ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರಣರಂಗವಾದ ಸಾಮೂಹಿಕ ವಿವಾಹ ಸಮಾರಂಭ- ಕೇವಲ ಚಿಪ್ಸ್‌ ಪ್ಯಾಕೇಟ್‌ಗಾಗಿ ಕಿತ್ತಾಟ!

ಸಾಮೂಹಿಕ ವಿವಾಹದಲ್ಲಿ ಪರಸ್ಪರ ಖುಷಿಯಿಂದ ಸಮಾರಂಭ ಯಶಸ್ವಿಯಾಗುವ ಬದಲು ನೋವು, ಹಿಂಸೆಯಿಂದ ಸಾಕಷ್ಟು ಗೊಂದಲದ ವಾತಾವರಣ ಸೃಷ್ಟಿಯಾಗುವಂತಾಗಿದೆ. ಮದುವೆ ಮನೆಯಲ್ಲಿ ತಿನ್ನುವ ತಿಂಡಿ ಪ್ಯಾಕೆಟ್ ಗಾಗಿ ಜನರು ಹೊಡೆದಾಟ ನಡೆಸುತ್ತಿದ್ದು ಇಡೀ ಮದುವೆ ಮನೆಯಲ್ಲಿ ಅವ್ಯವಸ್ಥೆಯಾಗಿರುವ ದೃಶ್ಯಗಳು ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿದ್ದು ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಚಿಪ್ಸ್‌ ಪ್ಯಾಕೇಟ್‌ಗಾಗಿ ಕಿತ್ತಾಟ- ಕಲ್ಯಾಣ ಮಂಟಪ ರಣರಂಗ!

ವಿವಾಹ ಕಾರ್ಯಕ್ರಮದಲ್ಲಿ ಚಿಪ್ಸ್ ಪ್ಯಾಕೆಟ್ ಗಾಗಿ ಮುಗಿಬಿದ್ದ ಜನ -

Profile
Pushpa Kumari Nov 27, 2025 4:48 PM

ಲಖನೌ: ಮದುವೆ ಮಾಡಿಸಲು ಲಕ್ಷಾಂತರ ರೂಪಾಯಿ ಹಣ ವ್ಯಯಿಸಬೇಕಾಗುತ್ತದೆ. ಅದರಲ್ಲೂ ಬಡವರಿಗೆ ಈ ಮದುವೆ ಒಂದು ದೊಡ್ಡ ಜವಾಬ್ದಾರಿ ಎಂದೇ ಹೇಳಬಹುದು. ಹೀಗಾಗಿ ಬಹುತೇಕ ಬಡವರ್ಗದ ಜನರು ಸಾಮೂಹಿಕ ವಿವಾಹ ಗಳ ಮೊರೆ ಹೋಗುತ್ತಿದ್ದಾರೆ. ಅಂತೆಯೇ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ (Uttar Pradesh’s Hamirpur) ಸರ್ಕಾರಿ ಪ್ರಾಯೋಜಕತ್ವದಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ಚಿಪ್ಸ್ ಪ್ಯಾಕೆಟ್ ಗಾಗಿ ಮುಗಿಬಿದ್ದ ಜನರಿಂದ ಕಾಲ್ತುಳಿತವಾಗಿದ್ದು ಪರಿಣಾಮ ಅನೇಕರು ಗಾಯಗೊಂಡ ಘಟನೆ ನಡೆದಿದೆ. ಸಾಮೂಹಿಕ ವಿವಾಹದಲ್ಲಿ ಪರಸ್ಪರ ಖುಷಿಯಿಂದ ಸಮಾರಂಭ ಯಶಸ್ವಿಯಾಗುವ ಬದಲು ನೋವು, ಹಿಂಸೆಯಿಂದ ಸಾಕಷ್ಟು ಗೊಂದಲದ ವಾತಾವರಣ ಸೃಷ್ಟಿಯಾಗುವಂತಾಗಿದೆ. ಮದುವೆ ಮನೆಯಲ್ಲಿ ತಿನ್ನುವ ತಿಂಡಿ ಪ್ಯಾಕೆಟ್ ಗಾಗಿ ಜನರು ಹೊಡೆದಾಟ ನಡೆಸುತ್ತಿದ್ದು ಇಡೀ ಮದುವೆ ಮನೆಯಲ್ಲಿ ಅವ್ಯವಸ್ಥೆಯಾಗಿರುವ ದೃಶ್ಯಗಳು ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿದ್ದು ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral video) ಆಗಿದೆ.

ಮುಖ್ಯಮಂತ್ರಿಗಳ ವಿವಾಹ ಯೋಜನೆಯಡಿಯಲ್ಲಿ ಸಾಮೂಹಿಕ ವಿವಾಹ ಸಮಾರಂಭವು ನವೆಂಬರ್ 25 ರ ಮಂಗಳವಾರ ರಥ ಪಟ್ಟಣದ ಬ್ರಹ್ಮಾನಂದ ಮಹಾವಿದ್ಯಾಲಯದ ಕ್ರೀಡಾ ಮೈದಾನದಲ್ಲಿ ಆಯೋಜಿಸಲಾಗಿತ್ತು. ಸುಮಾರು 383 ಬಡ ಕುಟುಂಬದ ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭಕ್ಕೆ ದೊಡ್ಡ ಜನಸಮೂಹ ನೆರೆದಿತ್ತು. ಸಾಮೂಹಿಕ ವಿವಾಹದ ವಿಧಿ ವಿಧಾನ ಗಳು ಪೂರ್ಣಗೊಂಡ ಬಳಿಕ ತಿಂಡಿ ಸವಿಯಲು ದೊಡ್ಡ ಜನಸಮೂಹ ಧಾವಿಸಿದೆ. ಹೀಗಾಗಿ ಸಂಪೂರ್ಣ ಅವ್ಯವಸ್ಥೆ ಉಂಟಾಗುವಂತಾಗಿದೆ.

ವಿಡಿಯೊ ವೀಕ್ಷಿಸಿ:



ಸಾಮೂಹಿಕ ಸಮಾರಂಭದಲ್ಲಿ ಜನರಿಗಾಗಿ ತಿಂಡಿ ವ್ಯವಸ್ಥೆ ಕೂಡ ಮಾಡಲಾಗಿತ್ತು. ಆ ವೇಳೆಗೆ ಉಚಿತ ಚಿಪ್ಸ್ ಪ್ಯಾಕೆಟ್ ಸಹ ವಿತರಿಸಲಾಗುತ್ತಿತ್ತು. ಹೀಗಾಗಿ ಬಹುತೇಕ ಜನರು ಕೌಂಟರ್‌ಗಳ ಕಡೆಗೆ ಧಾವಿಸಿದ್ದಾರೆ. ಹೀಗಾಗಿ ಚಿಪ್ಸ್ ಪ್ಯಾಕೆಟ್ ಪಡೆಯುವ ಬರದಲ್ಲಿ ಜನರಿಂದ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗುವಂತೆ ಆಗಿದೆ. ಪರಸ್ಪರ ಚಿಪ್ಸ್ ಪ್ಯಾಕೆಟ್‌ಗಳನ್ನು ಕಸಿದುಕೊಳ್ಳುವ ಆತುರದಲ್ಲಿ ಅನೇಕರು ಗಾಯಗೊಂಡಿದ್ದಾರೆ. ಪುರುಷರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸಹ ಹಲವಾರು ಚಿಪ್ಸ್ ಪ್ಯಾಕೆಟ್‌ಗಳನ್ನು ಕಸಿದುಕೊಳ್ಳುತ್ತಿರುವ ದೃಶ್ಯಗಳು ವೈರಲ್ ವಿಡಿಯೋದಲ್ಲಿ ಕಾಣಬಹುದು.

Viral Video: ರೈಲ್ವೆ ಹಳಿ ಮೇಲೆ ಉರುಳಿದ ಟ್ರಕ್‌; ತಪ್ಪಿದ ಭಾರೀ ಅನಾಹುತ,

ವರದಿಯ ಪ್ರಕಾರ, ಕೆಲವು ಜನರು ಚಿಪ್ಸ್ ಪ್ಯಾಕೆಟ್‌ ನ ಹಿಡಿದುಕೊಂಡು ಹೋಗುತ್ತಿರುವುದನ್ನು ಇತರರು ನೋಡಿದ್ದಾರೆ. ಬಳಿಕ ತಮಗೂ ನೀಡುವಂತೆ ಅಡುಗೆ ಕೌಂಟರ್ ಬಳಿ ತುಂಬಾ ಜನರು ನಿಂತಿದ್ದರು. ಆಗ ಕೌಂಟರ್ ಸಿಬಂದಿ ಬಂದವರಿಗೆ ಚಿಪ್ಸ್ ಪ್ಯಾಕ್ ನೀಡಿದ್ದಾರೆ. ಬಳಿಕ ಜನರು ಬರುವ ಪ್ರಮಾಣ ಹೆಚ್ಚಾಗಿದ್ದು ಅಲ್ಲೇ ಜಗಳವಾಗಿದೆ. ಈ ಅವ್ಯವಸ್ಥೆಯ ನಡುವೆ, ಬಿಸಿ ಚಹಾ ಕೈ ಮೇಲೆ ಬಿದ್ದ ಮಗುವಿಗೆ ಸುಟ್ಟಗಾಯಗಳು ಸಹ ಅಗಿದೆ. ಜನಸಂದಣಿಯನ್ನು ನಿಯಂತ್ರಿಸಲು ಆ ಸಮಯ ದಲ್ಲಿ ಯಾವುದೇ ಅಧಿಕಾರಿಗಳು ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸದ್ಯ ಈ ವಿಡಿಯೋ ಟ್ವಿಟ್ಟರ್ ಎಕ್ಸ್ ನಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಜನ ಮರಳೊ ಜಾತ್ರೆ ಮರಳೊ, ಹೀಗೆ ಫ್ರಿ ನೀಡುವಾಗ ವ್ಯವಸ್ಥಿತವಾಗಿ ನೀಡಬೇಕಿತ್ತು. ಕಾರ್ಯಕ್ರಮ ಸಂಘಟನೆ ಮಾಡು ವಲ್ಲಿ ಸರಕಾರ ವಿಫಲವಾಗಿದೆ ಎಂದು ಅಧಿಕಾರಿಯೊಬ್ಬರು ಕಾಮೆಂಟ್ ಹಾಕಿದ್ದಾರೆ. ಸಾಮೂಹಿಕ ವಿವಾಹ ಸಮಾರಂಭದಲ್ಲಿ 380 ಜೋಡಿಗಳು ಹಿಂದೂ ಸಂಪ್ರದಾಯಗಳ ಪ್ರಕಾರ ವಿವಾಹವಾದರು, ಉಳಿದ ಮೂರು ಜೋಡಿಗಳು ನಿಕಾಹ್ ಎಂಬ ಇಸ್ಲಾಮಿಕ್ ಸಂಪ್ರದಾಯದ ಅಡಿಯಲ್ಲಿ ವಿವಾಹವಾಗಿದ್ದಾರೆ.