಲಕ ಸಾಹಸ ಮೆರೆದಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಗೆಳತಿಯ ಹುಟ್ಟುಹಬ್ಬಕ್ಕೆ 26 ಕಿ.ಮೀ ಓಡಿ ಗಮನ ಸೆಳೆದ ಯುವಕ

ಬೆಂಗಳೂರು,ಡಿ‌. 16: ಇತ್ತೀಚೆಗೆ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುವುದು ಒಂದು ಟ್ರೆಂಡ್ ಆಗಿದೆ. ಅದರಲ್ಲೂ ತಮ್ಮ ಪ್ರೀತಿ ಪಾತ್ರರ ಬರ್ತೆಡೆಯನ್ನು ಹೆಚ್ಚಿನವರು ವಿಭಿನ್ನವಾಗಿಯೇ ಆಚರಿಸಿ ಕೊಳ್ಳುತ್ತಾರೆ. ಸಾಮಾನ್ಯವಾಗಿ ಕೇಕ್ ಕತ್ತರಿಸುವುದು ,ಕ್ಯಾಂಡಲ್‌ಲೈಟ್ ಡಿನ್ನರ್‌ಗಳು, ಉಡುಗೊರೆ ನೀಡುವುದು ಇತ್ಯಾದಿ. ಆದ್ರೆ ಬೆಂಗಳೂರಿನ ವ್ಯಕ್ತಿಯೊಬ್ಬರು ತಮ್ಮ ಸಂಗಾತಿಯ ಈ ವಿಶೇಷ ದಿನವನ್ನು ವಿಭಿನ್ನವಾಗಿ (Viral Video) ಆಚರಿಸಿದ್ದಾರೆ. ತನ್ನ ಗೆಳತಿಯ 26 ನೇ ಹುಟ್ಟುಹಬ್ಬದ ನೆನಪಿಗಾಗಿ 26 ಕಿಲೋ ಮೀಟರ್ ಓಡುವ ಮೂಲಕ ಸಾಹಸ ಮೆರೆದಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅವಿಕ್ ಭಟ್ಟಾಚಾರ್ಯ ಎನ್ನುವ ವ್ಯಕ್ತಿ ಇತ್ತೀಚೆಗೆ ತನ್ನ ಗೆಳತಿ ಸಿಮ್ರಾನ್‌ರ 26 ನೇ ಹುಟ್ಟುಹಬ್ಬ ವನ್ನು ಆಚರಣೆ ಮಾಡಲು 26 ಕಿಲೋಮೀಟರ್ ಓಡಿರುವ ವಿಡಿಯೊ ವೈರಲ್ ಆಗಿದೆ. ಗೆಳತಿ ಸಿಮ್ರಾನ್‌ ಅವರ ಹುಟ್ಟುಹಬ್ಬದಂದು 26 ಕಿ.ಮೀ ಓಟವನ್ನು ಪೂರ್ಣಗೊಳಿಸಲು ಆಶಿಸಿದ್ದರು.‌ ಆದರೆ ಅನಾರೋಗ್ಯದ ಕಾರಣ ಸಾಧ್ಯವಾಗಲಿಲ್ಲ. ಹೀಗಾಗಿ ತನ್ನ ಗೆಳತಿಯ ಆಸೆಯನ್ನು ಪೂರೈಸಲು ನಿರ್ಧರಿಸಿದ ಅವಿಕ್, ತಾನೇ ಆ ದೂರವನ್ನು ಕ್ರಮಿಸಲು ಮುಂದಾಗಿದ್ದಾರೆ.

ವಿಡಿಯೋ ನೋಡಿ:



ಈ ಭಾವನಾತ್ಮಕ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ಖಾತೆ @simranxavik ನಲ್ಲಿ ಹಂಚಿಕೊಳ್ಳ ಲಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಜನರ ಪ್ರೀತಿಗೆ ಕಾರಣವಾಗಿದೆ.ಈ ಮೂಲಕ‌ ಯುವಕ ತನ್ನ ಗೆಳತಿ ಸಿಮ್ರಾನ್ ಅವರ 26ನೇ ಹುಟ್ಟುಹಬ್ಬದ ನೆನಪಿಗಾಗಿ 26 ಕಿಲೋಮೀಟರ್ ಓಡುವ ಮೂಲಕ ಈ ಸಾಹಸ ಮಾಡಿದ್ದಾರೆ. ‌ಓಟದ ಸಮಯದಲ್ಲಿ, ತಾನು ಮತ್ತು ಸಿಮ್ರಾನ್ ಇಬ್ಬರೂ ಕೇವಲ ಎರಡೂವರೆ ವಾರಗಳಲ್ಲಿ ನಿಗದಿಯಾಗಿರುವ ಮುಂಬೈ ಮ್ಯಾರಥಾನ್‌ಗೆ ತಯಾರಿ ನಡೆಸುತ್ತಿದ್ದೇವೆ ಎಂದು ಅವಿಕ್ ಬಹಿರಂಗಪಡಿಸಿದ್ದಾರೆ. ಆ ತರಬೇತಿಯ ನಡುವೆಯೂ ಈ ಓಟವನ್ನು ಅವರು ಗೆಳತಿಗಾಗಿ ಅರ್ಪಿಸಿದ್ದಾರೆ.

Viral Video: ಏಕಾಏಕಿ ಮಹಿಳೆ ಮೇಲೆ ದಾಳಿ ಮಾಡಿದ ಸಾಕು ನಾಯಿ; ಸಂತ್ರಸ್ತೆಗೇ ಕಪಾಳ ಮೋಕ್ಷ ಮಾಡಿದ ಮಾಲಕಿ! ವಿಡಿಯೋ ನೋಡಿ

ಓಟದ ಮಧ್ಯೆ ಮಾತನಾಡಿದ ಅವಿಕ್ ದೈಹಿಕ ಆರೋಗ್ಯವೇ ಎಲ್ಲದಕ್ಕೂ ಅಗತ್ಯ. ಎಂದು ಹೇಳುತ್ತಾ ಸಿಮ್ರಾನ್ ಬೇಗ ಗುಣಮುಖಳಾಗಲಿ ಎಂದು ಹಾರೈಸಿದ್ದಾರೆ.ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್ ಬಳಕೆದಾರರು ದಂಪತಿಗಳನ್ನು, ವಿಶೇಷವಾಗಿ ಹೊಗಳಿದ್ದಾರೆ. ನಿಮ್ಮಿಬ್ಬರ ಬದುಕು ಯಶಸ್ಸಿನಲ್ಲಿ ಸಾಗಲಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇಂಥ ಹುಡುಗ ಸಿಗಲು ನೀವು ಯಾವ ದೇವರನ್ನು ಬೇಡಿಕೊಂಡಿದ್ದೀರಿ‌ ಎಂದು ಕೇಳಿದ್ದಾರೆ. ಜನವರಿ 5, 2026 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ 75 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳಿಸಿದೆ.